Mgnregs - Dakshina Kannada

  • Home
  • Mgnregs - Dakshina Kannada

Mgnregs - Dakshina Kannada Contact information, map and directions, contact form, opening hours, services, ratings, photos, videos and announcements from Mgnregs - Dakshina Kannada, Government Organization, .

ಜಿಲ್ಲೆ: ದಕ್ಷಿಣ ಕನ್ನಡತಾಲೂಕು : ಪುತ್ತೂರುಗ್ರಾಮ ಪಂಚಾಯತ್: ಕೋಡಿಂಬಾಡಿಕಾಮಗಾರಿ ಹೆಸರು: AJC ಕೋಡಿಂಬಾಡಿ ಮಠಂತಬೆಟ್ಟು ಯೋಗೀಶ್ ಎಸ್. ಸಾಮಾನಿ ...
03/07/2024

ಜಿಲ್ಲೆ: ದಕ್ಷಿಣ ಕನ್ನಡ
ತಾಲೂಕು : ಪುತ್ತೂರು
ಗ್ರಾಮ ಪಂಚಾಯತ್: ಕೋಡಿಂಬಾಡಿ
ಕಾಮಗಾರಿ ಹೆಸರು: AJC ಕೋಡಿಂಬಾಡಿ ಮಠಂತಬೆಟ್ಟು ಯೋಗೀಶ್ ಎಸ್. ಸಾಮಾನಿ ಬಿನ್ ಸದಾಶಿವ ಸಾಮಾನಿ ಇವರಲ್ಲಿ ಅಡಿಕೆ ಕೃಷಿ
ಕಾಮಗಾರಿ ಸಂಕೇತ: 1511004008/IF/GIS/942034
ಸೃಜಿಸಲಾದ ಮಾನವ ದಿನ: 298
ಒಟ್ಟು ಪಾವತಿ: 94168
ಆರ್ಥಿಕ ವರ್ಷ: 2023-2024
ಕೋಡಿಂಬಾಡಿ ಮಠಂತಬೆಟ್ಟು ಯೋಗೀಶ್ ಎಸ್. ಸಾಮಾನಿ ಅವರು ತಮ್ಮ ಜಮೀನಿನಲ್ಲಿ #ನರೇಗಾ ಯೋಜನೆ ಮೂಲಕ #ಅಡಿಕೆ ಗಿಡ ನಾಟಿ ಮಾಡಿದ್ದು, ಸುಮಾರು 1.7 ಎಕ್ರೆ ಜಮೀನಿನಲ್ಲಿ 600 ಅಡಿಕೆ ಗಿಡ ನಾಟಿ ಮಾಡಿದ್ದಾರೆ.


Puttur Bharath Raj Taluk Panchayath Kadaba Puttur Taluk Panchayath

 #ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರುಂಬೋಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಕ್ಕಾಡಿಗೋಳಿ ಇಲ್ಲಿ ಸುವ್ಯ...
14/05/2024

#ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರುಂಬೋಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಕ್ಕಾಡಿಗೋಳಿ ಇಲ್ಲಿ ಸುವ್ಯವಸ್ಥಿತವಾದ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಶಾಲೆಯಲ್ಲಿ ಒಟ್ಟು132 ಮಕ್ಕಳಿದ್ದು, ಹಳೆಯ #ಶೌಚಾಲಯ ದುರಸ್ತಿಯಲ್ಲಿದ್ದ ಕಾರಣ ಹೊಸ ಶೌಚಾಲಯದ ಅವಶ್ಯಕತೆ ಇದ್ದು, ಶಾಲಾ ಶಿಕ್ಷಕರ ಆಹವಾಲನ್ನು ಸ್ವೀಕರಿಸಿ #ನರೇಗಾ ಯೋಜನೆಯಡಿ ಮತ್ತು ಶಿಕ್ಷಣ ಇಲಾಖೆ ಒಗ್ಗೂಡುವಿಕೆಯಲ್ಲಿ ಶೌಚಾಲಯವನ್ನು ರಚಿಸಲಾಗಿದೆ.ಗ್ರಾಮ ಪಂಚಾಯತ್ ನಿಧಿಯಿಂದ ಶೌಚಾಲಯಕ್ಕೆ ವಿದ್ಯುತ್ತೀಕರಣ ಮಾಡಲು ಅನುದಾನ ನೀಡಲಾಗಿದೆ.



Taluku Panchayth Belthangady Vinisha Radhakrishna Ujire Nithin Rai Kallugundi

02/05/2024

From Neglect to Revival: The Inspiring Transformation of Muttalageri Tank

Witness the transformation of Muttalageri tank in Bagalkot District, Karnataka, from a disrepair to a vibrant community hub! Thanks to Mission Amrit Sarovar and the dedication of the village headman, panchayat members, and motivated youth, this once-dilapidated tank is now a symbol of community pride and environmental stewardship.

Desilting efforts and a halt on garbage dumping have restored the tank's beauty, while tree plantations and stone pitching have enhanced its surroundings. Groundwater levels have risen, benefiting 87 tube wells and reducing the need for migration among villagers.

Today, the tank hosts a variety of events, from Rangoli competitions to National Flag hosting ceremonies, showcasing the community's unity and spirit.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವೂರು ಗಿರಿಜನ ಕಾಲೋನಿಯಲ್ಲಿ  #ನರೇಗಾ &   ಒಗ್ಗೂಡುವಿಕೆಯಲ್ಲಿ  #ಅಂಗನವಾಡಿ ಕಟ್ಟಡ...
14/03/2024

