Vartha Bhavan Mandya

Vartha Bhavan Mandya Vartha bhavan mandya

23/04/2023

*ಚುನಾವಣೆ: ಸಾರ್ವಜನಿಕರು ದೂರುಗಳಿದ್ದಲ್ಲಿ ವೀಕ್ಷಕರನ್ನು ಭೇಟಿ ಮಾಡಿ ಸಲ್ಲಿಸಿ*

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಮಂಡ್ಯ ಜಿಲ್ಲೆಗೆ ಸಾಮಾನ್ಯ, ವೆಚ್ಚ ಹಾಗೂ ಪೊಲೀಸ್ ವೀಕ್ಷಕರುಗಳನ್ನು ನೇಮಕ ಮಾಡಲಾಗಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ದೂರುಗಳಿದ್ದಲ್ಲಿ ಸಾರ್ವಜನಿಕರು ನಿಗಧಿಪಡಿಸಿರುವ ಸಮಯ ಹಾಗೂ ಸ್ಥಳದಲ್ಲಿ ವೀಕ್ಷಕರುಗಳನ್ನು ಭೇಟಿ ಮಾಡಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.

*ಸಾಮಾನ್ಯ ವೀಕ್ಷಕರ ವಿವರ* : 186-ಮಳವಳ್ಳಿ ಮತ್ತು 187-ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಎ.ಎಸ್ ಅಧಿಕಾರಿ ಅಮಿತ್ ಕುಮಾರ್ ಮೊಬೈಲ್ ಸಂಖ್ಯೆ 9141010124 ಇವರನ್ನು ಮದ್ದೂರು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

190-ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಎ.ಎಸ್ ಅಧಿಕಾರಿ ಡಾ: ಎಸ್ ಸುರೇಶ್ ಕುಮಾರ್ ಮೊಬೈಲ್ ಸಂಖ್ಯೆ 9141010125 ಇವರನ್ನು ಶ್ರೀರಂಗಪಟ್ಟಣ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

189-ಮಂಡ್ಯ ಮತ್ತು 191- ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಎ.ಎಸ್ ಅಧಿಕಾರಿ ತನ್ಮಯ್ ಚಕ್ರಬರ್ತಿ ಮೊಬೈಲ್ ಸಂಖ್ಯೆ 9141010126 ಇವರನ್ನು ಮಂಡ್ಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

188- ಮೇಲುಕೋಟೆ ಮತ್ತು 192- ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಎ.ಎಸ್ ಅಧಿಕಾರಿ ಅಮಿತ್ವ್ ಬ್ಯಾನರ್ಜಿ ಮೊಬೈಲ್ ಸಂಖ್ಯೆ 9141010127 ಇವರನ್ನು ಪಾಂಡವಪುರ ಉಪವಿಭಾಗಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಸಂಜೆ 5 ರಿಂದ 6 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

*ಚುನಾವಣಾ ವೆಚ್ಚ ವೀಕ್ಷಕರವಿವರ*: 186-ಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ ಅಧಿಕಾರಿ ಕೇದುಪ್ ಬುಟಿಯಾ ಮೊಬೈಲ್ ಸಂಖ್ಯೆ 9141010129 ಇವರನ್ನು ಮಳವಳ್ಳಿಯ ಪುರಸಭೆ ಕಾರ್ಯಾಲಯzಲ್ಲಿ ಬೆಳಿಗ್ಗೆ 11.30 ರಿಂದ 12.30 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

187-ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ ಅಧಿಕಾರಿ ಗೌರಿಶಂಕರ್ ಸಿಂಗ್ ಮೊಬೈಲ್ ಸಂಖ್ಯೆ 9141010130 ಇವರನ್ನು ಮದ್ದೂರು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

188- ಮೇಲುಕೋಟೆ ಮತ್ತು 192- ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ ಅಧಿಕಾರಿ ಪ್ರಸನ್ನ ದಾತರ್ ಮೊಬೈಲ್ ಸಂಖ್ಯೆ 9141010131 ಇವರನ್ನು ಪಾಂಡವಪುರ ಪ್ರವಾಸಿ ಮಂದಿರದಲ್ಲಿ ಸಂಜೆ 4 ರಿಂದ 6 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

