23/07/2025
*ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ, ತಿರುಮಣಿ ಗ್ರಾಮ ಪಂಚಾಯಿತಿಗಳಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ|| ನವೀನ್ ಭಟ್, ರವರು ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಲ್ಲಿ ಮನೆ ಮನೆಗೆ ಗಂಗೆ ಅಳವಡಿಸಿರುವ (ನಲ್ಲಿ) ನಳಗಳನ್ನು ಕಾಮಗಾರಿಗಳನ್ನು ಹಾಗೂ ನರೇಗಾ ಯೋಜನೆಯ ವಿವಿಧ ಕಾಮಗಾರಿಗಳು, ಅಂಗನವಾಡಿ ಕೇಂದ್ರಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು*.
ಈ ಸಂದರ್ಭದಲ್ಲಿ NRLM ಯೋಜನೆಯಡಿಯಲ್ಲಿ ಮಹಿಳಾ ಸ್ವ ಸಹಾಯ ಸಂಘದಿಂದ ಕೋಳಿ ಸಾಕಾಣಿಕೆ ಮಾಡಿ ಅದರಿಂದ ಮೊಟ್ಟೆ ಯನ್ನು ಅಂಗನವಾಗಿ ಮತ್ತು ಶಾಲೆಗಳಿಗೆ ವಿತರಣೆ ಮಾಡಲು ಕ್ರಮ ವಹಿಸುವಂತೆ ಸೂಚಿಸಿದರು.
ಮನರೇಗಾ ಯೋಜನೆಯಡಿಯಲ್ಲಿ ಚರಂಡಿ, ಶಾಲೆಯ ತಡೆಗೋಡೆ, ಶೋಚಾಲಯ, ಸೇರಿದಂತೆ ಇನ್ನಿತರೇ ಕಾಮಗಾರಿಗಳಿಗೆ ಆದ್ಯತೆ ನೀಡಲು ಸೂಚಿಸಿದರು.
*ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಾಗಮಣಿ ಎಂ ರವರು, ಹಾಗೂ RWS EE sir, AEE ಸರ್, AE ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು*