02/09/2026
8000 ಸಾವಿರಕ್ಕೂ ಹೆಚ್ಚು ಹುದ್ದೆಗಳ ಅವಕಾಶದ ಬೃಹತ್ ಉದ್ಯೋಗ ಮೇಳ
ನಮ್ಮ ಸಂಸ್ಥೆಯಾದ ಜನ ಸ್ಪಂದನಾ ಟ್ರಸ್ಟ್ ವತಿಯಿಂದ ಕಳೆದ 9 ವರ್ಷಗಳಿಂದ 15 ಭಾರಿ ಯಶಸ್ವಿಯಾಗಿ ಉದ್ಯೋಗ ಮೇಳವನ್ನು ನಡೆಸಿ 16ನೇ ಭಾರಿ ಈ ವರ್ಷವು ನಡೆಸುತ್ತಿದ್ದು, ನಿರುದ್ಯೋಗಿ ಉತ್ಸಾಹಿ ಯುವಕ/ಯುವತಿಯರಿಗೆ ಚೈತನ್ಯ ತುಂಬಿ ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡುವತ್ತ ನಮ್ಮ ಸಂಸ್ಥೆಯೂ ಸಾವಿರಾರು ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಸಫಲರಾಗಿದ್ದೇವೆ. ಯಾವುದೇ ಅಪೇಕ್ಷೆ ಇಲ್ಲದೆ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿಭೆಯಿದ್ದು ಅವಕಾಶವಿಲ್ಲದೆ ವಂಚಿತರಾಗಿ ಸಂಕಷ್ಟದಲ್ಲಿರುವವರು ಒಂದು ಕಡೆಯಾದರೆ, ಉದ್ಯೋಗಗಳಿದ್ದೂ ಪ್ರತಿಭೆಗಳನ್ನು ಹುಡುಕುವವರು ಇನ್ನೊಂದುಕಡೆ, ಇವರಿಬ್ಬರ ನಡುವೆ ಸೇತುವೆಯಾಗಿ ನಿರುದ್ಯೋಗಿ ಯುವಕ ಯುವತಿಯರಿಗೆ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರುದ್ಯೋಗಿ ಯುವಕರಲ್ಲಿ ಭರವಸೆ ಮೂಡಿಸಲು ಈ ಭಾರಿಯೂ ಮೈಸೂರಿನ ಸೇವಾ ಸಂಸ್ಥೆಯಾದ ಜನ ಸ್ಪಂದನ ಟ್ರಸ್ಟ್ ವತಿಯಿಂದ ಉದ್ಯೋಗಮೇಳ, ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದಿನಾಂಕ 05/09/26ರಂದು ಬೆಳಿಗ್ಗೆ 9:00 ರಿಂದ ಸಂಜೆ 5:00ರ ವರೆಗೆ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಚಿಕ್ಕಮ್ಮಾನಿಕೇತನ ಸಮುದಾಯ ಭವನದಲ್ಲಿ ಏರ್ಪಡಿಸಿದೆ. ಈ ಉದ್ಯೋಗ ಮೇಳವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ಯತೀಂದ್ರ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದು ಇತರೆ ಆನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉದ್ಯೋಗ ಮೇಳದಲ್ಲಿ ನಿರುದ್ಯೋಗ ಯುವಕ/ಯುವತಿಯರಿಗೆ ಅನುಕೂಲವಾಗುವ ಉದ್ದೇಶದಿಂದ Job Portal ನ್ನು ಪ್ರಾರಂಭಿಸಲಾಗುತ್ತಿದ್ದು ನೋಂದಣಿಗಾಗಿ ನಿರುದ್ಯೋಗಿಗಳು Google form ಗೆ Online ಮೂಲಕ ತಮ್ಮ ವ್ಯಕ್ತಿಪರಿಚಯಪತ್ರ (BIO-DATA) ಸಲ್ಲಿಸಬಹುದಾಗಿದೆ.
