Zilla Panchayath - Tumkur

Zilla Panchayath - Tumkur Sri Prabhu G I.A.S. Chief Executive Officer,
Zilla Panchayath,
Tumakuru. PH: 0816-2272898

ಕಾಮಗಾರಿಯ ಹೆಸರು : ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಗೌಡಿಗೆರೆ ಗ್ರಾಮದ ಸ.ಕಿ.ಪ್ರಾ ಶಾಲೆಗೆ ಕೊಠಡಿ ನಿರ್ಮಾಣಅಂದಾಜು ಮೊತ್ತ : 13.90 ಲಕ್ಷಲ...
12/11/2025

ಕಾಮಗಾರಿಯ ಹೆಸರು : ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಗೌಡಿಗೆರೆ ಗ್ರಾಮದ ಸ.ಕಿ.ಪ್ರಾ ಶಾಲೆಗೆ ಕೊಠಡಿ ನಿರ್ಮಾಣ

ಅಂದಾಜು ಮೊತ್ತ : 13.90 ಲಕ್ಷ

ಲೆಕ್ಕಶೀಷಿಕೆ : ವಿವೇಕ ಶಾಲಾ ಯೋಜನೆ

ಪಾವಗಡ ತಾಲ್ಲೂಕಿನ ರಂಗಸಮುದ್ರ ಗ್ರಾಮ ಪಂಚಾಯಿತಿ ರಂಗಸಮುದ್ರ ಕೆರೆಯಲ್ಲಿ ನರೇಗಾ ಯೋಜನೆಯಡಿ ಕೂಲಿಕಾರರು ಹೂಳೆ ತೆಗೆಯುವ ಕೆಲಸದಲ್ಲಿ ಭಾಗಿಯಾಗಿರುವ...
19/11/2024

ಪಾವಗಡ ತಾಲ್ಲೂಕಿನ ರಂಗಸಮುದ್ರ ಗ್ರಾಮ ಪಂಚಾಯಿತಿ ರಂಗಸಮುದ್ರ ಕೆರೆಯಲ್ಲಿ ನರೇಗಾ ಯೋಜನೆಯಡಿ ಕೂಲಿಕಾರರು ಹೂಳೆ ತೆಗೆಯುವ ಕೆಲಸದಲ್ಲಿ ಭಾಗಿಯಾಗಿರುವುದು.

ಪಾವಗಡ ತಾಲ್ಲೂಕಿನ  ಚಿಕ್ಕಹಳ್ಳಿ ಮತ್ತು ಗುಜ್ಜನಡು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನ...
30/10/2024

ಪಾವಗಡ ತಾಲ್ಲೂಕಿನ ಚಿಕ್ಕಹಳ್ಳಿ ಮತ್ತು ಗುಜ್ಜನಡು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು "ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ " ಅಭಿಯಾನವನ್ನು ಕೈಗೊಳ್ಳಲಾಗಿತ್ತು.

ಅಭಿಯಾನದ ಅಂಗವಾಗಿ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಕರಪತ್ರಗಳು ವಿತರಿಸಿ, ಫೋನಿನ ಮೂಲಕ ಸ್ಕ್ಯಾನ್ ಮಾಡಿ ಬೇಡಿಕೆ ಸಲ್ಲಿಸುವ ಬಗ್ಗೆ, ಯೋಜನೆಯಡಿ ದೊರಕುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬಗ್ಗೆ ಹಾಗೂ ನರೇಗಾ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಲಾಯಿತು.

Mgnregs Karnataka
Panchayat Raj Karnataka

ಶಿರಾ ತಾಲ್ಲೂಕಿಗೆ NLM ತಂಡ ಭೇಟಿ ಶಿರಾ ತಾಲ್ಲೂಕಿನ ಹೊನ್ನಗೊಂಡನಹಳ್ಳಿ  ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಮಟ್ಟದ ಪರಿಶೀಲನಾ ತಂಡ(NLM) ಭೇಟಿ ನೀಡ...
15/10/2024

ಶಿರಾ ತಾಲ್ಲೂಕಿಗೆ NLM ತಂಡ ಭೇಟಿ

ಶಿರಾ ತಾಲ್ಲೂಕಿನ ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಮಟ್ಟದ ಪರಿಶೀಲನಾ ತಂಡ(NLM) ಭೇಟಿ ನೀಡಿ ರಾಷ್ಟ್ರೀಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿತು.

1) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡಿರುವ 5 ಕಾಮಗಾರಿಗಳನ್ನು ಪರಿಶೀಲನೆ ನಡೆಸಿತು.
ತದನಂತರ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಐದು ಜನ ಫಲಾನುಭವಿಗಳನ್ನು ಭೇಟಿ ಮಾಡಿ ನರೇಗಾ ಸೌಲಭ್ಯಗಳನ್ನು ಪಡೆದಿರುವ ಬಗ್ಗೆ ಪರಿಶೀಲಿಸಿತು.

