Yallappa Y. Shinge

Yallappa Y. Shinge Contact information, map and directions, contact form, opening hours, services, ratings, photos, videos and announcements from Yallappa Y. Shinge, Harugeri.

23/10/2021
ಇವತ್ತು ನಿಪ್ಪಾಣಿಯಲ್ಲಿ ಚಿಕ್ಕೊಡಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಚಿಂಗಳೆ ರವರ ನೇತೃತ್ವದಲ್ಲಿ ನಿಪ್ಪಾಣಿ ಹಾಗೂ ಬೆಡಕಿಹಾಳ ಬ್ಲಾಕ್ ಯ...
15/09/2021

ಇವತ್ತು ನಿಪ್ಪಾಣಿಯಲ್ಲಿ ಚಿಕ್ಕೊಡಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಚಿಂಗಳೆ ರವರ ನೇತೃತ್ವದಲ್ಲಿ ನಿಪ್ಪಾಣಿ ಹಾಗೂ ಬೆಡಕಿಹಾಳ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಯುವ ಕಾಂಗ್ರೆಸ್ ಸಂಘಟನೆಯ ಬಗ್ಗೆ ಚರ್ಚಿಸಿದ ಕ್ಷಣ

ಇವತ್ತು ಸೂಮಾರು 50 ರಿಂದ 60 ವರ್ಷಗಳಿಂದ ವಾಸವಾಗಿದ್ದ ಕುಡಚಿ ಮತಕ್ಷೇತ್ರದ  ಹಾರೂಗೇರಿ ಹಾಗೂ ಸುತ್ತ ಮುತ್ತಲಿನ ಹಳ್ಳಿಯ ಎಸ್ ಸಿ. ಎಸ್ ಟಿ. ಹಾಗೂ...
02/09/2021

ಇವತ್ತು ಸೂಮಾರು 50 ರಿಂದ 60 ವರ್ಷಗಳಿಂದ ವಾಸವಾಗಿದ್ದ ಕುಡಚಿ ಮತಕ್ಷೇತ್ರದ ಹಾರೂಗೇರಿ ಹಾಗೂ ಸುತ್ತ ಮುತ್ತಲಿನ ಹಳ್ಳಿಯ ಎಸ್ ಸಿ. ಎಸ್ ಟಿ. ಹಾಗೂ ಓಬಿಸಿ ಜನರ ಮನೆಗಳ ಹಕ್ಕು ಪತ್ರ ನೀಡಿಲ್ಲ , ಸರಕಾರ 2 ರಿಂದ 3 ಬಾರಿ ಅರ್ಜಿ ಕರೆದು ಹಣವನ್ನು‌ ಕೂಡಾ ತುಂಬಿಸಿಕೊಂಡಿದ್ದಾರೆ ಆದರು ಕೂಡಾ ಅವರಿಗೆ ಹಕ್ಕು‌ಪತ್ರ ನೀಡಿಲ್ಲ ಆದ್ದರಿಂದ ಕಡುಬಡವರಿಗೆ ತುಂಬಾ ತೊಂದರೆ ಆಗುತ್ತಿದೆ ಹಕ್ಕು ಪತ್ರ ಇಲ್ಲ ಅಂದ್ರೆ ಮನೆ ಇಲ್ಲ ಮನೆ ಇಲ್ಲ ಅಂದ್ರೆ ಜೀವನವೇ ಸಾಕಾಗಿ ಹೋಗಿದೆ ಎನ್ನುವ ಪರಿಸ್ಥಿತಿ ಅವರದ್ದಾಗಿದೆ ಆದ್ದರಿಂದ ರಾಯಬಾಗ ತಹಶೀಲ್ಧಾರ ಕಛೇರಿಯ ಮುಂದೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯಲ್ಲಪ್ಪ ವಾಯ್. ಶಿಂಗೆ ರವರ ನೇತೃತ್ವದಲ್ಲಿ ಧರಣಿ ನಡೆಸಿ ಮಾನ್ಯ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮಾನ್ಯ ರಾಯಬಾಗ ತಹಶೀಲ್ಧಾರ ರವರ ಮುಖಾಂತರ ಮನವಿ ಸಲ್ಲಿಸಲಾಯಿತು.

