ಕೆ ಆರ್ ಎಸ್ ಪಕ್ಷ ಮದ್ದೂರು - KRS Party Maddur Taluk

  • Home
  • India
  • Bangalore
  • ಕೆ ಆರ್ ಎಸ್ ಪಕ್ಷ ಮದ್ದೂರು - KRS Party Maddur Taluk

ಕೆ ಆರ್ ಎಸ್ ಪಕ್ಷ ಮದ್ದೂರು - KRS Party Maddur Taluk ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ.

29/08/2026
27/08/2026

#ಸಾರ್ವಜನಿಕ_ಸ್ಪಷ್ಟನೆ

ಮದ್ದೂರು ತಾಲ್ಲೂಕಿನ ಕೆಲವು ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅನೈತಿಕ, ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಮತ್ತು ರೌಡಿ ಶೀಟರ್‌ಗಳು ಬರುತ್ತಾರೆ ಎಂಬ ಆರೋಪಗಳನ್ನು ಒಳಗೊಂಡಂತೆ ಪೊಲೀಸ್ ಅಧೀಕ್ಷಕರಾದ (SP) ಅವರಿಗೆ ಉದ್ದೇಶಿಸಿ ನನ್ನ ಹೆಸರಿನಲ್ಲಿ ದೂರು ಬರೆಯಲಾಗಿದೆ.

ಆದರೆ, ಆ ದೂರಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಆ ದೂರನ್ನು ಬರೆದಿಲ್ಲ ಅಥವಾ ಸಲ್ಲಿಸಿಲ್ಲ.

ಆ ದೂರನ್ನು SP ಅವರಿಗೆ ಕಳುಹಿಸುವ ಉದ್ದೇಶವಿದ್ದರೂ, ಅಂಚೆ ಕವರ್ ಮೇಲೆ ನನ್ನ ಮನೆಯ ವಿಳಾಸವನ್ನು ನಮೂದಿಸಿರುವ ಕಾರಣ ಆ ಪತ್ರ ನನ್ನ ಮನೆಗೆ ಪೋಸ್ಟ್ ಮೂಲಕ ಬಂದಿದೆ.

ನನ್ನ ಹೆಸರನ್ನು ಬಳಸಿಕೊಂಡು, ನನಗೆ ಸಂಬಂಧವಿಲ್ಲದ ದೂರನ್ನು ಸಿದ್ಧಪಡಿಸಿರುವುದು ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕುರಿತು ಮದ್ದೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇನೆ.

ಯಾರೋ ನನ್ನ ಹೆಸರು ದುರುಪಯೋಗಪಡಿಸಿಕೊಂಡಿದ್ದಾರೆ?
ಯಾರೋ ಈ ದೂರನ್ನು ಸಿದ್ಧಪಡಿಸಿದ್ದಾರೆ?
ಯಾರೋ ನನ್ನ ಮನೆಯ ವಿಳಾಸವನ್ನು ಕವರ್ ಮೇಲೆ ನಮೂದಿಸಿದ್ದಾರೆ?
ಯಾರೋ ಈ ಪತ್ರವನ್ನು ಪೋಸ್ಟ್ ಮಾಡಿದ್ದಾರೆ

⚠️ ಮುಖ್ಯವಾಗಿ: ನನ್ನ ಹೆಸರಿನಲ್ಲಿ ಬಂದಿರುವ ಈ ದೂರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸುತ್ತೇನೆ.

ಪ್ರಮೋದ ಎಸ್ Yuvanetha

#ಕರ್ನಾಟಕ

27/08/2026

ಮದ್ದೂರು ತಾಲ್ಲೂಕಿಗೆ ಲೋಕಾಯುಕ್ತ ಭೇಟಿ – ನಮ್ಮ ದೂರಿನ ವಿಚಾರಣೆಯಲ್ಲಿ ನಿಮಗೆ ಸಮರ್ಪಕ ಅವಕಾಶ ಸಿಕ್ಕಿತೇ?