2) ಮಹಿಳಾ ಒಕ್ಕೂಟದ ಐದು ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಂಘಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಿತು.
ತದನಂತರ ಸ್ವಸಹಾಯ ಸಂಘಗಳ ಲಾಭದಾಯಕ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿತು.

3) PMAY(G) ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡಿರುವ ವಸತಿ ಯೋಜನೆಯ ಐದು ಜನ ಫಲಾನುಭವಿಗಳ ಸ್ಥಳ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಚರ್ಚಿಸಿತು.

4) National pension ಯೋಜನೆಗಳಾದ NOAPS, NWPS, NDPS ನ ಪ್ರತಿ ಯೋಜನೆಯ ಐದು ಜನ ಫಲಾನುಭವಿಗಳೊಂದಿಗೆ ಚರ್ಚಿಸಿತು ಹಾಗೂ ಸಮರ್ಪಕವಾಗಿ ಪಿಂಚಣಿ ಬರುವ ಬಗ್ಗೆ ಮಾಹಿತಿ ಪಡೆಯಿತು.

ಈ ವೇಳೆ ಗ್ರಾ.ಪಂ.ಜನಪ್ರತಿನಿಧಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಸತಿ ಯೋಜನೆಯ ತಾಲ್ಲೂಕು ನೋಡಲ್ ಅಧಿಕಾರಿಗಳು, ಸಂಜೀವಿನಿ ಒಕ್ಕೂಟದ ತಾಲ್ಲೂಕು ಸಂಯೋಜಕರು, ನರೇಗಾ ಯೋಜನೆಯ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಗ್ರಾ.ಪಂ.ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

Mgnregs Karnataka
Panchayat Raj Karnataka

ಕೊರಟಗೆರೆ ತಾಲ್ಲೂಕು ಹೂಲೀಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಸಾರ್ವಜನಿಕ ಸ್ಮ...
15/10/2024

ಕೊರಟಗೆರೆ ತಾಲ್ಲೂಕು ಹೂಲೀಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಸಾರ್ವಜನಿಕ ಸ್ಮಶಾನ



Panchayat Raj Karnataka
Mgnregs Karnataka

09/10/2024
ತುಮಕೂರು ದಸರಾ 7 ನೇ ದಿನ : ತುಮಕೂರು ದಸರಾ ಕಾರ್ಯಕ್ರಮ 7 ನೇ ದಿನಕ್ಕೆ ತಲುಪಿದ್ದು, ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸ್ಥಾಪಿತವಾಗಿರುವ...
09/10/2024

ತುಮಕೂರು ದಸರಾ 7 ನೇ ದಿನ : ತುಮಕೂರು ದಸರಾ ಕಾರ್ಯಕ್ರಮ 7 ನೇ ದಿನಕ್ಕೆ ತಲುಪಿದ್ದು, ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸ್ಥಾಪಿತವಾಗಿರುವ ಶ್ರೀ ಶಿವಕುಮಾರ ಸ್ವಾಮಿಜಿಯವರ ಧಾರ್ಮಿಕ ಮಂಟಪದಲ್ಲಿ ಕಾಳರಾತ್ರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಹಾನಗರ ಪಾಳಿಕೆ ಆಯುಕ್ತರು ಸೇರಿದಂತೆ ಭಕ್ತಾದಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.


DC Tumakuru
Commissioner Tumakuru City Corporation

ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ತುಮಕೂರು ರವರು ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹಾಗೂ ಇತರೆ ಗ್ರಾ...
09/10/2024

ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ತುಮಕೂರು ರವರು ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹಾಗೂ ಇತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾರ್ಯಾತ್ಮಕ ಗೃಹ ನಳ ಸಂಪರ್ಕ ಕಾಮಗಾರಿ ಪರಿಶೀಲನೆ ಕೈಗೊಂಡಿರುವುದು.

Rural Development and Panchayat Raj - Karnataka
Panchayat Raj Karnataka

ಕೊರಟಗೆರೆ ತಾಲ್ಲೂಕಿನ ಅರಸಾಪುರ ಗ್ರಾಮ ಪಂಚಾಯಿತಿಯ ಸಮೃದ್ಧಿ  ಸಂಜೀವಿನಿ GPLF ಒಕ್ಕೂಟದ ವ್ಯಾಪ್ತಿಯ ಭೈರೇನಹಳ್ಳಿ ಗ್ರಾಮದಲ್ಲಿ ಸೋಮವಾರ ʻಸಂಜೀವಿ...
08/10/2024

ಕೊರಟಗೆರೆ ತಾಲ್ಲೂಕಿನ ಅರಸಾಪುರ ಗ್ರಾಮ ಪಂಚಾಯಿತಿಯ ಸಮೃದ್ಧಿ ಸಂಜೀವಿನಿ GPLF ಒಕ್ಕೂಟದ ವ್ಯಾಪ್ತಿಯ ಭೈರೇನಹಳ್ಳಿ ಗ್ರಾಮದಲ್ಲಿ ಸೋಮವಾರ ʻಸಂಜೀವಿನಿ ಮಾಸಿಕ ಸಂತೆʼ ಆಯೋಜಿಸಲಾಯಿತು.

