Namma Chintamani - ನಮ್ಮ ಚಿಂತಾಮಣಿ

Namma Chintamani - ನಮ್ಮ ಚಿಂತಾಮಣಿ ಅಭಿವೃದ್ಧಿ - ಪ್ರಗತಿಪರ - ಜಾತ್ಯಾತೀತತೆ ನಮ್ಮ ಚಿಂತಾಮಣಿ - ನಮ್ಮ ಜವಾಬ್ದಾರಿ

ಚಿಂತಾಮಣಿ ಕ್ಷೇತ್ರಕ್ಕೆ ಅಧಿಕಾರದ ದುರಾಸೆಯಿಂದ ಎಲ್ಲಿಂದಲೋ ವಲಸೆ ಬಂದು, ನಮ್ಮ ಕ್ಷೇತ್ರದ ಕೆಲವು ಪುಂಡಪುಡಾರಿಗಳ ಸಹವಾಸ ಮಾಡಿ, ಅವರ ಹೇಳಿಕೊಟ್ಟ ...
09/09/2026

ಚಿಂತಾಮಣಿ ಕ್ಷೇತ್ರಕ್ಕೆ ಅಧಿಕಾರದ ದುರಾಸೆಯಿಂದ ಎಲ್ಲಿಂದಲೋ ವಲಸೆ ಬಂದು, ನಮ್ಮ ಕ್ಷೇತ್ರದ ಕೆಲವು ಪುಂಡಪುಡಾರಿಗಳ ಸಹವಾಸ ಮಾಡಿ, ಅವರ ಹೇಳಿಕೊಟ್ಟ ಸುಳ್ಳುಗಳನ್ನು ಯಾವುದೇ ಆಧಾರವಿಲ್ಲದೆ ಮಾಧ್ಯಮಗಳ ಮುಂದೆ ಜೆ.ಕೆ.ಕ್ರಿಷ್ಣಾರೆಡ್ಡಿ ಎಂಬ ಮಾಜಿ ಸಮಾಜಸೇವಕ ಮಾತನಾಡುತ್ತಿದ್ದಾರೆ. ಹೇಳಿಕೆಗಳನ್ನು ಕೊಡುವ ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಮಾತನಾಡಬೇಕೆಂಬ ಇಂಗಿತ ಜ್ಞಾನವೂ ಇಲ್ಲದ ಅವಿದ್ಯಾವಂತ ರಾಜಕಾರಣಿ ಈ ವ್ಯಕ್ತಿ.

ಕೆಲವು ದಿನಗಳ ಹಿಂದೆ ನಗರ ಭಾಗದಲ್ಲಿರುವ ಅಂಜನೀ ಚಿತ್ರಮಂದಿರ, ಹಾಲಿ ಶಾಸಕರಾದ ಡಾ.ಎಂ.ಸಿ.ಸುಧಾಕರ್ ರವರ ಅಧಿಕೃತ ನಿವಾಸ, ಹಾಗು ಕಿಶೋರ ವಿದ್ಯಾಭವನ ಶಾಲೆಯಿರುವ ಸ್ಥಳಗಳನ್ನು, ಹಾಲಿ ಶಾಸಕರ ತಂದೆಯವರಾದ ಸನ್ಮಾನ್ಯ ಚೌಡರೆಡ್ಡಿಯವರು ತಮ್ಮ ಪ್ರಭಾವ ಬಳಸಿ ಅನಧಿಕೃತವಾಗಿ ಬಳಸಿಕೊಂಡಿದ್ದಾರೆಂಬ ಗಂಭೀರ ಆರೋಪ ಮಾಡಿದ್ದಾರೆ.