ಕರ್ನಾಟಕ ಲೋಕಾಯುಕ್ತದ ಬಿ. ವೀರಪ್ಪ (B. Veerappa) ಅವರ ಸಮ್ಮುಖದಲ್ಲಿ ಇಂದು ಮದ್ದೂರು ತಾಲ್ಲೂಕಿನಲ್ಲಿ ಬಾಕಿ ಉಳಿದಿರುವ ಅರ್ಜಿಗಳು ಹಾಗೂ ಸಾರ್ವಜನಿಕರ ಅಹವಾಲುಗಳ ವಿಚಾರಣೆಗಾಗಿ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ನಾವು ಈ ಹಿಂದೆ ಸಲ್ಲಿಸಿದ್ದ ಗ್ರಾಮ ಪಂಚಾಯಿತಿಯಲ್ಲಿ ನಕಲಿ ಬಿಲ್‌ಗಳ ಸೃಷ್ಟಿ ಹಾಗೂ ತೆರಿಗೆ ವಂಚನೆಗೆ ಸಂಬಂಧಿಸಿದ ದೂರಿನ ವಿಚಾರಣೆಯೂ ನಡೆಯಿತು. ಈ ದೂರಿನ ಕುರಿತು ನಮಗೆ ನೋಟಿಸ್ ನೀಡಲಾಗಿತ್ತು.

ನಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ನಡೆದ ತನಿಖೆಯಲ್ಲಿ ಕೆಲವು ಅಂಶಗಳು ಸಾಬೀತಾಗಿವೆ ಎಂದು ನಾವು ತಿಳಿಸಿದ್ದರೂ, ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಂಪೂರ್ಣವಾಗಿ ಪರಿಶೀಲಿಸಲು ಅವಕಾಶ ನೀಡಲಿಲ್ಲ ಎಂಬುದು ನನ್ನ ಅಸಮಾಧಾನ.

ವಿಚಾರಣೆಯ ಸಂದರ್ಭದಲ್ಲಿ ಎದುರುದಾರರನ್ನು ವಿಚಾರಿಸಿದಾಗ, ಯಾವುದೇ ಹಣ ದುರುಪಯೋಗವಾಗಿಲ್ಲ, ಹಣ ಜಮೆಯಾಗಿರುವುದಾಗಿ ಅವರು ತಿಳಿಸಿದರು. ನಂತರ ನನಗೆ RTI ಮೂಲಕ ಮಾಹಿತಿ ಪಡೆಯುವಂತೆ ಸೂಚಿಸಿ ವಿಚಾರಣೆಯನ್ನು ಮುಕ್ತಾಯಗೊಳಿಸಲಾಯಿತು.

ನನ್ನ ದೂರು ಹಾಗೂ ನಮ್ಮ ಬಳಿ ಇರುವ ದಾಖಲೆಗಳ ಸಂಪೂರ್ಣ ಮಾಹಿತಿಯನ್ನು ವಿವರಿಸಲು ನನಗೆ ಕನಿಷ್ಠ ಎರಡು ನಿಮಿಷಗಳಾದರೂ ಅವಕಾಶ ನೀಡಬೇಕಿತ್ತು ಎಂಬುದು ನನ್ನ ಅಭಿಪ್ರಾಯ.

ನಮ್ಮ ಪ್ರಶ್ನೆ ಸರಳವಾಗಿದೆ:

ದೂರುದಾರನಿಗೆ ತನ್ನ ಬಳಿ ಇರುವ ದಾಖಲೆಗಳು ಮತ್ತು ಆರೋಪಗಳನ್ನು ಸಂಪೂರ್ಣವಾಗಿ ಮಂಡಿಸಲು ಸಮರ್ಪಕ ಅವಕಾಶ ನೀಡಲಾಗುತ್ತಿದೆಯೇ?