*ಮುಂದುವರೆದ ಚಿಕ್ಕೊಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಿಂದ ಉಚಿತ ವ್ಯಾಕ್ಷಿನ್ ಲಸಿಕಾ ಕಾರ್ಯಕ್ರಮ* ಇವತ್ತು ಕುಡಚಿ ಮತಕ್ಷೇತ್ರದ ಹಾರೂಗೇರಿಯ ...
31/08/2021

*ಮುಂದುವರೆದ ಚಿಕ್ಕೊಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಿಂದ ಉಚಿತ ವ್ಯಾಕ್ಷಿನ್ ಲಸಿಕಾ ಕಾರ್ಯಕ್ರಮ*
ಇವತ್ತು ಕುಡಚಿ ಮತಕ್ಷೇತ್ರದ ಹಾರೂಗೇರಿಯ ವಿವಿದ ವಾರ್ಡ ಜನರಿಗೆ ವ್ಯಾಕ್ಷಿನ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ಈ ಸಂದರ್ಭದಲ್ಲಿ ಬುರಾನ್ ಶೇಖ, ಹನಮಂತ ಗಸ್ತಿ, ಆನಂದ ಗಸ್ತಿ, ಶಿವಾನಂದ ಬಡಿಗೇರ, ಗುಂಡು ಕಾಂಬಳೆ, ಸುಧಾಕರ ಕಾಂಬಳೆ, ಶಂಕರ ಮಾಳಗಿ ಮೋಹನ ಶಿಂಗೆ ಮುಂತಾದ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

ಇವತ್ತು ಕುಡಚಿ‌ ಮತಕ್ಷೇತ್ರದ ಹಾರೂಗೇರಿಯಲ್ಲಿ ಸಂತೆ ಹಾಗೂ   ಬೀದಿ ವ್ಯಾಪಾರಸ್ತರ ಪರವಾಗಿ ಧರಣಿ.     ಇದೇ ಸಂದರ್ಭದಲ್ಲಿ ಚಿಕ್ಕೊಡಿ ಜಿಲ್ಲಾ ಯುವ...
25/08/2021

ಇವತ್ತು ಕುಡಚಿ‌ ಮತಕ್ಷೇತ್ರದ ಹಾರೂಗೇರಿಯಲ್ಲಿ ಸಂತೆ ಹಾಗೂ ಬೀದಿ ವ್ಯಾಪಾರಸ್ತರ ಪರವಾಗಿ ಧರಣಿ.
ಇದೇ ಸಂದರ್ಭದಲ್ಲಿ ಚಿಕ್ಕೊಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಶಿಂಗೆ ರವರು ಮಾತನಾಡಿ, ಕೊರೋನಾ ನೆಪವಡ್ಡಿ ಸಂತೆ ಮತ್ತು ಬೀದಿ ವ್ಯಾಪಾರಸ್ತರಿಗೆ ವ್ಯಾಪಾರ ಮಾಡಲು ಬಿಡದೆ ಪುರ ಸಭೆ ಸಿಬ್ಬಂದಿಯವರು ವ್ಯಾಪಾರಸ್ತರಿಗೆ ಹಿಂಸೆ ನೀಡುತ್ತಿದ್ದಾರೆ, ಬೀದಿ ವ್ಯಾಪಾರಸ್ತರ ಹಾಗೂ ಸಂತೆ ವ್ಯಾಪಾರಸ್ತರ ಗತಿ ಚಿಂತಾ ಜನಕವಾಗಿದೆ, ಮಕ್ಕಳ ಶಾಲೆಯ ಫೀಸ್ ಕಟ್ಟಲು ದುಡ್ಡಿಲ್ಲಾ, ಹೊಟ್ಟೆಗೆ ಊಟವಿಲ್ಲ, ಮನೆ ಬಾಡಿಗೆ ಕಟ್ಟಲಿಕ್ಕೆ ಹಣವಿಲ್ಲ , ಸಾಲದ ಕಂತು ಕಟ್ಟಲಿಕ್ಕೆ ದುಡ್ಡಿಲ್ಲ, ಸರಕಾರದ ಸಚಿವ ಸ್ಥಾನ ಆಕಾಕ್ಷಿಗಳು ಸಾವಿರಾರು ಜನರನ್ನು ಕರೆದುಕೊಂಡು ಬೆಂಗಳೂರಿ ಹೋಗಿ ವಿಧಾನ ಸೌಧದ ಮುಂದೆ ಜೈಕಾರ ಹಾಕುವಾಗ ಕರೋನಾ ಬರುವದಿಲ್ಲ, ಸಚಿವರಾದ ಮೇಲೆ ಸಾವಿರಾರೂ ಬೆಂಬ್ಬಲಿಗರೊಂದಿಗೆ ಜೈಕಾರ ಹಾಕಿ ಕುನಿದು ಕುಡಿದು ಕುಪ್ಪಳಿಸುವ ಸಂಧರ್ಭದಲ್ಲಿ ಇವರಿಗೆ ಕರೋನಾ ಬರೋದಿಲ್ಲ, ಆದರೆ ಬಡ ಬಿದಿ ಹಾಗು ಸಂತೆ ವ್ಯಾಪಾರಸ್ತರು ತಾವು ಇನ್ನೊಬ್ಬರ ಹಂಗಿಲ್ಲದೆ ತಮ್ಮ ಸ್ವಂತ ದುಡಿಮೆಯಲ್ಲಿ ಜೀವನ ಮಾಡುತ್ತೆವೆಂದರೆ ಕರೋನಾ ಬರುತ್ತೆ ಎಂದು ಸರಕಾರದವರು ಬಿಡುತ್ತಿಲ್ಲ ಹಿಂತ ನೀಚ ಸರಕಾರ ನಾ ಎಂದು ನೊಡಿಲ್ಲ, ವ್ಯಾಪಾರಕ್ಕೆ ಪರವಾನಿಗೆ ಕೊಡಿ ಇಲ್ಲವಾದರೆ ಕುಡಿಯಲು ವಿಷ ಕುಡಿ ಎಂದು ಬೀದಿ ಹಾಗೂ ಸಂತೆ ವ್ಯಾಪಾರಸ್ತರ ಕಷ್ಟಗಳ ಬಗ್ಗೆ ಮಾತನಾಡಿ ತಮ್ಮ ಅಕ್ರೋಶವನ್ನು ಹೊರಹಾಕಿದರು

