05/04/2024
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರಿಂದ ಆಶೀರ್ವಾದ ಪಡೆಯುವ ಸೌಭಾಗ್ಯ ನನ್ನದಾಗಿತ್ತು. ಈ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೀ Rajeev Gowda , ಶ್ರೀಮತಿ ಶ್ರೀ Sowmya Reddy , ಮೈಸೂರು-ಕೊಡಗು ಕ್ಷೇತ್ರ ಪ್ರತಿನಿಧಿಸುವ ಶ್ರೀ M.Lakshman ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶ್ರೀ M S Raksha Ramaiah ಸಚಿವರಾದ ಶ್ರೀ N Chaluvarayaswamy , ಶ್ರೀ Ramalinga Reddy , ಶ್ರೀ Krishna Byre Gowda , ಶಾಸಕರಾದ ಶ್ರೀ Sharath Bachegowda , ಮತ್ತು ಕೆಪಿಸಿಸಿ ವಕ್ತಾರರಾದ ಶ್ರೀ ಎ.ಎನ್.ನಟರಾಜ್ ಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಹರಸಿ, ಆಶೀರ್ವದಿಸಿದ್ದು, ಅವರ ಪ್ರೀತಿಯ ಸುಧೆ ಹರಿಸಿದ್ದು ನನ್ನ ಹೃದಯ ತುಂಬಿದೆ. ಜತೆಗೆ ಈ ಚುನಾವಣೆಯಲ್ಲಿ ನಮ್ಮ ಒಗ್ಗಟ್ಟಿನ ಪ್ರಯತ್ನ ಗಳ ಮೂಲಕ ನಾವು ಅರ್ಥಪೂರ್ಣ ಮತ್ತು ಪರಿವರ್ತನಾಶೀಲ ಬದಲಾವಣೆಗೆ ಮುಂದಾಗಿದ್ದೇವೆ ಎಂದು ನಾನು ದೃಢವಾಗಿ ನಂಬುತ್ತೇನೆ.