ಜಾತ್ಯಾತೀತ ಜನತಾದಳ - ಕೊಪ್ಪಳ

  • Home
  • India
  • Koppal
  • ಜಾತ್ಯಾತೀತ ಜನತಾದಳ - ಕೊಪ್ಪಳ

ಜಾತ್ಯಾತೀತ ಜನತಾದಳ - ಕೊಪ್ಪಳ Contact information, map and directions, contact form, opening hours, services, ratings, photos, videos and announcements from ಜಾತ್ಯಾತೀತ ಜನತಾದಳ - ಕೊಪ್ಪಳ, Political Party, Koppal, Koppal.

ಮಾತೃಶ್ರೀ ಅವರ ನೆನಪುಗಳು
18/07/2026

ಮಾತೃಶ್ರೀ ಅವರ ನೆನಪುಗಳು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿನೀಡಿ, ದೇವೇಗೌಡರ ಪತ್ನಿ ಚೆನ್ನಮ್ಮನವರ ...
18/07/2026

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿನೀಡಿ, ದೇವೇಗೌಡರ ಪತ್ನಿ ಚೆನ್ನಮ್ಮನವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ, ಬಳಿಕ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮಾಜಿ ಪ್ರಧಾನ ಮಂತ್ರಿಗಳು ಹಾಗೂ ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರಾದ ಶ್ರೀ ಹೆಚ್ ಡಿ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನ...
18/07/2026

ಮಾಜಿ ಪ್ರಧಾನ ಮಂತ್ರಿಗಳು ಹಾಗೂ ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರಾದ
ಶ್ರೀ ಹೆಚ್ ಡಿ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಪಕ್ಷದ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಮೇಣಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.

ಶ್ರೀ ದೇವೇಗೌಡರ ಹಾಗೂ ಶ್ರೀ ಕುಮಾರಸ್ವಾಮಿಯವರ ರಾಜಕೀಯ ಜೀವನದಲ್ಲಿ ಚೆನ್ನಮ್ಮನವರ ಕೊಡುಗೆಗಳನ್ನು ಸ್ಮರಿಸಿದರು. ಗೃಹಣಿಯಾಗಿ, ಪತ್ನಿಯಾಗಿ ಹಾಗೂ ತಾಯಿಯಾಗಿ ಅವರು ಭಾರತೀಯ ನಾರಿ ಪರಂಪರೆಯ ಸಂಕೇತದಂತೆ ಇದ್ದರು. ಅಪಾರ ದೈವಿ ಭಕ್ತರಾಗಿದ್ದ ಅವರು ಅತಿಥಿ ಸತ್ಕಾರರ ಪರಂಪರೆಗೆ ಅರ್ಥ ತುಂಬಿದ್ದರು. ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ್ ಭೂಮರಡ್ಡಿ, ಕೊಪ್ಪಳ ತಾಲೂಕು ಅಧ್ಯಕ್ಷರಾದ ಶ್ರೀ ವಿರೇಶಗೌಡ್ರ ದಳಪತಿ, ನಗರ ಘಟಕ ಮಹಿಳಾ ಅಧ್ಯಕ್ಷೆ ಶ್ರೀಮತಿ ನಿರ್ಮಾಲಾ ಮೇದಾರ, ಕೊಪ್ಪಳ ನಗರ ಘಟಕ ಮಹಿಳಾ ಗೌರವಾಧ್ಯಕ್ಷೆ ಶ್ರೀಮತಿ ರತ್ನಮ್ಮ ಹಿರೇಮಠ, ಉಪಾಧ್ಯಕ್ಷೆ ಶ್ರೀಮತಿ ಶರಣಮ್ಮ, ನಗರ ಘಟಕದ ಅಧ್ಯಕ್ಷರಾದ ಶ್ರೀ ಸೋಮನಗೌಡ ಹೊಗರನಾಳ, ಉಪಾಧ್ಯಕ್ಷರಾದ ಶ್ರೀಗಂಗಾಧರ ವಸ್ತ್ರದ, ತಾಲೂಕು ಎಸ್ ಟಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ ದದಗಲ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಕುಮಾರ ಏಣಿಗಿ, ಜಿಲ್ಲಾ ಕೈಗಾರಿಕಾ ಅಧ್ಯಕ್ಷರಾದ ಶ್ರೀ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಒಬಿಸಿ ಅಧ್ಯಕ್ಷರಾದ ಶ್ರೀ ಕರಿಯಪ್ಪ ಹಾಲವವರ್ತಿ, ಜಿಲ್ಲಾ ಸಂಸ್ಕೃತಿ ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಸೊರಟೂರ್, ಕ್ರೀಡಾ ವಿಭಾಗದ ಅಧ್ಯಕ್ಷರಾದ ಶ್ರೀ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ, ತಾಲೂಕು ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾದ ಶ್ರೀ ಅಶೋಕ್ ಬಿ ಭಗನಾಳ, ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವರಾಜ, ಶ್ರೀ ಭೀಮಪ್ಪ ಕವಳಕೇರಿ, ಶ್ರೀ ವೆಂಕನಗೌಡ ಮಾಲಿ ಪಾಟೀಲ್, ಶ್ರೀ ಅಪ್ಪಣ್ಣ ಹಾಲವರ್ತಿ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಜೆಡಿಎಸ್ ಪಕ್ಷದ ಹಿರಿಯ ತಾಯಿ, ಮಾಜಿ ಪ್ರಧಾನಿಗಳಾದ ಶ್ರೀ ಹೆಚ್ ಡಿ ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮನವರು ನಮ್ಮನ್ನು ಅಗಲಿದ್ದಾರೆ.ಅಪಾರ...
18/07/2026

