K99 Kannada News 24x7

K99 Kannada News 24x7 Contact information, map and directions, contact form, opening hours, services, ratings, photos, videos and announcements from K99 Kannada News 24x7, Social service, 528 29th A Main Road Jayanagara 9th Block Jayanagar, Las Vegas, NV.

NH-48ರಲ್ಲಿ ಉತ್ತರಾದಿಮಠದ ಸ್ವಾಮೀಜಿ ಕಾರಿಗೆ ಭೀಕರ ಅಪಘಾತ..! ಡಿವೈಡರ್‌ಗೆ ಡಿಕ್ಕಿ, ನಾಲ್ವರಿಗೆ ಗಾಯಹಾವೇರಿ: ಧಾರವಾಡದಿಂದ ಸವಣೂರಿನ ಸತ್ಯಬೋಧ ...
09/27/2026

NH-48ರಲ್ಲಿ ಉತ್ತರಾದಿಮಠದ ಸ್ವಾಮೀಜಿ ಕಾರಿಗೆ ಭೀಕರ ಅಪಘಾತ..! ಡಿವೈಡರ್‌ಗೆ ಡಿಕ್ಕಿ, ನಾಲ್ವರಿಗೆ ಗಾಯ

ಹಾವೇರಿ: ಧಾರವಾಡದಿಂದ ಸವಣೂರಿನ ಸತ್ಯಬೋಧ ಮಠದತ್ತ ತೆರಳುತ್ತಿದ್ದ ಉತ್ತರಾದಿಮಠದ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತಕ್ಕೀಡಾದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ NH-48ರಲ್ಲಿ ನಡೆದಿದೆ.

ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬೆಂಗಳೂರಿನ ಬಸವನಗುಡಿಯ ಉತ್ತರಾದಿಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಅಪಘಾತದಲ್ಲಿ ಸ್ವಾಮೀಜಿ ಸೇರಿದಂತೆ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲರಿಗೂ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ತಡಸ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬುರ್ಖಾ ಧರಿಸಿ, ಗುರುತು ಮರೆಮಾಚಿ ಪ್ರಿಯಕರನೊಂದಿಗೆ ಮನೆಬಿಟ್ಟು ಓಡಿಹೋಗಲು ಯತ್ನಿಸುತ್ತಿದ್ದ ಯುವತಿಯೊಬ್ಬಳನ್ನು ಸಾರ್ವಜನಿಕರೊಬ್ಬರ ಸಮಯಪ್ರಜ್ಞೆ...
09/27/2026

ಬುರ್ಖಾ ಧರಿಸಿ, ಗುರುತು ಮರೆಮಾಚಿ ಪ್ರಿಯಕರನೊಂದಿಗೆ ಮನೆಬಿಟ್ಟು ಓಡಿಹೋಗಲು ಯತ್ನಿಸುತ್ತಿದ್ದ ಯುವತಿಯೊಬ್ಬಳನ್ನು ಸಾರ್ವಜನಿಕರೊಬ್ಬರ ಸಮಯಪ್ರಜ್ಞೆ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಮೊಬೈಲ್‌ನ ವಾಲ್‌ಪೇಪರ್‌ನಲ್ಲಿದ್ದ ಗಣೇಶನ ಚಿತ್ರವೇ ಆಕೆಯ ನಿಜವಾದ ಗುರುತನ್ನು ಬಯಲು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

​ಉದ್ಯಾನವನವೊಂದರಲ್ಲಿ ಬುರ್ಖಾ ಧರಿಸಿದ್ದ ಯುವತಿ ಒಬ್ಬಳೇ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಆಕೆಯ ವರ್ತನೆಯಲ್ಲಿ ಅನುಮಾನ ಕಂಡ ದಾರಿಹೋಕರೊಬ್ಬರು ಆಕೆಯ ಬಳಿ ಹೋಗಿ ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಗಾಬರಿಗೊಂಡ ಆಕೆ ಅಲ್ಲಿಂದ ಹೊರಡಲು ಯತ್ನಿಸಿದಾಗ, ಆ ವ್ಯಕ್ತಿ ತಡೆದು ಹೆಸರನ್ನು ವಿಚಾರಿಸಿದ್ದಾರೆ. ಆಕೆ ತನ್ನ ಹೆಸರು 'ಶಾಜಿಯಾ' ಎಂದು ಹೇಳಿದ್ದಾಳೆ.