ಆದರೆ ವಾಸ್ತವತೆ ಏನೆಂದರೆ *"𝟏𝟗 ನೇ ಡಿಸಂಬರ್ 𝟏𝟗𝟗𝟔 ನೇ ಇಸವಿಯಲ್ಲಿಯೇ ಲೋಕಾಯುಕ್ತ ನ್ಯಾಯಮೂರ್ತಿಗಳು"* ಈ ಆರೋಪದ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ, ಸದರಿ ಜಾಗಗಳ ವಿಕ್ರಯಗಳಲ್ಲಿ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಹಾಗು ಪರಭಾರೆ ಸಕ್ರಮವಾಗಿ ಆಗಿದೆಯೆಂದು ನ್ಯಾಯಾಲಯವೇ ಅಧಿಕೃತವಾಗಿ ತೀರ್ಪುಕೊಟ್ಟಿದೆ.
ಇದ್ಯಾವುದನ್ನು ಸರಿಯಾಗಿ ತಿಳಿದುಕೊಳ್ಳದೆ ಅವಿವೇಕಿಯಂತೆ ಕಳೆದ 12..13 ವರ್ಷಗಳಿಂದ ನಿರಂತರವಾಗಿ ಆರೋಪ ಮಾಡಿಕೊಂಡು ಬರುತ್ತಿರುವ ಈ ವ್ಯಕ್ತಿಯನ್ನು ನೋಡಿದರೆ, ಮತಿಸ್ಥಿಮಿತ ಕಳೆದುಕೊಂಡ ಮಾನಸಿಕ ಅಸ್ವಸ್ಥನೇನೋ ಎಂಬಂತೆ ಬಾಸವಾಗುತ್ತಿದೆ. ಈಗಾಗಲೇ ತಡವಾಗಿದ್ದು, ಇನ್ನು ಮುಂದೆಯೂ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ, ಕೆಲವೇ ದಿನಗಳಲ್ಲಿ ಮಾನಸಿಕ ಆಸ್ಪತ್ರೆಗೆ ಸೇರಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.
ಆದೂ ಅಲ್ಲದೆ ಅವರೊಬ್ಬ ಅವಿದ್ಯಾವಂತ ವ್ಯಕ್ತಿಯಾಗಿದ್ದು, ಸುತ್ತಮುತ್ತಲಿರುವವರ ಮಾತುಗಳನ್ನು ಕೇಳಿ, ವಿವೇಚನೆ ಇಲ್ಲದೆ ಮಾತನಾಡುವುದು, ಅಸಭ್ಯ ಭಾಷೆ ಬಳಸವುದು,‌ಇನ್ನೊಬ್ಬರ ಚಾರಿತ್ರ್ಯವಧೆ‌ ಮಾಡುವುದನ್ನು ಈಗಲೇ‌ ನಿಲ್ಲಿಸಿಬೇಕು. ಜನಪ್ರತಿನಿಧಿ ಎನ್ನಿಸಿಕೊಳ್ಳುವ ಮೊದಲು ಸದ್ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು. ನುಡಿ ಶುದ್ಧವಾಗಿರಬೇಕು. ಆಧಾರವಿಲ್ಲದೆ ಆರೋಪ ಮಾಡಬಾರದೆಂಬ ವೈಚಾರಿಕತೆ ರೂಢಿಸಿಕೊಳ್ಳಬೇಕಾದ್ದು ಅತ್ಯಂತ ಮುಖ್ಯ. ಇಲ್ಲವಾದಲ್ಲಿ ನಿಮಾನ್ಸ್ ನಲ್ಲಿ ಮುಂಗಡವಾಗಿ ಬೆಡ್ ಬುಕ್ ಮಾಡಿಕೊಳ್ಳವುದು ಉತ್ತಮ.

05/05/2026

ಕಂಚಿ ಕಾಮಕೋಟಿ ಪೀಠದ 68ನೇ ಪೀಠಾಧಿಪತಿ, ನಡೆದಾಡುವ ದೇವರೆಂದು ಭಕ್ತರಿಂದ ಬಿರುದಾಂಕಿತರಾದ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಪರಮಾಚಾರ್ಯರ ಪರಮ ಪವಿತ್ರವಾದ ಪಾದುಕೆಗಳನ್ನು ಚಿಂತಾಮಣಿ ತಾಲ್ಲೂಕಿನ ದಕ್ಷಿಣ ಕೈಲಾಸ ಕ್ಷೇತ್ರ, ಕೈಲಾಸಗಿರಿ ಗುಹಾಂತರ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ‌.

13/01/2026

Address

SH-58
Chintamani
563125

Website

Alerts

Be the first to know and let us send you an email when Namma Chintamani - ನಮ್ಮ ಚಿಂತಾಮಣಿ posts news and promotions. Your email address will not be used for any other purpose, and you can unsubscribe at any time.

Shortcuts

Share