ಜೆಡಿಎಸ್ ಪಕ್ಷದ ಹಿರಿಯ ತಾಯಿ, ಮಾಜಿ ಪ್ರಧಾನಿಗಳಾದ ಶ್ರೀ ಹೆಚ್ ಡಿ ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮನವರು ನಮ್ಮನ್ನು ಅಗಲಿದ್ದಾರೆ.

ಅಪಾರ ದೈವಿ ಭಕ್ತರಾಗಿದ್ದ ಅವರು ಭಾರತೀಯ ನಾರಿ ಪರಂಪರೆಯ ಸಂಕೇತದಂತೆ ಇದ್ದರು. ದೇವೇಗೌಡರ ರಾಜಕೀಯದ ನೆರಳಾಗಿ, ಇಡೀ ಕುಟುಂಬವನ್ನು ಅವರು ಮುನ್ನಡೆಸಿದರು.

ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಹೆಚ್ ಡಿ ದೇವೇಗೌಡರ, ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರ ಹಾಗೂ ಶ್ರೀ ಹೆಚ್ ಡಿ ರೇವಣ್ಣ ಅವರ
ಸಮಸ್ತ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ನೀಡಲಿ.

ಇಂದು ಜೆಡಿಎಸ್ ಜಿಲ್ಲಾ ಕಛೇರಿಯಲ್ಲಿ ಪಕ್ಷದ ಅತ್ಯಂತ ಮಹತ್ವದ ಸಭೆ ಜರುಗಿತು.ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಭೂಮರಡ್ಡಿ ಅವರು ಬೆಂಗಳೂರಿನಲ್ಲ...
17/07/2026

ಇಂದು ಜೆಡಿಎಸ್ ಜಿಲ್ಲಾ ಕಛೇರಿಯಲ್ಲಿ ಪಕ್ಷದ ಅತ್ಯಂತ ಮಹತ್ವದ ಸಭೆ ಜರುಗಿತು.

ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಭೂಮರಡ್ಡಿ ಅವರು ಬೆಂಗಳೂರಿನಲ್ಲಿ ಪೂರ್ವ ನಿರ್ಧರಿತ ಸಭೆಯಲ್ಲಿ ಇದ್ದರು.