​ಆಕೆಯ ನಡೆವಳಿಕೆಯಿಂದ ಸಂಶಯಗೊಂಡ ವ್ಯಕ್ತಿ, ನಿಜವಾದ ಹೆಸರನ್ನು ತಿಳಿಸುವಂತೆ ಹಾಗೂ ಗುರುತು ಮರೆಮಾಚುತ್ತಿರುವ ಕಾರಣವನ್ನು ಪ್ರಶ್ನಿಸಿದ್ದಾರೆ. ಒತ್ತಡಕ್ಕೆ ಮಣಿದ ಯುವತಿ ಕೊನೆಗೆ ಸತ್ಯವನ್ನು ಬಾಯಿಬಿಟ್ಟಿದ್ದಾಳೆ.

​ವಿಚಾರಣೆ ವೇಳೆ ಆಕೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ತೆಗೆದುಕೊಂಡು ಪ್ರಿಯಕರನೊಂದಿಗೆ ಬಂದಿರುವುದು ತಿಳಿದುಬಂದಿದೆ. ಪ್ರಿಯಕರ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿಟ್ಟು ಬರುವುದಾಗಿ ಹೇಳಿ ಹೋಗಿದ್ದು, ಅಲ್ಲಿಯೇ ಕಾಯುವಂತೆ ತಿಳಿಸಿದ್ದ. ವಿಷಯ ತಿಳಿದ ಸಾರ್ವಜನಿಕ, "ನಿನ್ನ ಪ್ರಿಯಕರ ಹಣ ಮತ್ತು ಒಡವೆಯೊಂದಿಗೆ ಪರಾರಿಯಾಗಿರಬಹುದು" ಎಂದು ಎಚ್ಚರಿಸಿದಾಗ ಯುವತಿ ಕಣ್ಣೀರಿಡಲು ಶುರುಮಾಡಿದ್ದಾಳೆ. "ಈಗ ನಾನಂತೂ ಮನೆಗೆ ಮರಳಲು ಸಾಧ್ಯವೇ ಇಲ್ಲ" ಎಂದು ಆಕೆ ಆತಂಕ ವ್ಯಕ್ತಪಡಿಸಿದ್ದಾಳೆ.

​ಘಟನಾ ಸ್ಥಳಕ್ಕೆ ಯುವತಿಯ ಪೋಷಕರು ಧಾವಿಸಿ ಬಂದು, ಮಗಳನ್ನು ಯಾವುದೇ ಅನಾಹುತಕ್ಕೆ ಸಿಲುಕದಂತೆ ರಕ್ಷಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಬುರ್ಖಾ ಧರಿಸಿದ್ದರೂ ಆಕೆಯ ಮೇಲೆ ಅನುಮಾನ ಬರಲು ಕಾರಣವೇನು ಎಂದು ಆತನನ್ನು ವಿಚಾರಿಸಿದರು.

​ಇದಕ್ಕೆ ಉತ್ತರಿಸಿದ ಆ ವ್ಯಕ್ತಿ, "ಆಕೆ ಬುರ್ಖಾ ಧರಿಸಿದ್ದರೂ, ಆಕೆಯ ಕೈಯಲ್ಲಿದ್ದ ಮೊಬೈಲ್‌ನ ವಾಲ್‌ಪೇಪರ್‌ನಲ್ಲಿ ಶ್ರೀ ಗಣೇಶನ ಚಿತ್ರವಿತ್ತು. ಇದು ನನ್ನಲ್ಲಿ ಬಲವಾದ ಸಂಶಯ ಮೂಡಿಸಿತು. ಗಣೇಶನ ಫೋಟೋ ಇಟ್ಟುಕೊಂಡು 'ಶಾಜಿಯಾ' ಎಂದು ಹೇಳಿದ್ದು ಅನುಮಾನವನ್ನು ದ್ವಿಗುಣಗೊಳಿಸಿತು. ತೀವ್ರವಾಗಿ ವಿಚಾರಿಸಿದಾಗ ಆಕೆ ಸತ್ಯ ಒಪ್ಪಿಕೊಂಡಳು," ಎಂದು ವಿವರಿಸಿದ್ದಾರೆ.

