ಕೆ ಆರ್ ಎಸ್ ಪಕ್ಷ ಕಾರ್ಕಳ - KRS Party Karkala

  • Home
  • India
  • Bangalore
  • ಕೆ ಆರ್ ಎಸ್ ಪಕ್ಷ ಕಾರ್ಕಳ - KRS Party Karkala

ಕೆ ಆರ್ ಎಸ್ ಪಕ್ಷ ಕಾರ್ಕಳ - KRS Party Karkala ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣ

04/09/2026

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಕೆ ಆರ್ ಎಸ್ ಪಕ್ಷದವರ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಶ್ಲಾಘನಾ ಕಾರ್ಯಕ್ರಮ.

04/09/2026

ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂತೋಷ ಶೆಟ್ಟಿರವರ ಅಪ್ಪಟ ಸುಳ್ಳುಗಳ ಸರಮಾಲೆಯನ್ನು ಕೇಳಿಸಿಕೊಳ್ಳಬೇಕೇ? ದಯವಿಟ್ಟು ಈ ವಿಡಿಯೋವನ್ನು ನೋಡಿ.

04/09/2026
03/09/2026

ಉಡುಪಿ ನಗರ ಭಾಗದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿಯ ಕರ್ಮಕಾಂಡ.

ಹಲವಾರು ಅನಧಿಕೃತ ವ್ಯಕ್ತಿಗಳಿಂದ ಸರ್ಕಾರಿ ಕೆಲಸದ ನಿರ್ವಹಣೆ ಹಾಗೂ ದಲ್ಲಾಳಿಗಳ ಗೂಡಾಗಿರುವ ಕಚೇರಿ. ಈ ಎಲ್ಲಾ ಅಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಅಲ್ಲಿನ ಆರ್ ಟಿ ಓ ಶ್ರೀ ಸಂತೋಷ್ ಶೆಟ್ಟಿ.

ಇಂತಹಾ ಭ್ರಷ್ಟ ಮತ್ತು ಕುಲಗೆಟ್ಟ ಆಡಳಿತ ವ್ಯವಸ್ಥೆ ನಿಮಗೆ ಬೇಕೇ?

ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಟಿಪ್ಪಣಿ ಮೂಲಕ ದಯವಿಟ್ಟು ತಿಳಿಸಿ.

02/09/2026

ಸದಾ ನಿಯಮಬಾಹಿರ, ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳು ನಮ್ಮ ರಾಜ್ಯಕ್ಕೆ ಬೇಕೆ?

ಮನಸ್ಸಿದ್ದಲ್ಲಿ ಮಾರ್ಗ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೇ? ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿ...
02/09/2026

ಮನಸ್ಸಿದ್ದಲ್ಲಿ ಮಾರ್ಗ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೇ?

ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಸ್ಸು ತಂಗುದಾಣ. ನಿನ್ನೆಯ ದಿನ (01/09/2026) ಮಧ್ಯಾಹ್ನ ನಮ್ಮ ಪಕ್ಷದ ಈ ಹಿಂದೆ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಆರತಿ ಅಶೋಕ್ ಅವರು ತಮ್ಮ ವೈಯಕ್ತಿಕ ಕೆಲಸಗಳಿಗೆ ಉಡುಪಿಗೆ ಹೋಗುತ್ತಿರುವಾಗ ಬಸ್ ನಿಲ್ದಾಣ ದುಸ್ಥಿತಿಯಲ್ಲಿರುವುದನ್ನು ಗಮನಿಸಿ ತಕ್ಷಣದಲ್ಲಿ ಅದರ ಛಾಯಾಚಿತ್ರ ತೆಗೆದು ಕುಕ್ಕುಂದೂರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಶ್ರೀಯುತ ಪ್ರದೀಪ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದು, ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ತ್ವರಿತ ಗತಿಯಲ್ಲಿ ಕಾರ್ಯಪ್ರವೃತ್ತರಾಗಿ ಕೆಲವೇ ಗಂಟೆಗಳಲ್ಲಿ ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಬಸು ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ.

