SDPI Sakleshpur

SDPI Sakleshpur SDPI Sakleshpur Official Page

Politics For Cause

Freedom From Hunger, Freedom From Fear

ಮೊದಲ ಹಂತದಲ್ಲಿ ಮ್ಯಾಪಿಂಗ್ ಎರಡನೇ ಹಂತದಲ್ಲಿ ಎನ್ಯುಮರೇಷನ್ ಪಾರಂ ಭರ್ತಿ  ಮಾಡಿಸಿ upload ಮಾಡಿ ಸುಮ್ಮನಿದ್ದೀರಾ...........ಹಾಗಿದ್ದರೆ,ನೀವು...
05/08/2026

ಮೊದಲ ಹಂತದಲ್ಲಿ ಮ್ಯಾಪಿಂಗ್ ಎರಡನೇ ಹಂತದಲ್ಲಿ ಎನ್ಯುಮರೇಷನ್ ಪಾರಂ ಭರ್ತಿ ಮಾಡಿಸಿ upload ಮಾಡಿ ಸುಮ್ಮನಿದ್ದೀರಾ...........

ಹಾಗಿದ್ದರೆ,ನೀವು ಈಗ ತಕ್ಷಣದಲ್ಲಿ ಮಾಡಬೇಕಿರುವದೇನೆಂದರೆ ನಿಮ್ಮ ಸ್ಥಳೀಯ ಬಿಎಲ್ಒಗಳನ್ನು ಸಂಪರ್ಕಿಸಿ ಅವರಲ್ಲಿರುವ ಎಸ್ಐಆರ್ app ಓಪನ್ ಮಾಡಿಸಿಕೊಂಡು ಅದರಲ್ಲಿರುವ ಲಾಜಿಕಲ್ ಡಿಸ್ಕ್ರಿಪೆನ್ಸಿ window ಓಪನ್ ಮಾಡಿಸಿ ಯಾರ ಹೆಸರಲ್ಲಿ ಅನಾಮಲಿ ಬಂದಿದೆಯೋ ಅವರ ಹೆಸರು ಕ್ರಮಸಂಖ್ಯೆ ಮತ್ತು ಡಿಸ್ಕ್ರಿಪೆನ್ಸಿಗೆ (ಅನಾಮಲಿ) ಕಾರಣವೇನೆಂದು ಪಟ್ಟಿ ಮಾಡಿಟ್ಟುಕೊಳ್ಳಿ.

ಡಿಸ್ಕ್ರಿಪೆನ್ಸಿ ಅಥವಾ ಅನಾಮಲಿಯ ಪ್ರಮುಖ ಕಾರಣಗಳು ಈ ರೀತಿ ಇದೆ.

1) ಸೆಲ್ಫ್ ಮ್ಯಾಪಿಂಗ್ ಮಾಡಿಕೊಂಡಿದ್ದರೆ 2002 ಮತ್ತು ಈಗಿನ ಮತದಾರರ ಪಟ್ಟಿಯಲ್ಲಿರುವ ನಿಮ್ಮ ಹೆಸರು ಹೊಂದಾಣಿಕೆಯಾಗದಿರುವುದು.

2) ಪ್ರೊಜೆನಿ ಮ್ಯಾಪಿಂಗ್ ಯಾರ ಹೆಸರಿನಲ್ಲಿ ಮಾಡಿಕೊಂಡಿದ್ದೀರೋ ಅವರ ಹೆಸರು 2002 ಮತ್ತು ಈಗಿನ ಮತದಾರರ ಪಟ್ಟಿಗೆ ಹೊಂದಾಣಿಕೆಯಾಗದಿರುವುದು

3) ಒಂದೇ ವ್ಯಕ್ತಿಗೆ 6 ಕ್ಕಿಂತ ಹೆಚ್ಚು ಮತದಾರರನ್ನು ಮ್ಯಾಪಿಂಗ್ ಮಾಡಿರುವುದು.

4) ಅಪ್ಪ ಅಥವಾ ಅಮ್ಮನೊಂದಿಗೆ ಮ್ಯಾಪಿಂಗ್ ಮಾಡಿಕೊಂಡಿರುವ ಮತದಾರರ ವಯಸ್ಸಿನ ಅಂತರ 50 ವರ್ಷಕ್ಕಿಂತ ಹೆಚ್ಚು ಇರುವುದು.

