Chidanandh M Gowda Sira

Chidanandh M Gowda Sira Contact information, map and directions, contact form, opening hours, services, ratings, photos, videos and announcements from Chidanandh M Gowda Sira, Sira.

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.
28/03/2022

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.

ಇಂಕ್ವಿಲಾಬ್ ಜಿಂದಾಬಾದ್, ಭಾರತ್‌ ಮಾತಾ ಕೀ ಜಯ್‌, ವಂದೇ ಮಾತರಂ ಎಂಬ ಉದ್ಘೋಷ ಕೂಗುತ್ತಾ ತಾಯಿ ಭಾರತಿಗೆ ತಮ್ಮ ಜೀವವನ್ನೇ ಸಮರ್ಪಿಸಿದ ಭಾರತಮಾತೆಯ...
23/03/2022

ಇಂಕ್ವಿಲಾಬ್ ಜಿಂದಾಬಾದ್, ಭಾರತ್‌ ಮಾತಾ ಕೀ ಜಯ್‌, ವಂದೇ ಮಾತರಂ ಎಂಬ ಉದ್ಘೋಷ ಕೂಗುತ್ತಾ ತಾಯಿ ಭಾರತಿಗೆ ತಮ್ಮ ಜೀವವನ್ನೇ ಸಮರ್ಪಿಸಿದ ಭಾರತಮಾತೆಯ ವೀರಪುತ್ರರಾದ ಭಗತ್‌ಸಿಂಗ್, ರಾಜಗುರು, ಸುಖದೇವ್‌ ಅವರು ಬಲಿದಾನಗೈದ ದಿನವಿಂದು. ಶತ ಶತ ನಮನಗಳು.

ಹನಿ ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್...
22/03/2022

ಹನಿ ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ.

ಇಂದು ಮಧುಗಿರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ  ಸುಸಜ್ಜಿತ ಐಸಿಯು ಸೌಲಭ್ಯವುಳ್ಳ ಸುಮಾರು 23 ಲಕ್ಷ ರೂ ಮೌಲ್ಯದ ಆಂಬುಲೆನ್ಸ್ ಅನ್ನು  ಸ್ಥಳೀಯ...
12/02/2022

ಇಂದು ಮಧುಗಿರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಸುಸಜ್ಜಿತ ಐಸಿಯು ಸೌಲಭ್ಯವುಳ್ಳ ಸುಮಾರು 23 ಲಕ್ಷ ರೂ ಮೌಲ್ಯದ ಆಂಬುಲೆನ್ಸ್ ಅನ್ನು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡುಗೆ ನೀಡಲಾಯಿತು ಸನ್ಮಾನ್ಯ ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣ ಸ್ವಾಮಿ,ರವರು ಹಾಗೂ ವಿಧಾನ ಪರಿಷತ್ ಶಾಸಕರಾದ ಶ್ರೀ ಡಾ ವೈ.ಎ ನಾರಾಯಣ ಸ್ವಾಮಿ ರವರು ಹಾಗೂ ಕಾರ್ಯಕರ್ತರೊಂದಿಗೆ ಅಂಬುಲೆನ್ಸ್ ಗೆ ಚಾಲನೆ ನೀಡಲಾಯಿತು

ಈ ಸಂಧರ್ಭದಲ್ಲಿ ಮಧುಗಿರಿ ಸಂಘಟನಾತ್ಮಕ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ.ಕೆ.ಮಂಜುನಾಥ್ ರವರು, ಶಾಸಕರುಗಳಾದ ಶ್ರೀ ಜ್ಯೋತಿ ಗಣೇಶ್, ಶ್ರೀ ಡಾ ರಾಜೇಶ್ ಗೌಡ, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ ಎಸ್.ಆರ್.ಗೌಡ, ತಾಲ್ಲೂಕು ಅಧ್ಯಕ್ಷರಾದ ನರಸಿಂಹ ಮೂರ್ತಿ, ಮುಖಂಡರಾದ ಕೃಷ್ಣ ಮೂರ್ತಿ, ಪ್ರಸನ್ನ ಕುಮಾರ್, ತೇಜಸ್, ತಿಪ್ಪೇಸ್ವಾಮಿ, ನಾಗೇಂದ್ರ, ನಾಗರಾಜಪ್ಪ, ಜಗದೀಶ್ ಹಾಗೂ ಪಕ್ಷದ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗಾಗಿ ನಮ್ಮ ಸರ್ಕಾರದಿಂದ ಕೈಗೊಳ್ಳುತ್ತಿರುವ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿಯನ್ನು ಉದ್ಘಾಟಿಸಿದ ಸನ್ಮಾನ್ಯ ಜನಪಾರ...
08/02/2022

ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗಾಗಿ ನಮ್ಮ ಸರ್ಕಾರದಿಂದ ಕೈಗೊಳ್ಳುತ್ತಿರುವ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿಯನ್ನು ಉದ್ಘಾಟಿಸಿದ ಸನ್ಮಾನ್ಯ ಜನಪಾರಿಯ ಮುಖ್ಯಮಂತ್ರಿಗಳಾದ ಶ್ರೀ Basavaraj Bommai ರವರಿಗೂ ಮತ್ತು ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀ Srinivas Poojary ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐

ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿದ್ದಂತಹ ಶೋಷಣೆ, ಜಾತೀಯತೆ, ಅಸ್ಪೃಶ್ಯತೆಯಂತಹ ಸಾಮಾಜಿಕ ಶೋಷಣೆಯಿಂದ ತುಳಿತಕ್ಕೆ ಒಳಗಾಗಿದ್ದ ಜನರ ಒಳಿತಿಗಾಗಿ ಶ್ರ...
01/02/2022

ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿದ್ದಂತಹ ಶೋಷಣೆ, ಜಾತೀಯತೆ, ಅಸ್ಪೃಶ್ಯತೆಯಂತಹ ಸಾಮಾಜಿಕ ಶೋಷಣೆಯಿಂದ ತುಳಿತಕ್ಕೆ ಒಳಗಾಗಿದ್ದ ಜನರ ಒಳಿತಿಗಾಗಿ ಶ್ರಮಿಸಿದ ಶ್ರೇಷ್ಟ ಶಿವಶರಣ ಮಡಿವಾಳ ಮಾಚಿದೇವರ ಜಯಂತಿಯಂದು ಅನಂತ ನಮನಗಳು.

ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು, ಸರಳ ವ್ಯಕ್ತಿತ್ವದ ನಾಯಕರು,ಹಿರಿಯರಾದ ಸನ್ಮಾನ್ಯ ಶ್ರೀ Basavaraj Bommai  ಅವರಿಗೆ ಜನ್ಮದಿನದ ಹೃತ್ಪೂರ್ವ...
28/01/2022

ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು, ಸರಳ ವ್ಯಕ್ತಿತ್ವದ ನಾಯಕರು,ಹಿರಿಯರಾದ ಸನ್ಮಾನ್ಯ ಶ್ರೀ
Basavaraj Bommai ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರು ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಕರುಣಿಸಲಿ, ತಮ್ಮ ನಾಯಕತ್ವದಲ್ಲಿ ರಾಜ್ಯ ಸಮಗ್ರ ಅಭಿವೃದ್ಧಿ ಹೊಂದಲಿ, ತಮ್ಮ ಜನಸೇವೆ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. 💐

ಇಂದು ಸಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿರಾ ತಾಲ್ಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ಸರ್ಕಾರಿ ಗೋಶಾಲೆ ಪ್ರಾರಂಭೋತ್ಸವದ ಗುದ್ದಲಿ ಪೂಜೆ ಕ...
24/01/2022

ಇಂದು ಸಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿರಾ ತಾಲ್ಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ಸರ್ಕಾರಿ ಗೋಶಾಲೆ ಪ್ರಾರಂಭೋತ್ಸವದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು
ತುಮಕೂರು ಜಿಲ್ಲಾಉಸ್ತುವಾರಿ ಸಚಿವರಾದ
ಶ್ರೀ ಜೆ ಸಿ ಮಾಧುಸ್ವಾಮಿ ರವರು ಭಾಗವಹಿಸಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿದರು.ಈ ಸಂದರ್ಭದಲ್ಲಿ
ಶಾಸಕರಾದ ಶ್ರೀ ಡಾ ರಾಜೇಶ್ ಗೌಡ ರವರು, ತಹಶೀಲ್ದಾರ್ ಶ್ರೀ ಮಮತಾ ರವರು, ಪಶುಪಾಲನಾ
ಉಪನಿರ್ದೇಶಕರಾದ ಜಯಣ್ಣ ರವರು
ಮುಖ್ಯ ಪಶುವೈದ್ಯಾಧಿಕಾರಿ ಸಿ.ಎಸ್.ರಮೇಶ್ ರವರು, ಪ್ರಕಾಶ್ ಗೌಡ ರವರು , ಚಂಗವಾರ ಮಾರಣ್ಣ ನವರು, ನಿಡಗಟ್ಟೆ ಚಂದ್ರಶೇಖರ್ ರವರು, ನಾಗಣ್ಣ, ಮಧುಸೂಧನ್ ರಾವ್, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಗೌರಮ್ಮ ನರಸಿಂಹಪ್ಪ, ಸದಸ್ಯರುಗಳು,ಅನೇಕ ಮುಖಂಡರು, ಸುತ್ತಮುತ್ತಲ ಊರಿನ ಗ್ರಾಮಸ್ಥರು, ಹಾಗೂ ಕಾರ್ಯಕರ್ತರು ಹಾಜರಿದ್ದರು.