ರಾಜ್ಯ ಕೋರ್ ಕಮಿಟಿ ಸದಸ್ಯರಾದ ಶ್ರೀ ಸಿ ವಿ ಚಂದ್ರಶೇಖರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಪಕ್ಷ ಸಂಘಟನೆ, ಮತದಾರ ಪಟ್ಟಿ ಪರಿಷ್ಕರಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಬರ ಪರಸ್ಥಿತಿ ಕುರಿತು ಸುಧೀರ್ಘ ಚರ್ಚೆ ನಡೆಯಿತು.

ಮಳೆಗಾಗಿ ಪ್ರಾರ್ಥಿಸಿ ಪಾದಯಾತ್ರೆ ಹಮ್ಮಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಉದ್ದೇಶದ ಪಾದಯಾತ್ರೆ ಸೋಮವಾರ ಜರುಗಲಿದೆ.

ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳು: ಗೌರವಾಧ್ಯಕ್ಷರಾದ ಶ್ರೀ ಈಶಪ್ಪ ಮಾದಿನೂರು, ಶ್ರೀ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾ ಉಪಾಧ್ಯಕ್ಷರು, ಶ್ರೀ ಕರಿಯಪ್ಪ ಹಾಲವರ್ತಿ, ಜಿಲ್ಲಾ ಒಬಿಸಿ ಅಧ್ಯಕ್ಷರು, ಶ್ರೀ ಮಂಜುನಾಥ ಸೊರಟೂರ್, ಜಿಲ್ಲಾ ಸಂಸ್ಕೃತಿ ವಿಭಾಗದ ಜಿಲ್ಲಾಧ್ಯಕ್ಷರು, ಶ್ರೀ ರಮೇಶ ಡಂಬ್ರಳ್ಳಿ, ಜಿಲ್ಲಾ ಎಸ್,ಟಿ ಘಟಕ ಅಧ್ಯಕ್ಷರು, ಶ್ರೀ ವಿರೇಶಗೌಡ್ರ ದಳಪತಿ, ತಾಲೂಕು ಅಧ್ಯಕ್ಷರು, ಜೆಡಿಎಸ್ ಪಕ್ಷ, ಕೊಪ್ಪಳ, ಶ್ರೀ ಮತಿ ನಿರ್ಮಾಲಾ ಮೇದಾರ, ನಗರ ಘಟಕ ಮಹಿಳಾ ಅಧ್ಯಕ್ಷರು, ಜೆಡಿಎಸ್ ಪಕ್ಷ ಕೊಪ್ಪಳ, ಶ್ರೀಮತಿ ರತ್ನಮ್ಮ ಹಿರೇಮಠ, ನಗರ ಘಟಕ ಮಹಿಳಾ ಗೌರವ ಅಧ್ಯಕ್ಷರು, ಶ್ರೀಮತಿ ಶರಣಮ್ಮ, ಉಪಾಧ್ಯಕ್ಷರು, ಶ್ರೀ ಜಯಶ್ರೀ, ಜೆಡಿಎಸ್ ಮಹಿಳಾ ವಿದ್ಯಾರ್ಥಿ ಘಟಕ ಅಧ್ಯಕ್ಷರು, ಶ್ರೀ ವಿಜಯಲಕ್ಷ್ಮಿ, ಕಾರ್ಯದರ್ಶಿ, ಜೆಡಿಎಸ್ ನಗರ ಮಹಿಳಾ ಘಟಕ ಕೊಪ್ಪಳ, ಶ್ರೀ ಗಂಗಾಧರ ವಸ್ತ್ರದ ಜೆಡಿಎಸ್ ನಗರ ಘಟಕ ಉಪಾಧ್ಯಕ್ಷರು, ಶ್ರೀ ಸುರೇಶ ದದಗಲ್ ತಾಲೂಕು ಎಸ್.ಟಿ ಘಟಕ ಅಧ್ಯಕ್ಷರು, ಜೆಡಿಎಸ್ ಪಕ್ಷ ಕೊಪ್ಪಳ, ಶಿವಕುಮಾರ ಏಣಿಗಿ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ, ಕೊಪ್ಪಳ, ಕೊಪ್ಪಳ ಜಿಲ್ಲಾ ಕೈಗಾರಿಕಾ ಅಧ್ಯಕ್ಷರಾದ ಶ್ರೀ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್ ಸೊರಟೂರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಿರಾಜ್ ಬಿಜಾಪುರ್, ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ, ಜಿಲ್ಲಾ ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ ಪಾಟೀಲ್, ಕೊಪ್ಪಳ ಜೆಡಿಎಸ್ ಎಸ್ ಟಿ ತಾಲೂಕ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ವಾಲ್ಮೀಕಿ,
ಪರಿಸರ ಸಂರಕ್ಷಣೆ ಮತ್ತು ಕಾರ್ಯಕರ್ತರ ಕುಂದು ಕೊರತೆ ವಿಭಾಗದ ತಾಲೂಕ ಅಧ್ಯಕ್ಷರಾದ ಹುಚ್ಚಪ್ಪ ಚೌದ್ರಿ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಜೆಡಿಎಸ್ ಪಕ್ಷದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡಗಳಸದಸ್ಯರು ಇಂದು ಬಾಗಲಕೋಟ ಜಿಲ್ಲೆಯ ಬಾದಾಮ...
15/07/2026