5) ಅಪ್ಪ ಅಥವಾ ಅಮ್ಮನೊಂದಿಗೆ ಮ್ಯಾಪಿಂಗ್ ಮಾಡಿಕೊಂಡಿರುವ ಮತದಾರರ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ಇರುವುದು.

6) ಅಜ್ಜ ಅಥವಾ ಅಜ್ಜಿಯೊಂದಿಗೆ ಮ್ಯಾಪಿಂಗ್ ಮಾಡಿಕೊಂಡಿದ್ದರೆ, ಅವರ ಮತ್ತು ಮತದಾರರ ನಡುವಿನ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ ಇರುವುದು.

7) ಸಹೋದರ ಅಥವಾ ಸಹೋದರಿಯರ ಜನ್ಮ ದಿನಾಂಕಗಳ ನಡುವಿನ ಅಂತರ 9 ತಿಂಗಳಿಗಿಂತ ಕಡಿಮೆ ಇರುವುದು.

8) ಮೇಲಿನ ಯಾವುದೇ ಕಾರಣ ಅಲ್ಲದಿದ್ದರೆ ಬಿಎಲ್ಒ ಕಣ್ತಪ್ಪಿನಿಂದ ಅನಗತ್ಯ ಮಾಹಿತಿಯನ್ನು ನಮೂದಿಸಿರುವುದು,ಅಥವಾ ತಂತ್ರಜ್ಞಾನ ದೋಷದಿಂದಲೂ ಅನಾಮಲಿ ಪಟ್ಟಿಯಲ್ಲಿ ಹೆಸರು ಬರುವ ಸಾದ್ಯತೆ ಇರುತ್ತದೆ.

ಪರಿಹಾರ:-

✅ ಮೊದಲ ಮತ್ತು ಎರಡನೇ ಸಮಸ್ಯೆಗೆ 2002 ರ ಮ್ಯಾಪಿಂಗ್ ಹೆಸರನ್ನು ಮತ್ತು ಸಂಖ್ಯೆಗಳನ್ನು (ಸ್ವತಃ,ಅಪ್ಪ, ಅಮ್ಮ,ಅಥವಾ ಎರಡೂ ಕಡೆಯ ಅಜ್ಜ ಅಜ್ಜಿ) ಇವರಲ್ಲಿ ಯಾರಿಗಾದರೂ ಬದಲಾಯಿಸಿಕೊಂಡು ಪುನಃ upload ಮಾಡಿಸಿ.ಮತ್ತು ನಿಮಗೆ ಈಗಾಗಲೇ ನೀಡಿರುವ ಫಾರಂನಲ್ಲೂ ತಿದ್ದುಪಡಿಸಿಟ್ಟುಕೊಳ್ಳಿ.

✅ ಮೂರನೇ ಕ್ರಮಾಂಕದ ಸಮಸ್ಯೆಗೆ ಈಗಾಗಲೇ ಮ್ಯಾಪಿಂಗ್ ಮಾಡಿರುವ ಹೆಸರನ್ನು ಅಪ್ಪ,ಅಮ್ಮ,ಅಥವಾ ಎರಡೂ ಕಡೆಯ ಅಜ್ಜ ಅಜ್ಜಿಯರಿಗೆ ಹಂಚಿಕೆ ಮಾಡಿ ಮ್ಯಾಪಿಂಗ್ ಮಾಡಿಕೊಳ್ಳಿ,ಲಾಜಿಕಲ್ ಡಿಸ್ಕ್ರಿಪೆನ್ಸಿ ಐದಕ್ಕಿಂತ ಕಡಿಮೆ ಇದ್ದರೆ ಯಾವ ಸಮಸ್ಯೆ ಇರುವುದಿಲ್ಲ.
ಉದಾಹರಣೆಗೆ:- ಒಂದು ತಂದೆಯ ಹೆಸರಿನಲ್ಲಿ ಏಳು ಜನ ಮಕ್ಕಳು ಮ್ಯಾಪಿಂಗ್ ಮಾಡಿದ್ದಾರೆಂದರೆ ಆ ಏಳು ಜನ ಮಕ್ಕಳು ಲಾಜಿಕಲ್ ಡಿಸ್ಕ್ರಿಪೆನ್ಸಿಯಲ್ಲಿ ಬಂಧಿತರಾಗುತ್ತಾರೆ,ಅವರಲ್ಲಿ ಇಬ್ಬರು ತಾಯಿಗೆ ಅಥವಾ ಎರಡೂ ಕಡೆಯ ಅಜ್ಜ ಅಜ್ಜಿಯರಿಗೆ ಮ್ಯಾಪಿಂಗ್ ಬದಲಾಯಿಸಿಕೊಂಡರೆ ಉಳಿದ ಐವರು ಲಾಜಿಕಲ್ ಡಿಸ್ಕ್ರಿಪೆನ್ಸಿಯಿಂದ automatic ಆಗಿ ಬಿಡುಗಡೆಯಾಗುತ್ತಾರೆ.