189-ಮಂಡ್ಯ ಮತ್ತು 191- ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ (ಸಿಮತ್ತು ಸಿಇ) ಅಧಿಕಾರಿ ಲೋಕೇಶ್ ದಾಮೊರ್ ಮೊಬೈಲ್ ಸಂಖ್ಯೆ 9141010132 ಇವರನ್ನು ಮಂಡ್ಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10.30 ರಿಂದ 11.30 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

190-ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಐಆರ್ ಎಸ್ ಅಧಿಕಾರಿ ಪ್ರದೀಪ್ ಕುಮಾರ್ ಮೊಬೈಲ್ ಸಂಖ್ಯೆ 9141010133 ಇವರನ್ನು ಶ್ರೀರಂಗಪಟ್ಟಣ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 9.30 ರಿಂದ 10.30 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

*ಪೊಲೀಸ್ ವೀಕ್ಷಕರು* : ಜಿಲ್ಲೆಯ ಎಲ್ಲಾ ವಿಭಾಗದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಐ,ಪಿ.ಎಸ್.ಅಧಿಕಾರಿ ಅವಿನಾಶ್ ಕುಮಾರ್ ಮೊಬೈಲ್ ಸಂಖ್ಯೆ 9141010128 ಇವರನ್ನು ಮಂಡ್ಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 8.30 ರಿಂದ 9.30 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ.

20/04/2023

*ಜಿಲ್ಲೆಯಲ್ಲಿ 119 ಅಭ್ಯರ್ಥಿಗಳಿಂದ 181 ನಾಮಪತ್ರ ಸಲ್ಲಿಕೆ*

ಮಂಡ್ಯ.ಏ.20(ಕರ್ನಾಟಕವಾರ್ತೆ):- ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ರ ಮಂಡ್ಯ ಜಿಲ್ಲಾ ವ್ಯಾಪ್ತಿಯ 07 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಾಂಕ: 13-04-2023 ರಿಂದ 20-04-2023 ರವರೆಗೆ ಮಳವಳ್ಳಿ-186 ವಿಧಾನ ಸಭಾ ಕ್ಷೇತ್ರದಿಂದ ಒಟ್ಟು 20 ಅಭ್ಯರ್ಥಿಗಳಿಂದ 29 ನಾಮಪತ್ರ, ಮದ್ದೂರು-187 ವಿಧಾನ ಸಭಾ ಕ್ಷೇತ್ರದಿಂದ ರವರೆಗೆ ಒಟ್ಟು 15 ಅಭ್ಯರ್ಥಿಗಳಿಂದ 22 ನಾಮಪತ್ರ, ಮೇಲುಕೋಟೆ-188 ವಿಧಾನ ಸಭಾ ಕ್ಷೇತ್ರದಿಂದ ಒಟ್ಟು 14 ಅಭ್ಯರ್ಥಿಗಳಿಂದ 19 ನಾಮಪತ್ರ, ಮಂಡ್ಯ-189 ವಿಧಾನ ಸಭಾ ಕ್ಷೇತ್ರದಿಂದ ಒಟ್ಟು 23 ಅಭ್ಯರ್ಥಿಗಳಿಂದ 37 ನಾಮಪತ್ರ, ಶ್ರೀರಂಗಪಟ್ಟಣ-190 ವಿಧಾನ ಸಭಾ ಕ್ಷೇತ್ರದಿಂದ ಒಟ್ಟು 21 ಅಭ್ಯರ್ಥಿಗಳಿಂದ 34 ನಾಮಪತ್ರ, ನಾಗಮಂಗಲ-191 ವಿಧಾನ ಸಭಾ ಕ್ಷೇತ್ರದಿಂದ ಒಟ್ಟು 17 ಅಭ್ಯರ್ಥಿಗಳಿಂದ 26 ನಾಮಪತ್ರ, ಕೆ.ಆರ್ ಪೇಟೆ-192 ವಿಧಾನ ಸಭಾ ಕ್ಷೇತ್ರದಿಂದ ಒಟ್ಟು 09 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆಯಾಗಿರುತ್ತದೆ.

