Mangalore Urban Development Authority

Mangalore Urban Development Authority Official page of Mangaluru Urban Development Authority

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಐ ಟಿ ಐ ಬಳಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಪ್ರಾಧಿಕಾರದ ಅಧ್ಯಕ್ಷರಾದ ಶ...
31/03/2023

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಐ ಟಿ ಐ ಬಳಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಶಕೀಲಾ ಕಾವ, ಪ್ರಮುಖರಾದ ಪ್ರವೀಣ್, ಐಟಿಐ ಪ್ರಿನ್ಸಿಪಾಲ್ ಶಿವಕುಮಾರ್, ಸ್ಥಳೀಯರಾದ ಲೋಕೇಶ್, ಬಾಲಕೃಷ್ಣ, ಕಮಲಾಕ್ಷಿ, ಶಿಲ್ಪ, ಕುಸುಮ ದೇವಾಡಿಗ, ಪ್ರಸನ್ನ ಅಜಯ್, ದೃತೇಶ್ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 32ರ ವಿವೇಕಾನಂದ 5ನೇ ಕ್ರಾಸ್ ರೋಡ್ ಬಳಿ ಇರುವ ದೇವ ವನ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಒಟ...
29/03/2023

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 32ರ ವಿವೇಕಾನಂದ 5ನೇ ಕ್ರಾಸ್ ರೋಡ್ ಬಳಿ ಇರುವ ದೇವ ವನ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಒಟ್ಟು 21 ಲಕ್ಷ ಅನುದಾನದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ಅವರು ಶಿಲನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಶಕೀಲ ಕಾವ, ವಿಠಲ್ ಶೆಣೈ, ರಕ್ಷಾ ಶಣೈ, ಪುರುಷೋತ್ತಮ್ ಶೆಣೈ, ವಿವೇಕ್ ಶೆಣೈ, ಕಂಡೆಟ್ಟು ಸಂತೋಷ್ ಕುಮಾರ್, ಸ್ಥಳೀಯರಾದ ಲೋಕೇಶ್, ಬಾಲಕೃಷ್ಣ, ಕಮಲಾಕ್ಷಿ, ಶಿಲ್ಪ, ಕುಸುಮ ದೇವಾಡಿಗ, ಪ್ರಸನ್ನ ಅಜಯ್, ದೃತೇಶ್ ಮತ್ತು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಕದ್ರಿ ಉದ್ಯಾನವನದಲ್ಲಿ ಸರಿಸುಮಾರು 55.50 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಶಿಷ್ಟ ಚೇತನ ಮಕ್ಕಳಿಗಾಗಿ ನಿರ್ಮಿಸುವ ವಿಶೇಷ ಪಾರ್ಕಿಗೆ ಹಾಗೂ 60 ಲಕ್ಷ...
28/03/2023

ಕದ್ರಿ ಉದ್ಯಾನವನದಲ್ಲಿ ಸರಿಸುಮಾರು 55.50 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಶಿಷ್ಟ ಚೇತನ ಮಕ್ಕಳಿಗಾಗಿ ನಿರ್ಮಿಸುವ ವಿಶೇಷ ಪಾರ್ಕಿಗೆ ಹಾಗೂ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಕದ್ರಿ ಉದ್ಯಾನವನದಲ್ಲಿರುವ ರಂಗ ಮಂದಿರದ ಸಮಗ್ರ ಅಭಿವೃದ್ಧಿಗೆ ಮಂಗಳೂರು ನಾಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅನುದಾನ ಬಿಡುಗಡೆಯಾಗಿದ್ದು ಇಂದು ಮಂಗಳೂರು ದಕ್ಷಿಣದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಅವರೊಂದಿಗೆ ಮೂಡದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ರವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಶಕೀಲ ಕಾವ, ಕಿಶೋರ್ ಕೊಟ್ಟಾರಿ, ಮೀನುಗಾರಿಕೆ ನಿಗಮದ ಮಾಜಿ ಅಧ್ಯಕ್ಷರಾದ ನಿತಿನ್ ಕುಮಾರ್, ಪಾರ್ಕ್ ನಿರ್ವಹಣಾ ಸಮಿತಿಯ ಸದಸ್ಯರಾದ ಜಿಕೆ ಭಟ್, ಗಾಂಭೀರ್, ವಿಕಲಚೇತನ ಶಾಲೆಯ ವಸಂತ್ ಶೆಟ್ಟಿ, ಚೇತನ ಸ್ಕೂಲ್ ನ ವಿನೋದ್ ಶೆಣೈ, ಮೂಡದ ಅಭಿಯಂತರರಾದ ಆರತಿ ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೋಟಿ ಚೆನ್ನಯ್ಯ ವೃತ್ತ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಒಟ್ಟು 47 ಲಕ್ಷ ರೂ ವೆಚ್ಚದಲ್ಲಿ ...
28/03/2023