ಜೆಡಿಎಸ್ ಪಕ್ಷದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡಗಳ
ಸದಸ್ಯರು ಇಂದು ಬಾಗಲಕೋಟ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮತ್ತು ಸಮೀಕ್ಷೆ ಕೈಗೊಂಡರು.

ಎರಡೂ ತಂಡಗಳ ಅಧ್ಯಕ್ಷತೆಯನ್ನು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ವಹಿಸಿದ್ದಾರೆ.

ನಮ್ಮ ತಂಡದ ಇತರೆ ಸದಸ್ಯರು: ಶ್ರೀ ನಿಖಿಲ್ ಕುಮಾರಸ್ವಾಮಿ, ಶ್ರೀ ಸಿವಿ ಚಂದ್ರಶೇಖರ್, ರಾಜ್ಯ ಕೋರ್ ಕಮಿಟಿ ಸದಸ್ಯರು, ಶ್ರೀ ವೆಂಕಟರಾವ್ ನಾಡಗೌಡ, ಮಾಜಿ ಸಚಿವರು, ಸಿಂಧನೂರು, ಶ್ರೀ ಸುರೇಶ್‌ ಬಾಬು ಸಿ.ಟಿ., ನಾಯಕರು, ಜೆಡಿ(ಎಸ್) ಶಾಸಕಾಂಗ ಪಕ್ಷ, ಶ್ರೀ ಹನುಮಂತಪ್ಪ ವೈ.ಅಲ್ಲೋಡ್. ಮಾಜಿ ಸಚಿವರು, ಶ್ರೀ ಶರಣಗೌಡಕಂದಕೂರ್, ಶಾಸಕರು ಗುರುಮಠಕಲ್ ಕ್ಷೇತ್ರ,
ಶ್ರೀ ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ್, ಶಾಸಕರು, ದೇವರ ಹಿಪ್ಪರಗಿ ಕ್ಷೇತ್ರ, ಶ್ರೀ ಕೆ. ನೇಮಿರಾಜ್ ನಾಯ್ಕ, ಶಾಸಕರು, ಹಗರಿ ಬೊಮ್ಮನಹಳ್ಳಿ ಕ್ಷೇತ್ರ, ಶ್ರೀಮತಿ ಕರೆಮ್ಮ ಜಿ.ನಾಯ್ಕ, ಶಾಸಕರು, ದೇವದುರ್ಗ ಕ್ಷೇತ್ರ, ಶ್ರೀ ರಾಜಾ ವೆಂಕಟಪ್ಪ ನಾಯಕದೊರೆ, ಮಾಜಿ ಶಾಸಕರು, ಮಾನ್ವಿ ಕ್ಷೇತ್ರ, ಶ್ರೀ ಕಲ್ಲಪ್ಪ ನಾಗಪ್ಪ ಗದ್ದಿ, ಮಾಜಿ ಸಚಿವರು, ಶ್ರೀ ದೊಡ್ಡಪ್ಪಗೌಡ ಎಸ್.ಪಾಟೀಲ್ ನರಿಬೋಳ್, ಮಾಜಿ ಶಾಸಕರು, ಜೇವರ್ಗಿ ಕ್ಷೇತ್ರ, ಶ್ರೀ ವೀರಭದ್ರಪ್ಪ ಹಾಲಅರವಿ, ಮಾಜಿ ಶಾಸಕರು,
