namma Autocab safe

namma Autocab  safe Contact information, map and directions, contact form, opening hours, services, ratings, photos, videos and announcements from namma Autocab safe, Public Service, bengalore, Bangalore.

🚕🛺 Namma Autocab Safe — ಚಾಲಕರು ಮತ್ತು ಪ್ರಯಾಣಿಕರ ಧ್ವನಿ ❤️🙏
🛡️ Safety Important — ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆ ಮುಖ್ಯ
📜 Rules Follow — ನಿಯಮಗಳನ್ನು ಪಾಲಿಸುವುದು ಮುಖ್ಯ
📢 Online Platform
📲 Share = ನಿಮ್ಮ ಧ್ವನಿ | ❤️ Like = ನಿಮ್ಮ ಇಷ್ಟ | 💪 Follow = ನಿಮ್ಮ ಶಕ್

19/08/2026

“🛵🏍️🚨ರೈಡರ್ ಬಳಿ ಕೇಳಿದಾಗ, ಅವರು ಯಾವುದೇ ಕಾನೂನು ದಾಖಲೆ ತೋರಿಸಲಿಲ್ಲ. ಬದಲಾಗಿ, ಎರಡು ದಿನಗಳ ಹಿಂದೆ ರ‍್ಯಾಪಿಡೋ ಕಂಪನಿಯವರು ವಿಡಿಯೋದಲ್ಲಿ ಹೇಳಿದ್ದನ್ನೇ ತೋರಿಸಿದರು — ‘ಆ್ಯಪ್‌ನಲ್ಲಿ ಈ ಮಾಹಿತಿ ಬರುತ್ತದೆ, ಅದನ್ನು ತೋರಿಸಿದರೆ ಸಾಕು’ ಎಂದು.
ಹಾಗಾದರೆ ಒಂದು ಪ್ರಶ್ನೆ: ಕಂಪನಿಯವರು ವಿಡಿಯೋದಲ್ಲಿ ಹೇಳಿದ ಮಾತೇ ಕಾನೂನು ಅನುಮತಿಯ ಸಾಕ್ಷಿಯೇ? 🤔
ರೈಡರ್‌ಗಳಿಗೆ ಇಂತಹ ಮಾಹಿತಿಯನ್ನು ನೀಡಿ ರಸ್ತೆಗೆ ಕಳುಹಿಸುವುದು ಸರಿಯೇ? ನಾಳೆ ಪೊಲೀಸರು ತಡೆದು ದಂಡ ಹಾಕಿದರೆ, ಆ ದಂಡವನ್ನು ರೈಡರ್‌ನೇ ಕಟ್ಟಬೇಕು. ಆಗ ಕಂಪನಿಯವರು ಬಂದು ದಂಡದ ಹಣ ಕಟ್ಟುತ್ತಾರೆಯೇ?
ತಮ್ಮ ಲಾಭಕ್ಕಾಗಿ ರೈಡರ್‌ಗಳಿಗೆ ಧೈರ್ಯ ಹೇಳುವುದು ಸುಲಭ. ಆದರೆ ಕಾನೂನು ಸಮಸ್ಯೆ ಬಂದಾಗ ರೈಡರ್ ಒಬ್ಬನೇ ಕಷ್ಟ ಅನುಭವಿಸಬಾರದು.
👉 ಕಂಪನಿಯವರು ಸ್ಪಷ್ಟವಾದ ಕಾನೂನು ಅನುಮತಿ ಮತ್ತು ದಾಖಲೆಗಳನ್ನು ತೋರಿಸಲಿ. ಮಾತಿನಿಂದಲ್ಲ — ದಾಖಲೆ ಮತ್ತು ಕಾನೂನಿನ ಮೂಲಕ ಉತ್ತರ ಕೊಡಲಿ.

18/08/2026

🚕🛺 Namma Autocab Safe ❤️🙏
ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ.
🛡️ ಸುರಕ್ಷಿತ ಪ್ರಯಾಣ • ಸುರಕ್ಷಿತ ಚಾಲನೆ
🤝 ಆಟೋ ಮತ್ತು ಕ್ಯಾಬ್ ಚಾಲಕರಿಗೆ ಬೆಂಬಲ
🚦 ಸಂಚಾರ ನಿಯಮಗಳನ್ನು ಗೌರವಿಸೋಣ
❤️ ಪ್ರಯಾಣಿಕರ ಸುರಕ್ಷತೆ ಕಾಪಾಡೋಣ
ಈ ಪೇಜ್ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆ, ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ರಚಿಸಲಾಗಿದೆ.
Safe Drive • Safe Ride • Safe Bangalore 🚕🛺

