Department of fisheries Karnataka

Department of fisheries Karnataka ಮೀನುಗಾರಿಕೆಯು ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಠಿಯ ಮೂಲವಾಗಿರುವುದರಿಂದ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.

ಮೀನುಗಾರಿಕೆಯು ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಠಿಯ ಮೂಲವಾಗಿರುವುದರಿಂದ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದರ ಜೊತೆಗೆ ಈ ವಲಯವು ಕೈಗಾರಿಕೆ ಉದ್ದಿಮೆಯ ಸ್ವರೂಪವನ್ನು ಸಹ ಹೊಂದಿದೆ. ಮಾನವನ ಆಹಾರದಲ್ಲಿ ಮೀನು ಕಡಿಮೆ ಬೆಲೆಯ ಪ್ರೋಟೀನ್ ಮೂಲವಾಗಿದೆ. ಮೀನುಗಾರಿಕೆ ಇಲಾಖೆಯನ್ನು 1957ರ ಇಸವಿಯಲ್ಲಿ ರಾಜ್ಯದಲ್ಲಿರುವ ಕರಾವಳಿ ಮತ್ತು ಒಳನಾಡು ವಲಯದ ಸಂಪನ್ಮೂಲಗಳನ್ನು ಉಪಯೋಗಿಸಿ ರಾಜ್ಯದ ಮೀನು ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು.

ಕರ್ನಾಟಕದಲ್ಲಿ ಸುಮಾರು 5.76 ಲಕ್ಷ ಹೆಕ್ಟೇರಗಳಷ್ಟು ಒಳನಾಡು ಜಲಸಂಪನ್ಮೂಲ, 8000 ಹೆಕ್ಟೇರ್ ಹಿನ್ನೀರು ಪ್ರದೇಶ, 2.38 ಲಕ್ಷ ಹೆಕ್ಟೇರಗಳಷ್ಟು ಜೌಗು ಮತ್ತು ಚೌಳು ಪ್ರದೇಶ ಮತ್ತು 27,000 ಚದರ ಕಿ.ಮೀ ಭೂಖಂಡ ಪ್ರದೇಶವನ್ನು ಹೊಂದಿದ 313.02 ಕಿ.ಮೀ ಉದ್ದದ ಕರಾವಳಿ ಪ್ರದೇಶ ಇರುತ್ತದೆ. ಮೀನುಗಾರಿಕೆ ಇಲಾಖೆಯು ಈ ಸಂಪನ್ಮೂಲಗಳ ಸಾರ್ವಜನಿಕರ ಸದ್ಬಳಕೆಗಾಗಿ ಹಾಗೂ ವಿಶೇಷವಾಗಿ ಮೀನುಗಾರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ದಿನಾಂಕ: 20.08.2026 ರಂದು ಮೀನುಗಾರಿಕೆ ನಿರ್ದೇಶನಾಲಯದ ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ 6 ಅಡಿ ಹಾಗೂ 7 ಅಡಿ ಗಾತ್ರದ ಎಫ್.ಆರ್.ಪಿ. (FRP) ಹ...
21/08/2026

ದಿನಾಂಕ: 20.08.2026 ರಂದು ಮೀನುಗಾರಿಕೆ ನಿರ್ದೇಶನಾಲಯದ ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ 6 ಅಡಿ ಹಾಗೂ 7 ಅಡಿ ಗಾತ್ರದ ಎಫ್.ಆರ್.ಪಿ. (FRP) ಹರಿಗೋಲುಗಳ ಗುಣಮಟ್ಟವನ್ನು ಶ್ರೀ ಗಿರೀಶ್ ಓ., ಮೀನುಗಾರಿಕೆ ಜಂಟಿ ನಿರ್ದೇಶಕರು, ಮೈಸೂರು ರವರು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಜಿ.ಹೆಚ್. ಮಂಜುನಾಥ್‌, ಮೀನುಗಾರಿಕೆ ಉಪ ನಿರ್ದೇಶಕರು, ಮೈಸೂರು, ಶ್ರೀ ಬಾಬುಸಾಬ್, ಮೀನುಗಾರಿಕೆ ಉಪ ನಿರ್ದೇಶಕರು, ಮಂಡ್ಯ, ಶ್ರೀಮತಿ ಭವಾನಿ ಸಿ.ಎನ್., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮೈಸೂರು, ಶ್ರೀ ಶಿವರಂಜನ್ ಎಚ್ ಯು., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕೆಆರ್ ನಗರ ಹಾಗೂ ಶ್ರೀಮತಿ ಶ್ವೇತಾ ಕೆ.ಬಿ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ತಿ. ನರಸೀಪುರ ರವರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ದಿನಾಂಕ: 20.08.2026 ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಅಡಿಯಲ್ಲಿ ನಿರ್ಮಿಸ...
21/08/2026

