Inc-GOTTIGERE BLOCK Labour CELL

Inc-GOTTIGERE BLOCK Labour CELL KPCC LABOUR CELL GOTTIGERE BLOCK WHICH INCLUDES GOTTIGERE WARD 194, KONANKUNTE WARD -195 AND ANAJANPURA WARD-196

28/10/2021

ಆಂತರಿಕ ಕಿತ್ತಾಟ, ಖಾತೆ ರಂಪಾಟ, ನಾಯಕತ್ವ ಬದಲಾವಣೆ, ಉಪಚುನಾವಣೆಗಳಲ್ಲಿ ಕಾಲ ಕಳೆದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ 'ಶೂನ್ಯ ಸಂಪಾದನೆ' ಮಾಡಿದೆ.

ವಸತಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಲ್ಲಿ ₹21,331 ಕೋಟಿ ಅನುದಾನ ಬಳಕೆಯಾಗಲಿಲ್ಲ, ಯಾವ ಯೋಜನೆಯಲ್ಲೂ ಪ್ರಗತಿ ಇಲ್ಲ.

ಇದನ್ನು 'ಡಕೋಟಾ ಸರ್ಕಾರ' ಎನ್ನದೆ ಇನ್ನೇನು ಹೇಳಬೇಕು!?

18/10/2021
ಗೊಟ್ಟಿಗೆರೆ ಬ್ಲಾಕ್  ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿ (ಕಾರ್ಮಿಕ ವಿಭಾಗ )ಶ್ರೀ ಫ್ರಾಂಕ್ಲಿನ್ ರವರಿಗೆ ಜನ್ಮದಿನದ ಶುಭಾಶಯಗಳು💐🎂Frankl...
18/10/2021

ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿ (ಕಾರ್ಮಿಕ ವಿಭಾಗ )ಶ್ರೀ ಫ್ರಾಂಕ್ಲಿನ್ ರವರಿಗೆ ಜನ್ಮದಿನದ ಶುಭಾಶಯಗಳು💐🎂Franklin Isaac

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿ ವಾರ್ಡಿನ 194 ಗೊಟ್ಟಿಗೆರೆ ಸಮೀಪದ ಜಂಬುಸವಾರಿ  ದಿನ್ನೆಯಲ್ಲಿರುವ  ಸರ್ಕಾರಿ ಶಾ...
13/10/2021

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿ ವಾರ್ಡಿನ 194 ಗೊಟ್ಟಿಗೆರೆ ಸಮೀಪದ ಜಂಬುಸವಾರಿ ದಿನ್ನೆಯಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿ ಕಾಂಗ್ರೆಸ್ ಮುಖಂಡ ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್ ರವರ ನೇತೃತ್ವದಲ್ಲಿ ಹಾಗೂ ನಾರಾಯಣ ಹೃದಯಾಲಯದ ಸಹಭಾಗಿತ್ವದಲ್ಲಿ 2000 ಸಾವಿರಕ್ಕಿಂತ ಹೆಚ್ಚು ಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇನ್ನು ಕೋವಿಡ್ ಲಸಿಕಾ ಅಭಿಯಾನಕ್ಕೆ ಕಾಂಗ್ರೆಸ್ ಮುಖಂಡ ಆರ್.ಕೆ. ರಮೇಶ್ ರವರು ಚಾಲನೆ ನೀಡಿದರು. ಇನ್ನು ಕಾರ್ಯಕ್ರಮದಲ್ಲಿ ಐ.ಎನ್.ಟಿ.ಯುಸಿ ನ ರಾಜ್ಯಾಧ್ಯಕ್ಷ ಪ್ರಕಾಶಂ, ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ, ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಗೋಪಿನಾಥ್ ರಾಜ್. ಕಮ್ಮನಹಳ್ಳಿ ಮಂಜುನಾಥ್. G.kರವಿ. ಗೊಟ್ಟಿಗೆರೆ ಮುನಿರಾಜು ಎಸ್.ಸಿ ಎಸ್.ಟಿ ಅಧ್ಯಕ್ಷರು ಗೊಟ್ಟಿಗೆರೆ ಬ್ಲಾಕ್,ರೇಖಾ ನವೀನಗೌಡ ಮಹಿಳಾ ಅಧ್ಯಕ್ಷರು ಗೊಟ್ಟಿಗೆರೆ ಬ್ಲಾಕ್,ದಿನೇಶ್ ಕೆಪಿಸಿಸಿ ಕಾರ್ಮಿಕ ವಿಭಾಗ ಪ್ರಧಾನ ಕಾರ್ಯದರ್ಶಿ, ಸುದರ್ಶನ್ ಗೊಟ್ಟಿಗೆರೆ ವಾರ್ಡ್ ಅಧ್ಯಕ್ಷರು,ಫ್ರಾಂಕ್ಲಿನ್ ಕೆಪಿಸಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಬ್ಲಾಕ್, ಬಿ.ಟಿ.ನಾಗರಾಜ್,ರವಿ ರಂಗರಾಜ್ ಉಪಾಧ್ಯಕ್ಷರು ಗೊಟ್ಟಿಗೆರೆ ಬ್ಲಾಕ್, ಚಂದ್ರಶೇಖರ್ ಲೇಬರ್ ಸೆಲ್ ಗೊಟ್ಟಿಗೆರೆ ಬ್ಲಾಕ್ ಅಧ್ಯಕ್ಷರು, ಹರ್ಷ ಸಾಮಾಜಿಕ ಜಾಲತಾಣ ಗೊಟ್ಟಿಗೆರೆ ಬ್ಲಾಕ್ ಅಧ್ಯಕ್ಷರು,ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು...