ಶ್ರೀ ಗುರುಲಿಂಗಪ್ಪಗೌಡ, ಮಾಜಿ ಶಾಸಕರು, ಶ್ರೀ ಅಮೆತಪ್ಪ ಕಂದಕೂರು, ಮಾಜಿ ಶಾಸಕರು,ಶ್ರೀ ಬಿ.ಡಿ. ಪಾಟೀಲ್ - ಇಂಡಿ ಕ್ಷೇತ್ರ, ಶ್ರೀಮತಿ ಸುನೀತಾ ಚೌಹ್ವಾಣ್, ನಾಗಠಾಣಕ್ಷೇತ್ರ, ಶ್ರೀ ಸೋಮನಗೌಡ ಪಾಟೀಲ್, ಬಸವನ ಬಾಗೇವಾಡಿ ಕ್ಷೇತ್ರ, ಶ್ರೀ ಹನಮಂತ ಬಸಪ್ಪ ಮಾವಿನಮರದ, ಅಭ್ಯರ್ಥಿ ಹಾಗೂ ಶ್ರೀ ಸೂರ್ಯಕಾಂತ ನಾಗಮಾರಪಲ್ಲಿ, ಅಭ್ಯರ್ಥಿ, ಬೀದರ.

ನಮ್ಮ ಜೆಡಿಎಸ್ ಪಕ್ಷದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡ ಎರಡನೇ ದಿನ ಇಂದು ಅಧ್ಯಯನವನ್ನು ಮುಂ...
15/07/2026

ನಮ್ಮ ಜೆಡಿಎಸ್ ಪಕ್ಷದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡ ಎರಡನೇ ದಿನ ಇಂದು ಅಧ್ಯಯನವನ್ನು ಮುಂದುವರೆಸಿತು.

ಇಂದು ಮುಂಜಾನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಶ್ರೀ ಬನಶಂಕರಿ ದೇವಿಯ ದರ್ಶನವನ್ನು ಪಡೆಯಲಾಯಿತು. ಈ ನಾಡಿನಲ್ಲಿ ಸಕಾಲದಲ್ಲಿ ಮಳೆಯಾಗಿ ಎಲ್ಲಾ ಜೀವ ಜಂತುಗಳಿಗೂ ಒಳಿತನ್ನು ಮಾಡು ಎಂದು ಆ ತಾಯಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು ಮತ್ತು ಮಾಜಿ ಸಚಿವರು ಹಾಜರಿದ್ದರು.

ನಮ್ಮ ಪಕ್ಷದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡದ ಇಂದುವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷ...
14/07/2026

ನಮ್ಮ ಪಕ್ಷದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡದ ಇಂದು
ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಗ್ರಾಮಗಳ ವಿವಿಧ ಕೃಷಿ ಪ್ರದೇಶಗಳಿಗೆ ಭೇಟಿಕೊಟ್ಟು ಸಮೀಕ್ಷೆ ನಡೆಸಿತು.