ಇದೇ ಮಾದರಿಯಲ್ಲಿ ಮೊನ್ನೆಯ ದಿನ ಬೆಳಗ್ಗೆ (31/08/2026) ಅದೇ ಪಂಚಾಯಿತಿಗೆ 2021ರಿಂದ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಅಲೆದಾಡಿ, ಅಲೆದಾಡಿ ಬೇಸತ್ತ ಒಬ್ಬ ಸಾರ್ವಜನಿಕ ಆ ಕೆಲಸಕ್ಕಾಗಿ ನಮ್ಮನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ, ನೊಂದವರ ಪರವಾಗಿ ಪಿಡಿಒರವರನ್ನು ದೂರವಾಣಿ ಮುಖಾಂತರ ತಲುಪಿ ಆ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ತಕ್ಷಣದಲ್ಲಿ ಸ್ಪಂದಿಸಿ ಕೆಲವೇ ಗಂಟೆಗಳಲ್ಲಿ ಮಾಹಿತಿಯನ್ನು ನೀಡಿ ಸುಮಾರು ಐದು ವರ್ಷಗಳಿಂದ ಬಾಕಿ ಉಳಿದಿದ್ದ ಕೆಲಸವನ್ನು ಮಾಡಿಕೊಟ್ಟಿರುತ್ತಾರೆ.

ಇದನ್ನೆಲ್ಲಾ ನೋಡಿದರೆ ಮತ್ತು ನನ್ನ ಗಮನಕ್ಕೆ ಬಂದಿರುವಂತೆ ಉಡುಪಿ ಜಿಲ್ಲೆಯಾದ್ಯಂತ ಹಲವಾರು ಕರ್ತವ್ಯನಿಷ್ಠ, ಪ್ರಾಮಾಣಿಕ, ಜನಸಾಮಾನ್ಯರ ಕಷ್ಟ ನಷ್ಟಗಳನ್ನು ಅರಿತು ಸರ್ಕಾರಿ ಕೆಲಸ ಮಾಡುವ ಅಧಿಕಾರಿಗಳಿದ್ದರೂ ಅವರನ್ನು ಗುರುತಿಸಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಎಲ್ಲೋ ಒಂದು ಕಡೆ ಜನಸಾಮಾನ್ಯರೇ ವಿಫಲರಾಗುತ್ತಿದ್ದು, ಅಂತಿಮವಾಗಿ ಲಂಚ ನೀಡಿದ ಕೆಲಸ ಮಾಡಿಸಿ ಕೊಳ್ಳುವ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ.

ಮೇಲಿನ ಎರಡೂ ವಿಚಾರಗಳಿಗೆ ಸಂಬಂಧಿಸಿದಂತೆ ತ್ವರಿತ ಗತಿಯಲ್ಲಿ ಸ್ಪಂದಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟ ಕುಕ್ಕುಂದೂರು ಗ್ರಾಮ ಪಂಚಾಯಿತಿ ಪಿಡಿಓ ಶ್ರೀಯುತ ಪ್ರದೀಪ್ ಶೆಟ್ಟಿ ಅವರಿಗೆ ಕೆ ಆರ್ ಎಸ್ ಪಕ್ಷದ ಮತ್ತು ಕಾರ್ಕಳದ ಜನತೆ ಪರವಾಗಿ ಧನ್ಯವಾದಗಳು.

ವಿ ಆರ್ ಮರಾಠೆ
ರಾಜ್ಯ ಖಜಾಂಚಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ,
ಕೆ ಆರ್ ಎಸ್ ಪಕ್ಷ.

31/08/2026

ಉಡುಪಿ ಜಿಲ್ಲೆಯಲ್ಲಿ ಅಥವಾ ಆಸುಪಾಸಿನಲ್ಲಿ ವಾಸಿಸುವ ಮತ್ತು ಕೆ ಆರ್ ಎಸ್ ಪಕ್ಷದ ಕಾರ್ಯಕ್ರಮಗಳನ್ನು ಮೆಚ್ಚಿರುವ, ಪದಾಧಿಕಾರಿಗಳಾಗಿರುವ ಅಥವಾ ಸದಸ್ಯತ್ವ ಪಡೆದಿರುವವರು ಕನಿಷ್ಠ ನಾಳೆ ಒಂದು ದಿನವಾದರೂ (ನಮ್ಮ ಮೂರು ದಿನದ ಕೊನೆಯ ದಿನವಾದರೂ) ಕಾರ್ಯಕ್ರಮದಲ್ಲಿ ಭಾಗಿಯಾಗಿ.

ವಿ ಆರ್ ಮರಾಠೆ,
ರಾಜ್ಯ ಖಜಾಂಚಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ.
ಕೆಆರ್‌ಎಸ್ ಪಕ್ಷ.

Address

Bangalore
560021

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ಕಾರ್ಕಳ - KRS Party Karkala posts news and promotions. Your email address will not be used for any other purpose, and you can unsubscribe at any time.

Shortcuts

Share