ಒಟ್ಟಾರೆ ಮಂಡ್ಯ ಜಿಲ್ಲೆಯ 07 ವಿಧಾನ ಸಭಾ ಕ್ಷೇತ್ರದಿಂದ 119 ಅಭ್ಯರ್ಥಿಗಳಿಂದ 181 ನಾಮಪತ್ರಗಳು ಸಲ್ಲಿಕೆಯಾಗಿರುತ್ತದೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ: ವೆಚ್ಚ ವೀಕ್ಷಕರಿಂದ ಸಭೆವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ...
16/04/2023

ವಿಧಾನಸಭಾ ಸಾರ್ವತ್ರಿಕ ಚುನಾವಣೆ: ವೆಚ್ಚ ವೀಕ್ಷಕರಿಂದ ಸಭೆ

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಚೇತ್ರಕ್ಕೆ ಐ.ಆರ್.ಎಸ್ ಅಧಿಕಾರಿ ಕೇದುಪ್ ಬುಟಿಯಾ, ಮದ್ದೂರು ವಿಧಾನಸಭಾ ಕ್ಚೇತ್ರಕ್ಕೆ ಐ.ಆರ್.ಎಸ್ ಅಧಿಕಾರಿ ಗೌರಿಶಂಕರ್ ಸಿಂಗ್, ಮೇಲುಕೋಟೆ ಹಾಗೂ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಐ.ಆರ್.ಎಸ್ (ಸಿ ಅಂಡ್ ಸಿಇ) ಅಧಿಕಾರಿ ಪಲ್ಲವ್ ಸಕ್ಸೇನಾ, ಮಂಡ್ಯ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಐ.ಆರ್.ಎಸ್ (ಸಿ ಅಂಡ್ ಸಿ.ಇ) ಅಧಿಕಾರಿ ಲೋಕೇಶ್ ದಮೊರ್ ಹಾಗೂ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಐ.ಆರ್.ಎಸ್ (ಸಿ ಅಂಡ್ ಸಿಇ) ಅಧಿಕಾರಿ ಗೌರವ್ ಚಂದೇಲ್ ಅವರನ್ನು ವೆಚ್ಚ ವೀಕ್ಷಕರಾಗಿ ನೇಮಕ ಮಾಡಲಾಗಿದ್ದು, ಇವರುಗಳ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.

*ಅಬಕಾರಿ ಅಕ್ರಮಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸಿ*: ಅಬಕಾರಿ ಮಾರಾಟದಲ್ಲಿ ಡೀಲರ್ ಗಳಿಂದ ಈ ಹಿಂದಿನ ತಿಂಗಳುಗಳಲ್ಲಿ ಮಾರಾಟವಾಗುತ್ತಿದ್ದ ಮದ್ಯ ಹಾಗೂ ಪ್ರಸ್ತುತ ಮಾರಾಟವಾಗುತ್ತಿರುವ ಬಗ್ಗೆ ಪ್ರತಿದಿನ ತಾಳೆ ಮಾಡಿ ವ್ಯತ್ಯಾಸ ಕಂಡುಬಂದಲ್ಲಿ ಪರಿಶೀಲಿಸಬೇಕು. ಮಾರಾಟದಾರರು ಕೂಪನ್ ಮೂಲಕ ಮಾರಾಟ ಮಾಡುವುದು ಕಂಡು ಬಂದಲ್ಲಿ ಕ್ರಮವಹಿಸಬೇಕು. ಅಬಕಾರಿ ಅಕ್ರಮಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