ಯಾವುದೇ ವ್ಯಕ್ತಿಯ ವಿರುದ್ಧ ಅನ್ಯಾಯವಾಗಿ ಆರೋಪ ಮಾಡುವ ಉದ್ದೇಶ ನಮ್ಮದಲ್ಲ. ಆದರೆ ದಾಖಲೆಗಳ ಆಧಾರದ ಮೇಲೆ ಸಂಪೂರ್ಣ ತನಿಖೆ ನಡೆಯಬೇಕು ಮತ್ತು ಸತ್ಯಾಸತ್ಯತೆ ಬಹಿರಂಗವಾಗಬೇಕು ಎಂಬುದಷ್ಟೇ ನಮ್ಮ ಬೇಡಿಕೆ.

ಜನರ ದೂರುಗಳನ್ನು ಆಲಿಸುವ ವ್ಯವಸ್ಥೆಯಲ್ಲಿ ದೂರುದಾರನ ಮಾತಿಗೂ ಸಮಾನ ಅವಕಾಶ ಸಿಗಬೇಕು.

ಪ್ರಮೋದ ಎಸ್ Yuvanetha

#ಜನರಧ್ವನಿ #ಮದ್ದೂರು #ಮಂಡ್ಯ

27/08/2026

ರಾಯಚೂರು ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ,ಕೊಲೆ, ದೌರ್ಜನ್ಯಗಳನ್ನು ಖಂಡಿಸಿ ಕೆಆರ್‌ಎಸ್ ಪಕ್ಷದ ವತಿಯಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ.

ರಾಯಚೂರು
27.08.2026

27/08/2026

ಇಂದು ರಾಯಚೂರಿನಲ್ಲಿ
ದಲಿತರ ಗೌರವ, ಘನತೆ ಮತ್ತು ಹೆಮ್ಮೆಯ ಬದುಕಿನ ಸಾಕಾರಕ್ಕಾಗಿ ಕೆ ಆರ್ ಎಸ್ ಪಕ್ಷ ಎಸ್ ಸಿ/ಎಸ್ ಟಿ ಘಟಕ KRS Party SC/ST Wing

ರಾಯಚೂರು ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯಗಳನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ರಾಜ್ಯ SC ST ಘಟಕದಿಂದ ಹೋರಾಟ ಇಂದು.

ದಿನಾಂಕ: 27-08-2026.
ಸ್ಥಳ: ರಾಯಚೂರು 🙏

Narasimharaju C N
ರಾಜ್ಯ ಪ್ರಧಾನ ಕಾರ್ಯದರ್ಶಿ
KRS ಪಕ್ಷ ರಾಜ್ಯ SC ST ಘಟಕ

27-8-2026

23/08/2026

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ. ರಿ ವತಿಯಿಂದ "ಮಾಹಿತಿ ಹಕ್ಕು ತರಬೇತಿ" ಮತ್ತು "ಪ್ರಾಥಮಿಕ ಕಾನೂನು ಅರಿವು" ಕಾರ್ಯಗಾರ.

ದಾವಣಗೆರೆ
23-08-2026.

20/08/2026

ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಒತ್ತಾಯಿಸಿ ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವರಾದ ಕಲ್ಪಶ್ರೀ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು.

ಕಳೆದ ತಿಂಗಳು ಇದೇ ಕಾಲೇಜಿನ ವಿಚಾರವಾಗಿ ನಾವು ಧರಣಿ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಕುಲಪತಿಗಳು “ಯಾವುದೇ ಸಮಸ್ಯೆ ಇಲ್ಲ” ಎಂದು ತಿಳಿಸಿದ್ದರು. ಆದರೆ ಇದೀಗ ವಿದ್ಯಾರ್ಥಿಗಳೇ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ.

ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗುವವರೆಗೂ ಪ್ರಶ್ನಿಸುವುದು ನಮ್ಮ ಜವಾಬ್ದಾರಿ. ಸಮಸ್ಯೆಗಳು ಬಗೆಹರಿಯದಿದ್ದರೆ ಮುಂದಿನ ಹಂತದಲ್ಲಿ ಶಾಂತಿಯುತ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.

Address

208, Drive Rajkumar Rd, Prakash Nagar, Rajajinagar, Bengaluru
Bangalore
560021

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ಮದ್ದೂರು - KRS Party Maddur Taluk posts news and promotions. Your email address will not be used for any other purpose, and you can unsubscribe at any time.

Shortcuts

Share