Dharwad Zilla Panchayat

  • Home
  • Dharwad Zilla Panchayat

Dharwad Zilla Panchayat Dharwad Zilla Panchayat Activities

ದಿನಾಂಕ.03.9.2026 ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ VB-G-RAM-G ಯೋಜನೆಯ ಕುರಿತು ಗ್ರಾಮ...
03/09/2026

ದಿನಾಂಕ.03.9.2026 ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ VB-G-RAM-G ಯೋಜನೆಯ ಕುರಿತು ಗ್ರಾಮದಲ್ಲಿ ಕುಳ್ಳಿ ಕಾರ್ಮಿಕರೊಂದಿಗೆ ಸಭೆಯನ್ನು ಏರ್ಪಡಿಸುವುದರೊಂದಿಗೆ ಮಾಹಿತಿ ಮತ್ತು ಅರಿವನ್ನು ಮೂಡಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಕೂಲಿ ಕಾರ್ಮಿಕರು ಹಾಜರಿದ್ದರು.
Karnatakataka


ದಿನಾಂಕ : 03/09/2026 ರಂದು  ಕರ್ನಾಟಕ ಸರ್ಕಾರ  ಚುನಾವಣಾ ಆಯೋಗದ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಸ್ವೀಪ್  (SVEEP)  ಕುರಿತು...
03/09/2026

ದಿನಾಂಕ : 03/09/2026 ರಂದು ಕರ್ನಾಟಕ ಸರ್ಕಾರ ಚುನಾವಣಾ ಆಯೋಗದ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಸ್ವೀಪ್ (SVEEP) ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಮತ್ತು ಸ್ವೀಪ್ಗೆ ಸಂಬಂಧಿಸಿದ ಅಧಿಕಾರಿಗಳೂಂದಿಗೆ ವಿಡಿಯೋ ಸಭೆಯನ್ನು ಜರಗಿಸಿದರು.
Karnatakaataka


ದಿನಾಂಕ : 03/09/2026 ರಂದು ಧಾರವಾಡ ಜಿಲ್ಲೆಯ  ಧಾರವಾಡ ತಾಲೂಕಿನ  ಮನಗುಂಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಳ್ಳಿಗಟ್ಟಿ  ಗ್ರಾಮದ ಕೊಳಗನ ಕೆರೆ ನ...
03/09/2026

ದಿನಾಂಕ : 03/09/2026 ರಂದು ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಳ್ಳಿಗಟ್ಟಿ ಗ್ರಾಮದ ಕೊಳಗನ ಕೆರೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿರುವುದು
Karnatakataka


ದಿನಾಂಕ : 03/09/2026 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಗರಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ VB-G RAM-G ಯೋಜನೆಯಲ್ಲಿ ಭೋಗೇನಗ...
03/09/2026

ದಿನಾಂಕ : 03/09/2026 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಗರಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ VB-G RAM-G ಯೋಜನೆಯಲ್ಲಿ ಭೋಗೇನಗರಕೊಪ್ಪ ಗ್ರಾಮದ ಕೆರೆ ಕರಿ ಪುನಶ್ಚೇತನಗೊಳಿಸುವ ಕಾಮಗಾರಿಯು ಪ್ರಗತಿಯಲ್ಲಿರುವುದು.
Karnatakaa


ದಿನಾಂಕ 02.09.2026 ರಂದು ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ನಿಗದಿ ಗ್ರಾಮ ಪಂಚಾಯಿತಿಗೆ ಶ್ರೀ ಸಂತೋಷ್ ಲಾಡ್ ಮಾನ್ಯ ಕಾರ್ಮಿಕ ಸಚಿವರು ಹಾಗೂ ಧ...
02/09/2026