✅ ನಾಲ್ಕು,ಐದು,ಮತ್ತು ಆರನೇ ಕ್ರಮಾಂಕದ ಸಮಸ್ಯೆಗೆ (ಸ್ವತಃ,ಅಪ್ಪ,ಅಮ್ಮ,ಅಥವಾ ಎರಡೂ ಕಡೆಯ ಅಜ್ಜ ಅಜ್ಜಿಯರಿಗೆ ಮ್ಯಾಪಿಂಗ್ ಬದಲಾಯಿಸಿ ಅನಾಮಲಿಯಿಂದ ಬಿಡುಗಡೆಯಾಗಲು ಪ್ರಯತ್ನಿಸಿ,ಆದರೂ ನಿಮ್ಮ ಡಿಸ್ಕ್ರಿಪೆನ್ಸಿ ಅಸಾದ್ಯವಾದರೆ ನೋಟೀಸ್ ಅವಧಿಯಲ್ಲಿ ಸಂಭಂದಿಸಿದ ದಾಖಲೆಯನ್ನು ಪ್ರಸ್ತುತಪಡಿಸಲು ಸಿದ್ದರಾಗಿ.

✅ ಏಳನೇ ಕ್ರಮಾಂಕದ ಸಮಸ್ಯೆಯು ಬಹುತೇಕ ಆಧಾರ್ ಕಾರ್ಡಿನಲ್ಲಿರುವ ಜನ್ಮದಿನಾಂಕದ ತಪ್ಪು ನಮೂದನೆಯಿಂದ ಅನಾಮಲಿ ಆಗಿರುತ್ತದೆ,ಈ ಸಂದರ್ಭದಲ್ಲಿ ಶಾಲಾ ದಾಖಲೆಯಂತೆ enumeration ಫಾರಂನಲ್ಲಿ ಜನ್ಮದಿನಾಂಕ ದಾಖಲಿಸಿ,ಮುಂದಿನ ದಿನಗಳಲ್ಲಿ ಶಾಲಾ ದಾಖಲಾತಿಯಂತೆ ಆಧಾರ್ ಕಾರ್ಡಿನ ಜನ್ಮ ದಿನಾಂಕ ಬದಲಾಯಿಸಿಕೊಳ್ಳಿ.
ಈ ಸಮಸ್ಯೆಗೆ ಇನ್ನೊಂದು ಪ್ರಮುಖ ಕಾರಣವೇನೆಂದರೆ ಅವಳಿ(twins)ಗಳ ಜನ್ಮದಿನಾಂಕ ಒಂದೇ ದಿನ ಅವರ ದಾಖಲೆಯಲ್ಲಿ ನಮೂದಾಗಿರುತ್ತದೆ ಇಂತಹ ಪ್ರಕರಣಗಳ ಮಾಹಿತಿ ನೀಡಿದರೆ ಉಪವಿಭಾಗಾಧಿಕಾರಿಗಳ ಲಾಗಿನ್‌ನಲ್ಲಿ ವಿಶೇಷ ಪ್ರಕರಣವೆಂದು ಸ್ಕಿಪ್ ಮಾಡಲು ಸಾದ್ಯವಿರುತ್ತದೆ.

