ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡದಲ್ಲಿ ಲೇಖಕರ / ಪ್ರಕಾಶಕರ / ಮಾರಾಟಗಾರರ / ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸಿ ಓದುಗರಲ್ಲಿ ಉತ್ತಮ ವಾ

ಕನ್ನಡ ಪುಸ್ತಕ ಪ್ರಾಧಿಕಾರವು ಇಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನ ಸಭಾಂಗಣದಲ್ಲಿ ಡಾ. ಅರವಿಂದ ಮಾಲಗತ್ತಿ ಅವರ ಸಮಗ್ರ ಸಾಹಿತ್ಯ ...
06/08/2026

ಕನ್ನಡ ಪುಸ್ತಕ ಪ್ರಾಧಿಕಾರವು ಇಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನ ಸಭಾಂಗಣದಲ್ಲಿ ಡಾ. ಅರವಿಂದ ಮಾಲಗತ್ತಿ ಅವರ ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಂಡಿತ್ತು.

ಹಿರಿಯ ಸಾಹಿತಿಗಳಾದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡುವುದರೊಂದಿಗೆ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎನ್. ಕೆ. ಲೋಲಾಕ್ಷಿ ಇವರು ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು.
ಅಲ್ಲದೆ ಸಂಪುಟಗಳ ಲೇಖಕರಾದ ಡಾ. ಅರವಿಂದ ಮಾಲಗತ್ತಿ ಅವರು ಹಾಗೂ ಅವರ ಪತ್ನಿ ಡಾ ಧರಣಿದೇವಿ ಮಾಲಗತ್ತಿ ಉಪಸ್ಥಿತರಿದ್ದರು.
ಮಾಲಗತ್ತಿ ಸಂಪುಟಗಳ ಸಂಪಾದಕರಾದ ಡಾ. ಪ್ರಸನ್ನಕುಮಾರ್ ಎಂ. ಹಾಗೂ ಡಾ. ರಾಜೇಂದ್ರ ಬಡಿಗೇರ್ ಹಾಗೂ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಅವರುಗಳು ಹಾಜರಿದ್ದರು.

05/08/2026
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯಕ್ಕಾಗಿ ನಾಲ್ಕು ಹೊಸ ಪ್ರಶಸ್ತಿಗಳ ಘೋಷಣೆ – ಡಾ. ಮಾನಸಬೆಂಗಳೂರು – ಆಗಸ್ಟ್-04, ಕನ್ನಡ ಪುಸ...
05/08/2026

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯಕ್ಕಾಗಿ ನಾಲ್ಕು ಹೊಸ ಪ್ರಶಸ್ತಿಗಳ ಘೋಷಣೆ – ಡಾ. ಮಾನಸ

ಬೆಂಗಳೂರು – ಆಗಸ್ಟ್-04, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಸಕ್ತ ವರ್ಷದಿಂದ ಜಾರಿಗೆ ಬರುವಂತೆ ನಾಲ್ಕು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಿ ಘೊಷಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದ್ದಾರೆ. ಪುಸ್ತಕ ಪ್ರಾಧಿಕಾರ ಅನುಷ್ಠಾನಗೊಳಿಸಿ ಜಾರಿಗೊಳಿಸುತ್ತಿರುವ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಡಿಯಲ್ಲಿ ವಿಶಿಷ್ಟ ಹಾಗೂ ಉತ್ತಮ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸಿದವರಿಗೆ ಕನ್ನಡದ ಶ್ರೇಷ್ಠ ಬರಹಗಾರರ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ನೀಡಲಾಗುವುದೆಂದು ಅವರು ತಿಳಿಸಿದರು. ಈ ನಾಲ್ಕು ಪ್ರಶಸ್ತಿಗಳನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಒಂದರಂತೆ ನೀಡಲಾಗುತ್ತದೆ. ಡಾ. ಪಿ.ಆರ್. ತಿಪ್ಪೇಸ್ವಾಮಿ, ಶ್ರೀಮತಿ ನಂಜನಗೂಡು ತಿರುಮಲಾಂಬ, ಗಳಗನಾಥ ಹಾಗೂ ಡಾ. ಹಾ.ಮಾ. ನಾಯಕ ಅವರ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಡಾ. ಮಾನಸ ಹೇಳಿದ್ದಾರೆ.
2025ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಲ್ಕು ಮಂದಿ ಗಣ್ಯರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ವಿವರ ಕೆಳಕಂಡಂತಿದೆ.

