Raksh*th Shivaram Tulunad

Raksh*th Shivaram Tulunad Fan And Updates Page Of Tulunadu Leader Shri.Raksh*th Shivaram
ಜೈ ತುಳುನಾಡು

ಪಣಕಜೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತ ದಿ.ರಿನ್ಸ್ ಶಿಬಿ ಇವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶ...
04/09/2026

ಪಣಕಜೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತ ದಿ.ರಿನ್ಸ್ ಶಿಬಿ ಇವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

ಶ್ರೀ ಸ್ಟಾರ್ ಯುವಕ ಮಂಡಲ (ರಿ) ಮತ್ತು ಶ್ರೀ ಸ್ಟಾರ್ ಯುವತಿ ಮಂಡಲ ಪಣಜಾಲು ಗುರುವಾಯನಕೆರೆ ಇಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡ...
04/09/2026

ಶ್ರೀ ಸ್ಟಾರ್ ಯುವಕ ಮಂಡಲ (ರಿ) ಮತ್ತು ಶ್ರೀ ಸ್ಟಾರ್ ಯುವತಿ ಮಂಡಲ ಪಣಜಾಲು ಗುರುವಾಯನಕೆರೆ ಇಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿದರು.

ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ ಮಚ್ಚಿನ ಇದರ ಆಶ್ರಯದಲ್ಲಿ ನಡೆದ 32 ನೇ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಮತ್ತು ಬೈಕ್ ರೇಸ್ ಕಾ...
04/09/2026

ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ ಮಚ್ಚಿನ ಇದರ ಆಶ್ರಯದಲ್ಲಿ ನಡೆದ 32 ನೇ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಮತ್ತು ಬೈಕ್ ರೇಸ್ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿದರು.

ಮೂರ್ತೆದಾರರ ಸೇವಾ ಸಹಕಾರ ಸಂಘ ನಿಯಮಿತ ಗರ್ಡಾಡಿ ಇದರ ನೂತನ ನವೀಕೃತ ಕಛೇರಿ ಉದ್ಘಾಟನೆ ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶ...
04/09/2026

ಮೂರ್ತೆದಾರರ ಸೇವಾ ಸಹಕಾರ ಸಂಘ ನಿಯಮಿತ ಗರ್ಡಾಡಿ ಇದರ ನೂತನ ನವೀಕೃತ ಕಛೇರಿ ಉದ್ಘಾಟನೆ ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷರಾದ ಎಂ.ರಾಮಚಂದ್ರ ಪ್ರಜ್ವಲ್,
ನಿರ್ದೇಶಕರುಗಳಾದ ವಿಶ್ವನಾಥ ಪೂಜಾರಿ. ಶ್ರೀಧರ್ ಪೂಜಾರಿ ಜಯರಾಜ್ ಪೂಜಾರಿ ಯೋಗೇಶ್ ಪೊಯ್ಯೆಗುಡ್ಡೆ ದಿನೇಶ್ ಬಂಗೇರಾ ಶ್ರೀಮತಿ ಲಲಿತಾ ಶ್ರೀಮತಿ ಲತಾ ಎನ್ ಕೋಟ್ಯಾನ್. ಉಪಸ್ಥಿತರಿದ್ದರು.

ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಾಶಯಗಳು.ಅಧರ್ಮವನ್ನು ತೊಡೆದು ಹಾಕಿ, ಧರ್ಮವನ್ನು ಸಂಸ್ಥಾಪಿಸಲು ಜನ್ಮವೆತ್ತಿದ...
04/09/2026

ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಾಶಯಗಳು.

ಅಧರ್ಮವನ್ನು ತೊಡೆದು ಹಾಕಿ, ಧರ್ಮವನ್ನು ಸಂಸ್ಥಾಪಿಸಲು ಜನ್ಮವೆತ್ತಿದ ಯದುನಂದನ ಶ್ರೀಕೃಷ್ಣನ ಕೃಪೆಯಿಂದ ನಾಡಿನ ಸಮಸ್ತ ಜನತೆಯ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ಸದಾ ನೆಲೆಸಿರಲಿ ಎಂದು ಪ್ರಾರ್ಥಿಸುತ್ತೇನೆ.