ಈ ಉದ್ಯೋಗ ಮೇಳದಲ್ಲಿ ಮೈಸೂರು ಮತ್ತು ಬೆಂಗಳೂರಿನ ಕಂಪನಿಗಳು, ಹಾಗೂ ಕೆಲವು ಐ.ಟಿ.ಕಂಪನಿಗಳು ಸಹ ಭಾಗವಹಿಸಲಿವೆ. ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ., ಡಿಪ್ಲೊಮೊ, ಕಂಪ್ಯೂಟರ್ ತರಬೇತಿವುಳ್ಳವರು, ಪದವಿಧರರು ಹಾಗೂ ಇಂಜಿನಿಯರಿಂಗ್ ಪದವಿವರೆಗೂ ವಿವಿಧ ವಿದ್ಯಾರ್ಹತೆಗಳಿಗನುಗುಣವಾಗಿ ನೂರಾರು ನಿರುದ್ಯೋಗಿಗಳಿಗೆ
ಈ ಉದ್ಯೋಗ ಮೇಳದಲ್ಲಿ ಮೈಸೂರು ಮತ್ತು ಬೆಂಗಳೂರಿನ ಕಂಪನಿಗಳು, ಹಾಗೂ ಕೆಲವು ಐ.ಟಿ.ಕಂಪನಿಗಳು ಸಹ ಭಾಗವಹಿಸಲಿವೆ. ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ., ಡಿಪ್ಲೊಮೊ, ಕಂಪ್ಯೂಟರ್ ತರಬೇತಿವುಳ್ಳವರು, ಪದವಿಧರರು ಹಾಗೂ ಇಂಜಿನಿಯರಿಂಗ್ ಪದವಿವರೆಗೂ ವಿವಿಧ ವಿದ್ಯಾರ್ಹತೆಗಳಿಗನುಗುಣವಾಗಿ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಅವಕಾಶವಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ.
ಈ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಂದ ಹಾಗೂ ಯಾರಿಂದಲೂ ಯಾವುದೇ ರೀತಿಯ ಸದ್ಯಸತ್ವದ ಶುಲ್ಕವನ್ನು ಪಡೆಯಲಾಗುವುದಿಲ್ಲ. ಇದು ಪೂರ್ಣವಾಗಿ ಉಚಿತವಾಗಿ ಸೇವಾ ಮನೋಭಾವದಿಂದ ನಡೆಯುವ ಉದ್ಯೋಗ ಮೇಳವಾಗಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲಾತಿಗಳು, ಜೆರಾಕ್ಸ್ ಪ್ರತಿಗಳು, ಭಾವಚಿತ್ರಗಳು, ಮತ್ತು ವ್ಯಕ್ತಿಪರಿಚಯಪತ್ರ (BIO-DATA) ಗಳನ್ನು ಜೊತೆಯಲ್ಲಿ ತರುವುದು.
ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಮೈಸೂರು ಜಿಲ್ಲೆಯ ವಿವಿಧ ಕೈಗಾರಿಕೆಗಳ ಮುಖ್ಯಸ್ಥರುಗಳು ತಮ್ಮ ಬೇಡಿಕೆಗಳಿಗನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರತ್ಯೇಕ ಕೌಂಟರ್ ತೆರೆಯಲಾಗುವುದು.
ಒಟ್ಟಾರೆ 60ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 8000ಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಿರುತ್ತೇವೆ. ಈ ಮೇಳದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜನಸ್ಪಂದನಾ ಸೇವಾ ಟ್ರಸ್ಟ್ 7018442164 ವಿನಂತಿಸಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ. 8892628009-7892253897-8618448164-9900244955, ಇವರನ್ನು ಸಂಪರ್ಕಿಸಬಹುದು.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಎಂ ಕೆ ಸೋಮಶೇಖರ್ ಮಾಜಿ ಶಾಸಕರು ಕೆಆರ್ ಕ್ಷೇತ್ರ
ಬೃಹತ್ ಉದ್ಯೋಗ ಮೇಳದ ಕುರಿತು ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ಪತ್ರಿಕಾಗೋಷ್ಠಿಯಲ್ಲಿ
ಎಂ ಕೆ ಸೋಮಶೇಖರ್
ಮಾಜಿ ಶಾಸಕರು
ಕೃಷ್ಣರಾಜ ವಿಧಾನ ಸಭಾ ಕ್ಷೇತ್ರ
ಅಧ್ಯಕ್ಷರು
ಜನಸ್ಪಂದನ ಟ್ರಸ್ಟ್ (ರಿ.)
ಶ್ರೀಧರ್
ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಸಮಿತಿ
ಜೆ.ಗೋಪಿ
ಮಾಜಿ ಪಾಲಿಕೆ ಸದಸ್ಯರು
ಎಂ.ಸುನೀಲ್
ಮಾಜಿ ಪಾಲಿಕೆ ಸದಸ್ಯರು
,ವಿನಯ್ ಕುಮಾರ್ ಜೆ
ಅಧ್ಯಕ್ಷರು
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
,ರವಿಶಂಕರ್
ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
,ಕಾಂಗ್ರೆಸ್ ಮುಖಂಡರಾದ
ಅಶೋಕಪುರಂ ಪಟಾಕಿ ಮಂಜುನಾಥ್
,ಹರವೆ ಸಿದ್ದು,
ವಿಶ್ವ
ಉಪಸ್ಥಿತರಿದ್ದರು.