✅ಎಂಟನೇ ಕ್ರಮಾಂಕದ ಸಮಸ್ಯೆಯಲ್ಲಿ ಬಿಎಲ್ಒ ಕಣ್ತಪ್ಪಿನಿಂದ ತಪ್ಪು ಮಾಹಿತಿಯನ್ನು ಫೀಡ್ ಮಾಡಿರುವುದು,ಅದನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ವಿಶೇಷವೆಂದರೆ 2002 ಮತ್ತು ಈಗಿನ ಪಟ್ಟಿಯಲ್ಲಿರುವ ಹೆಸರುಗಳು ಹೊಂದಾಣಿಕೆಯಾಗಿದ್ದರೂ ಮೊಬೈಲ್ ಆಪ್‌ನಲ್ಲಿ ಮಾತ್ರ ಅಕ್ಷರ ವ್ಯತ್ಯಾಸ ತೋರಿಸುತ್ತಿರುವ ಕೆಲವು ಪ್ರಕರಣವಿದೆ,ಇದಕ್ಕೆ ಅಧಿಕಾರಿಗಳು ಮಾತ್ರ ಜವಾಬ್ದಾರಿಯಾಗಬೇಕಾಗಿದ್ದು ನೋಟೀಸ್ ಅವಧಿಯಲ್ಲಿ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದು ವಿಶೇಷ ಪ್ರಕರಣವೆಂದು ಸ್ಕಿಪ್ ಮಾಡಲು ಅವಕಾಶವಿರುತ್ತದೆ.

ಸೂಚನೆ:

ಇದು ಎನ್ಯುಮರೇಷನ್ ಫಾರಂ ಅಪ್ಲೋಡ್ ಆದ ನಂತರ ನನ್ನ ಅನುಭವದ ತಿಳುವಳಿಕೆಯಾಗಿರುತ್ತದೆ,ಮತ್ತು ಇದೇ ಪರಿಹಾರದೊಂದಿಗೆ ನಮ್ಮ ಗ್ರಾಮದಲ್ಲಿ ಕಳೆದ ನಾಲ್ಕು ದಿನದಲ್ಲಿ ಶೇಕಡ 85 ರಷ್ಟು ಅನಾಮಲಿ ಸಂಕಷ್ಟದಲ್ಲಿದ್ದ ಮತದಾರರನ್ನು ಹೊರತರಲು ಸಾದ್ಯವಾಗಿದೆ.

ಈ ಮಾಹಿತಿ ಉಪಯುಕ್ತವಾದರೆ ನೀವು ಹಂಚಿಕೊಳ್ಳಿ

✍️ ಸಿದ್ದೀಕ್ ಆನೆಮಹಲ್
ಚುಣಾವಣಾ ಉಪ ಸಮಿತಿ ಸದಸ್ಯರು
ಎಸ್ಡಿಪಿಐ,ಕರ್ನಾಟಕ

ಅಭಿನಂದನೆಗಳು*ನೇಪಾಳದ ಕಠ್ಮಂಡುವಿನಲ್ಲಿ ನಡೆದ 3rd World Mix Boxing Championship 2026 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಕಲೇಶಪುರಕ್ಕ...
01/08/2026

ಅಭಿನಂದನೆಗಳು*

ನೇಪಾಳದ ಕಠ್ಮಂಡುವಿನಲ್ಲಿ ನಡೆದ 3rd World Mix Boxing Championship 2026 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಕಲೇಶಪುರಕ್ಕೆ ವಿಶ್ವ ಮಟ್ಟದಲ್ಲಿ ಹೆಮ್ಮೆ ತಂದ ಮೊಹಮ್ಮದ್ ಹಫೀಜ್ ಅವರಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮ ಈ ಯಶಸ್ಸು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಲಿ. ಇದೇ ಉತ್ಸಾಹ ಮತ್ತು ಪರಿಶ್ರಮದಿಂದ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ದೇಶದ ಹೆಮ್ಮೆಯ ಕ್ರೀಡಾಪಟುವಾಗಿ ಬೆಳೆಯಲಿ ಎಂದು ಶುಭ ಹಾರೈಸುತ್ತೇವೆ.

WIM ಸಕಲೇಶಪುರ ವಿಧಾನಸಭಾ ಕ್ಷೇತ್ರ

ಅಭಿನಂದನೆಗಳುನೇಪಾಳದ ಕಠ್ಮಂಡುವಿನಲ್ಲಿ ನಡೆದ World Mix Boxing Championship 2026 ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದು ಅಮೋಘ ಸಾ...
01/08/2026

ಅಭಿನಂದನೆಗಳು

ನೇಪಾಳದ ಕಠ್ಮಂಡುವಿನಲ್ಲಿ ನಡೆದ World Mix Boxing Championship 2026 ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದು ಅಮೋಘ ಸಾಧನೆ ಮಾಡಿದ ಸಕಲೇಶಪುರ ಆನೆಮಹಲ್‌ನ ಟಿ.ಸಿ. ಖಾದರ್ ಅವರ ಪುತ್ರ ಮೊಹಮ್ಮದ್ ಹಫೀಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ನಿಮ್ಮ ಈ ಐತಿಹಾಸಿಕ ಸಾಧನೆ ಸಕಲೇಶಪುರಕ್ಕೆ, ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಹೆಮ್ಮೆಯನ್ನು ತಂದಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಶ್ರದ್ಧೆ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ದೇಶಕ್ಕೂ ಸಮಾಜಕ್ಕೂ ಕೀರ್ತಿ ತಂದುಕೊಡಲಿ ಎಂದು ಹಾರೈಸುತ್ತೇವೆ.