ಸಿರಾ ನಗರದ ರಾಜು ಸ್ಟುಡಿಯೋ ಮಾಲೀಕರು ಹಾಗೂ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಎಸ್. ರಾಜು ರವರು ನಿನ್ನೆ ತಡರಾತ್ರಿ ನಿಧನ ಹೊಂದಿದ್ದು, ಇಂದು  ದರ...
23/01/2022

ಸಿರಾ ನಗರದ ರಾಜು ಸ್ಟುಡಿಯೋ ಮಾಲೀಕರು ಹಾಗೂ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಎಸ್. ರಾಜು ರವರು ನಿನ್ನೆ ತಡರಾತ್ರಿ ನಿಧನ ಹೊಂದಿದ್ದು, ಇಂದು ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದೆ
ಈ ಸಂದರ್ಭದಲ್ಲಿ ಪತ್ರಕರ್ತ ಮಿತ್ರರಾದ ನಾಗರಾಜು, ಹನುಮಂತರಾಜು, ಮಹೇಶ್, ನರಸಿಂಹಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಇಂದು ಕೋಲಾರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯವುಳ್ಳ ಆಂಬುಲೆನ್ಸ್ ಅನ್ನು  ಇಂದು ನನ್ನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ...
21/01/2022

ಇಂದು ಕೋಲಾರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯವುಳ್ಳ ಆಂಬುಲೆನ್ಸ್ ಅನ್ನು ಇಂದು ನನ್ನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕೋಲಾರ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆಯಾಗಿ ನೀಡಲಾಯಿತು ಈ ಸಂಧರ್ಭದಲ್ಲಿ ಕೋವೀಡ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅನುಕೂಲವಾಗಲೆಂದು ಸುಸರ್ಜಿತ ಆಕ್ಸಿಜನ್ ಮತ್ತು ವೆಂಟಿಲೇಟರ್ ಸೌಲಭ್ಯವುಳ್ಳ ಆಂಬುಲೆನ್ಸ್ ನೀಡಿದ್ದು, ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಮುಂತಾದ ಜಿಲ್ಲೆಗಳಿಗೂ ನೀಡಿ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದೆ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಾ ವೈ ಎ ನಾರಾಯಣ ಸ್ವಾಮಿ ರವರು ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಜಗದೀಶ್, ವೈದ್ಯಾಧಿಕಾರಿಗಳಾದ ಮಂಜುನಾಥ್ ರೆಡ್ಡಿ, ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷರಾದ ವೇಣುಗೋಪಾಲ್, ತಿಮ್ಮರಾಯಪ್ಪ, ಮಾಗೇರಿ ನಾರಾಯಣಸ್ವಾಮಿ, ವಿಜಯ್ ಕುಮಾರ್, ಬಾಲಾಜಿ, ಸಹ್ಯಾದ್ರಿಯ ಕಾಲೇಜ್ ಉದಯ್ ರವರು, ಮುನಿವೆಂಕಟಪ್ಪ, ಕಾನಿಷ್ಕ ಶಶಿ ಕುಮಾರ್ ರವರು ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.


Basavaraj Bommai || Dr. Sudhakar K

ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.ಪೂಜ್ಯ ಶ್ರೀಗಳ ದಶಕಗಳ ನಿತ್ಯನಿರ...
21/01/2022

ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ಪೂಜ್ಯ ಶ್ರೀಗಳ ದಶಕಗಳ ನಿತ್ಯನಿರಂತರ ದಾಸೋಹ ಸೇವೆಯ ಅಪೂರ್ವ ಸೇವೆಯ ಸ್ಮರಣಾರ್ಥವಾಗಿ ಇಂದು ದಾಸೋಹ ದಿನವನ್ನು ಆಚರಿಸಲಾಗುತ್ತದೆ.

ಇಂದು ಸಿರಾ ತಾಲ್ಲೂಕು ಕಚೇರಿ ಮಿನಿಧಾನಸೌದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ,ಕ್ಷೇತ್ರದ ಅ...
13/01/2022

ಇಂದು ಸಿರಾ ತಾಲ್ಲೂಕು ಕಚೇರಿ ಮಿನಿಧಾನಸೌದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ,ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದು, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಡಾ,ರಾಜೇಶ್,ಗೌಡ ರವರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಎ.ತಿಪ್ಪೇಸ್ವಾಮಿ ರವರು ಸೇರಿದಂತೆ ತಾಲ್ಲೂಕು ದಂಡಾಧಿಕಾರಿಗಳಾದ ಮಮತಾ ರವರು ,ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆ ಯ ಅಧಿಕಾರಿಗಳು ಉಪಸ್ಥಿತರಿದ್ದರು....

Address

Sira

Alerts

Be the first to know and let us send you an email when Chidanandh M Gowda Sira posts news and promotions. Your email address will not be used for any other purpose, and you can unsubscribe at any time.

Contact The Organization

Send a message to Chidanandh M Gowda Sira:

Share