18/08/2026

🚨🛵 ಬೈಕ್ ಟ್ಯಾಕ್ಸಿ ಕುರಿತು RTO ಅಧಿಕಾರಿಗಳ ಕ್ರಮ? 🤔
ಈ ವಿಡಿಯೋದಲ್ಲಿ RTO ಅಧಿಕಾರಿಗಳು ಬೈಕ್ ಅನ್ನು ತಡೆಯಲು / ಸೀಜ್ ಮಾಡಲು ಮುಂದಾಗಿರುವುದು ಕಂಡುಬರುತ್ತದೆ.
📌 ಈ ವಿಡಿಯೋ ಯಾವ ಸ್ಥಳದ್ದು ಮತ್ತು ಯಾವ ದಿನದ ಘಟನೆ ಎಂಬುದು ಖಚಿತವಾಗಿಲ್ಲ.
🛡️ ಚಾಲಕರಿಗೂ, ಪ್ರಯಾಣಿಕರಿಗೂ ಸುರಕ್ಷತೆ ಅತ್ಯಂತ ಮುಖ್ಯ.
ಸುರಕ್ಷಿತ ಪ್ರಯಾಣವೇ ನಮ್ಮ ಮೊದಲ ಆದ್ಯತೆ. ❤️🙏
ಸರಿಯಾದ ಮಾಹಿತಿ ಗೊತ್ತಿದ್ದರೆ ಕಾಮೆಂಟ್ ಮಾಡಿ.

17/08/2026

🛵🏍️🏍️ಮತ್ತೆ ಮತ್ತೆ ಕ್ರಮ, ಮತ್ತೆ ಮತ್ತೆ ಎಚ್ಚರಿಕೆ... ಆದರೂ Bike Taxi ವಿಷಯ ಇನ್ನೂ ಮುಂದುವರಿಯುತ್ತಿದೆ.
ತಪ್ಪು ಯಾರದು? ಚಾಲಕರದೇ? ಬುಕಿಂಗ್ ಮಾಡುವ ಪ್ರಯಾಣಿಕರದೇ? ಅಥವಾ App ನಲ್ಲಿ Bike Taxi ಆಯ್ಕೆಯನ್ನು ನೀಡಿ ಸೇವೆ ನಡೆಸುತ್ತಿರುವ ಕಂಪನಿಗಳದೇ?
App ನಲ್ಲಿ ಆಯ್ಕೆಯೇ ಇಲ್ಲದಿದ್ದರೆ ಬುಕಿಂಗ್ ಹೇಗೆ ಆಗುತ್ತದೆ? Bike Taxi ಹೇಗೆ ಓಡುತ್ತದೆ?
ಈ ಸಮಸ್ಯೆಗೆ ಕೇವಲ ಚಾಲಕರು ಅಥವಾ ಪ್ರಯಾಣಿಕರನ್ನು ಮಾತ್ರ ಹೊಣೆ ಮಾಡದೇ, ಎಲ್ಲ ಸಂಬಂಧಪಟ್ಟವರು ಜವಾಬ್ದಾರಿ ವಹಿಸಬೇಕು.

17/08/2026

🚨 ವೈಟ್‌ಬೋರ್ಡ್ ಬೈಕ್‌ನಲ್ಲಿ ಪ್ರಯಾಣಿಕರ ಸೇವೆ — ಇದು ಸರಿಯೇ? 🏍️⚠️
ವೈಟ್‌ಬೋರ್ಡ್ ಖಾಸಗಿ ಬೈಕ್ ಅನ್ನು ಅಗತ್ಯವಿರುವ ಟ್ಯಾಕ್ಸಿ ನೋಂದಣಿ ಮತ್ತು ಪರ್ಮಿಟ್ ಇಲ್ಲದೆ ಪ್ರಯಾಣಿಕರನ್ನು ಸಾಗಿಸಲು ಬಳಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು.
🛑 ಪ್ರಯಾಣಿಕರ ಸುರಕ್ಷತೆ ಮುಖ್ಯ.
📋 ವಾಹನಕ್ಕೆ ಸರಿಯಾದ ನೋಂದಣಿ, ಪರ್ಮಿಟ್ ಮತ್ತು ಅಗತ್ಯ ದಾಖಲೆಗಳಿವೆಯೇ?
👕 ಪ್ರಯಾಣಿಕರಿಗೆ ಸೇವೆ ನೀಡುವಾಗ ಚಾಲಕರು ಕನಿಷ್ಠ ವೃತ್ತಿಪರ ಮತ್ತು ಗೌರವಯುತ ಉಡುಪು ಧರಿಸುವುದು ಕೂಡ ಅಗತ್ಯ.
👉 ಇಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ವಾಹನದ ದಾಖಲೆಗಳು, ಪರ್ಮಿಟ್ ಮತ್ತು ನಿಯಮಾನುಸಾರ ಕಾರ್ಯಾಚರಣೆ ನಡೆಯುತ್ತಿದೆಯೇ ಎಂಬುದನ್ನು RTO ಅಧಿಕಾರಿಗಳು ಪರಿಶೀಲಿಸಬೇಕು.
🚖 ಆಟೋ ಮತ್ತು ಕ್ಯಾಬ್ ಚಾಲಕರು ನಿಯಮ ಪಾಲಿಸಿ ಸೇವೆ ನೀಡುತ್ತಿರುವಾಗ, ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗಬೇಕು.
ನಿಮ್ಮ ಅಭಿಪ್ರಾಯವೇನು? 👇