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವೂರು ಗಿರಿಜನ ಕಾಲೋನಿಯಲ್ಲಿ #ನರೇಗಾ & ಒಗ್ಗೂಡುವಿಕೆಯಲ್ಲಿ #ಅಂಗನವಾಡಿ ಕಟ್ಟಡ ರಚನೆ.
ಸುಮಾರು 20 ವರ್ಷದ ಹಿಂದಿನ ಕಟ್ಟಡದ ಚಾವಣಿ,ಗೋಡೆಗಳು ದುರಸ್ತಿಗೆ ಇದ್ದ ಕಾರಣ, ದುರಸ್ತಿಗೆ ಬದಲು ಸುಸಜ್ಜಿತವಾದ ಹೊಸ ಕಟ್ಟಡ ಮಾಡಿದಾಗ ಮಕ್ಕಳಿಗೂ ಅನುಕೂಲವಾಗುವುದು ಎಂದು ಗ್ರಾಮಸ್ಥರ ಮತ್ತು ಆಡಳಿತ ಮಂಡಳಿಯ ಮುತುವರ್ಜಿಯಿಂದ 22 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮನೆಗಳುಳ್ಳ #ಗಿರಿಜನ ಕಾಲೋನಿಯಲ್ಲಿ ನೂತನವಾಗಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ.
ನರೇಗಾ ಅಂದಾಜು ಮೊತ್ತ: 5 ಲಕ್ಷ
ಎಮ್. ಆರ್. ಪಿ. ಎಲ್ ಅನುದಾನ:- 15 ಲಕ್ಷ



Dakshina Kannada Zilla Panchayat Taluku Panchayth Belthangady MRPL

ಕಡಬ ತಾ: ಕೊಂಬಾರು ಗ್ರಾ.ಪಂ.ಕಟ್ಟಡದ ಬಳಿ   (ಸಂಜೀವಿನಿ) ಶೆಡ್‌ ಅನ್ನು  #ನರೇಗಾ ದಡಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ನಡೆಯಿತು. ಮು...
11/03/2024

ಕಡಬ ತಾ: ಕೊಂಬಾರು ಗ್ರಾ.ಪಂ.ಕಟ್ಟಡದ ಬಳಿ (ಸಂಜೀವಿನಿ) ಶೆಡ್‌ ಅನ್ನು #ನರೇಗಾ ದಡಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ನಡೆಯಿತು. ಮುಂದಿನ ದಿನಗಳಲ್ಲಿಈ ಸಂಜೀವಿನಿ ಶೆಡ್‌ನಲ್ಲಿ ಶ್ರೀ ದುರ್ಗಾಪರಮೇಶ್ವರಿ ಸಂಜೀವಿನಿ ಒಕ್ಕೂಟದ ಮಹಿಳೆಯರು ವಿವಿಧ ಚಟುವಟಿಕೆಗಳನ್ನು ನಡೆಸಲಿದ್ದಾರೆ.


Dakshina Kannada Zilla Panchayat Taluk Panchayath Kadaba

ತಾಲೂಕು: ಬಂಟ್ವಾಳಗ್ರಾಪಂ: ಮಂಚಿಕಾಮಗಾರಿ ಹೆಸರು: AJC ಮಂಚಿ ಗ್ರಾಮದ ಉದ್ದೋಟು ಗೋಪಾಲ ಸುವರ್ಣ ಬಿನ್ ಯಮುನ ಇವರ ಬಾವಿ ರಚನೆಅನುಷ್ಠಾನ ವರ್ಷ: 202...
05/03/2024

ತಾಲೂಕು: ಬಂಟ್ವಾಳ
ಗ್ರಾಪಂ: ಮಂಚಿ
ಕಾಮಗಾರಿ ಹೆಸರು: AJC ಮಂಚಿ ಗ್ರಾಮದ ಉದ್ದೋಟು ಗೋಪಾಲ ಸುವರ್ಣ ಬಿನ್ ಯಮುನ ಇವರ ಬಾವಿ ರಚನೆ
ಅನುಷ್ಠಾನ ವರ್ಷ: 2023-24
ಅಂದಾಜು ಮೊತ್ತ: 136000/-
ಕೂಲಿ: 81844/-
ಸಾಮಾಗ್ರಿ: 23961/-
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಉದ್ದೋಟು ಗೋಪಾಲ ಸುವರ್ಣ ರಿಕ್ಷಾ ಚಾಲಕರಾಗಿದ್ದು, ನೀರಿನ ಸಮಸ್ಯೆಯಿಂದ ಬಾವಿ ನಿರ್ಮಾಣಕ್ಕೆ ನಿರ್ಧರಿಸಿದ್ದು, ಗ್ರಾಪಂಗೆ ಅರ್ಜಿ ಸಲ್ಲಿಸಿ #ನರೇಗಾ ದಡಿ ಬಾವಿ ನಿರ್ಮಿಸಿಕೊಂಡಿರುತ್ತಾರೆ. ಅಲ್ಲದೇ ಮನೆ ಮುಂಭಾಗದಲ್ಲಿ 50 ಅಡಿಕೆ ಸಸಿ ನೆಟ್ಟಿದ್ದು, ಇದಕ್ಕೂ ಬಾವಿ ನೀರೇ ಆಧಾರವಾಗಿದೆ.



Dakshina Kannada Zilla Panchayat TP Bantwal

 #ಸುಳ್ಯ ತಾಲೂಕಿನ ಐರ್ವನಾಡು ಗ್ರಾಮದ ದೇರಾಜೆ ಎಂಬಲ್ಲಿ ಮಹಾತ್ಮಗಾಂಧಿ  #ನರೇಗಾ ಯೋಜನೆಯಡಿ ಅಂದಾಜು ವೆಚ್ಚ5 ಲಕ್ಷ ರೂ ಹಾಗೂ SC/ST ಅನುದಾನದಡಿ 1...
01/03/2024

#ಸುಳ್ಯ ತಾಲೂಕಿನ ಐರ್ವನಾಡು ಗ್ರಾಮದ ದೇರಾಜೆ ಎಂಬಲ್ಲಿ ಮಹಾತ್ಮಗಾಂಧಿ #ನರೇಗಾ ಯೋಜನೆಯಡಿ ಅಂದಾಜು ವೆಚ್ಚ5 ಲಕ್ಷ ರೂ ಹಾಗೂ SC/ST ಅನುದಾನದಡಿ 11.00 ಲಕ್ಷ ರೂ ಗಳನ್ನು ಬಳಸಿಕೊಂಡು ವ್ಯವಸ್ಥಿತ ಅಂಗನವಾಡಿ ಕೇಂದ್ರವನ್ನು ನಿರ್ಮಿಸಲಾಗಿದೆ. ಸುಮಾರಷ್ಟು ವರ್ಷ ಹಳೆಯದಾದ ಅಂಗನವಾಡಿ ಕಟ್ಟಡ ಬೀಳುವ ಸ್ಥಿತಿಯಲ್ಲಿತ್ತು. ಹಾಗೂ ದೇರಾಜೆಯ ಅಸುಪಾಸಿನ ಗರ್ಭಿಣಿ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಈ #ಅಂಗನವಾಡಿ ಕೇಂದ್ರ ಅನುಕೂಲವಾಗಲಿದ್ದು, ಇದೀಗ 19 ಮಕ್ಕಳು ಈ ಅಂಗನವಾಡಿಯಲ್ಲಿದ್ದಾರೆ.