ನಮ್ಮ ತಂಡದ ಅಧ್ಯಯನದ ವರದಿಯನ್ನು ಶೀಘ್ರದಲ್ಲಿಯೇ ಸಲ್ಲಿಸಲಾಗುವುದು.

ಎರಡೂ ವಿಭಾಗಗಳ ಅಧ್ಯಕ್ಷತೆಯನ್ನು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ವಹಿಸಿದ್ದಾರೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಈ ತಂಡದ ಸದಸ್ಯರಾಗಿದ್ದಾರೆ.

ನಮ್ಮ ತಂಡದ ಇತರೆ ಸದಸ್ಯರು:
ಶ್ರೀ ಸಿವಿ ಚಂದ್ರಶೇಖರ್, ರಾಜ್ಯ ಕೋರ್ ಕಮಿಟಿ ಸದಸ್ಯರು,
ಶ್ರೀ ವೆಂಕಟರಾವ್ ನಾಡಗೌಡ, ಮಾಜಿ ಸಚಿವರು, ಸಿಂಧನೂರು, ಶ್ರೀ ಸುರೇಶ್‌ ಬಾಬು ಸಿ.ಟಿ., ನಾಯಕರು, ಜೆಡಿ(ಎಸ್) ಶಾಸಕಾಂಗ ಪಕ್ಷ, ಶ್ರೀ ಹನುಮಂತಪ್ಪ ವೈ.ಅಲ್ಲೋಡ್. ಮಾಜಿ ಸಚಿವರು, ಶ್ರೀ ಶರಣಗೌಡಕಂದಕೂರ್, ಶಾಸಕರು ಗುರುಮಠಕಲ್ ಕ್ಷೇತ್ರ,
ಶ್ರೀ ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ್, ಶಾಸಕರು, ದೇವರ ಹಿಪ್ಪರಗಿ ಕ್ಷೇತ್ರ, ಶ್ರೀ ಕೆ. ನೇಮಿರಾಜ್ ನಾಯ್ಕ, ಶಾಸಕರು, ಹಗರಿ ಬೊಮ್ಮನಹಳ್ಳಿ ಕ್ಷೇತ್ರ, ಶ್ರೀಮತಿ ಕರೆಮ್ಮ ಜಿ.ನಾಯ್ಕ, ಶಾಸಕರು, ದೇವದುರ್ಗ ಕ್ಷೇತ್ರ, ಶ್ರೀ ರಾಜಾ ವೆಂಕಟಪ್ಪ ನಾಯಕದೊರೆ, ಮಾಜಿ ಶಾಸಕರು, ಮಾನ್ವಿ ಕ್ಷೇತ್ರ, ಶ್ರೀ ಕಲ್ಲಪ್ಪ ನಾಗಪ್ಪ ಗದ್ದಿ, ಮಾಜಿ ಸಚಿವರು, ಶ್ರೀ ದೊಡ್ಡಪ್ಪಗೌಡ ಎಸ್.ಪಾಟೀಲ್ ನರಿಬೋಳ್, ಮಾಜಿ ಶಾಸಕರು, ಜೇವರ್ಗಿ ಕ್ಷೇತ್ರ, ಶ್ರೀ ವೀರಭದ್ರಪ್ಪ ಹಾಲಅರವಿ, ಮಾಜಿ ಶಾಸಕರು,
ಶ್ರೀ ಗುರುಲಿಂಗಪ್ಪಗೌಡ, ಮಾಜಿ ಶಾಸಕರು, ಶ್ರೀ ಅಮೆತಪ್ಪ ಕಂದಕೂರು, ಮಾಜಿ ಶಾಸಕರು,ಶ್ರೀ ಬಿ.ಡಿ. ಪಾಟೀಲ್ - ಇಂಡಿ ಕ್ಷೇತ್ರ, ಶ್ರೀಮತಿ ಸುನೀತಾ ಚೌಹ್ವಾಣ್, ನಾಗಠಾಣಕ್ಷೇತ್ರ, ಶ್ರೀ ಸೋಮನಗೌಡ ಪಾಟೀಲ್, ಬಸವನ ಬಾಗೇವಾಡಿ ಕ್ಷೇತ್ರ, ಶ್ರೀ ಹನಮಂತ ಬಸಪ್ಪ ಮಾವಿನಮರದ, ಅಭ್ಯರ್ಥಿ ಹಾಗೂ ಶ್ರೀ ಸೂರ್ಯಕಾಂತ ನಾಗಮಾರಪಲ್ಲಿ, ಅಭ್ಯರ್ಥಿ, ಬೀದರ.