*ಬ್ಯಾಂಕುಗಳಲ್ಲಿ ಹಣದ ವಹಿವಾಟಿನ ಬಗ್ಗೆ ನಿಗಾ ವಹಿಸಿ*: ಬ್ಯಾಂಕುಗಳಲ್ಲಿ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದನ್ನು ಗ್ರಾಹಕರು ತೆಗೆದ ಸಂದರ್ಭದಲ್ಲಿ ಪರಿಶೀಲಿಸಿ. ಒಂದೇ ಖಾತೆಯಿಂದ ಹಲವು ಖಾತೆಗಳಿಗೆ ಪೇಟಿಎಂ, ಗೂಗಲ್ ಪೇ ಅಥವಾ ಇನ್ನಿತರೆ ವಿಧದಿಂದ ಹಣ ಜಮೆಯಾದರೆ ಬ್ಯಾಂಕ್‍ಗಳು ನೀಡಲಾಗಿರುವ ನಮೂನೆಗಳಲ್ಲಿ ವರದಿ ನೀಡಬೇಕು. ಪ್ರತಿ ದಿನ ಬ್ಯಾಂಕ್‍ಗಳಿಂದ ವರದಿ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿರುವ ಸಣ್ಣ ಬ್ಯಾಂಕ್‍ಗಳು, ಕೋ-ಆಪ್‍ರೇಟಿವ್, ಖಾಸಗಿ ಸೇರಿದಂತೆ ಯಾವುದೇ ಬ್ಯಾಂಕ್ ಬಿಟ್ಟುಹೋಗದಂತೆ ನೋಡಿಕೊಳ್ಳಿ. ಬ್ಯಾಂಕ್ ಮ್ಯಾನೇಜರ್‍ಗಳ ಸಭೆ ಕರೆದು ಅವರಿಗೆ ಇನ್ನೊಂದು ಬಾರಿ ವಿಷಯವನ್ನು ತಿಳಿಸಿ ಎಂದರು.

ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು. ಅವರ ವ್ಯಾಪ್ತಿಯಲ್ಲಿ ನಿರ್ವಹಿಸುವ ಎಸ್.ಎಸ್.ಟಿ, ವಿ.ಎಎಸ್‍ಟಿ, ವಿವಿಟಿ, ಚೆಕ್ ಪೋಸ್ಟ್ ಸೇರಿದಂತೆ ಚುನಾವಣೆಗೆ ನಿಯೋಜನೆಯಾಗಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.ಈ ಬಗ್ಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ ಅವರು ಜಿಲ್ಲೆಯಲ್ಲಿ ಚುನಾವಣಾ ಹಿನ್ನಲೆಯಲ್ಲಿ ನಿಯೋಜಿಸಲಾಗಿರುವ ಸಂಚಾರಿ ಜಾಗೃತ ದಳ, ಸೆಕ್ಟರ್ ಆಫೀಸರ್, ಐಟಿ ತಂಡ, ಚೆಕ್ ಪೋಸ್ಟ್‍ಗಳ ವಿವರ, ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನ ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ವಿವಿಧ ಅಕ್ರಮಗಳಲ್ಲಿ ವಶಪಡಿಸಿಕೊಂಡಿರುವ ನಗದು, ಮದ್ಯ ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್,ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಲೀಡ್ ಬ್ಯಾಂಕ್ ಮ್ಯಾನೇಜರ್ ದೀಪಕ್, ಅಬಕಾರಿ ಅಧಿಕಾರಿ ಮಹದೇವಿ ಬಾಯಿ, ಮುಡಾ ಆಯುಕ್ತೆ ಐಶ್ವರ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

*ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗೆ ಜೀವನವನ್ನೇ ಮುಡಿಪಾಗಿಟ್ಟಿದ್ದರು: ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ*ಡಾ.ಬಿ.ಆರ್ ಅಂ...
14/04/2023

*ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗೆ ಜೀವನವನ್ನೇ ಮುಡಿಪಾಗಿಟ್ಟಿದ್ದರು: ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ*

ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆ ಹಾಗೂ ದೀನ ದಲಿತರರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದ ಉದ್ಯಾನವನದಲ್ಲಿ ಡಾ‌.ಬಿ.ಆರ್ ಅಂಬೇಡ್ಕರ್ ಅವರ 132 ಜನ್ಮದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಕಷ್ಟ ಕಾರ್ಪಣ್ಯಾಗಳನ್ನ ಅನುಭವಿಸಿ ಶಿಕ್ಷಣ ಪಡೆದು ಬೃಹಧಕಾರವಾಗಿ ಬೆಳೆದು, ಸ್ವಾತಂತ್ರ್ಯ ಬಂದ ನಂತರ ಇಡೀ ಭಾರತಕ್ಕೆ ವಿಶ್ವವೇ ಹೆಮ್ಮೆ ಪಡುವಂತಹ ಸಂವಿಧಾನವನ್ನು ರಚಿಸಿದ್ದಾರೆ ಎಂದರು.

