PMJKYPPA-Udupi

PMJKYPPA-Udupi Whether you are from any state.

Through this page, only public welfare scheme being run by the Honorable Prime Minister Narendra Modi ji is publicized, you can message or call for information about the scheme.

“ಪ್ರಧಾನಮಂತ್ರಿ ಜನಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನ” ಉಡುಪಿ                                                            ...
17/09/2020

“ಪ್ರಧಾನಮಂತ್ರಿ ಜನಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನ” ಉಡುಪಿ
“PMJKYPPA”
ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಯವರ ಜನ್ಮದಿನದ ಅಂಗವಾಗಿ ಇಂದು ದಿನಾಂಕ 17-09-2020 ಗುರುವಾರ ಬೆಳಿಗ್ಗೆ 11 ಘಂಟೆಗೆ ಉಡುಪಿ PMJKYPPA ಜಿಲ್ಲಾ ಸಮಿತಿಯ ವತಿಯಿಂದ ಉಡುಪಿಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿನ 60 ಮಕ್ಕಳಿಗೆ ಫಲವಸ್ತು ವಿತರಣೆಯನ್ನು ಮಾಡುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಿಜೆಪಿಯ ಉಡುಪಿ ನಗರ ಅಧ್ಯಕ್ಷರಾದ ಶ್ರೀ ಮಹೇಶ್ ಠಾಕೂರ್ ಉಪಸ್ಥಿತರಿದ್ದರು. ಇವರು ನರೇಂದ್ರಮೋದಿಯವರ ದೀರ್ಘಾಯುಷ್ಯಕ್ಕಾಗಿ ನಾವೆಲ್ಲರೂ ಪ್ರಾರ್ಥಿಸೋಣ ಅವರು ನಮರೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇಂದು ಮೋದೀಜಿಯವರು ಕೇವಲ ಭಾರತದ ನಾಯಕರಾಗಿಲ್ಲ ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಅವರ ಜನ್ಮದಿನವನ್ನು ಮಕ್ಕಳೊಂದಿಗೆ ಆಚರಿಸುವುದು ನಮ್ಮ ಸೌಭಾಗ್ಯ ವೆಂದು ಶುಭಾಶಯ ಕೋರಿದರು. ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮನ್ಸುಖ್ ಜಿ ಪಟೇಲ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನ ಕಾರ್ಯದರ್ಷಿ ಶ್ರೀ ನಟೇಶ್ ವೈ ಆರ್, ಅಥಿತಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಾಲನಿಕೇತನದ ಮಕ್ಕಳು ಸಂಸ್ಕೃತ ಸಮೂಹಗಾನದ ಮುಖಾಂತರ ಮೋದಿಜಿಯವರಿಗೆ ಶುಭಾಷಯ ಕೋರಿದರು. ಬಾಲನಿಕೇತನದ ಕಾರ್ಯದರ್ಷಿ ಶ್ರೀ ರಾಮಚಂದ್ರ ಉಪಾಧ್ಯಾಯ ಅವರು ಸಹಕರಿಸಿದರು. ಸಮಿತಿಯ ಮಹಿಳಾವಿಭಾಗ ಅಧ್ಯಕ್ಷೆ ಶ್ರೀಮತಿ ಅಕ್ಷತಾ ಗಿರೀಶ್, ಮಹಿಳಾ ವಿಭಾಗ ಸಂಘಟನಾಕಾರ್ಯದರ್ಷಿ ಶ್ರೀಮತಿ ಲಕ್ಷ್ಮೀ ಪಿ ಎಸ್. ಯುವ ವಿಭಾಗದ ಅಧ್ಯಕ್ಷ ಶ್ರೀ ರಘುನಾಥ ಆಚಾರ್ಯ, ಕಾನೂನು ವಿಭಾಗ ಮುಖ್ಯಸ್ಥ ಶ್ರೀ ದಿನೇಶ್ ನಾಯಕ್, ಐಟಿ ವಿಭಾಗ ಮುಖ್ಯಸ್ಥ ಶ್ರೀ ಚೇತನ್ ಹೆಗ್ಡೆ ಉಡುಪಿ ನಗರಸಭಾಸದಸ್ಯರಾದ ಗಿರೀಶ್ ಆಚಾರ್ಯ, ಹಾಗೂ ಮಂಜುನಾಥ್ ಮಣಿಪಾಲ್ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Address

Udupi
576101

Website

Alerts

Be the first to know and let us send you an email when PMJKYPPA-Udupi posts news and promotions. Your email address will not be used for any other purpose, and you can unsubscribe at any time.

Share