ದಿನಾಂಕ 02.09.2026 ರಂದು ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ನಿಗದಿ ಗ್ರಾಮ ಪಂಚಾಯಿತಿಗೆ ಶ್ರೀ ಸಂತೋಷ್ ಲಾಡ್ ಮಾನ್ಯ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ರವರು ನಿಗದಿ ಗ್ರಾಮ ಪಂಚಾಯಿತಿಗೆ ಅನರೀಕ್ಷಿತ ಭೇಟಿ ನೀಡಿ VB-G -RAM -G ಯೋಜನೆ ಅಡಿಯಲ್ಲಿ ಪ್ರಗತಿಯಲ್ಲಿರುವ ಡುಮ್ಮಗೇರಿ ಕೆರೆ ಪುನಶ್ಚೇತನಗೊಳಿಸುವ ಕಾಮಗಾರಿಗೆ ಭೇಟಿ ನೀಡಿ ಕೂಲಿ, ಕಾರ್ಮಿಕರೊಂದಿಗೆ ಸಂವಾದ ನಡೆಸಿದರು ಹಾಗೂ ತಾವೇ ಕೆಲಸವನ್ನು ಕೂಡ ಮಾಡಿದರು. ಈ ಸಮಯದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಧಾರವಾಡ, ಮಾನ್ಯ ಸಹಾಯಕ ನಿರ್ದೇಶಕರು ತಾಲೂಕ ಪಂಚಾಯತ ಧಾರವಾಡ ರವರು , ಆಡಳಿತಾಧಿಕಾರಿಗಳು , ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು
RDPR Karnatakataka


ದಿನಾಂಕ:02/09/2026 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗಮೇಶ್ವರ ಕೂಡಲಗಿ  ಗ್ರಾಮದ ಶಿವನಕರೆ ಪುನಃಶ್ಚೇತನಗೊಳಿಸುವ ಕಾಮಗಾರಿ ಪ್ರಗತಿಯಲ...
02/09/2026

ದಿನಾಂಕ:02/09/2026 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗಮೇಶ್ವರ ಕೂಡಲಗಿ ಗ್ರಾಮದ ಶಿವನಕರೆ ಪುನಃಶ್ಚೇತನಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳಕ್ಕೆ ಹಾಗೂ ಕುರುವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ 𝗩𝗕-𝗚 𝗥𝗔𝗠 𝗚 ಯೋಜನಯಡಿಲ್ಲಿ ಕುರುವಿನಕೊಪ್ಪ ಗ್ರಾಮದ ಗಂಗಮ್ಮನ ಕೆರೆ ಪುನಃಶ್ಚೇತನಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳಕ್ಕೆ ಮಾನ್ಯ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ & ಕಲಘಟಗಿ ತಾಲೂಕಿನ VB-G RAM G ಯೋಜನೆಯ ನೂಡಲ್ ಅಧಿಕಾರಿಗಳು ರವರು ಭೇಟಿ ನೀಡಿ ಕಾಮಗಾರಿ ಸ್ಥಳವನ್ನು ಪರಿವೀಕ್ಷಣೆ ಮಾಡಿ ಯೋಜನೆಯ ಕುರಿತು ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿದರು ಹಾಗೇ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರ್ಮಿಕರು ಈ ಯೋಜನೆಯಲ್ಲಿ ಭಾಗವಹಿಸಲು ತಿಳಿಸಿದ್ದರು.ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ನಿರ್ದೇಶಕರು (VB-G RAM G), PDO, TIEC ಹಾಗೂ deo ಹಾಜರಿದ್ದರು.
RDPR Karnatakaaka


ದಿನಾಂಕ 02 09.2026 ರಂದು  ಧಾರವಾಡ ಜಿಲ್ಲೆಯ  ನವಲಗುಂದ ತಾಲೂಕ ಪಂಚಾಯತ್ ವ್ಯಾಪ್ತಿಯ ಕಾಲವಾಡ ಗ್ರಾಮದಲ್ಲಿ VBG RAM G ಯೋಜನೆಯ ಕುರಿತು. ಕೂಲಿ ...
02/09/2026

ದಿನಾಂಕ 02 09.2026 ರಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕ ಪಂಚಾಯತ್ ವ್ಯಾಪ್ತಿಯ ಕಾಲವಾಡ ಗ್ರಾಮದಲ್ಲಿ VBG RAM G ಯೋಜನೆಯ ಕುರಿತು. ಕೂಲಿ ಕಾರ್ಮಿಕರಿಗೆ ಹಾಗೂ ಗ್ರಾಮದ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಯೋಜನೆಯ ಕುರಿತು ಮಾಹಿತಿ ಉಳ್ಳ ಕರ ಪತ್ರಗಳನ್ನು ವಿತರಿಸುವ ಮೂಲಕ ಕೂಲಿ ಕೆಲಸಕ್ಕೆ ಬರುವಂತೆ ಸಾರ್ವಜನಿಕರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರು ತಾಂತ್ರಿಕ ಸಹಾಯಕರು IEC ಸಂಯೋಜಕರು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕೂಲಿ ಕಾರ್ಮಿಕರು ಸಾರ್ವಜನಿಕರು, ಉಪಸ್ಥಿತರಿದ್ದರು
RDPR Karnataka