ತಾಲೂಕು ಪಂಚಾಯತ್ ಸುಳ್ಯ Dakshina Kannada Zilla Panchayat

ತಾಲೂಕು: ಬಂಟ್ವಾಳಗ್ರಾಪಂ: ಬಾಳ್ತಿಲಕಾಮಗಾರಿ ಹೆಸರು: ಬಾಳ್ತಿಲ ಗ್ರಾಮದ ಕಡಮಡ್ಕ ಮೋನಪ್ಪ ಮೂಲ್ಯ ಇವರ ಮನೆ ಬಳಿಯಿಂದ ಲಕ್ಷ್ಮೀ ಆಚಾರ್ಯ ಮನೆವರೆಗೆ ...
28/02/2024

ತಾಲೂಕು: ಬಂಟ್ವಾಳ
ಗ್ರಾಪಂ: ಬಾಳ್ತಿಲ
ಕಾಮಗಾರಿ ಹೆಸರು: ಬಾಳ್ತಿಲ ಗ್ರಾಮದ ಕಡಮಡ್ಕ ಮೋನಪ್ಪ ಮೂಲ್ಯ ಇವರ ಮನೆ ಬಳಿಯಿಂದ ಲಕ್ಷ್ಮೀ ಆಚಾರ್ಯ ಮನೆವರೆಗೆ ರಸ್ತೆ ಕಾಂಕ್ರೀಟಿಕರಣ
ಕಾಮಗಾರಿ ಸಂಕೇತ: 1511002006/RC/GIS/526729
ಅನುಷ್ಠಾನ ವರ್ಷ: 2023-24
ಅಂದಾಜು ಮೊತ್ತ: 4.89141.00/-

ಬಂಟ್ವಾಳ ತಾ: ಬಾಳ್ತಿಲ ಗ್ರಾ.ಪಂ.ನ ಕಡಮಡ್ಕದಿಂದ ಬರಿಮಾರು ಗ್ರಾಮ ಪಂಚಾಯತ್ ಸಂಪರ್ಕಿಸುವ 150 ಮೀಟರ್ ಉದ್ದದ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು. ಬರಿಮಾರು ಗ್ರಾಮ ಆರಂಭವಾಗುವ ರಸ್ತೆ ಡಾಂಬರೀಕರಣಗೊಂಡಿದ್ದು, ಆ ರಸ್ತೆಗೆ ಸಂಪರ್ಕವಿದ್ದ ರಸ್ತೆ ಅವ್ಯವಸ್ಥೆಯಿಂದ ಜನರು ಪರದಾಡುವಂತಾಗಿತ್ತು. ಅಂಗವಿಕಲರು, ವಯಸ್ಕರು ಕಷ್ಟಪಟ್ಟು ಸಂಚರಿಸುವ ದುಸ್ಥಿತಿ ಇತ್ತು. ಮಳೆಗಾಲದಲ್ಲಂತೂ ಸಂಚಾರವೇ ಸಂಚಕಾರ ಎಂಬಂತಿತ್ತು. ಈ ವೇಳೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ #ನರೇಗಾ ಯೋಜನೆಯಡಿ 150 ಮೀಟರ್ ಉದ್ದದ ರಸ್ತೆ ಕಾಂಕ್ರೀಟೀಕರಣಕ್ಕೆ ತೀರ್ಮಾನಿಸಿತು. ಇದರಂತೆ 4.9 ಲಕ್ಷ ರೂ. ಅಂದಾಜು ವೆಚ್ಚದಡಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಗೊಂಡಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.



TP Bantwal Dakshina Kannada Zilla Panchayat

ಸುಳ್ಯ ತಾಲೂಕು ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಸಂಜೀವಿನಿ (NRLM)ಕಟ್ಟಡ ರಚನೆ....ಅಂದಾಜು ಮೊತ್ತ: 17.5ಕೂಲಿ ಮೊತ್ತ: 697729 ಸಾಮಾಗ್ರಿ ಮೊತ...
26/02/2024

ಸುಳ್ಯ ತಾಲೂಕು ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಸಂಜೀವಿನಿ (NRLM)ಕಟ್ಟಡ ರಚನೆ....
ಅಂದಾಜು ಮೊತ್ತ: 17.5
ಕೂಲಿ ಮೊತ್ತ: 697729
ಸಾಮಾಗ್ರಿ ಮೊತ್ತ: 989532
ಒಟ್ಟು ವೆಚ್ಚ: 1687261
ಮಾನವ ದಿನ: 2223
ಸುಳ್ಯ ತಾಲೂಕಿನ ಐರ್ವನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ #ನರೇಗಾ ಯೋಜನೆಯಡಿ 17.5ರೂ ಅಂದಾಜು ವೆಚ್ಚದಡಿ ಸಂಜೀವಿನಿ ಕಟ್ಟಡ ರಚನೆಯಾಗಿದ್ದು, ಐವರ್ನಾಡು ಗ್ರಾ.ಪಂ. ವ್ಯಾಪ್ತಿಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಗುಂಪು ಚಟುವಟಿಕೆ, ಸಭೆ, ತರಬೇತಿ, ಆಹಾರೋತ್ಪನ್ನಗಳ ತಯಾರಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳಲು ಇದರಿಂದ ಸಾಕಷ್ಟು ಅನುಕೂಲವಾಗಲಿದೆ.