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ ಅಕ್ರಮಗಳ ತನಿಖೆಗೆ ಆಗ್ರಹಿಸಿ ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಕಾರ್ಮಿಕ ಭವನದ ಮುಂದೆ ಬೃಹತ್ ಪ್ರತಿಭಟನೆ - ನಕಲಿ...
27/09/2021

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ ಅಕ್ರಮಗಳ ತನಿಖೆಗೆ ಆಗ್ರಹಿಸಿ ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಕಾರ್ಮಿಕ ಭವನದ ಮುಂದೆ ಬೃಹತ್ ಪ್ರತಿಭಟನೆ - ನಕಲಿ ಕಾರ್ಮಿಕರ ನೋಂದಣಿ ರದ್ದುಗೊಳಿಸುವಂತೆ ಆಗ್ರಹ

ಬೆಂಗಳೂರು, ಸೆ, 27; ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿರುವ ಭಾರೀ ಅಕ್ರಮಗಳ ವಿರುದ್ಧ ತನಿಖೆ ನಡೆಸಬೇಕು. ಭ್ರಷ್ಟರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೆಪಿಸಿಸಿ ಕಾರ್ಮಿಕ ವಿಭಾಗ ಪದಾಧಿಕಾರಿಗಳು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.

ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಮಂಡಳಿಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ಕಾರ್ಮಿಕರ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ. ಸಂಕಷ್ಟದಲ್ಲಿರುವವರಿಗೆ ಸೂಕ್ತ ನೆರವು ನೀಡುತ್ತಿಲ್ಲ. ಕಟ್ಟಡ ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸಬೇಕಾದ ಮಂಡಳಿ ಗುತ್ತಿಗೆದಾರರು, ರಾಜಕಾರಣಿಗಳ ಮರ್ಜಿಯಂತೆ ಕೆಲಸ ಮಾಡುತ್ತಿದೆ. ಇದರಿಂದ ನೈಜ ಕಾರ್ಮಿಕರಿಗೆ ಪರಮ ಅನ್ಯಾಯವಾಗಿದೆ ಎಂದು ಘೋಷಣೆ ಕೂಗಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ .ಕೆ ಪುಟ್ಟಸ್ವಾಮಿ ಮಾತನಾಡಿ, ಸಿ.ಎಸ್.ಸಿ ಸೆಂಟರ್ ಮಾಲೀಕರು ಕಟ್ಟಡ ಕಾರ್ಮಿಕರಲ್ಲದವರನ್ನು ಸಹ ನಕಲಿ ಮಾಲೀಕರ ಸಹಿಯೊಂದಿಗೆ ನೋಂದಣಿಮಾಡಿಸುತ್ತಿದ್ದು. ಇದರಿಂದ ಮಂಡಳಿಗೆ ನಕಲಿ ಫಲಾನುಭವಿಗಳು ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ತಕ್ಷಣ ಸಿ.ಎಸ್.ಸಿ ಸೆಂಟರ್ ಗಳಲ್ಲಿ ನೋಂದಣಿ ನಿಲ್ಲಿಸಬೇಕು. ಇಲ್ಲಿ ಈಗಾಗಲೇ ನೀಡಿರುವ ನೋಂದಣಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಬೇಕು. ಕಾರ್ಮಿಕ ಕಛೇರಿ ಹಾಗೂ ಟ್ರೇಡ್ ಯೂನಿಯನ್ ಮುಖಾಂತರ ನೋಂದಣಿ ಪ್ರಕ್ರಿಯೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಅರ್ಜಿ ಸಲ್ಲಿಸುವ ಸೇವಾ ಸಿಂಧು ವೆಬ್‍ಸೈಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಸೆಸ್ ಹಣ ಬಳಕೆಯಾಗಬೇಕು. ಖಾಸಗಿ ವಾಹನ ಚಾಲಕರಿಗೆ ನೀಡುವ ಅಪಘಾತ ಪರಿಹಾರ ಮೊತ್ತವನ್ನು ಹತ್ತು ಲಕ್ಷ ರೂ ಗೆ ಏರಿಕೆ ಮಾಡಬೇಕು. ಖಾಸಗಿ ವಾಣಿಜ್ಯ ವಾಹನಗಳಿಗೆ ಒಂದು ವರ್ಷದ ತೆರಿಗೆ ವಿನಾಯಿತಿ ನೀಡಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಆರ್. ದಿನೇಶ್, ಶ್ರೀಕಾಂತ್, ಬಾಲರಾಜ್ ಗೌಡ, ಉಪಾಧ್ಯಕ್ಷರಾದ ಕೆ.ಸಿ. ಹರಿಣಿ ಗೌಡ, ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣ, ತ್ರಿಭುವನ್ ಗೌಡ, ಇಮ್ರಾನ್ ಖಾನ್ ಮತ್ತಿತರರು ಪಾಲ್ಗೊಂಡಿದ್ದರು.