ಶತಮಾನಗಳಿಂದ  ವಿದ್ಯುತ್‌ ಸಂಪರ್ಕವಿಲ್ಲದೆ ಕತ್ತಲಲ್ಲೇ ಜೀವನ ನಡೆಸುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ನಿವಾಸಿಗಳಿಗೆ ಭರವಸೆಯ ಬೆಳಕೊಂದು ಮ...
03/09/2026

ಶತಮಾನಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೆ ಕತ್ತಲಲ್ಲೇ ಜೀವನ ನಡೆಸುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ನಿವಾಸಿಗಳಿಗೆ ಭರವಸೆಯ ಬೆಳಕೊಂದು ಮೂಡಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರ ನಿರಂತರ ಪ್ರಯತ್ನದ ಫಲವಾಗಿ ವಿದ್ಯುತ್ ವಂಚಿತ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನ ಇದೀಗ ಒಂದು ಹಂತದಲ್ಲಿ ಈಡೇರಿದೆ. ಕರ್ನಾಟಕರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ತನ್ನ 91ನೇ ಸಭೆಯಲ್ಲಿ ಕೆಲವು ಷರತ್ತುಗಳಿಗೊಳಪಟ್ಟು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಮತ್ತು ನಾವೂರು ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಅನುಮೋದನೆ ನೀಡಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾವೂರು ಭಾಗದ 26 ಕುಟುಂಬಗಳು ಹಾಗೂ ಕುತ್ಲೂರು ಭಾಗದ ಸುಮಾರು 32 ಕುಟುಂಬಗಳು ವಿದ್ಯುತ್‌ ಸಂಪರ್ಕ ಹೊಂದಲು ಇದೀಗ ಅನುಮತಿ ದೊರಕಿದೆ.
ಬೆಳ್ತಂಗಡಿ ತಾಲೂಕಿನ ಕುತ್ಲೂರು ಮತ್ತು ನಾವೂರು ಗ್ರಾಮದಲ್ಲಿ 11ಕೆವಿ ವಿದ್ಯುತ್ ವಿತರಣಾ ಮಾರ್ಗದ ಭೂಗತ ಕೇಬಲ್ ಅಳವಡಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈ ಸಂಬಂಧ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಕುತ್ಲೂರು ಮತ್ತು ನಾವೂರು ಜನವಸತಿ ಪ್ರದೇಶಕ್ಕೆ ವಿದ್ಯುತ್‌ ಸಂಪರ್ಕ ಒದಗಿಸುವ ಸಲುವಾಗಿ ಅನುದಾನ ಮೀಸಲಿಡಲು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮತ್ತು ನೇತೃತ್ವದಲ್ಲಿ ಸೆ. 2ರಂದು ಇಂಧನ ಸಚಿವರನ್ನು ಭೇಟಿಯಾಗಿ ಅಹವಾಲು ಸಲ್ಲಿಕೆ ಮಾಡಲಾಯಿತು.

ರಾಜ್ಯದ ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರನ್ನು ಹಾಗೂ ಅರಣ್ಯ ಭವನದಲ್ಲಿ ಹಿರಿಯ ಅಧಿಕಾರಿಗಳನ್ನು ರಕ್ಷಿತ್‌ ಶಿವರಾಂ ನೇತೃತ್ವದಲ್ಲಿ ಭೇಟಿಯಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿನ ಜನವಸತಿ ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲು ಅಗತ್ಯ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್‌, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಜನರಿಗೆ ವಿದ್ಯುತ್‌ ಒದಗಿಸಲು ರಾಜ್ಯದ ಕಾಂಗ್ರೆಸ್‌ ಸರ್ಕಾದ ಬದ್ಧವಿದೆ. ಅದಕ್ಕೆ ಬೇಕಾಗುವ ಅನುದಾನ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು. ನಂತರ ಅರಣ್ಯ ಭವನಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಯಿಲ, ಮುಖಂಡರಾದ ಸುಧಾಕರ ಕುತ್ಲೂರು , ಪ್ರಶಾಂತ್ ಕುತ್ಲೂರು , ಸಂತೋಷ್ ಕಲ್ಲಂಡ ನಾವರ, ವಸಂತ ಹಿತ್ತಿಲಪೇಲ, ನಾಗೇಶ್ ಸವಣಾಲು, ಶೇಖರ ಕಂಬುಜೆ ನಡ, ಲೋಕೇಶ್ ಕುದ್ಕೊಲಿ ನಡ, ವಸಂತ ಕಂಬುಜೆ ನಡ, ನವೀನ್ ಪುಲಿತ್ತಡಿ ನಾವೂರು, ನಿರಂಜನ್ ಆಯಿಲ ಉಪಸ್ಥಿತರಿದ್ದರು.