Dakshina Kannada Zilla Panchayat ತಾಲೂಕು ಪಂಚಾಯತ್ ಸುಳ್ಯ

ಶಿಕ್ಷಣ ಇಲಾಖೆ ಹಾಗೂ ಮಹಾತ್ಮ ಗಾಂಧಿ  #ನರೇಗಾ ಯೋಜನೆಯಡಿ  #ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಬೆಟ್ಪಂಪಾಡಿ ಗ್ರಾಮ ಪಂಚಾಯತ್ ನ ಪೇರಲ್ತಡ...
26/02/2024

ಶಿಕ್ಷಣ ಇಲಾಖೆ ಹಾಗೂ ಮಹಾತ್ಮ ಗಾಂಧಿ #ನರೇಗಾ ಯೋಜನೆಯಡಿ #ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಬೆಟ್ಪಂಪಾಡಿ ಗ್ರಾಮ ಪಂಚಾಯತ್ ನ ಪೇರಲ್ತಡ್ಕ ಹಿರಿಯ ಪ್ರಾಥಮಿಕ ಶಾಲೆಗೆ #ಶೌಚಾಲಯ ರಚನೆ.
95 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಗೆ ಮೂಲಸೌಕರ್ಯಗಳಲ್ಲಿ ಒಂದಾದ ಶೌಚಾಲಯ ಮಕ್ಕಳಿಗೆ ಸಮಸ್ಯೆಯಾಗಿತ್ತು. ಆದರೆ ಪ್ರಸ್ತುತ ನಿರ್ಮಾಣಗೊಂಡ ಸುಸಜ್ಜಿತ ಶೌಚಾಲಯದಿಂದ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ.
ಶಿಕ್ಷಣ ಇಲಾಖೆ ಅನುದಾನ:- 3.05 ಲಕ್ಷ.ರೂ.
ನರೇಗಾ ಕೂಲಿ ಮೊತ್ತ:- 159483 ರೂ.



Dakshina Kannada Zilla Panchayat Puttur Taluk Panchayath

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮ...
23/02/2024

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ #ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ ವತಿಯಿಂದ
ಜಲ ಜೀವನ್ ಮಿಷನ್ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮಾಹಿತಿ ಕೇಂದ್ರ ಮತ್ತು ವಸ್ತುಪ್ರದರ್ಶನ, ಮಳಿಗೆಯನ್ನು ತೆರೆಯಲಾಗಿದೆ.



Dakshina Kannada Zilla Panchayat Taluku Panchayth Belthangady

ಜಿಲ್ಲೆ: ದಕ್ಷಿಣ ಕನ್ನಡತಾಲೂಕು:  #ಬೆಳ್ತಂಗಡಿಗ್ರಾ.ಪಂ:  ನಡಕಾಮಗಾರಿ ಹೆಸರು: ಗುಮ್ಮಣ್ಣ ಗೌಡ ಬಿನ್ ಚೆನ್ನಪ್ಪ ಗೌಡ ಒಳಗುಡ್ಡೆ ಮನೆ ಕನ್ಯಾಡಿ ಇವ...
07/02/2024

ಜಿಲ್ಲೆ: ದಕ್ಷಿಣ ಕನ್ನಡ
ತಾಲೂಕು: #ಬೆಳ್ತಂಗಡಿ
ಗ್ರಾ.ಪಂ: ನಡ
ಕಾಮಗಾರಿ ಹೆಸರು: ಗುಮ್ಮಣ್ಣ ಗೌಡ ಬಿನ್ ಚೆನ್ನಪ್ಪ ಗೌಡ ಒಳಗುಡ್ಡೆ ಮನೆ ಕನ್ಯಾಡಿ ಇವರ ಜಮೀನಿನಲ್ಲಿ #ಕೋಳಿ ಶೆಡ್ ನಿರ್ಮಾಣ
ಕಾಮಗಾರಿ ಸಂಖ್ಯೆ: 15110022/IF/GIS/498984
ಕೂಲಿ ಪಾವತಿ: 25912/-
ಗುಮ್ಮಣ ಗೌಡ-ಸುಂದರಿ ದಂಪತಿಗಳು ತಮ್ಮ 6 ಮಂದಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟ ಮೇಲೆ ಗಂಡು ದಿಕ್ಕಿಲ್ಲದೇ, ಬೇರೆಯವರ ಆಸರೆ ಪಡೆಯದೇ ಜೀವನ ಸಾಗಿಸುವ ನಿಟ್ಟಿನಲ್ಲಿ ಕೈಲಾದಷ್ಟು ದುಡಿದು ಆರ್ಥಿಕವಾಗಿ ಸಬಲರಾಗಲು ಕೋಳಿ ಶೆಡ್ ಸಹಕಾರಿಯಾಗಬಹುದೆಂದು ತಿಳಿದು ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೋಳಿ ಶೆಡ್ ನಿರ್ಮಿಸಿ ಕುಕ್ಕುಟೋದ್ಯಮ ಮಾಡುತ್ತಿದ್ದಾರೆ. ಈ ಹಿರಿ ವಯಸ್ಸಿನ ದಂಪತಿಗಳಿಗೆ ಸಹೋದರನ ಮಗ ಸಾಥ್ ನೀಡಿದ್ದು, ಸಂಸಾರ ನಿರ್ವಹಣೆಯೊಂದಿಗೆ ತಮ್ಮನ ಮಗ ಕೂಡ ಆರ್ಥಿಕವಾಗಿ ಸಬಲರಾಗಲು ಈ ಮೂಲಕ ಸಹಕಾರ ನೀಡಿದ್ದಾರೆ.


Dakshina Kannada Zilla Panchayat Taluku Panchayth Belthangady

ನೆಟ್ಲಮುಡ್ನೂರು ಗ್ರಾಮದ ಪುಂಡಲೀಕ ಗೋಳಿಕಟ್ಟೆ ಇವರ ಜಮೀನಿನಲ್ಲಿ  #ನರೇಗಾ ಯೋಜನೆಯಡಿ ದನಗಳಿಗೆ ನಿರ್ಮಾಣವಾದ ಸುಂದರವಾದ ಹಟ್ಟಿ..ತಾಲೂಕು: ಬಂಟ್ವಾ...
18/01/2024

ನೆಟ್ಲಮುಡ್ನೂರು ಗ್ರಾಮದ ಪುಂಡಲೀಕ ಗೋಳಿಕಟ್ಟೆ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ದನಗಳಿಗೆ ನಿರ್ಮಾಣವಾದ ಸುಂದರವಾದ ಹಟ್ಟಿ..
ತಾಲೂಕು: ಬಂಟ್ವಾಳ
ಗ್ರಾಮ ಪಂಚಾಯತ್: ನೆಟ್ಲಮುಡ್ನೂರು
ಅನುಷ್ಠಾನ ವರ್ಷ: 2023-2024
ಅಂದಾಜು ವೆಚ್ಚ: 57000