ದಿನಾಂಕ 02.09.2026 ರಂದು ಶ್ರೀಮತಿ ಆರ್ ಸ್ನೇಹಲ್ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು  ಜಿಲ್ಲಾ ಧಾರವಾಡ ರವರ ಅಧ್ಯಕ್ಷತೆಯ...
02/09/2026

ದಿನಾಂಕ 02.09.2026 ರಂದು ಶ್ರೀಮತಿ ಆರ್ ಸ್ನೇಹಲ್ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಜಿಲ್ಲಾ ಧಾರವಾಡ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಜೂನ್ ಸಭೆ 2026 ತ್ರೈಮಾಸಿಕ ಸಭೆ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಜರುಗಿತು. ಸದರಿ ಸಭೆಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಭುವನೇಶ್ ದೇವಿದಾಸ ಪಾಟೀಲ್ ಜಿಲ್ಲಾ ಪಂಚಾಯತ ಧಾರವಾಡ, ಪ್ರೊಬೆಷನರಿ ಐಎಎಸ್ ಆಫೀಸರ್ ಅನುಪ್ರಿಯ ಶಕ್ಯ, ಮಾನ್ಯ ಶ್ರೀ ಬಿ ಎಸ್ ರಾಥೋಡ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ ದಾರವಾಡ ಶ್ರೀ ಮಯೂರ್ ಕಾಂಬಳೆ, ನಬಾರ್ಡ್ ಬ್ಯಾಂಕ್ DDM, ಶ್ರೀ ಬಸವರಾಜ್ ಗಡ್ದವರ ಲೀಡ್ ಬ್ಯಾಂಕ್ ಮ್ಯಾನೇಜರ್, ಹರ್ಷ AGM ಬ್ಯಾಂಕ್ ಆಫ್ ಬರೋಡ ಶ್ರೀ ಅರುಣ್ ಕುಮಾರ ಆರ್ ಬಿ ಐ AGM ಹಾಜರಿದ್ದರು ಮತ್ತು ಧಾರವಾಡ ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರುಗಳು ಸಂಬಂಧಿಸಿದ ಅಧಿಕಾರಿಗಳು ಸದರಿ ಸಭೆಯಲ್ಲಿ ಭಾಗವಹಿಸಿದ್ದರು.ಈ ಕೆಳಗಿನ ವಿಷೆಯಗಳನ್ನು ಚರ್ಚಿಸಲಾಯಿತ್ತು 27.05.2026 ರ DLRC/DCC ಸಭೆಯ ನಡಾವಳಿಗಳ ದೃಢೀಕರಣ ಜೂನ್ 2025 ಕ್ಕೆ ಕೊನೆಗೊಂಡ ಧಾರವಾಡ ಜಿಲ್ಲಾ-ತ್ರೈಮಾಸಿಕದಲ್ಲಿ ಬ್ಯಾಂಕ್‌ಗಳ ಕಾರ್ಯಾಚರಣೆಯ ಅಂಕಿಅಂಶಗಳ ದತ್ತಾಂಶದ (-ವರ್ಷ ಬೆಳವಣಿಗೆ) ಪರಿಶೀಲನೆ ಜೂನ್ 2026 ಕ್ಕೆ ಹೋಲಿಸಿದರೆ.ಜೂನ್ 2026ಕ್ಕೆ ಕೊನೆಗೊಂಡ ತ್ರೈಮಾಸಿಕ 2026-27ರ ವಾರ್ಷಿಕ ಸಾಲ ಯೋಜನೆ ಅಡಿಯಲ್ಲಿ ಬ್ಯಾಂಕ್‌ಗಳ ಕಾರ್ಯಕ್ಷಮತೆ.ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮತ್ತು RWBCIS - ಖಾರಿಫ್ 2026 ಋತುವಿನ ವಿಮರ್ಶೆ.ವಿವಿಧ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಕಾರ್ಯಕ್ಷಮತೆ ಸ್ವಸಹಾಯ ಗುಂಪುಗಳು (SHGs) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು (JLGs) ಸಂಪರ್ಕ ಪ್ರಗತಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಪ್ರಗತಿ ಪಿಎಂ ವಿಶ್ವಕರ್ಮ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ (PMFME) ಔಪಚಾರಿಕೀಕರಣ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (PM SVANidhi) ಪ್ರಧಾನ ಮಂತ್ರಿ ಸೂರ್ಯ ಘರ್ ಮುಕ್ತ ವಿದ್ಯುತ್ ಯೋಜನೆ (PMSGMBY) ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ 30-06-2026 ರಂತೆ ಪ್ರಗತಿ ಕಿವುಡ ಖಾತೆಗಳ ಸಕ್ರಿಯಗೊಳಿಸುವಿಕೆ ಆರ್ಥಿಕ ಸೇರ್ಪಡೆ NPCI ಮ್ಯಾಪಿಂಗ್ ಧಾರವಾಡದ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ (RUDSETI) ನಡೆಸಲಾಗುವ ತರಬೇತಿಗಳು. ಅಣ್ಣಿಗೇರಿ ತಾಲ್ಲೂಕಿನ ಶಲವಾಡಿ ಗ್ರಾಮದಲ್ಲಿ ಮತ್ತು ನವಲಗುಂದದ ಇಬ್ರಾಹಿಂಪುರ ಗ್ರಾಮದಲ್ಲಿ ಹೊಸ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯನ್ನು ತೆರೆಯಲು ಮನವಿ.27.05.2026 ರಂದು ನಡೆದ DLRC / DCC ಸಭೆಯಲ್ಲಿ ಬ್ಯಾಂಕರ್‌ಗಳು ಮತ್ತು ಇಲಾಖಾ ಅಧಿಕಾರಿಗಳು. ಹಾಜರಾಗಿದ್ದರು ಸದರಿ ವಿಷೆಯದ ಕುರುತ್ತು ಪ್ರಗತಿ ಪರಿಶೀಲನಾ ಸಭೆ ಜರುಗಿತ್ತು.
RDPR Karnataka