ಶ್ರದ್ಧಾಂಜಲಿನಮ್ಮ ಪಕ್ಷದ ನಿಷ್ಠಾವಂತ ಹಾಗೂ ಸಕ್ರಿಯ ಕಾರ್ಯಕರ್ತನಾಗಿದ್ದ ರಿನ್ಸ್ ಶಿಬಿ ಅವರ ಅಕಾಲಿಕ ನಿಧನದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡ...
02/09/2026

ಶ್ರದ್ಧಾಂಜಲಿ
ನಮ್ಮ ಪಕ್ಷದ ನಿಷ್ಠಾವಂತ ಹಾಗೂ ಸಕ್ರಿಯ ಕಾರ್ಯಕರ್ತನಾಗಿದ್ದ ರಿನ್ಸ್ ಶಿಬಿ ಅವರ ಅಕಾಲಿಕ ನಿಧನದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ.

ಪಕ್ಷದ ಮೇಲಿನ ನಿಷ್ಠೆ, ಜನರೊಂದಿಗೆ ಬೆರೆತು ಕೆಲಸ ಮಾಡುವ ಅವರ ಗುಣಗಳು ಸದಾ ಸ್ಮರಣೀಯ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿರುವುದು ಕುಟುಂಬದವರಿಗೂ, ಸ್ನೇಹಿತರು ಹಾಗೂ ಪಕ್ಷದ ಕಾರ್ಯಕರ್ತರಿಗೂ ತುಂಬಲಾರದ ನಷ್ಟವಾಗಿದೆ.
ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ದೇವರು ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ರಿನ್ಸ್ ಶಿಬಿ ಅವರ ಸೇವೆ ಮತ್ತು ನೆನಪುಗಳು ಸದಾ ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತವೆ.
ಓಂ ಶಾಂತಿ 🙏

ಹಳೆಪೇಟೆ ಉಜಿರೆ ನೂತನವಾಗಿ ಶುಭ ಆರಂಭಗೊಂಡ ಸೌನಿ ಎಂಟರ್ಪ್ರೈಸಸ್. ಗೃಹ ಬಳಕೆ ಉತ್ಪನ್ನಗಳ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷ...
01/09/2026

ಹಳೆಪೇಟೆ ಉಜಿರೆ ನೂತನವಾಗಿ ಶುಭ ಆರಂಭಗೊಂಡ ಸೌನಿ ಎಂಟರ್ಪ್ರೈಸಸ್. ಗೃಹ ಬಳಕೆ ಉತ್ಪನ್ನಗಳ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಶುಭ ಹಾರೈಸಿದರು

01/09/2026

ಕರ್ನಾಟಕ ಸರ್ಕಾರದ 'ಗೃಹಲಕ್ಷ್ಮಿ' ಯೋಜನೆಯು ನಾಡಿನ 1.24 ಕೋಟಿಗೂ ಅಧಿಕ ಗೃಹಿಣಿಯರಿಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ನೆರವು ತಲುಪಿಸುವ ಮೂಲಕ ಅವರ ಜೀವನದಲ್ಲಿ ಹೊಸ ಬೆಳಕು ಮೂಡಿಸಿದೆ. ಈ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯೋಜನೆಯ ಹಣವು ಕುಟುಂಬದ ದಿನನಿತ್ಯದ ವೆಚ್ಚಗಳು, ಮಕ್ಕಳ ವ್ಯಾಸಂಗ ಹಾಗೂ ಸಣ್ಣಪುಟ್ಟ ಸ್ವಯಂ ಉದ್ಯೋಗಗಳಿಗೆ ಆಸರೆಯಾಗಿದ್ದು, ಪ್ರತಿಯೊಬ್ಬ ಮಹಿಳೆಯು ಆರ್ಥಿಕವಾಗಿ ಸ್ವತಂತ್ರರಾಗಿ, ಸಮ್ಮಾನದ ಜೀವನ ನಡೆಸಲು ದೃಢ ಬುನಾದಿಯಾಗಿದೆ.

Address

Mangalore
574214

Website

Alerts

Be the first to know and let us send you an email when Raksh*th Shivaram Tulunad posts news and promotions. Your email address will not be used for any other purpose, and you can unsubscribe at any time.

Shortcuts

Share