ಡಾ. ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ
ಶ್ರೀ ಆಶಿಕ್, ಶಂಕರಘಟ್ಟ, ಶಿವಮೊಗ್ಗ
(ಬೆಂಗಳೂರು ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಶಸ್ತಿ
ಡಾ. ಬೆಟ್ಟಸ್ವಾಮಿ ಹೆಚ್.ಬಿ., ಮೈಸೂರು
(ಮೈಸೂರು ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ಗಳಗನಾಥ ಪ್ರಶಸ್ತಿ
ಶ್ರೀ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ, ಹಾವೇರಿ
(ಬೆಳಗಾವಿ ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ಡಾ. ಹಾ.ಮಾ. ನಾಯಕ ಪ್ರಶಸ್ತಿ
ಡಾ. ಶೈಲಜಾ ಎನ್. ಬಾಗೇವಾಡಿ, ಕಲಬುರಗಿ
(ಕಲಬುರಗಿ ವಿಭಾಗ) (ಪ್ರಶಸ್ತಿ ಮೊತ್ತ ರೂ.25,000-00)

ಈ ಪ್ರಶಸ್ತಿಗಳನ್ನು ಪುಸ್ತಕ ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಪ್ರದಾನ ಮಾಡಲಾಗುವುದು ಪ್ರಸಸ್ತಿ ಪ್ರದಾನ ದಿನಾಂಕವನ್ನುb ಸಧ್ಯದಲ್ಲಿಯೇ ತಿಳಿಸಲಾಗುವುದು

ಮೈಸೂರಿನಲ್ಲಿ ಆಗಸ್ಟ್‌ 06ರಂದು ಡಾ. ಅರವಿಂದ ಮಾಲಗತ್ತಿ ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ ಸಮಾರಂಭ ಕನ್ನಡ ಪುಸ್ತಕ ಪ್ರಾಧಿಕಾರವು ದಿನಾಂಕ:06...
04/08/2026

ಮೈಸೂರಿನಲ್ಲಿ ಆಗಸ್ಟ್‌ 06ರಂದು ಡಾ. ಅರವಿಂದ ಮಾಲಗತ್ತಿ ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ ಸಮಾರಂಭ

ಕನ್ನಡ ಪುಸ್ತಕ ಪ್ರಾಧಿಕಾರವು ದಿನಾಂಕ:06.08.2026ರಂದು ಬೆಳಿಗ್ಗೆ 11.00ಗಂಟೆಗೆ ಡಾ. ಅರವಿಂದ ಮಾಲಗತ್ತಿ ಸಮಗ್ರ ಸಾಹಿತ್ಯ ಸಂಪುಟ (8 ಸಂಪುಟಗಳು)ಗಳ ಬಿಡುಗಡೆ ಕಾರ್ಯಕ್ರಮವನ್ನು ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರ್ಸ್‌, ಜೆ.ಎಲ್‌.ಬಿ. ರಸ್ತೆ, (ಮುಡಾ ಪಕ್ಕ), ಮೈಸೂರು ಜಿಲ್ಲೆ ಇಲ್ಲಿ ಆಯೋಜಿಸಿದೆ.