‘ಕೆಲವು ವರ್ಷಗಳಿಂದ 4 ಕಂಬ ನೆಟ್ಟು ಟರ್ಪಾಲ್ ಶೀಟ್ ಹಾಕಿ ಹಟ್ಟಿ ನಿರ್ಮಿಸಿ #ದನ ಗಳನ್ನು ಸಾಕುತ್ತಿದ್ದೆ. ಆದ್ರೆ ಮಳೆಗಾಲದಲ್ಲಿ ಹಸುಗಳಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು. ಇದೀಗ ಗ್ರಾಮ ಪಂಚಾಯತ್ ನೆರವಿನಿಂದ ನರೇಗಾ ಯೋಜನೆಯಡಿ ಅನುದಾನ ಪಡೆದುಕೊಂಡು #ದನದಹಟ್ಟಿ ನಿರ್ಮಿಸಿರುವ ಪರಿಣಾಮ ದನಗಳ ಆರೈಕೆಗೆ ಸಹಕಾರಿಯಾಗಿದೆ. ಪ್ರಸ್ತುತ 7 ದನಗಳಿದ್ದು, 2 ಹಸು #ಹಾಲು ನೀಡುತ್ತಿದೆ. ದಿನಕ್ಕೆ 10ರಿಂದ 11 ಲೀಟರ್ ಹಾಲು ಸಿಗುತ್ತಿದೆ. ಮನೆ ಬಳಕೆಗೆ ಸ್ವಲ್ಪ ಉಳಿಸಿಕೊಂಡು ಉಳಿದುದ್ದನ್ನು ಹತ್ತಿರದ ಡೇರಿಗೆ ನೀಡಲಾಗುತ್ತಿದೆ. ಲೀಟರ್ ಹಾಲಿಗೆ 35ರಿಂದ 38 ರೂ. ಸಿಗುತ್ತಿದೆ. ಸಂಗ್ರಹಿಸಿದ ಸಗಣಿ ಮತ್ತು ಹಟ್ಟಿ ತೊಳೆದ ನೀರನ್ನು ಗೋಬರ್ ಗ್ಯಾಸ್ಗೆ ಬಳಸಲಾಗುತ್ತಿದೆ’. ಎಂದು ಪುಂಡರೀಕ ಖುಷಿ ಹಂಚಿಕೊಂಡರು.



TP Bantwal Dakshina Kannada Zilla Panchayat

ಆರ್ಯಾಪು ಗ್ರಾಮದ ಶ್ರೀ ಮತ್ತಡಿ ಬಿನ್ ಕೊರಗು ಪೆಲತ್ತಡಿ ಇವರ ಜಮೀನಿನಲ್ಲಿ ನರೇಗಾ ಯೋಜನೆಯಡಿ  #ಕೋಳಿ ಸಾಕಾಣಿಕಾ ಘಟಕ ನಿರ್ಮಾಣತಾ.ಪಂ: ಪುತ್ತೂರುಗ...
06/01/2024

ಆರ್ಯಾಪು ಗ್ರಾಮದ ಶ್ರೀ ಮತ್ತಡಿ ಬಿನ್ ಕೊರಗು ಪೆಲತ್ತಡಿ ಇವರ ಜಮೀನಿನಲ್ಲಿ ನರೇಗಾ ಯೋಜನೆಯಡಿ #ಕೋಳಿ ಸಾಕಾಣಿಕಾ ಘಟಕ ನಿರ್ಮಾಣ
ತಾ.ಪಂ: ಪುತ್ತೂರು
ಗ್ರಾ.ಪಂ: ಆರ್ಯಾಪು

ಪರಿಶಿಷ್ಟ ಜಾತಿಯ ವರ್ಗಕ್ಕೆ ಸೇರಿದ ಶ್ರೀ ಮತ್ತಡಿ ಅವರ ಕುಟುಂಬ ಈ ಮೊದಲು ಕೂಲಿ ಮಾಡಿಕೊಂಡು ಜೀವನದ ಬಂಡಿ ಸಾಗಿಸ್ತಾ ಇದ್ರು. ಆದ್ರೆ ತೀರಾ ಕಡುಬಡತನ, ಮಕ್ಕಳ ಖರ್ಚು-ವೆಚ್ಚ ಅಂತ ಸಂಸಾರದ ಹೊರೆ ಜಾಸ್ತಿಯಾದಾಗ ಸಹಾಯವಾಗಿದ್ದೇ #ನರೇಗಾ ಯೋಜನೆ. ಈ ಯೋಜನೆಯಡಿ ಕೋಳಿ ಸಾಕಾಣಿಕೆ ಮಾಡುವ ಮೂಲಕ ಸ್ವಾವಲಂಬಿಯಾಗಿ ಜೀವನ ನಡೆಸಲು ನಿರ್ಧರಿಸಿ ಇದೀಗ ನಾಟಿ ಕೋಳಿ ಹಾಗೂ ಅಂಕದ (ಕೋಳಿ ಅಂಕ) ಕೋಳಿಗಳನ್ನು ಸಾಕಿ, ಮಾರಾಟ ಮಾಡುವ ಮೂಲಕ ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ.


Dakshina Kannada Zilla Panchayat Puttur Taluk Panchayath Bharath Raj

ಅಣ್ಣು ಗೌಡ ಮತ್ತು ಉಮಾವತಿ ದಂಪತಿಗಳ ಮಂದಹಾಸಕ್ಕೆ ಕಾರಣವಾಯ್ತು  #ನರೇಗಾ ಯೋಜನೆ.. ಅಡಿಕೆ ಗಿಡ ನಾಟಿ ಮಾಡಿಕೊಂಡು ಉತ್ತಮ ಫಸಲಿನ ನಿರೀಕ್ಷೆಯಲ್ಲಿರ...
05/01/2024