ಸರ್ಕಾರಗಳು ಹಾಗೂ ಸಾರ್ವಜನಿಕರು ಅವರ ತತ್ವ ಆದರ್ಶಗಳನ್ನ ಪಾಲನೆ ಮಾಡುತ್ತಾ ಅಂಬೇಡ್ಕರ್ ಅವರು ತೋರಿಸಿಕೊಟ್ಟ ದಿಕ್ಕಿನಲ್ಲಿ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು‌.

ಭಾರತವು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವುದರ ಜೊತೆಗೆ ಹಿಂದುಳಿದ ರಾಷ್ಟ್ರದಿಂದ ಮುಂದುವರೆದ ರಾಷ್ಟ್ರವಾಗಿ ಮಾರ್ಪಾಡು ಆಗುತ್ತಿದೆ ಇದಕ್ಕೆ ಬಾಬಾ ಸಾಹೇಬರ ಕೊಡುಗೆ ಬಹಳ ಅನನ್ಯವಾದುದು ಎಂದು ಸ್ಮರಿಸಿದರು.

ಭಾರತ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನಾವೆಲ್ಲಾ ಒಟ್ಟಾಗಿ ದುಡಿದು ಅವರ ಸಮಸಮಾಜದ ಕನಸನ್ನು ನನಸು ಮಾಡೋಣ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಒಂದೇ ಧರ್ಮ ಜಾತಿ ಅಥವಾ ಜನಾಂಗಕ್ಕೆ ಸೇರಿದವರೆಲ್ಲಾ, ಅವರು ಎಲ್ಲಾ ವರ್ಗದ ಜನರಿಗೂ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ, ಆಗಾಗಿ ಅವರು ಪ್ರಪಂಚದ ಆಸ್ತಿಯಾಗಿದ್ದಾರೆ ಎಂದರು‌.

ಪ್ರಜಾಪ್ರಭುತ್ವ ರೂವಾರಿ, ಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಒಟ್ಟು ದೇಶದ ಹಿತವನ್ನು ಬಯಸಿದ ಅಪ್ರತಿಮ ರಾಷ್ಟ್ರ ನಾಯಕ ಎಂದು‌ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅವರು ಬಣ್ಣಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನಾವು ದೇಶಕ್ಕೆ ಮತ್ತೊಮ್ಮೆ ಪರಿಚಯಿಸುವ ಅಗತ್ಯ ಇಲ್ಲಾ, ಏಕೆಂದರೆ ಅವರು ದೇಶಕ್ಕೆ ನೀಡಿದ ಕೊಡುಗೆಗಳಿಂದ ಈಗಾಗಲೇ ಜಗತ್ತಿಗೆ ಪರಿಚಯವಾಗಿದೆ ಎಂದರು.

ಶಿಕ್ಷಣ ಒಬ್ಬ ವ್ಯಕ್ತಿಯನ್ನು ಮುಕ್ತ ಮನಸ್ಸಿನಿಂದ ತಾರ್ಕಿಕವಾಗಿ ಹಾಗೂ ಮುಕ್ತವಾಗಿ ಆಲೋಚಿಸುವಂತೆ ಮಾಡುವುದೇ ಆಗಿದೆ. ಶಿಕ್ಷಣ ಪಡೆದು ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ನೈತಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಸದೃಢ ಸಮಾಜ ಮತ್ತು ರಾಷ್ಟ್ರವನ್ನು ಕಟ್ಟುವುದು ಸುಲಭವಾಗುತ್ತದೆ. ಶಿಕ್ಷಣ ಪಡೆದು ನಿಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಹೋರಾಟಗಾರರಾಗಬೇಕಿದೆ ಎಂದು ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದರು. ಆಗಾಗಿ ಎಲ್ಲರೂ ಶಿಕ್ಷಣ ಪಡೆದು ಹೋರಾಟಗಳ ಮೂಲಕ ತಮ್ಮ ಹಕ್ಕು ಪಡೆದುಕೊಳ್ಳಿ ಎಂದರು.