ಜೆಡಿಎಸ್ ಅಧ್ಯಯನ ತಂಡದ ಸದಸ್ಯರಾಗಿ ಸಿವಿಸಿ ನೇಮಕ ಕೊಪ್ಪಳ: ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಅವರನ್ನು ಪಕ್ಷದ ನೆರೆ ಮತ್...
10/07/2026

ಜೆಡಿಎಸ್ ಅಧ್ಯಯನ ತಂಡದ ಸದಸ್ಯರಾಗಿ ಸಿವಿಸಿ ನೇಮಕ

ಕೊಪ್ಪಳ: ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಅವರನ್ನು ಪಕ್ಷದ ನೆರೆ ಮತ್ತು ಬರ ಅಧ್ಯಯನ ತಂಡದ ಸದಸ್ಯರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ನೇಮಕ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಗಳಿಗೆ ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಅವರು ಅಧ್ಯಯನ ತಂಡದ ಅಧ್ಯಕ್ಷರಾಗಿದ್ದಾರೆ. ಈ ಭಾಗಗಳ ಅಧ್ಯಯನ ತಂಡದ ಸದಸ್ಯರಾಗಿ ಸಿ ವಿ ಚಂದ್ರಶೇಖರ್ ಕಾರ್ಯ ನಿರ್ವಹಿಸಲಿದ್ದಾರೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಈ ತಂಡದ ಸದಸ್ಯರಾಗಿದ್ದಾರೆ ಎಂದು ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕೊಪ್ಪಳವು ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದ ಬಹುತೇಕ ಜಿಲ್ಲೆಗಳು ತೀವ್ರ ಬರಗಾಲದ ಪರಿಸ್ಥಿತಿ ಎದುರಿಸುತ್ತಿವೆ.
ವಾಡಿಕೆ ಗಿಂತ ಸುಮಾರು 40% ಕ್ಕಿಂತಲೂ ಕಡಿಮೆ ಮಳೆಯಾಗಿದೆ. ಇದರಿಂದ ಏಕದಳ, ದ್ವಿದಳ ಹಾಗೂ ಇತರೆ ಬೆಳೆಗಳಿಗೆ ತೀವ್ರ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಭಾಗಗಳ ತಂಡದ ಸದಸ್ಯರು ಶೀಘ್ರದಲ್ಲಿಯೇ ಸಭೆ ಸೇರಿ ಭೇಟಿಯ ವಿವರಗಳನ್ನು ಅಂತಿಮಗೊಳಿಸಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಕೊಪ್ಪಳ ತಾಲೂಕಿನ ಎಲ್ಲಾ ಭಾಗಗಳಿಗೆ ಭೇಟಿ ಕೊಟ್ಟು ಆಗಬಹುದಾದ ನಷ್ಟ ಮತ್ತು ಕೈಗೊಳ್ಳಬಹುದಾದ ಪರಿಹಾರ ಕಾಮಗಾರಿಗಳ ಕುರಿತು ಪ್ರತ್ಯೇಕ ವರದಿ ಸಲ್ಲಿಸಲಾಗುವುದು ಎಂದು ಸಿ ವಿ ಚಂದ್ರಶೇಖರ್ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಬಿ ಎಲ್ ಎ (ಬೂತ್ ಲೆವೆಲ್ ಏಜೆಂಟ್) ಕಾರ್ಯಾಗಾರ ನಡೆಯಿತು.ನಮ್ಮ ಪಕ್ಷದ ರಾಜ್ಯ ಕೋರ್ ಕಮಿಟಿ...
15/06/2026

ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಬಿ ಎಲ್ ಎ (ಬೂತ್ ಲೆವೆಲ್ ಏಜೆಂಟ್) ಕಾರ್ಯಾಗಾರ ನಡೆಯಿತು.