ಸೃಷ್ಟಿ ಕರ್ತನು ನಿಮಗೆ ಇನ್ನಷ್ಟು ಯಶಸ್ಸು, ಆರೋಗ್ಯ ಮತ್ತು ಉಜ್ವಲ ಭವಿಷ್ಯವನ್ನು ಕರುಣಿಸಲಿ.

*– SDPI ಸಕಲೇಶಪುರ ವಿಧಾನಸಭಾ ಸಮಿತಿ*

🌸 ಅಭಿನಂದನೆಗಳು 💐💐ರಾಷ್ಟ್ರೀಯ ಮಟ್ಟದಲ್ಲಿ ಸಕಲೇಶಪುರದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ Mountain Fighters ತಂಡದ ಸಾಧನೆ ನಿಜಕ್ಕೂ ಹ...
29/07/2026

🌸 ಅಭಿನಂದನೆಗಳು 💐💐

ರಾಷ್ಟ್ರೀಯ ಮಟ್ಟದಲ್ಲಿ ಸಕಲೇಶಪುರದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ Mountain Fighters ತಂಡದ ಸಾಧನೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ 9ನೇ MMA ಇಂಡಿಯನ್ ನ್ಯಾಷನಲ್ ಚಾಂಪಿಯನ್‌ಶಿಪ್–2026ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳನ್ನು ಗೆದ್ದ ಎಲ್ಲಾ ಕ್ರೀಡಾಪಟುಗಳಿಗೆ, ತರಬೇತುದಾರರಿಗೆ ಹಾಗೂ Mountain Fighters ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ನಿಮ್ಮ ಈ ಸಾಧನೆಯ ಪಯಣ ಇನ್ನಷ್ಟು ಉನ್ನತ ಶಿಖರಗಳನ್ನು ತಲುಪಲಿ ಎಂಬ ಶುಭ ಹಾರೈಕೆಗಳು.

– WIM ಸಕಲೇಶಪುರ ವಿಧಾನಸಭಾ ಕ್ಷೇತ್ರ

27/07/2026

ಇಮ್ರಾನ್ ಅರೇಹಳ್ಳಿ

ಅತಿಶೀಘ್ರದಲ್ಲಿ ಹಾಸನ ಜಿಲ್ಲೆಯಲ್ಲಿ Young Democrats...!ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ ಮತ್ತು ಯುವಕರ ಹಕ್ಕುಗಳಿಗಾಗಿ ...
23/07/2026

ಅತಿಶೀಘ್ರದಲ್ಲಿ ಹಾಸನ ಜಿಲ್ಲೆಯಲ್ಲಿ Young Democrats...!

ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ ಮತ್ತು ಯುವಕರ ಹಕ್ಕುಗಳಿಗಾಗಿ ಧ್ವನಿಯಾಗಿರುವ Young Democrats ಇದೀಗ ಹಾಸನ ಜಿಲ್ಲೆಯಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಲು ಸಜ್ಜಾಗಿದೆ.

ಯುವಕರ ಕನಸುಗಳಿಗೆ ಶಕ್ತಿ ತುಂಬುವ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿ ತೋರಿಸುವ ಮತ್ತು ಜನರ ಸಮಸ್ಯೆಗಳಿಗೆ ಪ್ರಜಾಪ್ರಭುತ್ವದ ಮೂಲಕ ಪರಿಹಾರ ಹುಡುಕುವ ಉದ್ದೇಶದಿಂದ ನಾವು ಮುಂದೆ ಬರುತ್ತಿದ್ದೇವೆ.

Address

AZAD Road SAKLESHPUR
Sakleshpur
573134

Website

Alerts

Be the first to know and let us send you an email when SDPI Sakleshpur posts news and promotions. Your email address will not be used for any other purpose, and you can unsubscribe at any time.

Shortcuts

Share