ದಿನಾಂಕ 01 09.2026 ರಂದು  ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಮುಗದ ಮತ್ತು  ಅಮ್ಮಿನಭಾವಿ ಗ್ರಾಮ ಪಂಚಾಯಿತಿಗೆ  ಮಾನ್ಯ ಉಪಕಾರ್ಯದರ್ಶಿಗಳು ಜಿಲ...
02/09/2026

ದಿನಾಂಕ 01 09.2026 ರಂದು ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಮುಗದ ಮತ್ತು ಅಮ್ಮಿನಭಾವಿ ಗ್ರಾಮ ಪಂಚಾಯಿತಿಗೆ ಮಾನ್ಯ ಉಪಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಧಾರವಾಡ ಮತ್ತು ಸಹಾಯಕ ನಿರ್ದೇಶಕರು (ಗ್ರಾ ಉ) ತಾಲೂಕ ಪಂಚಾಯತ್ ಧಾರವಾಡ ರವರು ಮುಗದ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಯಾದ. ಗೋಮಾಳ ಜಾಗದಲ್ಲಿ ಫಾರೆಸ್ಟ್ ಟ್ರೆಂಚ್ ವರ್ಕ್ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು. ಹಾಗೂ ಕೂಲಿ ಕಾರ್ಮಿಕರೊಂದಿಗೆ VB- G RAM G ಕಾಮಗಾರಿಯ ಕುರಿತು ಮತ್ತು VB- G RAM G ಯೋಜನೆಯಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳ ಕುರಿತು ಸಮಾಲೋಚನೆ ಮಾಡಿದರು ಅವುಗಳ ಉಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು . ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಾಂತ್ರಿಕ ಸಹಾಯಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
Karnataka


ದಿನಾಂಕ : 02/09/2026 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಗ್ರಾಮ ಪಂಚಾಯತ್ ವ್ಯಾಪ್ತಿಯ VB-G RAM-G ಯೋಜನೆಯಲ್ಲಿ ತಂಬೂರ ಗ್ರಾಮದ ...
02/09/2026

ದಿನಾಂಕ : 02/09/2026 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಗ್ರಾಮ ಪಂಚಾಯತ್ ವ್ಯಾಪ್ತಿಯ VB-G RAM-G ಯೋಜನೆಯಲ್ಲಿ ತಂಬೂರ ಗ್ರಾಮದ ಗೌಳಿದೊಡ್ಡಿ ಕೆರೆ ಪುನಶ್ಚೇತನಗೊಳಿಸುವ ಕಾಮಗಾರಿಯು ಪ್ರಗತಿಯಲ್ಲಿರುವುದು.
RDPR Karnataka


Address


Alerts

Be the first to know and let us send you an email when Dharwad Zilla Panchayat posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dharwad Zilla Panchayat:

Shortcuts

  • Want your organization to be the top-listed Government Service?

Share