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೋಟಿ ಚೆನ್ನಯ್ಯ ವೃತ್ತ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಒಟ್ಟು 47 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ . ಇದರ ಗುದ್ದಲಿ ಪೂಜೆಯನ್ನು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ಅವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿ, ಸಂದೀಪ್ ಗರೋಡಿ, ಕಂಕನಾಡಿ ಗರೋಡಿಯ ಮೊಕ್ತಸರ ದಿನೇಶ್ ಅಂಚನ್, ಮೀನುಗಾರಿಕೆ ನಿಗಮದ ಮಾಜಿ ಅಧ್ಯಕ್ಷರಾದ ನಿತಿನ್ ಕುಮಾರ್, ಕರ್ನಾಟಕ ರಾಜ್ಯ ಕುಂಬಾರದ ಮಹಾ ಸಂಘದ ಕಾರ್ಯಾಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್, ಮುಖಂಡರಾದ ನೀಲಯ್ಯ ಅಗರಿ, ಎಂ.ಎಸ್. ಕೋಟ್ಯಾನ್, ರಮೇಶ್ ಸುವರ್ಣ, ಸೀತಾರಾಮ ಮತ್ತು ಸ್ಥಳೀಯ ಪ್ರಮುಖ ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 27ನೇ ಬೋಳೂರು ವಾರ್ಡಿನ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಸ್ಮಶಾನದ ಬಳಿ ಇರುವ ಪಾರ್ಕ್ ...
28/03/2023

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 27ನೇ ಬೋಳೂರು ವಾರ್ಡಿನ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಸ್ಮಶಾನದ ಬಳಿ ಇರುವ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ 25 ಲಕ್ಷ ವಿಶೇಷವನ್ನು ಒದಗಿಸಿದೆ.
ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ ಕಾಮತ್ ಅವರೊಂದಿಗೆ ಮೂಡದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ರವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಬೋಳೂರು ಮಹಾನಗರ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ,ಮಾಜಿ ಮೀನುಗಾರಿಕಾ ನಿಗಮದ ಅಧ್ಯಕ್ಷರು ನಿತಿನ್ ಕುಮಾರ್ , ಜಿಲ್ಲಾ ಹಿಂದುಳಿದ ಮೋರ್ಚದ ಅಧ್ಯಕ್ಷರು ರಘುವೀರ್, ಬೋಳೂರು ಜಾರಂದಾಯ ದೈವಸ್ಥಾನದ ಗೌರವ ಅಧ್ಯಕ್ಷರಾದ ವಿಶ್ವನಾಥ ಕೋಟ್ಯಾನ್, ಅದ್ಯಕ್ಷರಾದ ಶ್ರೀಧರ್ , ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷರು ಯಶವಂತ್ ಮೆಂಡನ್ , ಅಕ್ಷಯ ಯುವಜನ ಸಂಘದ ಅಧ್ಯಕ್ಷ ಯೋಗೀಶ್ ಸಾಲ್ಯಾನ್, ಜಾರಂದಾಯ ದೈವಸ್ಥಾನದ ಪ್ರಮುಖರಾದ ಚಂದ್ರಕಾಂತ್ ,ಬಲರಾಜ್ ಕೋಟ್ಯಾನ್, ರಾಮ , ವೆಂಕಟೇಶ್ ದಾಸ್,ವೀರವಿನಾಯಕ ಜನಸೇವಾ ಟ್ರಸ್ಟ್ ಅಧ್ಯಕ್ಷರು ಕಿಶೋರ್ ಶೆಟ್ಟಿ. ಪ್ರಮುಖರಾದ ರಾಹುಲ್ ಶೆಟ್ಟಿ, ಪದ್ಮನಾಭ ಪುತ್ರನ್ , ಉಮಾಶಂಕರ್ , ದಿನೇಶ್ ಕರ್ಕೇರ , ಸಂದೀಪ್ ಕೋಟ್ಯಾನ್ , ರಾಜೇಶ್ , ಅರುಣ್ ಮೆಂಡನ್ , ಗಣೇಶ್ ನಾಡಾರ್ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ 33ನೇ ಕದ್ರಿ ದಕ್ಷಿಣ ವಾರ್ಡಿನ ಡಾಕ್ಟರ್ ಕಾಲೋನಿ ಬಳಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ರೂ 2.50 ಕೋಟಿ ವೆಚ...
26/03/2023