ದಿನಾಂಕ: 20.08.2026 ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಅಡಿಯಲ್ಲಿ ನಿರ್ಮಿಸಲಾಗಿರುವ ಮಧ್ಯಮ ಪ್ರಮಾಣದ ಆರ್.ಎ.ಎಸ್. (RAS) ಘಟಕಕ್ಕೆ ಶ್ರೀ ಗಿರೀಶ್ ಓ., ಮೀನುಗಾರಿಕೆ ಜಂಟಿ ನಿರ್ದೇಶಕರು, ಮೈಸೂರು ರವರು ಭೇಟಿ ನೀಡಿ ಘಟಕದ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶ್ರೀ ಜಿ.ಹೆಚ್. ಮಂಜುನಾಥ್‌, ಮೀನುಗಾರಿಕೆ ಉಪ ನಿರ್ದೇಶಕರು, ಮೈಸೂರು ಹಾಗೂ ಶ್ರೀ ಮಿಥುನ್ ಬಿ.ಪಿ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಪಿರಿಯಾಪಟ್ಟಣ (ಪ್ರ) ರವರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ದಿನಾಂಕ: 20/08/2026 ರಂದು ವಿಜಯಪುರ ಜಿಲ್ಲೆಯ ವಿಜಯಪುರ, ತಿಕೋಟಾ ಹಾಗೂ ಬಬಲೇಶ್ವರ ತಾಲ್ಲೂಕುಗಳಲ್ಲಿ 2026-27ನೇ ಸಾಲಿನ ಜಿಲ್ಲಾ ಪಂಚಾಯಿತಿ “ಒಳ...
20/08/2026

ದಿನಾಂಕ: 20/08/2026 ರಂದು ವಿಜಯಪುರ ಜಿಲ್ಲೆಯ ವಿಜಯಪುರ, ತಿಕೋಟಾ ಹಾಗೂ ಬಬಲೇಶ್ವರ ತಾಲ್ಲೂಕುಗಳಲ್ಲಿ 2026-27ನೇ ಸಾಲಿನ ಜಿಲ್ಲಾ ಪಂಚಾಯಿತಿ “ಒಳನಾಡು ಮೀನುಗಾರಿಕೆ ಅಭಿವೃದ್ಧಿ ಮತ್ತು ಸಹಾಯ” ಯೋಜನೆಯಡಿ ಬಾವಿ ಹಾಗೂ ಕೃಷಿ ಹೊಂಡ ಹೊಂದಿರುವ ರೈತ ಬಾಂಧವರಿಗೆ ಮತ್ತು ಮೀನು ಕೃಷಿಕರಿಗೆ ವಿಜಯಪುರ ಸಹಾಯಕ ನಿರ್ದೇಶಕರ ವ್ಯಾಪ್ತಿಯಲ್ಲಿ ಉಚಿತವಾಗಿ ಮೀನುಮರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಎಂ. ಎಚ್. ಭಾಂಗಿ, ಮೀನುಗಾರಿಕೆ ಉಪ ನಿರ್ದೇಶಕರು, ವಿಜಯಪುರ, ಶ್ರೀ ಶ್ರೀಶೈಲ್ ಎಸ್. ಗಂಗನಳ್ಳಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು, ವಿಜಯಪುರ, ಮೀನುಗಾರಿಕೆ ಸಹಕಾರಿ ಸಂಘದ ಪದಾಧಿಕಾರಿಗಳು, ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಯಾದಗಿರಿ: ಯಾದಗಿರಿ ಜಿಲ್ಲೆಯ ಮೀನುಗಾರಿಕೆ ಇಲಾಖೆಯು 2026–27ನೇ ಸಾಲಿನ ಜಿಲ್ಲಾ ವಲಯ ಯೋ...
20/08/2026

ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಯಾದಗಿರಿ: ಯಾದಗಿರಿ ಜಿಲ್ಲೆಯ ಮೀನುಗಾರಿಕೆ ಇಲಾಖೆಯು 2026–27ನೇ ಸಾಲಿನ ಜಿಲ್ಲಾ ವಲಯ ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಉಚಿತ ಸಲಕರಣೆ ಕಿಟ್‌ಗಳ ವಿತರಣೆ, ಮತ್ಸ್ಯವಾಹಿನಿ ಯೋಜನೆಯಡಿ ಮೀನು ಮಾರಾಟಕ್ಕಾಗಿ ದ್ವಿಚಕ್ರ ಮತ್ತು ಐಸ್‌ ಬಾಕ್ಸ್‌ ಖರೀದಿಗೆ ಸಹಾಯಧನ, ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮಗಳಡಿ ಮೀನುಗಾರಿಕೆ ಸಲಕರಣೆ ಕಟ್ಟುಗಳ ವಿತರಣೆ, ಮೀನು ಮರಿ ಖರೀದಿಗೆ ಸಹಾಯಧನ, ಕೆರೆ ಅಂಚಿನಲ್ಲಿ ಮೀನುಕೃಷಿ ಕೊಳ ನಿರ್ಮಾಣಕ್ಕೆ ಸಹಾಯಧನ, ಗ್ರಾಮ ಪಂಚಾಯತಿಗಳಿಗೆ ಉಚಿತ ಮೀನುಮರಿ ದಾಸ್ತಾನು ಸೀಗಡಿ ಕೃಷಿ ಕೈಗೊಳ್ಳಲು ಸಹಾಯಧನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು https://yadgir.nic.in ಮೂಲಕ ದಿನಾಂಕ 19-09-2026 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರ ಕಛೇರಿ, ಜಿಲ್ಲಾ ಪಂಚಾಯತ ಯಾದಗಿರಿ, ಮೊದಲನೇ ಮಹಡಿ, ಕೋಣೆ ಸಂಖ್ಯೆ: ಸಿ-15, ಜಿಲ್ಲಾಡಳಿತ ಭವನ, ಯಾದಗಿರಿ ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ, ಲಕ್ಷ್ಮೀನಗರ, ಶಹಾಪುರ ಮತ್ತು ತಹಸೀಲ್‌ ರೋಡ್‌, ಲಕ್ಷ್ಮೀಗುಡಿ ಹತ್ತಿರ, ಸುರಪುರ ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ದಿನಾಂಕ: 19/08/2026 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ 2026-27ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯಡಿ ಕೃಷಿ ಹೊಂಡ ಹೊಂದಿರುವ ಸ...
20/08/2026

ದಿನಾಂಕ: 19/08/2026 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ 2026-27ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯಡಿ ಕೃಷಿ ಹೊಂಡ ಹೊಂದಿರುವ ಸುಮಾರು 200 ಕೃಷಿಕರಿಗೆ ಉಚಿತವಾಗಿ ಬಿತ್ತನೆ ಮೀನುಮರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ವಿನಯ್ ಎ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಸೊರಬ(ಹೆ. ಪ್ರಭಾರ), ಶ್ರೀ ಕುಮಾರ್ ಕೆ.ಜಿ., ಸಹಾಯಕ ಕೃಷಿ ನಿರ್ದೇಶಕರು, ಸೊರಬ ಹಾಗೂ ಮೀನುಗಾರಿಕೆ ಇಲಾಖೆಯ ಸೊರಬ ತಾಲ್ಲೂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ದಿನಾಂಕ: 19/08/2026 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಮೀನುಗಾರರಿಗೆ ಭೀಮಾ ನದಿಯಲ್ಲಿ ಮೀನುಗಾರಿಕೆ ನಡೆಸಲು ಪರವಾನಗಿಗಳ...
20/08/2026

ದಿನಾಂಕ: 19/08/2026 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಮೀನುಗಾರರಿಗೆ ಭೀಮಾ ನದಿಯಲ್ಲಿ ಮೀನುಗಾರಿಕೆ ನಡೆಸಲು ಪರವಾನಗಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ 2026-27ನೇ ಸಾಲಿನ ವಿವಿಧ ಯೋಜನೆಗಳು ಹಾಗೂ ಕೆ.ಸಿ.ಸಿ. ಯೋಜನೆಯ ಕುರಿತು ಮೀನುಗಾರರಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಶೈಲ ಎಸ್ ಗಂಗನಳ್ಳಿ, ಮೀನುಗಾರಿಕೆ ಸಹಾಯಕ ನಿರ್ದೇಕರು, ವಿಜಯಪುರ ಹಾಗೂ ಗ್ರಾಮದ ಮೀನುಗಾರರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ದಿನಾಂಕ: 17/08/2026 ರಂದು ಮೈಸೂರು ಜಿಲ್ಲೆಯ ಮೀನುಗಾರಿಕೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶ್ರೀ ಗಿರೀಶ್ ಓ., ಮೀನುಗಾರಿಕೆ ಜಂಟಿ ನಿರ್ದೇಶಕರು, ...
18/08/2026