ಹಿರಿಯ ಸಾಹಿತಿಗಳಾದ ಡಾ. ಸಿ.ಪಿ. ಕೃಷ್ಣಕುಮಾರ್‌ ಅವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡುವುದರೊಂದಿಗೆ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎನ್.‌ ಕೆ. ಲೋಲಾಕ್ಷಿ ಇವರು ಮುಖ್ಯ ಅತಿಥಿಗಳಾಗಿ ಆಮಿಸಲಿದ್ದಾರೆ. ಅಲ್ಲದೆ ಸಂಪುಟಗಳ ಲೇಖಕರಾದ ಡಾ. ಅರವಿಂದ ಮಾಲಗತ್ತಿ ಅವರು ಹಾಗೂ ಅವರ ಸಂಪುಟಗಳ ಸಂಪಾದಕರಾದ ಡಾ. ಪ್ರಸನ್ನಕುಮಾರ್‌ ಎಂ. ಹಾಗೂ ಡಾ. ರಾಜೇಂದ್ರ ಬಡಿಗೇರ್‌ ಅವರುಗಳು ಉಪಸ್ಥಿತರಿರುತ್ತಾರೆ.

ಒಟ್ಟು 08 ಸಂಪುಟಗಳಲ್ಲಿ ಡಾ. ಅರವಿಂದ ಮಾಲಗತ್ತಿ ಸಮಗ್ರ ಸಾಹಿತ್ಯ ಸಂಪುಟಗಳು ಪ್ರಕಟವಾಗುತ್ತಿದೆ. ಸಮಗ್ರ ಸಾಹಿತ್ಯದ 08 ಸಂಪುಟಗಳ ಒಟ್ಟು ಬೆಲೆ ರೂ. 4,690-00ಗಳು ಆಗಿದ್ದು, ಆಗಸ್ಟ್‌ ತಿಂಗಳಿನಲ್ಲಿ 50% ರಿಯಾಯಿತಿ ನೀಡಲಾಗುತಿದ್ದು, ರೂ. 2,345-00ಗಳಿಗೆ ಈ ಸಮಗ್ರ ಸಂಪುಟಗಳು ಲಭ್ಯವಾಗಲಿದೆ.

ಕನ್ನಡ ಪುಸ್ತಕ ಪ್ರಾಧಿಕಾರದ ಹೆಮ್ಮೆಯ ಪ್ರಕಟಣೆಗಳು ಆಗಸ್ಟ್ ತಿಂಗಳಲ್ಲಿ ನಮ್ಮ ಎಲ್ಲಾ ಪ್ರಕಟಣೆಗಳ ಮೇಲೆ ಶೇಕಡಾ ೫೦% ರಿಯಾಯಿತಿ ಸುಮಾರು ೫೦೦ ಶೀರ್...
03/08/2026

ಕನ್ನಡ ಪುಸ್ತಕ ಪ್ರಾಧಿಕಾರದ ಹೆಮ್ಮೆಯ ಪ್ರಕಟಣೆಗಳು ಆಗಸ್ಟ್ ತಿಂಗಳಲ್ಲಿ ನಮ್ಮ ಎಲ್ಲಾ ಪ್ರಕಟಣೆಗಳ ಮೇಲೆ ಶೇಕಡಾ ೫೦% ರಿಯಾಯಿತಿ ಸುಮಾರು ೫೦೦ ಶೀರ್ಷಿಕೆಗಳು ಮಾರಾಟಕ್ಕೆ ಲಭ್ಯವಿದ್ದು ಪುಸ್ತಕಗಳನ್ನು ಕೊಳ್ಳಲು ಭೇಟಿ ನೀಡಿ
https://kannadapustakapradhikara.com/books

31/07/2026

Address

ಕನ್ನಡ ಭವನ ಜೆ. ಸಿ. ರಸ್ತೆ
Bangalore
೫೬೦೦೦೨

Alerts

Be the first to know and let us send you an email when ಕನ್ನಡ ಪುಸ್ತಕ ಪ್ರಾಧಿಕಾರ posts news and promotions. Your email address will not be used for any other purpose, and you can unsubscribe at any time.

Shortcuts

Share