17/08/2026

🚨 ಬೈಕ್ ಟ್ಯಾಕ್ಸಿ ರಿಯಾಲಿಟಿ ಚೆಕ್ – ಬೆಂಗಳೂರು
ಬೆಂಗಳೂರುದಲ್ಲಿ Rapido Bike Taxi ಬಗ್ಗೆ ಹಲವು ಮಾಹಿತಿ ಮತ್ತು ವಿಡಿಯೋಗಳು ಹರಿದಾಡುತ್ತಿವೆ.
ಆದರೆ Bike Taxi ಓಡಿಸಲು ಅಗತ್ಯವಿರುವ Permit, Registration ಮತ್ತು ಕಾನೂನು ನಿಯಮಗಳು ಏನು? ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಈ ವಿಡಿಯೋ ಯಾರನ್ನೂ ಟಾರ್ಗೆಟ್ ಮಾಡಲು ಅಥವಾ ಯಾವುದೇ ಕಂಪನಿಯ ವಿರುದ್ಧವಾಗಿ ಮಾಡುವುದಲ್ಲ. Drivers ಮತ್ತು Passengersಗೆ ಸರಿಯಾದ ಹಾಗೂ verified ಮಾಹಿತಿ ತಲುಪಿಸುವುದು ನಮ್ಮ ಉದ್ದೇಶ.
🛡️ Safety Important • Rules Follow
📌 Source: Karnataka High Court orders, Karnataka Transport Department updates & Supreme Court case information.
Namma Autocab Safe
Drivers Voice • Passenger Safety • Correct Information