ದಿನಾಂಕ: 17/08/2026 ರಂದು ಮೈಸೂರು ಜಿಲ್ಲೆಯ ಮೀನುಗಾರಿಕೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶ್ರೀ ಗಿರೀಶ್ ಓ., ಮೀನುಗಾರಿಕೆ ಜಂಟಿ ನಿರ್ದೇಶಕರು, ಮೈಸೂರು ಅವರ ಅಧ್ಯಕ್ಷತೆಯಲ್ಲಿ ಮೈಸೂರು ವಲಯದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಶ್ರೀ ಜಿ.ಹೆಚ್. ಮಂಜುನಾಥ್, ಮೀನುಗಾರಿಕೆ ಉಪ ನಿರ್ದೇಶಕರು, ಮೈಸೂರು, ಶ್ರೀ ಬಾಬುಸಾಬ್, ಮೀನುಗಾರಿಕೆ ಉಪ ನಿರ್ದೇಶಕರು, ಮಂಡ್ಯ, ಶ್ರೀ ಮಂಜೇಶ್ವರ್, ಮೀನುಗಾರಿಕೆ ಉಪ ನಿರ್ದೇಶಕರು, ಚಾಮರಾಜನಗರ, ಶ್ರೀ ಸಚಿನ್ ಸಿ.ಎಸ್., ಮೀನುಗಾರಿಕೆ ಉಪ ನಿರ್ದೇಶಕರು, ಕೊಡಗು, ಶ್ರೀ ವಿಕಾಸ್ ಸಿ., ಮೀನುಗಾರಿಕೆ ಉಪ ನಿರ್ದೇಶಕರು, ಹಾಸನ ಹಾಗೂ ಮೀನುಮರಿ ಉತ್ಪಾದನಾ ಕೇಂದ್ರಗಳು ಮತ್ತು ತರಬೇತಿ ಕೇಂದ್ರದ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ, ಅನುಷ್ಠಾನ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಲಾಯಿತು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ದಿನಾಂಕ: 14/08/2026 ರಂದು ರಾಯಚೂರು ಜಿಲ್ಲೆಯಲ್ಲಿ ಪಿ ಎಂ ಎಂ ಎಸ್ ವೈ ಯೋಜನೆಯ DAJGUA ಅಡಿಯಲ್ಲಿ ಖರೀದಿಸಿ ಮಾರ್ಪಡಿಸಲಾದ ಜೀವಂತ ಮೀನು ಮಾರಾಟ ...
18/08/2026

ದಿನಾಂಕ: 14/08/2026 ರಂದು ರಾಯಚೂರು ಜಿಲ್ಲೆಯಲ್ಲಿ ಪಿ ಎಂ ಎಂ ಎಸ್ ವೈ ಯೋಜನೆಯ DAJGUA ಅಡಿಯಲ್ಲಿ ಖರೀದಿಸಿ ಮಾರ್ಪಡಿಸಲಾದ ಜೀವಂತ ಮೀನು ಮಾರಾಟ ಘಟಕವನ್ನು ಶ್ರೀ ಶರಣಬಸವ, ಮೀನುಗಾರಿಕೆ ಜಂಟಿ ನಿರ್ದೇಶಕರು, ಬಳ್ಳಾರಿ ವಲಯದ ಅವರು ಭೇಟಿ ನೀಡಿ ಪರಿಶೀಲಿಸಿದರು. ಘಟಕವನ್ನು ಸಮರ್ಪಕವಾಗಿ ನಿರ್ವಹಿಸಿ, ಸದ್ಬಳಕೆ ಮಾಡಿಕೊಳ್ಳುವಂತೆ ಫಲಾನುಭವಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಶ್ರೀ ಎನ್ ಬಸವನಗೌಡ, ಮೀನುಗಾರಿಕೆ ಉಪ ನಿರ್ದೇಶಕರು, ರಾಯಚೂರು, ಶ್ರೀ ಪ್ರಶಾಂತ ಕುಮಾರ, ಮೀನುಗಾರಿಕೆ ಸಹಾಯಕ ನಿರ್ದೇಶಕರು, ರಾಯಚೂರು ರವರು ಹಾಗೂ ಇತರರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ದಿನಾಂಕ: 15/08/2026 ರಂದು ಯಾದಗಿರಿ ಜಿಲ್ಲೆ, ಶಹಾಪುರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ, ಮೀನುಗಾರಿಕೆ ಇಲಾಖೆ ವತಿಯಿ...
17/08/2026