ಅಣ್ಣು ಗೌಡ ಮತ್ತು ಉಮಾವತಿ ದಂಪತಿಗಳ ಮಂದಹಾಸಕ್ಕೆ ಕಾರಣವಾಯ್ತು #ನರೇಗಾ ಯೋಜನೆ.. ಅಡಿಕೆ ಗಿಡ ನಾಟಿ ಮಾಡಿಕೊಂಡು ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವ ದಂಪತಿಗಳು..
ಕೆಂಪಕೋಡಿಯ ಅಣ್ಣು ಗೌಡರು ಮೊದಲು ಬೇರೆಯವರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಬಳಿಕ ತಮ್ಮಲ್ಲಿದ್ದ 2 ಎಕರೆ ಜಮೀನಿನಲ್ಲಿ #ಕೃಷಿ ಮಾಡಲು ತೊಡಗಿದರು. ಅದೇ ವೇಳೆ ನರೇಗಾ ಯೋಜನೆಯಡಿ ಅಡಿಕೆ ನಾಟಿ ಮಾಡಿದರೆ ಕೂಲಿ ಸಿಗುವುದೆಂದು ತಿಳಿದು ಕೊಕ್ಕಡ ಗ್ರಾ.ಪಂಗೆ ಅರ್ಜಿ ಸಲ್ಲಿಸಿ, ತಮ್ಮ ಮನೆಯವರನ್ನೇ ಜೊತೆ ಸೇರಿಸಿಕೊಂಡು ಸುಮಾರು 420 ಗುಂಡಿ ಮಾಡಿ #ಅಡಿಕೆ ಗಿಡ ನಾಟಿ ಮಾಡಿದ್ದಾರೆ. ಇದೀಗ ಅಡಿಕೆ ತೋಟವನ್ನು ಪತ್ನಿ ಮತ್ತು ಮಗನೊಂದಿಗೆ ನೋಡಿಕೊಂಡು ದುಡಿಮೆಯಲ್ಲಿ ಖುಷಿ ಕಾಣುತ್ತಿದ್ದಾರೆ ಇಳಿವಯಸ್ಸಿನ ಅಣ್ಣು ಗೌಡರು.
ಅಂದಾಜು ಮೊತ್ತ:98,000/-
ಪಾವತಿಯಾದ ಕೂಲಿ:-30652/-
ಗಿಡಗಳ ಸಂಖ್ಯೆ:420
ತಾ: ಬೆಳ್ತಂಗಡಿ
ಗ್ರಾ.ಪಂ. : ಕೊಕ್ಕಡ



Dakshina Kannada Zilla Panchayat Taluku Panchayth Belthangady Vinisha Radhakrishna Ujire

ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಮನಾಯ್ಕ ಹಾಗೂ ಶಾಲಿನಿ ದಂಪತಿಯ ಕುಟುಂಬ ಮಹಾತ್ಮಗಾಂಧಿ  #ನರೇಗಾ ಯೋಜನೆಯಡಿ  #ದನದಹಟ್ಟಿ ಯನ್ನು ನಿರ್ಮಿಸಿಕೊಂಡಿದ್...
01/01/2024

ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಮನಾಯ್ಕ ಹಾಗೂ ಶಾಲಿನಿ ದಂಪತಿಯ ಕುಟುಂಬ ಮಹಾತ್ಮಗಾಂಧಿ #ನರೇಗಾ ಯೋಜನೆಯಡಿ #ದನದಹಟ್ಟಿ ಯನ್ನು ನಿರ್ಮಿಸಿಕೊಂಡಿದ್ದು ಜೀವನೋಪಾಯಕ್ಕೆ ಸಹಾಯವಾಗಲು #ಹೈನುಗಾರಿಕೆ ಯನ್ನು ಮಾಡುತ್ತಿದ್ದಾರೆ. ಇದರಿಂದ #ಹಾಲು ಮಾರಾಟದ ಜೊತೆಗೆ ತಮಗಿರುವ ಜಮೀನಿನಲ್ಲಿ ಅಡಿಕೆ, ತೆಂಗು ಕೃಷಿಯನ್ನು ಮಾಡಿಕೊಂಡು ಸಂತಸದ ಜೀವನವನ್ನು ನಡೆಸುತ್ತಿದ್ದಾರೆ.
ಆರ್ಥಿಕ ವರ್ಷ:2023-24
ಅಂದಾಜು ಮೊತ್ತ : 57000


Puttur Taluk Panchayath Bharath Raj

ಬತ್ತಿ ಹೋಗಿದ್ದ ಕೊಳವೆ ಬಾವಿಗೆ  #ನರೇಗಾ ದಡಿ ಮರುಪೂರಣ ಘಟಕ ನಿರ್ಮಿಸಿ ಜೀವಕಳೆ ನೀಡಿದ ಮಾಂದ್ರೋಡಿ ತಿಮ್ಮಪ್ಪ ಮೂಲ್ಯರುತಾಲೂಕು: ಬಂಟ್ವಾಳಗ್ರಾಪಂ...
22/12/2023

ಬತ್ತಿ ಹೋಗಿದ್ದ ಕೊಳವೆ ಬಾವಿಗೆ #ನರೇಗಾ ದಡಿ ಮರುಪೂರಣ ಘಟಕ ನಿರ್ಮಿಸಿ ಜೀವಕಳೆ ನೀಡಿದ ಮಾಂದ್ರೋಡಿ ತಿಮ್ಮಪ್ಪ ಮೂಲ್ಯರು
ತಾಲೂಕು: ಬಂಟ್ವಾಳ
ಗ್ರಾಪಂ: ಸರಪಾಡಿ
ಅಂದಾಜು ಮೊತ್ತ: 30000


Dakshina Kannada Zilla Panchayat TP Bantwal

ತೋಟತ್ತಾಡಿ ಗ್ರಾಮದ ಬಾಯಿತ್ಯಾರು ಎಂಬಲ್ಲಿ ವಸಂತ ಪೂಜಾರಿ ಇವರ ಜಮೀನಿನಲ್ಲಿ   ಯೋಜನೆಯಡಿ ಕೃಷಿಬಾವಿ ನಿರ್ಮಿಸಿಕೊಂಡು ಬೆಳೆಗಳಿಗೆ ನೀರುಣಿಸುತ್ತಿದ...
04/12/2023

