22/03/2024
*ಮತ್ತೆ ಬಂತು ಬೇಸಿಗೆ ಶಿಬಿರ.*
*ಸಾಗರ, ಹೆಗ್ಗೋಡು - ಪುರಪ್ಪೆಮನೆ ಸುತ್ತಮುತ್ತಲಿನ ಮಕ್ಕಳಿಗೆ ಈ ಸುವರ್ಣ ಅವಕಾಶ...*
ಪರೀಕ್ಷೆಗಳನ್ನು ಬರೆದು ನಿರಾಳವಾಗಿರುವ ವಿದ್ಯಾರ್ಥಿಗಳಿಗೆ ರಜಾದಿನಗಳಲ್ಲಿ ಬೇಸಿಗೆ ಶಿಬಿರದ ಸುವರ್ಣ ಸಂಧಿ.
ವರ್ಷವಿಡೀ ಪಠ್ಯಪುಸ್ತಕ , ಹಾಜರಾತಿ, ತರಗತಿ, ಮನೆಪಾಠ, ಪರೀಕ್ಷೆ , ಫಲಿತಾಂಶ..... ಈ ಸರಣಿ ಪ್ರಕ್ರಿಯೆಯಲ್ಲಿ ಮುಳುಗಿದ್ದ ವಿದ್ಯಾರ್ಥಿಗಳಿಗೆ ಭರಪೂರ ಮನರಂಜನೆಯ ಜೊತೆ ಜೀವನಾವಶ್ಯಕ ಕೌಶಲ್ಯಗಳನ್ನು , ಸೃಜನಶೀಲತೆಯನ್ನು ಮೂಡಿಸುವ ಬೇಸಿಗೆ ಶಿಬಿರವು ಮಲೆನಾಡಿನ ಸ್ವಚ್ಛಂದ ಪ್ರಕೃತಿಯ ಮಡಿಲಿನಲ್ಲಿ ಸದ್ದು ಗದ್ದಲವಿಲ್ಲದ ಪ್ರಶಾಂತ ವಾತಾವರಣದಲ್ಲಿ ಇದೇ ಬರುವ *ಏಪ್ರಿಲ್ 11 ರಿಂದ ಏಪ್ರಿಲ್ 25 ರವರೆಗೆ* ನೀನಾಸಂ ಪದವೀಧರ- ಯುವ ರಂಗನಿರ್ದೇಶಕ *ರಾಘವೇಂದ್ರ ಪುರಪ್ಪೆಮನೆ* ಅವರ ಮುಂದಾಳತ್ವದಲ್ಲಿ ಹಾಗೂ ನಾಡಿನ ಹೆಸರಾಂತ ರಂಗ ನಿರ್ದೇಶಕರುಗಳು, ನುರಿತ ನೀನಾಸಂ ಪದವೀಧರರು, ಕರಕುಶಲ ತರಬೇತುದಾರರು ಹಾಗೂ ಅರಣ್ಯ- ಪರಿಸರ, ವೈದ್ಯಕೀಯ ಮತ್ತು ಮಕ್ಕಳ ಮನೋವಿಕಾಸ ಮುಂತಾದ ವಿಷಯಗಳಿಗೆ ಮಾಹಿತಿ ನೀಡುವ ಹಲವು ಸಂಪನ್ಮೂಲವ್ಯಕ್ತಿಗಳಿಂದ *"ಪುಟಾಣಿ ಹಿರೇಮನೆ"* *ಮಕ್ಕಳ ಬೇಸಿಗೆ ರಂಗ ಶಿಬಿರ 2024.* ಸಾತ್ವಿಕಂ ಸಾಂಸ್ಕೃತಿಕ ಸಂಸ್ಥೆ ಆಯೋಜನೆಯಲ್ಲಿ *ಹಿರೇಮನೆ ಸಾತ್ವಿಕಂ ಥಿಯೇಟರ್ ಸ್ಪೇಸ್ ಆವರಣದಲ್ಲಿ* ನಡೆಯಲಿದೆ.