" *ಕುಡಚಿ ಮತಕ್ಷೇತದಲ್ಲಿ ಯುವಕರು ಬಿಜೆಪಿ ತೊರೆದು ಯುವ ಕಾಂಗ್ರೆಸ್ ಸೇರ್ಪಡೆ"* ಪಾಲಬಾವಿ: ರಾಯಬಾಗ ತಾಲೂಕಿನ ಕುಡಚಿ‌ ಮತ ಕ್ಷೇತ್ರದ ಪಾಲಬಾವಿ ಗ್...
22/08/2021

" *ಕುಡಚಿ ಮತಕ್ಷೇತದಲ್ಲಿ ಯುವಕರು ಬಿಜೆಪಿ ತೊರೆದು ಯುವ ಕಾಂಗ್ರೆಸ್ ಸೇರ್ಪಡೆ"*

ಪಾಲಬಾವಿ: ರಾಯಬಾಗ ತಾಲೂಕಿನ ಕುಡಚಿ‌ ಮತ ಕ್ಷೇತ್ರದ ಪಾಲಬಾವಿ ಗ್ರಾಮದಲ್ಲಿ ನೂರಾರೂ ಯುವಕರು ಬಿಜೆಪಿ ತೋರೆದು ಯುವ ಕಾಂಗ್ರೆಸ್ ಸೇರ್ಪಡೆಯಾದರು.
ಚಿಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಶಿಂಗೆ ಅವರ ನೇತೃತ್ವದಲ್ಲಿ ಕುಡಚಿ‌ ಮತಕ್ಷೇತ್ರದ ಪಾಲಬಾವಿ‌ ಗ್ರಾಮದ ಯುವಕರು ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು,
ಇದೆ ಸಂದರ್ಭದಲ್ಲಿ ಯಲ್ಲಪ್ಪ ಶಿಂಗೆ ಅವರು ಮಾತನಾಡಿ ದೇಶದಲ್ಲಿ ಯುವಕರ ಜೀವನ ಹಾಳಾಗಿ ಹೋಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ. ದೇಶದ ಪ್ರಧಾನಿಗಳು ವರ್ಷಕ್ಕೆ ಎರಡು ಕೋಟಿ ಉದ್ಯಗ ಕೊಡುತ್ತೆನೆ ಎಂದು ಹೆಳಿದ್ದರು. ಆದರೆ ಅಧಿಕಾರ ಹಿಡಿದು ಇವತ್ತಿಗೆ ಎಳು ವರ್ಷಚಾಯಿತು. ಅಂದರೆ ಈವತ್ತಿಗೆ ಸರಿಸುಮಾರು ಹದಿನಾಲ್ಕು ಕೋಟಿ ಉದ್ಯೋಗ ಕೊಡಬೇಕಾಗಿತ್ತು, ಆದರೆ ಇವತ್ತು ದೇಶದ ಸುಮಾರು ಹನ್ನೆರಡು ಕೋಟಿ ಯುವಕರು ಕೆಲಸಗಳನ್ನು ಕಳೆದುಕೊಂಡಿದ್ದಾರೆ.

ಬಿ.ಇ, ಎಮ್.ಟೆಕ್ ಅಂತಹ ಉನ್ನತ ಶಿಕ್ಷಣ ಪಡೆದು ಗಾರೆ ಕೆಲಸ, ಪಕೊಡಾ ಮಾರೊ ಪರಿಸಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್, ಡಿಸೇಲ್, ದಿನಸಿ ಹಾಗೂ ಅಡುಗೆ ಏಣ್ಣೆ ಬೆಲೆ ಜಾಸ್ತಿಯಾಗಿದೆ. ಹಿಗಾಗಿ ಯುವಕರಿಗೆ ಬಿಜೆಪಿ ಬಗ್ಗೆ ಬೆಸರವಾಗಿದೆ‌.