ತೋಟತ್ತಾಡಿ ಗ್ರಾಮದ ಬಾಯಿತ್ಯಾರು ಎಂಬಲ್ಲಿ ವಸಂತ ಪೂಜಾರಿ ಇವರ ಜಮೀನಿನಲ್ಲಿ ಯೋಜನೆಯಡಿ ಕೃಷಿಬಾವಿ ನಿರ್ಮಿಸಿಕೊಂಡು ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.
ತಾ: ಬೆಳ್ತಂಗಡಿ
ಗ್ರಾ.ಪಂ.: ಚಾರ್ಮಾಡಿ

#ನರೇಗಾ

Dakshina Kannada Zilla Panchayat

Taluku Panchayth Belthangady

ಸುಂದರ ಪಂಚಾಯತ್ ಕಟ್ಟಡಕ್ಕೆ  #ನರೇಗಾ ನೆರವು..ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಹೊಸ ಮೆರುಗು ನೀಡಿದ ನರೇಗಾ ಯೋಜನ...
22/11/2023

ಸುಂದರ ಪಂಚಾಯತ್ ಕಟ್ಟಡಕ್ಕೆ #ನರೇಗಾ ನೆರವು..
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಹೊಸ ಮೆರುಗು ನೀಡಿದ ನರೇಗಾ ಯೋಜನೆ...



Dakshina Kannada Zilla Panchayat Taluku Panchayth Belthangady Vinisha Radhakrishna Ujire

18/11/2023
ಪಂಚಾಯತ್‌ ರಾಜ್‌ ಇಲಾಖೆಯ  commissioner ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಇವರು 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್‌ ಆಗಿರುವ ...
16/11/2023

ಪಂಚಾಯತ್‌ ರಾಜ್‌ ಇಲಾಖೆಯ commissioner ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಇವರು 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್‌ ಆಗಿರುವ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿದರು.

ಉಜಿರೆ ಗ್ರಾಮ ಪಂಚಾಯತಿಯ ವಿಶಿಷ್ಟ ಡಿಜಿಟಲ್‌ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್‌ ಕಛೇರಿ, ನೂತನವಾಗಿ ನಿರ್ಮಿಸಿರುವ ಕೂಸಿನ ಮನೆ, ಸಂಜೀವಿನಿ ಹಳ್ಳಿ ಸಂತೆ, ಪುಸ್ತಕ ಗೂಡು, ಸ್ವಚ್ಛ ಸಂಕೀರ್ಣ ಘಟಕ, ಪ್ಲಾಸ್ಟಿಕ್‌ ಮರು ಉತ್ಪಾದನಾ ಘಟಕ ಹಾಗೂ ಮಲತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮ ಪಂಚಾಯತಿಯ ವಿವಿಧ ಘಟಕಗಳ ಕಾರ್ಯನಿರ್ವಹಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಉಜಿರೆ ಗ್ರಾಮ ಪಂಚಾಯತಿಯ ಅಮೃತ ಸಭಾಂಗಣದಲ್ಲಿ ಗ್ರಾಮ ಪಂಚಾಯತ್‌ ಸದಸ್ಯರು, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ಆಕಾಂಕ್ಷ ಟ್ರಸ್ಟ್‌ ನ ಸ್ವಯಂ ಸೇವಕರೊಂದಿಗೆ ಸಂವಾದವನ್ನು ನಡೆಸಲಾಯಿತು.
Dakshina Kannada Zilla Panchayat Mgnregs Karnataka Taluku Panchayth Belthangady Ujire, India
Rural Development and Panchayat Raj - Karnataka

RDPR & IT/BT ಸಚಿವರಾದ ಮಾನ್ಯPriyank Kharge ರವರು ದ.ಕ ಜಿಲ್ಲೆಗೆ ಭೇಟಿ ನೀಡಿ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡ...
16/11/2023

RDPR & IT/BT ಸಚಿವರಾದ ಮಾನ್ಯ
Priyank Kharge ರವರು ದ.ಕ ಜಿಲ್ಲೆಗೆ ಭೇಟಿ ನೀಡಿ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.rd commissioner ಶ್ರೀ ಪವನ್ ಕುಮಾರ್ ಮಾಲಪಾಟಿ, pr commissioner ಶ್ರೀಮತಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ದ.ಕ ಸಿಇಒ ಡಾ.ಆನಂದ್ ಕೆ. ರವರು ಹಾಜರಿದ್ದರು.

Dakshina Kannada Zilla Panchayat TP Bantwal Taluk Panchayath Kadaba Taluku Panchayth Belthangady Taluk Panchayath Mangalore Puttur Taluk Panchayath

ದೊಂಪದ ಬಲಿ ಎಂಬಲ್ಲಿ  #ನರೇಗಾ ಯೋಜನೆಯಡಿ ನಿರ್ಮಾಣವಾದ ಅಂಗನವಾಡಿ ಕಟ್ಟಡ..ತಾಲೂಕು:  #ಬಂಟ್ವಾಳಗ್ರಾ.ಪಂ: ನರಿಕೊಂಬು     Dakshina Kannada Zi...
04/11/2023

ದೊಂಪದ ಬಲಿ ಎಂಬಲ್ಲಿ #ನರೇಗಾ ಯೋಜನೆಯಡಿ ನಿರ್ಮಾಣವಾದ ಅಂಗನವಾಡಿ ಕಟ್ಟಡ..
ತಾಲೂಕು: #ಬಂಟ್ವಾಳ
ಗ್ರಾ.ಪಂ: ನರಿಕೊಂಬು


Dakshina Kannada Zilla Panchayat TP Bantwal

ಕೂಸು ಪರತಿ ಹಾಗೂ ಸಿಂಗ ಪರವ ದಂಪತಿಗಳ ಹೈನುಗಾರಿಕೆಗೆ ನೆರವಾದ  #ನರೇಗಾ ಯೋಜನೆ..ಬೆಳ್ತಂಗಡಿ ತಾಲೂಕು, ಇಂದಬೆಟ್ಟು ಗ್ರಾ.ಪಂ.       Dakshina K...
02/11/2023

ಕೂಸು ಪರತಿ ಹಾಗೂ ಸಿಂಗ ಪರವ ದಂಪತಿಗಳ ಹೈನುಗಾರಿಕೆಗೆ ನೆರವಾದ #ನರೇಗಾ ಯೋಜನೆ..
ಬೆಳ್ತಂಗಡಿ ತಾಲೂಕು, ಇಂದಬೆಟ್ಟು ಗ್ರಾ.ಪಂ.