​ತಮ್ಮ ಮಗಳು ಸುರಕ್ಷಿತವಾಗಿ ಸಿಕ್ಕಿದ್ದಕ್ಕೆ ನಿರಾಳರಾದ ಪೋಷಕರು, ಬುದ್ಧಿವಾದ ಹೇಳಿ ಆಕೆಯನ್ನು ತಮ್ಮೊಂದಿಗೆ ಮನೆಗೆ ಕರೆದೊಯ್ದಿದ್ದಾರೆ. ಸಾರ್ವಜನಿಕ ವ್ಯಕ್ತಿಯ ಸಮಯಪ್ರಜ್ಞೆ ಮತ್ತು ಸೂಕ್ಷ್ಮ ವೀಕ್ಷಣೆಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.

09/26/2026

ಕೃತಕ ಪನ್ನೀರ್ ಬ್ಯಾನ್ ಮಾಡಿದ ಸರ್ಕಾರ ಆಕ್ಟಿವ್ ಆದ ಯು.ಟಿ ಖಾದರ್ ವ್ಯಾಪಕವಾಗಿ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆನೇಕಲ್ ಪಟ್ಟಣದಾದ್ಯಂತ ಒಂದು ರೈಡ್ ಮಾಡಬೇಕು ಸಂಬಂಧ ಪಟ್ಟ ಪುರಸಭೆ ಅಧಿಕಾರಿಗಳು

09/26/2026

ಅಪಘಾತದಲ್ಲಿ 2ಕಾಲುಗಳನ್ನು ಕಳೆದುಕೊಂಡ ವ್ಯೆಕ್ತಿ 2 ಕೃತಕ ಕಾಲನ್ನು ಅಳವಡಿಸಿದ ನಂತರ ಎಲ್ಲರಂತೆ ಸಹಜವಾಗಿ ನೆರವಾಗುವಂತೆ ನಡೆದಾಡಿದ ರೋಚಕ ಸಮಯ!

09/26/2026

CCTV ಯ ದೃಶ್ಯಸ್ಟಾಟ್ ಮಾಡಿದ ಕೆಲವೆ ಕ್ಷಣಗಳಲ್ಲಿ ಆಟೊ ಪಲ್ಟಿ folowers

09/26/2026

ಇಲ್ಲಿ ಒಬ್ಬರು ಹಿರಿಯ ನಾಗರಿಕರ ಅನುಭವದ ಮಾತುಗಳು ಎಷ್ಟೋ ಸಮಯ ಮತ್ತು ಪ್ರಾಣಗಳನ್ನು ಉಳಿಸುತ್ತದೆ

ಇಲ್ಲಿ ಒಬ್ಬರು ಹಿರಿಯ ನಾಗರಿಕರ ಅನುಭವದ ಮಾತುಗಳು ಎಷ್ಟೋ ಸಮಯ ಮತ್ತು ಪ್ರಾಣಗಳನ್ನು ಉಳಿಸುತ್ತದೆ.

09/26/2026

ಮುತ್ತಗಟ್ಟಿ-ಆನೇಕಲ್ ರಸ್ತೆ ಸಂಪೂರ್ಣವಾಗಿ ಹದಗೇಟ್ಟಿದ್ದು ಇ ರಸ್ತೆಯಲ್ಲಿ ಬರುವ ವಾಹನಗಳು ಪಲ್ಟಿ ಹೊಡೆದು ರಸ್ತೆ ಬಂದ್ ಆಗ್ತೀರುತ್ತೆ ಅಂತ ಗ್ರಾಮಸ್ಥರ ಅಕ್ರೋಶ folowers

