02/08/2026
ಮಾನವೀಯತೆಯ ಒಂದು ಶ್ರೇಷ್ಠ ಕಾರ್ಯ..!
ಶ್ರೀ ದಿನಕರ ಜೆ. ಪೂಜಾರಿ ಹಾಗೂ ಶ್ರೀಮತಿ ಸೌಮ್ಯಾ ಪೂಜಾರಿ ಅವರ ಪುಟ್ಟ ಮಗುವಿಗೆ ಗಂಭೀರವಾದ ಬೋನ್ ಮ್ಯಾರೋ (ಮೂಳೆಮಜ್ಜೆ) ಸಂಬಂಧಿತ ಕಾಯಿಲೆ ಕಾಣಿಸಿಕೊಂಡಿದ್ದು, ಜೀವ ಉಳಿಸುವ ಚಿಕಿತ್ಸೆಗೆ ತುರ್ತಾಗಿ ₹18 ಲಕ್ಷದ ಅಗತ್ಯವಿತ್ತು.
ಈ ಮಾನವೀಯ ಮನವಿಗೆ ಸ್ಪಂದಿಸಿದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು, ಶಾಸಕ ಶ್ರೀ ವೇದವ್ಯಾಸ ಕಾಮತ್ ಹಾಗೂ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ (ರಿ) ಸಂಸ್ಥಾಪಕ ಅಧ್ಯಕ್ಷ ಶ್ರೀ ಉದಯ್ ಪೂಜಾರಿ ಅವರ ಮನವಿಯ ಮೇರೆಗೆ ಸ್ವತಃ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ತೆರಳಿ ವೈದ್ಯಕೀಯ ತಜ್ಞರನ್ನು ಭೇಟಿಯಾಗಿ ಮಗುವಿನ ಆರೋಗ್ಯ ಸ್ಥಿತಿಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಬಳಿಕ ತಮ್ಮ ವೈಯಕ್ತಿಕ ನೆರವನ್ನು ನೀಡಿ, ಮಗುವಿನ ಚಿಕಿತ್ಸೆಯು ಯಾವುದೇ ವಿಳಂಬವಿಲ್ಲದೆ ಆರಂಭವಾಗುವಂತೆ ಮಹತ್ವದ ಪಾತ್ರ ವಹಿಸಿದರು.
ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸಿದ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ (ರಿ) – ದುಬೈ ಘಟಕದ "ಸ್ಪಂದನ ಹೆಲ್ಪಿಂಗ್ ಹ್ಯಾಂಡ್ಸ್" ವತಿಯಿಂದಲೂ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು.
ಈ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು, ಸಂಕಷ್ಟದ ಸಮಯದಲ್ಲಿ ಕುಟುಂಬಗಳೊಂದಿಗೆ ನಿಂತು ನೆರವಾಗುವ ನಾಯಕತ್ವವು ಸಮಾಜದಲ್ಲಿ ಆಶಾಭರವನ್ನೂ ವಿಶ್ವಾಸವನ್ನೂ ಮೂಡಿಸುತ್ತದೆ.
"ಸ್ವಂತಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ ಸರ್ವಸ್ವ."
ಈ ಆದರ್ಶ ವಾಕ್ಯವನ್ನು ತಮ್ಮ ಕರುಣೆ, ಸೇವಾ ಮನೋಭಾವ ಮತ್ತು ಜನಪರ ಬದ್ಧತೆಯ ಮೂಲಕ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ನಿಜಾರ್ಥದಲ್ಲಿ ಸಾಕಾರಗೊಳಿಸಿದ್ದಾರೆ.
ಅವರ ಈ ಆದರ್ಶ ಮಾನವೀಯ ಸೇವೆಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅನಂತ ಕೃತಜ್ಞತೆಗಳು.