30/01/2026
ದಾವಣಗೆರೆ ಜಿಲ್ಲಾ ಎಸ್.ಸಿ./ಎಸ್.ಟಿ. ಉದ್ಯಮಿದಾರರ ಸಂಘದ ವತಿಯಿಂದ ದಾವಣಗೆರೆ ಜಿಲ್ಲೆಯ ವ್ಯಾಪ್ತಿಗೆ ಬರುವ ಪರಿಶಿಷ್ಟ ಪಂಗಡ (ST) ಜಾತಿಯ ಬಡ ರೈತ ಕುಟುಂಬಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಕಲ್ಪಿಸುವ ಉದ್ದೇಶದಿಂದ,
ಈ ಸಮುದಾಯದ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುವಂತೆ, ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ವಿಶೇಷವಾಗಿ ಹಿಂದುಳಿದ ರೈತ ಕುಟುಂಬಗಳಿಗೆ ಗಂಗಾ ಕಲ್ಯಾಣ ಯೋಜನೆ ಮತ್ತು ನಿರುದ್ಯೋಗ ಯುವಕರಿಗೆ ಸಾರಥಿ ಯೋಜನೆಯಡಿ ವಾಹನ ಖರೀದಿಗೆ ವಿಶೇಷ ಅನುದಾನವನ್ನು ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಬಸನಗೌಡ ದದ್ದಲ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮೇಶ ಬಿ ನಾಯಕ, ಸುರೇಶ್ ಗೋಶಾಲೆ, ಪಾಲಾಕ್ಷಿ ಬಟ್ಟಲಕಟ್ಟೆ, ಗಣೇಶ್ ಗೊಲ್ಲರಹಳ್ಳಿ, ಮಂಜುನಾಥ್ ಗೊಲ್ಲರಹಳ್ಳಿ, ರಾಜು ಆನಗೋಡು, ಸತೀಶ್ ಗೋಶಾಲೆ, ಪರಶುರಾಮ್ ಹೊಸಳ್ಳಿ, ವಿನಯ್, ಚೇತನ್, ಸೇರಿದಂತೆ ಇತರರು ಉಪಸ್ಥಿತರಿದ್ದರು.