ಮಂಗಳೂರು ಮಹಾನಗರ ಪಾಲಿಕೆಯ 33ನೇ ಕದ್ರಿ ದಕ್ಷಿಣ ವಾರ್ಡಿನ ಡಾಕ್ಟರ್ ಕಾಲೋನಿ ಬಳಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ರೂ 2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕದ್ರಿ ಕೈ ಬಟ್ಟಲು ಕೆರೆಯ ಉದ್ಘಾಟನೆಯನ್ನು ಮಂಗಳೂರು ದಕ್ಷಿಣದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಮತ್ತು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮೇಯರ್ ದಯಾನಂದ್ ಅಂಚನ್, ಉಪಮೇಯರ್ ಪೂರ್ಣಿಮಾ, ಆಯುಕ್ತರಾದ ಡಾ. ಭಾಸ್ಕರ್, ಮೂಡ ಸದಸ್ಯರಾದ ಕವಿತಾ ಪೈ, ಸ್ಥಳೀಯ ಕಾರ್ಪೊರೇಟರ್ ಮನೋಹರ್ ಶೆಟ್ಟಿ, ಡಾ ಪ್ರಶಾಂತ್ ಮಾರ್ಲ, ಡಾ ಕಿಶೋರ್ ಶೆಟ್ಟಿ, ಕಿರಣ್ ರೈ, ರಮೇಶ್ ಹೆಗ್ಡೆ, ಸ್ಥಳೀಯ ಹಿರಿಯರಾದ ಮುಕುಂದ, ಕೇಶವ ಕದ್ರಿ, ಜಗದೀಶ್ ಕದ್ರಿ, ಶ್ರೀಮತಿ ಗೀತಾ ಸರಲಯ,PMC ಪ್ರಕಾಶ್, ಮೂಡದ ಅಭಿಯಂತರರಾದ ಆರತಿ ಮತ್ತು ಸ್ಥಳೀಯ ಪ್ರಮುಖ ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ 51ನೇ ಅಳಪೆ ಉತ್ತರ ವಾರ್ಡಿನ ಬೈರಾಡಿ ಕೆರೆ ಮತ್ತು ಹತ್ತಿರದ ಪಾರ್ಕ್  ಅಭಿವೃದ್ಧಿಗೊಂಡಿದ್ದು, ಇದರ ಉದ್ಘಾಟನೆಯನ್ನು ಮ...
26/03/2023