09/26/2026

ಹಲಸಿನ ಹಣ್ಣಿನ ಬೀಜದಿಂದ ಗೋಡಂಬಿ ಜನರಿಗೆ ಮಕ್ಮಲ್ ಟೋಪಿ folowers

09/26/2026

ಕಾಮಗಾರಿ ಮಾಡಿದ ಬಾಕಿ ಹಣ ನೀಡದ PWD ಕಛೇರಿಯ ವಸ್ತುಗಳ ಜಪ್ತಿಗೆ ..ಕೋರ್ಟ್ ಆದೇಶ

ಯಾದಗಿರಿಯಲ್ಲಿ PWD ಇಲಾಖೆಗೆ ಕೋರ್ಟ್‌ನಿಂದ ಬಿಗ್ ಶಾಕ್ ಎದುರಾಗಿದೆ. ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ PWD ಕಚೇರಿಯಲ್ಲಿನ ಪೀಠೋಪಕರಣ, ಕಂಪ್ಯೂಟರ್, AC, ಕುರ್ಚಿ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಎಸ್.ಎಸ್. ಪೊಲೀಸ್ ಪಾಟೀಲ ಕಂಪನಿಯು ಯಾದಗಿರಿ ನಗರದ ಅಂಬೇಡ್ಕರ್ ವೃತ್ತದಿಂದ ಹತ್ತಿಕುಣಿ ಕ್ರಾಸ್‌ವರೆಗೆ ₹5.55 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಿತ್ತು. ಬಾಕಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಕಂಪನಿ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಕರಣದಲ್ಲಿ ಬಡ್ಡಿ ಸಮೇತ ₹1.95 ಕೋಟಿ ಪಾವತಿಸುವಂತೆ ಕೋರ್ಟ್ ಸೂಚಿಸಿತ್ತು.
ಆದರೂ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಇದೀಗ PWD ಕಚೇರಿಯ ವಸ್ತುಗಳ ಜಪ್ತಿ ನಡೆದಿದೆ. ವಸ್ತುಗಳ ಜಪ್ತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಚೇರಿ ಕೆಲಸ ನಿರ್ವಹಿಸಲು ಸಂಕಷ್ಟ ಎದುರಾಗಿದೆ. ಜಪ್ತಿ ಕುರಿತು ವಕೀಲ ಬಸವರೆಡ್ಡಿ ಕಂದಕೂರು ಮಾಹಿತಿ ನೀಡಿದ್ದಾರೆ

09/26/2026

ಶಾಲಾ ಕಟ್ಟಡದ NOC ನೀಡಲು 1ಲಕ್ಷ ರೂಪಾಯಿಗಳ ಲಂಚ ಪಡೆಯುತ್ತೀದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಲೋಕಯುಕ್ತ ಬಲೆಗೆ.

1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

​ಶಿವಮೊಗ್ಗ : ಶಾಲಾ ಕಟ್ಟಡದ ಎನ್‌ಒಸಿ ನೀಡಲು 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
​ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್ ಲೋಕಾಯುಕ್ತ ದಾಳಿಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.
​ಶಿಕಾರಿಪುರ ಟೌನ್‌ನಲ್ಲಿರುವ ಶಾಲೆಯೊಂದರ ಹೊಸ ಕಟ್ಟಡಕ್ಕೆ ಅಗ್ನಿಶಾಮಕ ದಳದಿಂದ ಪರವಾನಗಿ ಪಡೆಯಬೇಕಾಗಿತ್ತು. ಈ NOC ನೀಡಲು ಅಧಿಕಾರಿ ಅಶೋಕ್ ಕುಮಾರ್ ಅವರು ದೂರುದಾರರಾದ ಅನೂಪ್ ಎಂಬುವವರಿಂದ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಅನೂಪ್ ಅವರು ಈ ಕುರಿತು ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
​ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪಕ್ಕಾ ಪ್ಲಾನ್ ನಡೆಸಿ ಟ್ರ್ಯಾಪ್ ಕಾರ್ಯಾಚರಣೆ ರೂಪಿಸಿದ್ದರು. ಅದರಂತೆ, ಇಂದು ದೂರುದಾರ ಅನೂಪ್ ಅವರಿಂದ ಅಧಿಕಾರಿ ಅಶೋಕ್ ಕುಮಾರ್ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಸಿಬ್ಬಂದಿ, ಅಧಿಕಾರಿಯನ್ನು ಹಣಸಮೇತ ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ.
​ಈ ಯಶಸ್ವಿ ದಾಳಿಯು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ಬಿ.ಪಿ. ಅವರ ನೇತೃತ್ವದಲ್ಲಿ ನಡೆದಿದ್ದು, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ವೀರಬಸಪ್ಪ, ರುದ್ರೇಶ್ ಹಾಗೂ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
​ಪ್ರಸ್ತುತ ಲಂಚಬಾಕ ಅಧಿಕಾರಿ ಅಶೋಕ್ ಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ... folowers

Address

528 29th A Main Road Jayanagara 9th Block Jayanagar
Las Vegas, NV
560041

Telephone

+17022526669

Website

Alerts

Be the first to know and let us send you an email when K99 Kannada News 24x7 posts news and promotions. Your email address will not be used for any other purpose, and you can unsubscribe at any time.

Shortcuts

Share

Category