ಈ ಶಿಬಿರದಲ್ಲಿ *ಕಲೆ , ರಂಗಸಂಗೀತ , ಯಕ್ಷಗಾನ, ಹಾಡುಗಾರಿಕೆ, ಮಹಾಭಾರತ ಮತ್ತು ರಾಮಾಯಣ ಕಥೆ, ಕವನ ಕಟ್ಟುವಿಕೆ ,ಮುಖವಾಡ ತಯಾರಿಕೆ, ಯೋಗಾಸನ, ಪ್ರಾಣಾಯಾಮ, ಜಪಾನಿ ಶೈಲಿಯ ಬುನ್ರಾಕು ಬೊಂಬೆಯಾಟ, ಛದ್ಮವೇಷ, ವರ್ಲಿ ಚಿತ್ರ ಮತ್ತು ಹಸೆ ಚಿತ್ತಾರ ಹಾಗೂ ಮಕ್ಕಳ ನಾಟಕ ಪ್ರದರ್ಶನ, ವಿವಿಧ ರೀತಿಯ ದೇಸಿಆಟ ಮಾತ್ರವಲ್ಲದೆ ಪರಿಸರ ಸಂರಕ್ಷಣೆ, ದೇಸಿ ಆಹಾರ, ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ, ಒಂದು ದಿನ ಕಾಡಿನಲ್ಲಿ ನಡಿಗೆ (ಜಂಗಲ್ ವಾಕ್)* ಇತ್ಯಾದಿ ಸೃಜನಶೀಲ ಚಟುವಟಿಕೆಗಳಿಗೆ ವೇದಿಕೆ ಸಿಗುತ್ತದೆ. ಮಕ್ಕಳಲ್ಲಿ ಒಟ್ಟಾಗಿ ಕೆಲಸ ಮಾಡುವ ರೀತಿ, ತನ್ನ ಇತಿಮಿತಿಗಳನ್ನು ಅರಿತುಕೊಳ್ಳುವ ಬಗೆ, ಸ್ಪರ್ಧಾತ್ಮಕವಾಗಿ ತೊಡಗಿಕೊಳ್ಳುವಿಕೆ, ಹಿಂಜರಿಕೆ ಕಳಚಿಕೊಂಡು ಸಂಭಾಷಣ ಚಾತುರ್ಯ, ದೇಹ, ಧ್ವನಿ, ಭಾವನೆಗಳ ಸ್ವಯಂ ಕೃಷಿ, ತಯಾರಿ, ಸಿದ್ಧತೆ ಮತ್ತು ಪ್ರದರ್ಶನ ಇವುಗಳಿಂದ ಮಕ್ಕಳು ತಮ್ಮ ಸಾಧನೆಗಳನ್ನು ತಾವೇ ಅರಿಯುತ್ತಾ ಸಾಗುತ್ತಾರೆ. ಮಕ್ಕಳ ವ್ಯಕ್ತಿತ್ವ ವಿಕಸನದ ಕಾರ್ಯಚಟುವಟಿಕೆಯಾಗಿ ರಂಗಮಾಧ್ಯಮ ಬಹುಶಕ್ತಿಶಾಲಿ. ಇನ್ನು ತಡವೇಕೆ!.. ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯುವ ಈ ಕಾರ್ಯಾಗಾರದಲ್ಲಿ ನಿಮ್ಮ ಮಕ್ಕಳನ್ನು ಕಳುಹಿಸಿ ಅವರ ಪ್ರತಿಭೆಗೆ ಒರೆ ಹಚ್ಚಿ ಪ್ರಜ್ವಲಿಸುವಂತೆ ಮಾಡಿ. ಇಂದೇ ನಿಮ್ಮ ಮಕ್ಕಳ ಹೆಸರು ಮರೆಯದೆ ನೋಂದಾಯಿಸಿ.
**ಶಿಬಿರದ ಅರ್ಜಿ,ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಮಾರ್ಚ್ 31-3-2024 ಭಾನುವಾರ. ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.*
*ಮೊ: 9480282791, 9880872740.*