ದಿನಾಂಕ: 15/08/2026 ರಂದು ಯಾದಗಿರಿ ಜಿಲ್ಲೆ, ಶಹಾಪುರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ, ಮೀನುಗಾರಿಕೆ ಇಲಾಖೆ ವತಿಯಿಂದ 2025–26ನೇ ಸಾಲಿನ ರಾಜ್ಯ ವಲಯ ಹಾಗೂ ಜಿಲ್ಲಾ ವಲಯದ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಸನ್ಮಾನ್ಯ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ, ಮಾನ್ಯ ಮಾಜಿ ಸಚಿವರು ಹಾಗೂ ಶಾಸಕರು, ಶಹಾಪುರ, ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅರ್ಹ ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆಗಳ ಕಿಟ್‌ಗಳನ್ನು ವಿತರಿಸಲಾಯಿತು. ಮೀನುಗಾರರ ಆರ್ಥಿಕ ಸಬಲೀಕರಣ ಹಾಗೂ ಜೀವನೋಪಾಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲಾಖೆಯ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಶಂಕರ್ ಗೊಂಡಳಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಯಾದಗಿರಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

ದಿನಾಂಕ: 14/08/2026 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ನ ಸಿಇಒ ಡಾ. ನವೀನ್ ಭಟ್ ಅವರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಇಇ ಹಾಗೂ ...
14/08/2026

ದಿನಾಂಕ: 14/08/2026 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ನ ಸಿಇಒ ಡಾ. ನವೀನ್ ಭಟ್ ಅವರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಇಇ ಹಾಗೂ ಕೆಆರ್‌ಐಡಿಎಲ್‌ನ ಎಇಇ ಅವರೊಂದಿಗೆ ಮೀನುಗಾರಿಕೆ ಇಲಾಖೆಯ ನೂತನ ಕಚೇರಿ ಕಟ್ಟಡವನ್ನು ಪರಿಶೀಲಿಸಿದರು.
ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿ, ನರ್ಸರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದರು.

ಇದೇ ಸಂದರ್ಭದಲ್ಲಿ ತಿಪ್ಪಗಾನಹಳ್ಳಿ ಕೇಂದ್ರದಿಂದ ಮೀನು ಮರಿಗಳನ್ನು ಪಡೆದು, ಜಿಲ್ಲಾ ಪಂಚಾಯತ್ ಯೋಜನೆಯಡಿ ರೈತರಿಗೆ ಉಚಿತವಾಗಿ ಮೀನು ಮರಿಗಳನ್ನು ವಿತರಿಸಿ, ಮೀನುಗಾರಿಕೆ ಚಟುವಟಿಕೆಗಳ ಕುರಿತು ರೈತರೊಂದಿಗೆ ಸಂವಾದ ನಡೆಸಿದರು

ಈ ಸಂದರ್ಭದಲ್ಲಿ ಶ್ರೀ ವಿಶ್ವನಾಥ್, ಮೀನುಗಾರಿಕೆ ಉಪ ನಿರ್ದೇಶಕರು, ಚಿಕ್ಕಬಳ್ಳಾಪುರ ಮತ್ತು ಶ್ರೀ ಮೋಹನ್ ಎಸ್.ಎ., ಮೀನುಗಾರಿಕೆ ಸಹಾಯಕ ನಿರ್ದೇಶಕರು ರವರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
You tube : https://www.youtube.com/
Website : https://fisheries.karnataka.gov.in/

Address

ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ
Bangalore
560001

Alerts

Be the first to know and let us send you an email when Department of fisheries Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Department of fisheries Karnataka:

Shortcuts

Share