Chandrashekar GN
KPCC LABOUR CELL
GOTTIGERE BLOCK PRESIDENT

ಇಂದು ಡೈರಿ ಸರ್ಕಲ್ ಕಾರ್ಮಿಕ ಭಾವನಾ ಬಳಿ ಕಾರ್ಮಿಕರಿಗಾಗಿ ಮುಷ್ಕರ. ಬನ್ನಿ ಮತ್ತು ನಮ್ಮನ್ನು ಬೆಂಬಲಿಸಿ.*ಚಂದ್ರಶೇಖರ್ ಜಿ ಎನ್   ಗೊಟ್ಟಿ ಗೆರೆ ...
27/09/2021

ಇಂದು ಡೈರಿ ಸರ್ಕಲ್ ಕಾರ್ಮಿಕ ಭಾವನಾ ಬಳಿ ಕಾರ್ಮಿಕರಿಗಾಗಿ ಮುಷ್ಕರ. ಬನ್ನಿ ಮತ್ತು ನಮ್ಮನ್ನು ಬೆಂಬಲಿಸಿ.

*ಚಂದ್ರಶೇಖರ್ ಜಿ ಎನ್
ಗೊಟ್ಟಿ ಗೆರೆ ಬ್ಲಾಕ್ ಅಧ್ಯಕ್ಷ ರು
ಕೆಪಿಸಿಸಿ ಕಾರ್ಮಿಕ ವಿಭಾಗ*

ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಗೊಟ್ಟಿಗೆರೆ ಬ್ಲಾಕ್ನ ಗೊಟ್ಟಿಗೆರೆ  ವಾರ್ಡ್ನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಆಯ...
19/09/2021

ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಗೊಟ್ಟಿಗೆರೆ ಬ್ಲಾಕ್ನ ಗೊಟ್ಟಿಗೆರೆ ವಾರ್ಡ್ನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಆರ್ ಕೆ ರಮೇಶ್, ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಧರ ಲಕ್ಷ್ಮಣ್, ಹಿರಿಯ ಕಾಂಗ್ರೆಸ್ ಮುಖಂಡರಾದ ಜಿ.ಕೆ ರವಿ, ಚಂದ್ರಶೇಖರ್, ಗೊಟ್ಟಿಗೆರೆ ವಾರ್ಡ್ ನ ಅಧ್ಯಕ್ಷರಾದ ಸುದರ್ಶನ್, ಗೊಟ್ಟಿಗೆರೆ ಬ್ಲಾಕ್ ಎಸ್. ಸಿ/ ಎಸ್. ಟಿ ವಿಭಾಗದ ಅಧ್ಯಕ್ಷರಾದ ಮುನಿರಾಜು, ಗೊಟ್ಟಿಗೆರೆ ಬ್ಲಾಕ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಚಂದ್ರಶೇಖರ್, ಗೊಟ್ಟಿಗೆರೆ ಬ್ಲಾಕ್ ಮಹಿಳಾ ಅಧ್ಯಕ್ಷರಾದ ರೇಖಾ ನವೀನ್ ಗೌಡ, ಬಿದರೆ ರಾಜು, ಗೊಟ್ಟಿಗೆರೆ ಬ್ಲಾಕ್ ಓಬಿಸಿ ಅಧ್ಯಕ್ಷರಾದ ನಾಗೇಶ್ ಮತ್ತು ಹಲವು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

10/09/2021

Address

Gottigere Main Road Bhannerughatta Road
Bangalore
560083

Telephone

+919880002403

Website

Alerts

Be the first to know and let us send you an email when Inc-GOTTIGERE BLOCK Labour CELL posts news and promotions. Your email address will not be used for any other purpose, and you can unsubscribe at any time.

Contact The Organization

Send a message to Inc-GOTTIGERE BLOCK Labour CELL:

Share