ನಮ್ಮ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಶ್ರೀ ಸಿವಿ ಚಂದ್ರಶೇಖರ್ ಅವರು ಸಭೆಯಲ್ಲಿ ಭಾಗವಹಿಸಿದರು. ಚುನಾವಣಾ ಆಯೋಗದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ
ದೋಷರಹಿತವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲಾ ರಾಜಕೀಯ ಪಕ್ಷಗಳ ಮೇಲೆ ಇದೆ. ಈಗಾಗಲೇ ನೇಮಕಗೊಂಡಿರುವ ಬಿಎಲ್ಎ - 2 ಅವರು ಸರಕಾರದ ಬಿ ಎಲ್ ಓ ಅವರ ಜೊತೆಗೆ ಸರಿಯಾಗಿ ಕೆಲಸ ನಿರ್ವಹಿಸಿ ಮತದಾರರ ಪಟ್ಟಿ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕಿದೆ. ಪಕ್ಷಾತೀತವಾಗಿ ಈ ಕೆಲಸ ಮಾಡಬೇಕು. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ಕೈಗೊಳ್ಳಲು ಮತದಾರರ ಪಟ್ಟಿ ಪರಿಷ್ಕೃತಗೊಳ್ಳುವುದು ಅತ್ಯಂತ ಅಗತ್ಯ. 2002ರ ಮತದಾನ ಪಟ್ಟಿಯ ಆಧಾರದ ಮೇಲೆ ಕೆಲವೊಂದು ಬದಲಾವಣೆಗಳನ್ನು ಕೈಗೊಳ್ಳಲಾಗುತ್ತಿದೆ. ಅನರ್ಹ ಹಾಗೂ ನಿಧನ ಹೊಂದಿದವರ ಹೆಸರುಗಳನ್ನು ತೆಗೆದುಹಾಕಿ ಪಟ್ಟಿ ಸರಿಯಾಗಿ ಇರುವಂತೆ ನೋಡಿಕೊಳ್ಳುವ ಕೆಲಸ ಚುನಾವಣಾ ಆಯೋಗ ಮಾಡುತ್ತಿದೆ. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಜೆಡಿಎಸ್ ಪಕ್ಷ ಪ್ರಾಥಮಿಕ ಹಂತದ ಕೆಲಸಗಳನ್ನು ಪೂರೈಸಿ ಜಿಲ್ಲಾಡಳಿತದ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳಲು ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇರಲಿದೆ ಎಂದು ಹೇಳಿದರು

ಈ ಸಭೆಯಲ್ಲಿ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ್, ಸಂಸದರಾದ ಶ್ರೀ ರಾಜಶೇಖರ ಹಿಟ್ನಾಳ್, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶ್ರೀ ಸಿದ್ರಾಮೇಶ್ವರ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಶ್ರೀ ವಿರೇಶ ಸಜ್ಜನ್, ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶ್ರೀ ಕೃಷ್ಣಾರೆಡ್ಡಿ ಗಲಿಬಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಪಕ್ಷದ ಮುಖಂಡರು ಹಾಗೂ ಬಿ ಎಲ್ ಎ ಗಳು ಹಾಜರಿದ್ದರು.

Address

Koppal
Koppal
583231

Website

Alerts

Be the first to know and let us send you an email when ಜಾತ್ಯಾತೀತ ಜನತಾದಳ - ಕೊಪ್ಪಳ posts news and promotions. Your email address will not be used for any other purpose, and you can unsubscribe at any time.

Share