ಭಾರತದಲ್ಲಿ ಹುಟ್ಟಿದ ಗೌತಮ ಬುದ್ದರು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡಿ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.

ರಾಜಕೀಯ ಸ್ವಾತಂತ್ರ್ಯದ ಜೊತೆಗೆ ವ್ಯಕ್ತಿಗೆ ಗೌರವ ತಂದುಕೊಡುವ ಸಾಮಾಜಿಕ ಸ್ವಾತಂತ್ರ್ಯ ಬೇಕೆಂದು ಸ್ವತಂತ್ರ ಚಳುವಳಿಯ ಸಮಯದಲ್ಲೆ ಪ್ರತಿಪಾದಿಸಿದರು.

ಅಂಬೇಡ್ಕರ್ ಅವರು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಅರ್ಥಶಾಸ್ತ್ರದಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದರು. ಅದಕ್ಕೆ ಮಾನ್ಯತೆಯನ್ನು ಗಳಿಸಿದ್ದರು. ರೂಪಾಯಿಯ ಸಮಸ್ಯೆಗಳು: ಇದರ ಉಗಮ ಮತ್ತು ಪರಿಹಾರ ಕೃತಿಯು ಪ್ರಸ್ತುತ ಎಂದರು.

ಉದ್ಯೋಗಿಗಳನ್ನು ಉದ್ಯಮಿಗಳು ಶೋಷಿಸಬಾರದು ಎಂದು ಕಠಿಣ ಕಾನೂನುಗಳನ್ನು ಸರಕಾರ ರೂಪಿಸಬೇಕು ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಉಪವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್, ತಹಶೀಲ್ದಾರ್ ಆರ್.ವಿಜಯ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಏಪ್ರಿಲ್ 11   ರಂದು ಮಾನ್ಯ ಜಿಲ್ಲಾಧಿಕಾರಿಗಳು ವಿವೇಕಾನಂದ ನಗರ (ಕೆರೆ ಅಂಗಳ) ನೀರು ಸರಬರಾಜು ಮಾಡಲು ಒವರ್ ಹೆಡ್ ಟ್ಯಾಂಕ್ ನಿರ್ಮಿಸಲು ಹಳೇ ತಾಲ...
12/04/2023

ಏಪ್ರಿಲ್ 11 ರಂದು ಮಾನ್ಯ ಜಿಲ್ಲಾಧಿಕಾರಿಗಳು ವಿವೇಕಾನಂದ ನಗರ (ಕೆರೆ ಅಂಗಳ) ನೀರು ಸರಬರಾಜು ಮಾಡಲು ಒವರ್ ಹೆಡ್ ಟ್ಯಾಂಕ್ ನಿರ್ಮಿಸಲು ಹಳೇ ತಾಲ್ಲೂಕು ಕಛೇರಿ ಆವರಣಕ್ಕೆ (ಪೇಟೆ ಬೀದಿ) ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ನಂತರ ಅದೇ ಆವರಣದಲ್ಲೇ ಇದ್ದ 5 ಮತಗಟ್ಟೆ ಕೇಂದ್ರಗಳಿಗೆ ಬೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ಮಾಡಲಾಯಿತು.

Address

Department Of Information And Public Relation Near DC Office Mandya
Mandya
571401

Opening Hours

Monday 9am - 5:30pm
Tuesday 9am - 5:30pm
Wednesday 9am - 5:30pm
Thursday 9am - 5:30pm
Friday 9am - 5:29pm
Saturday 9am - 5:30pm

Telephone

+919480841230

Website

Alerts

Be the first to know and let us send you an email when Vartha Bhavan Mandya posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vartha Bhavan Mandya:

Share