ಇದಲ್ಲದೆ ಕುಡಚಿ ಮತಕ್ಷೇತ್ರದ ಶಾಸಕರ ಬಾಷಣಕ್ಕೆ ಮೊರೆಹೋಗಿ ಕ್ಷೇತ್ರದ ಯುವಕರೆಲ್ಲ ಬಿಜೆಪಿ ಗೆ ಮತಹಾಕಿದರು, ಈ ಕ್ಷೇತ್ರದ ಯುವಕರಿಗೆ ಹತ್ತು ಸಾವಿರ ಉದ್ಯೋಗ ಕೊಡುತ್ತೆನೆಂದು ಹೇಳಿ ನಂಬಿಸಿ‌ ಮೊಸಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಯುವಕರು ಬಿಜೆಪಿ ತೊರೆದು ಈವತ್ತು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರೆಲ್ಲರಿಗು ನಾನು ಶುಭಕೊರುತ್ತೆನೆಂದು ಮಾತನಾಡಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ವಕ್ತಾರರಾದ ರಾಹುಲ ಮಾಚನಕನೂರ, ಕುಡಚಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಿರಣ ಪಾಟೀಲ, ಊರಿನ ಹಿರಿಯರಾದ ಗಿರಪ್ಪಾ ಬಳಿಗಾರ, ಪಾರುಕ್ ಕಾಗವಾಡೆ, ಇಲಾಯಿ ಕಾಗಾವಾಡೆ, ಮಾನಿಂಗ ತೆಗೂರ, ಮಹಾನಂತೇಶ ತೇಗೂರ, ಮುಸ್ತಕ‌ ಮುಲ್ಲಾ, ಸರದಾರ ಕಾಗವಾಡೆ, ವಿವೇಕ್ ಬಳಿಗಾರ, ಹೊನ್ನಪ್ಪ ಲಗಳಿ ಹಾಗೂ ಮುಂತಾದ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಇವತ್ತು ದಿವಂಗತ ರಾಜೀವ್ ಗಾಂಧಿ ರವರ 77 ಜನ್ಮ ದಿನವನ್ನು ಚಿಕ್ಕೊಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯಲ್ಲಪ್ಪ ವಾಯ್. ಶಿಂಗೆ ರವರು ಬಡ ಮಕ್...
20/08/2021

ಇವತ್ತು ದಿವಂಗತ ರಾಜೀವ್ ಗಾಂಧಿ ರವರ 77 ಜನ್ಮ ದಿನವನ್ನು ಚಿಕ್ಕೊಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯಲ್ಲಪ್ಪ ವಾಯ್. ಶಿಂಗೆ ರವರು ಬಡ ಮಕ್ಕಳಿಗೆ ನೋಟ್ ಬುಕ್ ಪೆನ್, ಹಣ್ಣು ಮತ್ತು‌ ಹಾಲನ್ನು ವಿತರಿಸುವ ಮುಖಾಂತರ ಆಚರಿಸಲಾಯಿತು

ಇವತ್ತು ಹಿಂದೂ ಮುಸಲ್ಮಾನ ಭಾಂದವ್ಯದ ಸಂಕೇತವಾದ ಮೋಹರಂ ಹಬ್ಬವನ್ನು ಪಾಲಬಾವಿ ಹಾಗೂ ಮೋರಬ ಗ್ರಾಮಗಳಲ್ಲಿ ಸ್ನೇಹಿತರೊಡನೆ ಆಚರಿಸಿದ ಕ್ಷಣ
19/08/2021

ಇವತ್ತು ಹಿಂದೂ ಮುಸಲ್ಮಾನ ಭಾಂದವ್ಯದ ಸಂಕೇತವಾದ ಮೋಹರಂ ಹಬ್ಬವನ್ನು ಪಾಲಬಾವಿ ಹಾಗೂ ಮೋರಬ ಗ್ರಾಮಗಳಲ್ಲಿ ಸ್ನೇಹಿತರೊಡನೆ ಆಚರಿಸಿದ ಕ್ಷಣ

Address

Harugeri

Telephone

+919916002611

Website

Alerts

Be the first to know and let us send you an email when Yallappa Y. Shinge posts news and promotions. Your email address will not be used for any other purpose, and you can unsubscribe at any time.

Contact The Organization

Send a message to Yallappa Y. Shinge:

Share