15/08/2026

🙏 91 ವರ್ಷದ ಆಟೋ ಚಾಲಕರ ಮಾತು ಪ್ರತಿಯೊಬ್ಬ ಆಟೋ ಚಾಲಕ ಮತ್ತು ಪ್ರಯಾಣಿಕರು ಕೇಳಲೇಬೇಕು
ಬೆಂಗಳೂರಿನಲ್ಲಿ ಒಬ್ಬ ಮಹಿಳಾ ಪ್ರಯಾಣಿಕರು ರಸ್ತೆಯಲ್ಲಿ ಆಟೋ ಹತ್ತಿದರು. ಪ್ರಯಾಣದ ವೇಳೆ ಆಟೋ ಚಾಲಕರ ವಯಸ್ಸು 91 ವರ್ಷ ಎಂದು ತಿಳಿದು, ಅವರೊಂದಿಗೆ ಮಾತನಾಡಿದರು.
ಅವರು 1960ರಿಂದ ಆಟೋ ಓಡಿಸುತ್ತಿದ್ದೇನೆ ಎಂದು ಹೇಳಿದರು. ಮಹಿಳೆ, “ನಿಮ್ಮ ಮಕ್ಕಳು ಅಮೆರಿಕದಲ್ಲಿದ್ದಾರೆ, ಹಾಗಿದ್ದರೂ ನೀವು ಯಾಕೆ ಆಟೋ ಓಡಿಸುತ್ತಿದ್ದೀರಿ?” ಎಂದು ಕೇಳಿದರು.
91 ವರ್ಷದ ಹಿರಿಯ ಆಟೋ ಚಾಲಕರು, “ನಾನು ಯಾರ ಬಳಿಯೂ ಹಣಕ್ಕಾಗಿ ಕೈ ಚಾಚುವುದಿಲ್ಲ. ನನ್ನ ದುಡಿಮೆಯಿಂದಲೇ ಜೀವನ ನಡೆಸುತ್ತೇನೆ” ಎಂದು ಆತ್ಮಗೌರವದಿಂದ ಹೇಳಿದರು. ❤️🙏
ಆಟೋ ಚಾಲಕರಿಗೆ ಅವರು ನೀಡಿದ ಸಲಹೆ ಕೂಡ ತುಂಬಾ ಅರ್ಥಪೂರ್ಣವಾಗಿದೆ:
👉 ಪ್ರತಿಯೊಬ್ಬ ಪ್ರಯಾಣಿಕರೊಂದಿಗೆ ಗೌರವದಿಂದ ವರ್ತಿಸಿ.
👉 ಪ್ರಯಾಣಿಕರಿಂದ ಅಗತ್ಯಕ್ಕಿಂತ ಹೆಚ್ಚು ಹಣ ಕೇಳಬೇಡಿ.
👉 ಪ್ರತಿಯೊಬ್ಬ ಗ್ರಾಹಕರೊಂದಿಗೆ ಉತ್ತಮವಾಗಿ ನಡೆದುಕೊಳ್ಳಿ.
👉 ಪ್ರಾಮಾಣಿಕತೆ ಮತ್ತು ದುಡಿಮೆಯನ್ನು ಮುಂದುವರಿಸಿ.
👉 ನಿಮ್ಮ ಆತ್ಮಗೌರವವನ್ನು ಕಾಪಾಡಿಕೊಳ್ಳಿ.
91 ವರ್ಷ ವಯಸ್ಸಿನಲ್ಲಿಯೂ ದುಡಿಮೆ ಮತ್ತು ಆತ್ಮಗೌರವದಿಂದ ಬದುಕುತ್ತಿರುವ ಈ ಹಿರಿಯರ ಮಾತು ನಮಗೆಲ್ಲರಿಗೂ ಒಂದು ಪಾಠ. 🙏❤️
ಈ ಸುಂದರ ವಿಚಾರವನ್ನು ಜನರಿಗೆ ತಲುಪಿಸಿದ ಮಹಿಳೆಯವರಿಗೂ ಧನ್ಯವಾದಗಳು. 🙏
🎥 Source / Credit: Sheela C. Shetty
🔗 Facebook Link: https://www.facebook.com/share/19RrgMwLaC/
🚕 Namma Autocab Safe
🛡️ Safety • Respect • Responsibility
❤️ ಆಟೋ ಚಾಲಕರು ಮತ್ತು ಪ್ರಯಾಣಿಕರು — ಇಬ್ಬರಿಗೂ ಗೌರವ ಮುಖ್ಯ.

14/08/2026

🛵🛵 ಬೈಕ್ ಟ್ಯಾಕ್ಸಿ ಬಗ್ಗೆ ಆನ್‌ಲೈನ್‌ನಲ್ಲಿ ಮಾತನಾಡುವ ವ್ಯಕ್ತಿಯ ಪ್ರಶ್ನೆಗೆ ಚಾಲಕನ ಉತ್ತರ!
“ಸರ್ಕಾರ ಅನುಮತಿ ನೀಡಿಲ್ಲ ಅಂದರೆ, ವೈಟ್ ಬೋರ್ಡ್‌ನಲ್ಲಿ ಬೈಕ್ ಟ್ಯಾಕ್ಸಿ ಹೇಗೆ ಓಡುತ್ತಿದೆ?” ಎಂದು ಚಾಲಕ ಪ್ರಶ್ನಿಸಿದ್ದಾರೆ.
🎥 ವಿಡಿಯೋ ಕ್ರೆಡಿಟ್:
page
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ

14/08/2026

🚨 OLA-Uber ನ Advance Tip ವ್ಯವಸ್ಥೆಗೆ ಬ್ರೇಕ್!
ರೈಡ್ ಆರಂಭಕ್ಕೂ ಮುನ್ನ ಟಿಪ್ ನೀಡುವ ವ್ಯವಸ್ಥೆ ಬಗ್ಗೆ ಸರ್ಕಾರದ ಮಹತ್ವದ ಕ್ರಮ. ಇನ್ನು ಟಿಪ್ ಸಂಪೂರ್ಣ ಸ್ವಯಂಪ್ರೇರಿತವಾಗಿದ್ದು, ರೈಡ್ ಮುಗಿದ ನಂತರ ಮಾತ್ರ ನೀಡಬಹುದು.
🎥 Source: ABP News
🔗 Facebook Link: https://www.facebook.com/share/1EnZSfxVPt/

Address

Bengalore
Bangalore

Website

Alerts

Be the first to know and let us send you an email when namma Autocab safe posts news and promotions. Your email address will not be used for any other purpose, and you can unsubscribe at any time.

Shortcuts

Share

Category