ಮಂಗಳೂರು ಮಹಾನಗರ ಪಾಲಿಕೆಯ 51ನೇ ಅಳಪೆ ಉತ್ತರ ವಾರ್ಡಿನ ಬೈರಾಡಿ ಕೆರೆ ಮತ್ತು ಹತ್ತಿರದ ಪಾರ್ಕ್ ಅಭಿವೃದ್ಧಿಗೊಂಡಿದ್ದು, ಇದರ ಉದ್ಘಾಟನೆಯನ್ನು ಮಂಗಳೂರು ದಕ್ಷಿಣದ ಶಾಸಕರಾದ ಶ್ರೀ ವೇದವಾಸ್ ಕಾಮತ್ ಮತ್ತು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ಅವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮೂಡದಾ ಆಯುಕ್ತರಾದ ಡಾ. ಭಾಸ್ಕರ್, ಉಪಮೇಯರ್ ಪೂರ್ಣಿಮಾ, ಮೂಡ ಸದಸ್ಯರಾದ ಕವಿತಾ ಪೈ, ಸ್ಥಳೀಯ ಮನಪಾ ಸದಸ್ಯರಾದ ರೂಪಶ್ರೀ ಪೂಜಾರಿ,ರಮೇಶ್ ಹೆಗ್ಡೆ, ಕಿರಣ್ ರೈ, ಡಾ ಅಣ್ಣಯ್ಯ ಕುಲಾಲ್, ಗೀತಾ ಶೆಟ್ಟಿ, ವಿಶ್ವನಾಥ್,PMC ಪ್ರಕಾಶ್ ಮತ್ತು ಸ್ಥಳೀಯ ಪ್ರಮುಖ ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ 55ನೇ ವಾರ್ಡಿನಲ್ಲಿ ಬರುವ ಮಾರ್ನೆಮಿ ಕಟ್ಟೆ ವೃತ್ತ ಅಭಿವೃದ್ಧಿಗೆ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರ...
26/03/2023

ಮಂಗಳೂರು ಮಹಾನಗರ ಪಾಲಿಕೆಯ 55ನೇ ವಾರ್ಡಿನಲ್ಲಿ ಬರುವ ಮಾರ್ನೆಮಿ ಕಟ್ಟೆ ವೃತ್ತ ಅಭಿವೃದ್ಧಿಗೆ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರೂ 36.75 ಲಕ್ಷ ಅನುದಾನದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮೂಡಾದ ಆಯುಕ್ತರಾದ ಡಾ ಭಾಸ್ಕರ್, ಸ್ಥಳೀಯ ಮನಪಾ ಸದಸ್ಯರಾದ ಶೈಲೇಶ ಶೆಟ್ಟಿ, ಮನಪಾ ಸದಸ್ಯರಾದ ಭಾನುಮತಿ, ಹಿರಿಯರಾದ ರಮೇಶ್, ರೂಪ, ಲಲಿತ, PMC ಪ್ರಕಾಶ್, ಮೂಡದ ಅಭಿಯಂತರರಾದ ಆರತಿ ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ 58ನೇ ವಾರ್ಡಿನ ಎಂಪಾಸಿಸ್ ವೃತ್ತ ಅಭಿವೃದ್ಧಿಗೆ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ರೂ 35 ಲಕ್ಷ ಅನುದಾನದಲ್ಲ...
26/03/2023

ಮಂಗಳೂರು ಮಹಾನಗರ ಪಾಲಿಕೆಯ 58ನೇ ವಾರ್ಡಿನ ಎಂಪಾಸಿಸ್ ವೃತ್ತ ಅಭಿವೃದ್ಧಿಗೆ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ರೂ 35 ಲಕ್ಷ ಅನುದಾನದಲ್ಲಿ ಗುದ್ದಲಿ ಪೂಜೆಯನ್ನು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ಅವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮೂಡಾದ ಆಯುಕ್ತರದ ಡಾ ಭಾಸ್ಕರ್, ಸ್ಥಳೀಯ ಮನಪಾ ಸದಸ್ಯರಾದ ಭಾನುಮತಿ, ಮೂಡದ ಅಭಿಯಂತರರಾದ ಆರತಿ, PMC ಪ್ರಕಾಶ್, ಪ್ರಸಾದ್ ಕುಮಾರ್ ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಗೊಂಡು ಸ್ಥಳೀಯ  ಸಾರ್ವಜನಿಕರಿಗೆ ಉಪಯೋಗವಾಗುವ ಪಾಂಡೇಶ್ವರ ಓಲ್ಡ್ ಕೆಂಟ್ ಉದ್ಯಾನವನದ...
24/03/2023

ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಗೊಂಡು ಸ್ಥಳೀಯ ಸಾರ್ವಜನಿಕರಿಗೆ ಉಪಯೋಗವಾಗುವ ಪಾಂಡೇಶ್ವರ ಓಲ್ಡ್ ಕೆಂಟ್ ಉದ್ಯಾನವನದ ಉದ್ಘಾಟನೆಯನ್ನು ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮೂಡಾದ ಆಯುಕ್ತರದ ಡಾ. ಭಾಸ್ಕರ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮೂಡಾದ ಅಭಿಯಂತರರಾದ ಆರತಿ ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 46ನೇ ವಾರ್ಡಿನಲ್ಲಿ ಬರುವ ನೆಹರು ಮೈದಾನ ಬಳಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್...
24/03/2023

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 46ನೇ ವಾರ್ಡಿನಲ್ಲಿ ಬರುವ ನೆಹರು ಮೈದಾನ ಬಳಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ರೂ 25 ಲಕ್ಷ ಅನುದಾನದಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ರವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮೂಡಾದ ಆಯುಕ್ತರದ ಡಾ. ಭಾಸ್ಕರ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮೂಡಾದ ಅಭಿಯಂತರರಾದ ಆರತಿ ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ ಚೇಳ್ಯಾರು ಮಧ್ಯದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಸಲ್ಪಡುವ ಬೃಹತ...
24/03/2023

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ ಚೇಳ್ಯಾರು ಮಧ್ಯದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಸಲ್ಪಡುವ ಬೃಹತ್ ವಸತಿ ನಿವೇಶನಕ್ಕೆ ಶೀಲಾನ್ಯಾಸ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ಅವರ ನಡೆಸಿಕೊಟ್ಟರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡದ ವತಿಯಿಂದ ಈ ಬಡಾವಣೆಯು ಅತಿ ದೊಡ್ಡ ಬಡಾವಣೆಯಾಗಲಿದ್ದು, ಒಟ್ಟು ವಿಸ್ತೀರ್ಣವು 75 ಎಕರೆ ಮತ್ತು 1000 ಮನೆಗಳನ್ನು ಒಳಗೊಂಡಿದೆ. ಈ ಭಾಗದ ಜನರಿಗೆ ಇದರಿಂದ ಬಹು ಅನುಕೂಲವಾಗಲಿದ್ದು, ಈ ಬಡಾವಣೆಯು ಮತ್ತೊಂದು ಪರ್ಯಾಯ ನಗರವಾಗಿ ಈ ಭಾಗದಲ್ಲಿ ನಿರ್ಮಾಣವಾಗಲಿದೆ

ಈ ಸಂದರ್ಭದಲ್ಲಿ ಮೂಡದ ಸದಸ್ಯರಾದ ದಯಾನಂದ್, ಕವಿತಾ ಪೈ ಮತ್ತು ಕಿರಣ್ ಕುಮಾರ್, ಉಷಾ ಕುಮಾರಿ, ಸರ್ವೆ ವಿಭಾಗದ ಜೋಯ್, ಮೂಡಾದ ಅಭಿಯಂತರರಾದ ಆರತಿ, PMC ಪ್ರಕಾಶ್, ಚೇಳ್ಯಾರು ಪಂಚಾಯತ್ ನ ಅಧ್ಯಕ್ಷರಾದ ಯಶೋದ, ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Address

Kuloor Ferry Road, Urwa
Mangalore
575006

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Telephone

+918242459565

Alerts

Be the first to know and let us send you an email when Mangalore Urban Development Authority posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mangalore Urban Development Authority:

Share