Dakshina Kannada Zilla Panchayat Taluku Panchayth Belthangady

ಸರಕಾರಿ ಶಾಲೆಗೆ ಮತ್ತಷ್ಟು ಮೆರುಗು ನೀಡಿದ ಆಟದ ಮೈದಾನ..  #ನರೇಗಾ    ಯೋಜನೆಯಡಿ ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಆಟದ ಮೈದಾನ ಅಭಿವೃದ್ಧ...
27/10/2023

ಸರಕಾರಿ ಶಾಲೆಗೆ ಮತ್ತಷ್ಟು ಮೆರುಗು ನೀಡಿದ ಆಟದ ಮೈದಾನ.. #ನರೇಗಾ ಯೋಜನೆಯಡಿ ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಆಟದ ಮೈದಾನ ಅಭಿವೃದ್ಧಿ..
ತಾ: ಪುತ್ತೂರು
ಗ್ರಾ.ಪಂ. ಹಿರೇಬಂಡಾಡಿ..

 #ನರೇಗಾ ಯೋಜನೆಯಡಿ ನಿರ್ಮಾಣವಾದ ಸಾರ್ವಜನಿಕ ತೆರೆದ ಬಾವಿ ಕೊಡೆಂಚಿಲ್‌ ಸುತ್ತಮುತ್ತಲಿನ ಪರಿಸರದ ಕೃಷಿಕರ ತೋಟಕ್ಕೆ ಭರಪೂರ ನೀರುಣಿಸುತ್ತಿದೆ.ತಾ:...
18/10/2023

#ನರೇಗಾ ಯೋಜನೆಯಡಿ ನಿರ್ಮಾಣವಾದ ಸಾರ್ವಜನಿಕ ತೆರೆದ ಬಾವಿ ಕೊಡೆಂಚಿಲ್‌ ಸುತ್ತಮುತ್ತಲಿನ ಪರಿಸರದ ಕೃಷಿಕರ ತೋಟಕ್ಕೆ ಭರಪೂರ ನೀರುಣಿಸುತ್ತಿದೆ.
ತಾ: #ಉಳ್ಳಾಲ
ಗ್ರಾ.ಪಂ: ನರಿಂಗಾನ


Dakshina Kannada Zilla Panchayat

ಕಡಬ ತಾಲೂಕಿನ ಆಲಂಕಾರು ಗ್ರಾಮದ ಲೋಕೇಶ್ ಗೌಡ ಇವರ ಜಮೀನಿನಲ್ಲಿ  #ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ  #ಅಡಿಕೆ ಪುನಶ್ಚೇತನ ಕಾಮಗಾರಿ…     Daks...
17/10/2023

ಕಡಬ ತಾಲೂಕಿನ ಆಲಂಕಾರು ಗ್ರಾಮದ ಲೋಕೇಶ್ ಗೌಡ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ #ಅಡಿಕೆ ಪುನಶ್ಚೇತನ ಕಾಮಗಾರಿ…



Dakshina Kannada Zilla Panchayat Taluk Panchayath Kadaba Bharath Raj

 #ಕಡಬ ತಾಲೂಕಿನ ಆಲಂಕಾರು ಗ್ರಾಮದ ಸುಧಾಕರ ಪೂಜಾರಿ ಇವರ ಸ್ಥಳದಲ್ಲಿ  #ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ  #ಅಡಿಕೆಕೃಷಿ ಕಾಮಗಾರಿ..     Daksh...
17/10/2023

#ಕಡಬ ತಾಲೂಕಿನ ಆಲಂಕಾರು ಗ್ರಾಮದ ಸುಧಾಕರ ಪೂಜಾರಿ ಇವರ ಸ್ಥಳದಲ್ಲಿ #ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ #ಅಡಿಕೆಕೃಷಿ ಕಾಮಗಾರಿ..



Dakshina Kannada Zilla Panchayat Bharath Raj Taluk Panchayath Kadaba

ಕಲ್ಲುಗುಂಡಿ ನಿವಾಸಿ ಸಿರಿಲ್‌ ಕ್ರಾಸ್ತ ಇವರ ಜಮೀನಿನಲ್ಲಿ  #ನರೇಗಾ ಯೋಜನೆಯಡಿ ನಿರ್ಮಾಣಗೊಂಡ ದನದ ಹಟ್ಟಿಅಂದಾಜು ವೆಚ್ಚ 57,000ತಾಲೂಕು: ಸುಳ್ಯಗ...
13/10/2023

ಕಲ್ಲುಗುಂಡಿ ನಿವಾಸಿ ಸಿರಿಲ್‌ ಕ್ರಾಸ್ತ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ನಿರ್ಮಾಣಗೊಂಡ ದನದ ಹಟ್ಟಿ
ಅಂದಾಜು ವೆಚ್ಚ 57,000
ತಾಲೂಕು: ಸುಳ್ಯ
ಗ್ರಾ.ಪಂ: ಸಂಪಾಜೆ



Dakshina Kannada Zilla Panchayat ತಾಲೂಕು ಪಂಚಾಯತ್ ಸುಳ್ಯ

ಮಾಡಬಾಗಿಲು ರವೀಂದ್ರರ ಜಮೀನಿನಲ್ಲಿ  #ನರೇಗಾ ಯೋಜನೆಯಡಿ ನಿರ್ಮಾಣಗೊಂಡ  #ಆಡು ಶೆಡ್ ಘಟಕಅಂದಾಜು ಮೊತ್ತ 70,000/-ತಾ:  #ಸುಳ್ಯಗ್ರಾ.ಪಂ: ಅಮರಮುಡ...
13/10/2023

ಮಾಡಬಾಗಿಲು ರವೀಂದ್ರರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ನಿರ್ಮಾಣಗೊಂಡ #ಆಡು ಶೆಡ್ ಘಟಕ
ಅಂದಾಜು ಮೊತ್ತ 70,000/-
ತಾ: #ಸುಳ್ಯ
ಗ್ರಾ.ಪಂ: ಅಮರಮುಡ್ನೂರು


Dakshina Kannada Zilla Panchayat ತಾಲೂಕು ಪಂಚಾಯತ್ ಸುಳ್ಯ

Address


Website

Alerts

Be the first to know and let us send you an email when Mgnregs - Dakshina Kannada posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your organization to be the top-listed Government Service?

Share