16/02/2022
ಮಾನ್ಯರೇ
ದಿನಾಂಕ: 16.02.2022 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ, ಐಶ್ವರ್ಯ ಚಾರಿಟಬಲ್ ಟ್ರಸ್ಟ್ (ರಿ), ಸ್ನೇಹಾಶ್ರಯ ಯೂತ್ ಟ್ರಸ್ಟ್ ಮಡಿಕೇರಿ, ರಕ್ತ ನಿಧಿ ಕೇಂದ್ರ KOIMS, ಲಯನ್ಸ್ ಕ್ಲಬ್ ರಕ್ತ ನಿಧಿ ಕೇಂದ್ರ ಜೀವದಾರ ಮೈಸೂರು, JCI ಗೋಲ್ಡನ್ ಪೊನ್ನಂಪೇಟೆ, ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸರಗೂರು, ವನವಾಸಿ ಕಲ್ಯಾಣ (ರಿ) ಕರ್ನಾಟಕ ಕೊಡಗು, ಗ್ರಾಮ ಪಂಚಾಯತ್ ಬಾಳೆಲೆ, ನಿಟ್ಟೂರು, ಪೊನ್ನಪ್ಪ ಸಂತೆ, ಕಿರಗೂರು, ಮಾಯಮುಡಿ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಏರ್ಪಡಿಸಲಾಗಿ ಒಟ್ಟು 97 ಮಂದಿ ರಕ್ತ ದಾನ ಮಾಡಿದರು, ಹಾಗೂ ಈ ಶಿಬಿರದಲ್ಲಿ ಹೆಚ್ಚು ಬಾರಿ ರಕ್ತ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಹೆಚ್ಚು ಬಾರಿ ರಕ್ತ ದಾನ ಮಾಡಿದವರ ವಿವರ
ಕಾಟಿಮಾಡ ಚಿಟ್ಟಪ್ಪ 27 ಬಾರಿ, ಪ್ರಿಯ 09 ಬಾರಿ, ಅರುಣ್ 22 ಬಾರಿ, ಎರವರ ರವಿ 08 ಬಾರಿ, ಪ್ರದೀಪ್ ಪೊವಯ್ಯಾ 07 ಬಾರಿ, ಕೃಷಿ ರಾಜ್ 08 ಬಾರಿ, ಕಾಟಿಮಾಡ ಶರೀನ್ ಮುತ್ತಣ್ಣ 08 ಬಾರಿ, ಬೋಪ್ಪಣ್ಣ 08 ಬಾರಿ, ನಿರ್ಮಲ 09 ಬಾರಿ ರಕ್ತದಾನ ಮಾಡಿದ್ದು ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ
1. ಕರ್ನಲ್ ಬಿ ಕೆ ಸುಬ್ರಮಣಿ ನಿವೃತ್ತ ಸೈನಿಕರು ಭಾರತೀಯ ಸೇನೆ ಹಾಗೂ ನಿವೃತ್ತ ರಾಷ್ಟ್ರೀಯ ಮಹಿಳಾ ಮತ್ತು ಪುರುಷ ಹಾಕಿ ತರಬೇತುದಾರರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಅಂಜು ಸುಬ್ರಮಣಿ
2. ಡಾ. ಅಶೋಕ್ ಕುಮಾರ್ ಸಿ ಪಿ ಆಡಳಿತ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ.
3. ಸಿ ವಿ ವಿಶ್ವನಾಥ್ ರವರು ಮುಖ್ಯ ಆಡಳಿತಾಧಿಕಾರಿಗಳು ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ ಮಡಿಕೇರಿ.
4. ಪೊಡಮಾಡ ಸುಕೇಶ್ ಭೀಮಯ್ಯ ಅಧ್ಯಕ್ಷರು ಗ್ರಾಮ ಪಂಚಾಯಿತಿ ಬಾಳೆಲೆ.
5. ಚೆಕ್ಕೇರ ಸೂರಿ ಅಯ್ಯಪ್ಪ ಅಧ್ಯಕ್ಷರು ಗ್ರಾಮ ಪಂಚಾಯತಿ ನಿಟ್ಟೂರು
6. ಡಾ. ಕರುಂಬಯ್ಯ ರಕ್ತನಿಧಿ ಕೇಂದ್ರ KOIMS ಮಡಿಕೇರಿ.
7. ಡೇನಿಸ್ ಚೌಹಾಣ್ ನಿರ್ದೇಶಕರು ವಿವೇಕಾನಂದ ಮೆಮೋರಿಯಲ್ ಹಾಸ್ಪಿಟಲ್ ಸರಗೂರು.
8. ಎರವರ ಪ್ರಕಾಶ್ ಅಧ್ಯಕ್ಷರು ವನವಾಸಿ ಕಲ್ಯಾಣ ಕೊಡಗು.
9. ಬೋಪಣ್ಣ ಅಧ್ಯಕ್ಷರು ಜೆಸಿಐ ಪೊನ್ನಂಪೇಟೆ ಗೋಲ್ಡನ್.
10. ದಿಲನ್ ಚಂಗಪ್ಪ ಜೋನಲ್ coordinator ಜೆಸಿಐ ಕ್ಲಬ್ ಪೊನ್ನಂಪೇಟೆ
11. ಸುರೇಶ್ ರಕ್ತ ನಿಧಿ ಕೇಂದ್ರ ಜೀವ ದಾರ ಮೈಸೂರು.
ಭಾಗವಹಿಸಿದ್ದರು..
ಈ ಸಂದರ್ಭದಲ್ಲಿ ಆಸ್ಪತ್ರೆಗೆ ಸೋಲಾರ್ ಪವರ್ ಸಿಸ್ಟಮ್ ಅಳವಡಿಸಲು ಸಹಕಾರ ನೀಡಿದ ಬದ್ರಿನಾಥ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.
ಧನ್ಯವಾದಗಳು
ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ👇🏻