DCP SOUTH BCP

DCP SOUTH BCP Public Service

24/08/2026

ದಿನಾಂಕ 22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜಯನಗರ, ಬನಶಂಕರಿ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು

ದಿನಾಂಕ  22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ  ಮಾಸಿಕ  #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀ...
22/08/2026

ದಿನಾಂಕ 22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜಯನಗರ, ಬನಶಂಕರಿ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು

10/08/2026

ಗಿರಿನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ರಿಪಬ್ಲಿಕ್-ಆಪ್ ಐವರಿ ದೇಶದ ಪ್ರಜೆಯ ಬಂಧನ. ಆರೋಪಿಯಿಂದ ₹12 ಕೋಟಿ ಮೌಲ್ಯದ 5 ಕೆ.ಜಿ 179 ಗ್ರಾಂ ಎಂಡಿಎಂಎ (M**A) ವಶಪಡಿಸಿಕೊಳ್ಳಲಾಗಿದೆ.
​ಚೂಡಿದಾರ್ ಡ್ರೆಸ್ ಪೀಸ್‌ಗಳ ಒಳಗೆ ಮಾದಕ ವಸ್ತುವನ್ನು ಬಚ್ಚಿಟ್ಟು ದೆಹಲಿಯಿಂದ ತರಿಸಿ ಸ್ಥಳೀಯ ಪೆಡ್ಲರ್‌ಗಳಿಗೆ ಸರಬರಾಜು ಮಾಡುತ್ತಿದ್ದ ಜಾಲವನ್ನು ನಮ್ಮ ತಂಡ ಬೇಧಿಸಿದೆ.
​ಈ ಕಾರ್ಯಾಚರಣೆ ನಡೆಸಿದ ವಿ.ವಿ.ಪುರಂ ಉಪ-ವಿಭಾಗದ ಎ.ಸಿ.ಪಿ, ಗಿರಿನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳು.
​ BENGALURU CITY POLICE

ಈ ದಿನ ದಕ್ಷಿಣ ವಿಭಾಗದಲ್ಲಿ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ–2026 ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀ...
02/08/2026

ಈ ದಿನ ದಕ್ಷಿಣ ವಿಭಾಗದಲ್ಲಿ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ–2026 ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಯಿತು.
​ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪರೀಕ್ಷಾ ಸಂಬಂಧಿತ ಸೂಕ್ತ ಸೂಚನೆಗಳು ಹಾಗೂ ಸಲಹೆಗಳನ್ನು ನೀಡಲಾಯಿತು.

ದಿನಾಂಕ 30-07-2026 ರಂದು ವಿ ವಿ ಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ತಪಾಸಣೆ ನಡೆಸಲಾಯಿತು. ಠಾಣೆಯ ಒಟ್ಟಾರೆ ಕಾರ್ಯನಿರ್ವಹಣೆ ಹಾಗೂ ಪ್...
31/07/2026

ದಿನಾಂಕ 30-07-2026 ರಂದು ವಿ ವಿ ಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ತಪಾಸಣೆ ನಡೆಸಲಾಯಿತು. ಠಾಣೆಯ ಒಟ್ಟಾರೆ ಕಾರ್ಯನಿರ್ವಹಣೆ ಹಾಗೂ ಪ್ರಕರಣಗಳ ತನಿಖಾ ಪ್ರಗತಿಯನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಯಿತು. ಹಾಗೂ ಪರಿಸರ ಸಂರಕ್ಷಣೆಯ ಅಂಗವಾಗಿ ಠಾಣೆಯ ಆವರಣದಲ್ಲಿ ಗಿಡ ನೆಡಲಾಯಿತು.

24/07/2026

ಜೀವನ ಒಂದೇ, ಅದನ್ನು ಡ್ರಗ್ಸ್ ನಶೆಯಲ್ಲಿ ಹಾಳು ಮಾಡಿಕೊಳ್ಳಬೇಡಿ! 🚫
​ಡ್ರಗ್ಸ್ ನಿಮ್ಮ ಕನಸುಗಳನ್ನು, ತಾಯಿ-ತಂದೆಯ ಆಸೆಗಳನ್ನು ಕ್ಷಣಾರ್ಧದಲ್ಲಿ ಧೂಳೀಪಟ ಮಾಡುತ್ತದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ ಡ್ರಗ್ಸ್ ನಿಂದ ದೂರವಿರಿ #ಬೇಡ ಬ್ರೋ_ಡ್ರಗ್ಸ್_ಎಂಬ_ನಶೆ' ಎಂದೆಂದಿಗೂ ಬೇಡ.
​Say No To Drugs!
​📞 ತುರ್ತು ಸಹಾಯಕ್ಕಾಗಿ ಸಂಪರ್ಕಿಸಿ: 112 / 1908 (Anti-Narcotics Helpline)
📱 KSP App ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಬಹುದು. ನಿಮ್ಮ ವಿವರಗಳನ್ನು ಗೋಪ್ಯವಾಗಿಡಲಾಗುತ್ತದೆ.

ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ದಕ್ಷಿಣ ವಿಭಾಗದ ವಿಶೇಷ ತಂಡವು ತ್ವರಿ...
21/07/2026

ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ದಕ್ಷಿಣ ವಿಭಾಗದ ವಿಶೇಷ ತಂಡವು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ವಶಕ್ಕೆ ಪಡೆದ ಆರೋಪಿಯಿಂದ ಬರೋಬ್ಬರಿ ₹31.56 ಲಕ್ಷ ಮೌಲ್ಯದ 225 ಗ್ರಾಂ ಚಿನ್ನಾಭರಣಗಳನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ.

​ನಮ್ಮ ಮಾರ್ಗದರ್ಶನದಲ್ಲಿ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ACP) ನೇತೃತ್ವದಲ್ಲಿ ಹಾಗೂ ಜೆ.ಪಿ.ನಗರ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ತೋರಿದ ಈ ತ್ವರಿತ ಹಾಗೂ ಶ್ಲಾಘನೀಯ ಕಾರ್ಯವೈಖರಿ ನಿಜಕ್ಕೂ ಅಭಿನಂದನಾರ್ಹ.
​ಸಾರ್ವಜನಿಕರ ಆಸ್ತಿ-ಪಾಸ್ತಿಗಳ ರಕ್ಷಣೆ ಹಾಗೂ ಕಾನೂನು ಸುವರ್ವ್ಯೆ ಕಾಪಾಡಲು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಪಡೆ ಸದಾ ಜಾಗೃತ ಮತ್ತು ಬದ್ಧವಾಗಿದೆ.

ಮಹಿಳೆಯರ ಹಾಗೂ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ!​ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ಇಂದು ಜೆ.ಪಿ. ನಗರ ಠಾಣಾ ವ್ಯಾಪ್ತಿಯ ಸೆಂಟ್ರಲ್ ಮಾಲ...
12/07/2026

ಮಹಿಳೆಯರ ಹಾಗೂ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ!
​ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ಇಂದು ಜೆ.ಪಿ. ನಗರ ಠಾಣಾ ವ್ಯಾಪ್ತಿಯ ಸೆಂಟ್ರಲ್ ಮಾಲ್ (Central Mall) ನಲ್ಲಿ 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಲಾಯಿತು.
​ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಳಕಂಡ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು:
​✅ ಮಹಿಳೆಯರ ಸುರಕ್ಷತೆಗಾಗಿ KSP App ನ 'Safe Connect' (SOS) ಫೀಚರ್, Safety Island ಹಾಗೂ ಮಹಿಳಾ ನೆರವು ಕೇಂದ್ರಗಳು.
✅ ತುರ್ತು ಸಹಾಯಕ್ಕಾಗಿ 112 ಸಹಾಯವಾಣಿ.
✅ ಸೈಬರ್ ವಂಚನೆ (Cyber Fraud) ತಡೆಗೆ 1930 ಹೆಲ್ಪ್‌ಲೈನ್.
✅ ಮೊಬೈಲ್ ಹಾಗೂ ಸರಗಳ್ಳತನ (Chain/Mobile Snatching) ತಡೆಗಟ್ಟುವಿಕೆ.
✅ ಇ-ಲಾಸ್ಟ್ (E-Lost) ವರದಿ ಮಾಡುವ ವಿಧಾನ.
​ಭಯಮುಕ್ತ ಮತ್ತು ಸುರಕ್ಷಿತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ. ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.

ಮಹಿಳೆಯರ ಹಾಗೂ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ! ​ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ಇಂದು ಬಸವನಗುಡಿ ಠಾಣಾ ವ್ಯಾಪ್ತಿಯ ಗಾಂದಿ ಬಜಾರ್ ನ...
12/07/2026

ಮಹಿಳೆಯರ ಹಾಗೂ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ!
​ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ಇಂದು ಬಸವನಗುಡಿ ಠಾಣಾ ವ್ಯಾಪ್ತಿಯ ಗಾಂದಿ ಬಜಾರ್ ನಲ್ಲಿ 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಲಾಯಿತು.
​ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಳಕಂಡ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು:
​✅ ಮಹಿಳೆಯರ ಸುರಕ್ಷತೆಗಾಗಿ KSP App ನ 'Safe Connect' (SOS) ಫೀಚರ್, Safety Island ಹಾಗೂ ಮಹಿಳಾ ನೆರವು ಕೇಂದ್ರಗಳು.
✅ ತುರ್ತು ಸಹಾಯಕ್ಕಾಗಿ 112 ಸಹಾಯವಾಣಿ.
✅ ಸೈಬರ್ ವಂಚನೆ (Cyber Fraud) ತಡೆಗೆ 1930 ಹೆಲ್ಪ್‌ಲೈನ್.
✅ ಮೊಬೈಲ್ ಹಾಗೂ ಸರಗಳ್ಳತನ (Chain/Mobile Snatching) ತಡೆಗಟ್ಟುವಿಕೆ.
✅ ಇ-ಲಾಸ್ಟ್ (E-Lost) ವರದಿ ಮಾಡುವ ವಿಧಾನ.
​ಭಯಮುಕ್ತ ಮತ್ತು ಸುರಕ್ಷಿತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ. ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.
​ BENGALURU CITY POLICE

Address

TeeNamShree Circle(South End Circle), Jayanagara
Bangalore
560004

Website

Alerts

Be the first to know and let us send you an email when DCP SOUTH BCP posts news and promotions. Your email address will not be used for any other purpose, and you can unsubscribe at any time.

Contact The Organization

Send a message to DCP SOUTH BCP:

Shortcuts

Share