05/09/2026
“ಕರುಣೆಗೆ ಗಡಿಗಳಿಲ್ಲ” ❤️
ಬೆಂಗಳೂರಿನಲ್ಲಿ ನಡೆದ “1000 Beginnings – A Thousand Lives. Countless Beginnings” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, 1,000 ಮಕ್ಕಳಿಗೆ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ನೆರವೇರಿಸಿರುವ ಐತಿಹಾಸಿಕ ಸಾಧನೆಯನ್ನು ಅಭಿನಂದಿಸಿದೆ.
ಗುಣಮಟ್ಟದ ವೈದ್ಯಕೀಯ ಸೇವೆ, ಕೈಗೆಟುಕುವ ಚಿಕಿತ್ಸೆ, ದಾನ ಮತ್ತು ಮಾನವೀಯತೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವ DKMS, ಸಂಕಲ್ಪ್ ಇಂಡಿಯಾ ಫೌಂಡೇಶನ್ ಮತ್ತು ಮಹಾವೀರ್ ಜೈನ್ ಆಸ್ಪತ್ರೆಗಳ ಸೇವೆ ನಿಜಕ್ಕೂ ಶ್ಲಾಘನೀಯ.
ಬೋನ್ ಮ್ಯಾರೋ ಕಸಿ ಚಿಕಿತ್ಸೆ ಅನೇಕ ಕುಟುಂಬಗಳಿಗೆ ಆರ್ಥಿಕವಾಗಿ ಸವಾಲಿನದ್ದಾಗಿರುವ ಸಂದರ್ಭದಲ್ಲಿ, ಅಗತ್ಯವಿರುವ ಮಕ್ಕಳಿಗೆ ಹೊಸ ಬದುಕು ನೀಡುತ್ತಿರುವ ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿರುವ ವೈದ್ಯರು, ನರ್ಸ್‌ಗಳು, ದಾನಿಗಳು ಹಾಗೂ ಎಲ್ಲಾ ಸಹಭಾಗಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಒಂದು ಮಗು ಚೇತರಿಸಿಕೊಂಡು, ಒಂದು ಕುಟುಂಬ ಮತ್ತೆ ನಗುವುದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ.
ಈ 1,000ನೇ ಮೈಲಿಗಲ್ಲು ಇನ್ನೂ ಸಾವಿರಾರು ಜೀವಗಳಿಗೆ ಹೊಸ ಆರಂಭವಾಗಲಿ. 🙏