ಮಾಸಿಕ ಸಂತೆಯಲ್ಲಿ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ಉತ್ಪಾದಿಸಿದ ಮಸಾಲ ಪದಾರ್ಥಗಳು, ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳು, ಗೃಹ ಬಳಕೆ ಮತ್ತು ಅಲಂಕಾರಿಕ ವಸ್ತುಗಳು, ಹಪ್ಪಳ, ಉಪ್ಪಿನಕಾಯಿ, ಸಿದ್ದಉಡುಪುಗಳು, ಬಳೆಗಳು, ವಿವಿಧ ಬಗೆಯ ತರಕಾರಿಗಳು, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಸೇರಿದಂತೆ ವಿವಿಧ ಬಗೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು.
ಮಾಸಿಕ ಸಂತೆಯನ್ನು ಅರಸಾಪುರ ಗ್ರಾಮ ಪಂಚಾಯಿತಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಸ್ವ ಸಹಾಯ ಗುಂಪುಗಳ ಸದಸ್ಯರು, ಟಿಎಂಎಂಯು, ಎಂಬಿಕೆ, ಎಲ್.ಸಿ.ಆರ್.ಪಿ., ಕೃಷಿ ಸಖಿ, ಪಶುಸಖಿಯವರು ಹಾಜರಿದ್ದರು.

Panchayat Raj Karnataka

ಪಾವಗಡ ತಾಲ್ಲೂಕಿನ ಗುಜ್ಜನಡು ಗ್ರಾಮ ಪಂಚಾಯತ್ ತಮಟಿ, ಎನ್.ಬೆಟ್ಟ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಇಂಗುಕಂದಗಳಲ್ಲಿ ಇತ್ತೀಚೆಗೆ...
08/10/2024

ಪಾವಗಡ ತಾಲ್ಲೂಕಿನ ಗುಜ್ಜನಡು ಗ್ರಾಮ ಪಂಚಾಯತ್ ತಮಟಿ, ಎನ್.ಬೆಟ್ಟ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಇಂಗುಕಂದಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಸಂಗ್ರಹವಾಗಿರುವುದು.

Panchayat Raj Karnataka
Mgnregs Karnataka

ತುಮಕೂರು ದಸರಾ 5ನೇ ದಿನ : ಬಹಳ ವಿಜೃಂಭಣೆಯಿಂದ ನಡೆಯುತ್ತಿರುವ ತುಮಕೂರು ದಸರಾ ಕಾರ್ಯಕ್ರಮ 5ನೇ ದಿನಕ್ಕೆ ತಲುಪಿದ್ದು, ಸರ್ಕಾರಿ ಜೂನಿಯರ್‌ ಕಾಲೇ...
07/10/2024

ತುಮಕೂರು ದಸರಾ 5ನೇ ದಿನ : ಬಹಳ ವಿಜೃಂಭಣೆಯಿಂದ ನಡೆಯುತ್ತಿರುವ ತುಮಕೂರು ದಸರಾ ಕಾರ್ಯಕ್ರಮ 5ನೇ ದಿನಕ್ಕೆ ತಲುಪಿದ್ದು, ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸ್ಥಾಪಿತವಾಗಿರುವ ಶ್ರೀ ಶಿವಕುಮಾರ ಸ್ವಾಮಿಜಿಯವರ ಧಾರ್ಮಿಕ ಮಂಟಪದಲ್ಲಿ ತಾಯಿ ಸ್ಕಂದ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾನ್ಯ ಗೃಹ ಸಚಿವರು ಪೂಜೆಯಲ್ಲಿ ಭಾಗಿಯಾಗಿ ತಾಯಿ ಸ್ಕಂದ ಮಾತೆಗೆ ನಮಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಹಾನಗರ ಪಾಳಿಕೆ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಮಾಜಿ ಶಾಸಕರಾದ ಗೌರಿ ಶಂಕರ್‌ ರವರು, ಸೇರಿದಂತೆ ಭಕ್ತಾದಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.


DC Tumakuru
SP Tumakuru
Commissioner Tumakuru City Corporation

Address

B. H. Road, KOTHI THOPU
Tumkur
572102

Alerts

Be the first to know and let us send you an email when Zilla Panchayath - Tumkur posts news and promotions. Your email address will not be used for any other purpose, and you can unsubscribe at any time.

Share