CPIM BENGALURU SOUTH

CPIM BENGALURU SOUTH Official Page of the CPIM Bengaluru South District Committee
ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ

ರಾಜಕೀಯ ದ್ವೇಷಕ್ಕಾಗಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಮೇಲೆ ED ದಾಳಿ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ...
29/05/2026

ರಾಜಕೀಯ ದ್ವೇಷಕ್ಕಾಗಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಮೇಲೆ ED ದಾಳಿ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಬೆಂಗಳೂರಿನನಲ್ಲಿ ಪ್ರತಿಭಟನೆ.

ಪಿಣರಾಯಿ ವಿಜಯನ್‌ ಮೇಲಿನ ಇ.ಡಿ. ದಾಳಿ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಸಿಪಿಐ(ಎಂ) ಪ್ರತಿಭಟನೆ

    ಕೇರಳದ ಮಾಜಿ‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಮೇಲಿನ ED ದಾಳಿ ಖಂಡಿಸಿ ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಬೆಂಗಳ...
29/05/2026


ಕೇರಳದ ಮಾಜಿ‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಮೇಲಿನ ED ದಾಳಿ ಖಂಡಿಸಿ ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ.

ಬನ್ನಿ ಸೇರೋಣ.
28/05/2026

ಬನ್ನಿ ಸೇರೋಣ.

*ಪಿಣರಾಯಿ ವಿಜಯನ್ ಮೇಲಿನ ದಾಳಿಯನ್ನು ವಿರೋಧಿಸಿ ಇಡಿ ಪ್ರಧಾನ ಕಚೇರಿ ಮುಂದೆ ಸಿಪಿಐ(ಎಂ) ಪ್ರತಿಭಟನೆ*ಕೇರಳದ ಮಾಜಿ ಮುಖ್ಯಮಂತ್ರಿ ಕಾಮ್ರೇಡ್ ಪಿಣರ...
27/05/2026

*ಪಿಣರಾಯಿ ವಿಜಯನ್ ಮೇಲಿನ ದಾಳಿಯನ್ನು ವಿರೋಧಿಸಿ ಇಡಿ ಪ್ರಧಾನ ಕಚೇರಿ ಮುಂದೆ ಸಿಪಿಐ(ಎಂ) ಪ್ರತಿಭಟನೆ*

ಕೇರಳದ ಮಾಜಿ ಮುಖ್ಯಮಂತ್ರಿ ಕಾಮ್ರೇಡ್ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲಿನ ದಾಳಿಯನ್ನು ವಿರೋಧಿಸಿ ಇ.ಡಿ. ಪ್ರಧಾನ ಕಚೇರಿಯಲ್ಲಿ ಸಿಪಿಐ(ಎಂ) ಪ್ರತಿಭಟನೆ; ಹಿರಿಯ ನಾಯಕರು ಸೇರಿದಂತೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ

ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯ ಪಿಣರಾಯಿ ವಿಜಯನ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿಯನ್ನು ಸಿಪಿಐ(ಎಂ) ತೀವ್ರವಾಗಿ ಪ್ರತಿಭಟಿಸಿದೆ. ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ವಹಿಸಿದ್ದರು.

ಪ್ರತಿಭಟನೆಯ ಸಮಯದಲ್ಲಿ ದಿಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಬಂಧನಕ್ಕೊಳಗಾದವರಲ್ಲಿ ಹಿರಿಯ ನಾಯಕಿ ಬೃಂದಾ ಕಾರಟ್, ಪೊಲಿಟ್ ಬ್ಯೂರೋ ಸದಸ್ಯರಾದ ಅಶೋಕ್ ಧವಳೆ, ಮರಿಯಮ್ ಧವಳೆ ಮತ್ತು ವಿಜೂ ಕೃಷ್ಣನ್, ಕೇಂದ್ರ ಸಮಿತಿ ಸದಸ್ಯರಾದ ವಿಕ್ರಮ್ ಸಿಂಗ್ ಮತ್ತು ದೆಹಲಿ ರಾಜ್ಯ ಕಾರ್ಯದರ್ಶಿ ಅನುರಾಗ್ ಸಕ್ಸೇನಾ ಸೇರಿದ್ದಾರೆ. ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಸಹ ಬಂಧಿಸಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಎಂ.ಎ. ಬೇಬಿ, ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಜಾರಿ ನಿರ್ದೇಶನಾಲಯ ನಡೆಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದರು ಮತ್ತು ಪಿಣರಾಯಿ ವಿಜಯನ್ ಅವರ ನಿವಾಸದ ಮೇಲಿನ ದಾಳಿಯು ರಾಜಕೀಯ ಪ್ರೇರಿತ ಪ್ರತೀಕಾರದ ಕೃತ್ಯವಾಗಿದೆ ಎಂದು ಹೇಳಿದರು. ಪಿಣರಾಯಿ ವಿಜಯನ್ ಅವರಿಗೂ ಎಕ್ಸಲಾಜಿಕ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯಗಳು ಪದೇ ಪದೇ ಗಮನಿಸಿವೆ, ಆದರೂ ಅವರ ವಿರುದ್ಧದ ರಾಜಕೀಯ ಬೇಟೆ ನಿರಂತರವಾಗಿ ಮುಂದುವರೆದಿದೆ ಎಂದು ಅವರು ಹೇಳಿದರು. ವೀಣಾ ಅವರ ತಂದೆ ಎಂಬ ಕಾರಣಕ್ಕಾಗಿಯೂ ಅವರನ್ನು ಈಗ ಗುರಿಯಾಗಿಸಲಾಗುತ್ತಿದೆ.

ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದಿಲ್ಲಿಯಲ್ಲಿ ಪ್ರಧಾನಮಂತ್ರಿಯವರನ್ನು ಭೇಟಿಯಾದ ತಕ್ಷಣ ಇಂತಹ ಕ್ರಮವು ನಡೆಯುತ್ತಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ರಾಜಕೀಯವಾಗಿ ರಚಿಸಿದ ನಾಟಕದಂತೆ ಕಾಣುತ್ತದೆ ಎಂದು ಮುಂದುವರೆದು ಅವರು ಹೇಳಿದರು. CMRL ಡೈರಿಯಲ್ಲಿ ಹೆಸರುಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿರುವ ಹಲವಾರು ವ್ಯಕ್ತಿಗಳು ರಾಜ್ಯ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಆದಾಗ್ಯೂ, ಅವರೆಲ್ಲರನ್ನೂ ನಿರ್ಲಕ್ಷಿಸಿ ಪಿಣರಾಯಿ ವಿಜಯನ್ ಅವರನ್ನು ನಿರಂತರವಾಗಿ ಗುರಿಯಾಗಿಸುತ್ತಿರುವುದು ಈ ಕ್ರಮಗಳ ಹಿಂದಿನ ರಾಜಕೀಯ ಪ್ರತೀಕಾರವನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ.

ಪಕ್ಷವು ಯಾವುದೇ ತನಿಖಾ ಪ್ರಕ್ರಿಯೆಯನ್ನು ತಡೆಯುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಅವರು ಹೇಳಿದರು. ಆದರೆ, ಕೇಂದ್ರ ಸರ್ಕಾರವು ರಾಜಕೀಯ ಗುರಿಯಿಂದ ಕೇಂದ್ರ ಸಂಸ್ಥೆಗಳ ನಗ್ನ ದುರುಪಯೋಗ ಮಾಡಿಕೊಳ್ಳುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯ ವಿರುದ್ಧ ಪಕ್ಷವು ಜನರನ್ನು ಸಜ್ಜುಗೊಳಿಸಿ ದೇಶಾದ್ಯಂತ ಬಲವಾದ ಪ್ರತಿಭಟನೆಗಳನ್ನು ಸಂಘಟಿಸುತ್ತದೆ.

27/05/2026
ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆ ವಾಪಸ್ಸಿಗೆ ಆಗ್ರಹಿಸಿ 18.05.2026 ರಂದು ಬನಶಂಕರಿಯಲ್ಲಿರುವ ನಾಡ ಕಚೇರಿಯಲ್ಲಿ ಉಪ-ತಹಸೀಲ್ದಾರ್...
18/05/2026

ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆ ವಾಪಸ್ಸಿಗೆ ಆಗ್ರಹಿಸಿ 18.05.2026 ರಂದು ಬನಶಂಕರಿಯಲ್ಲಿರುವ ನಾಡ ಕಚೇರಿಯಲ್ಲಿ ಉಪ-ತಹಸೀಲ್ದಾರ್ ಅವರ ಮುಖಾಂತರ ಪ್ರಧಾನ ಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿ ಅವರಿಗೆ ಸಿಪಿಐ(ಎಂ) ಜಯನಗರ-ಬಸವನಗುಡಿ ವಲಯ ಮತ್ತು ಕಚೇರಿ ಶಾಖೆಯಿಂದ ಮನವಿ ಪತ್ರ ನೀಡಲಾಯಿತು.

17/05/2026

ಭೋಜಶಾಲಾ-ಕಮಲ್ ಮೌಲಾ ಮಸೀದಿಯ ತೀರ್ಪು ದುರದೃಷ್ಟಕರ
ನ್ಯಾಯಾಂಗ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತ ತತ್ವಗಳನ್ನು ಎತ್ತಿಹಿಡಿಯಬೇಕು

ಭೋಜಶಾಲಾ-ಕಮಲ್ ಮೌಲಾ ಮಸೀದಿ ವಿವಾದದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ ತೀರ್ಪು ಮತ್ತು ಭಾರತೀಯ ಗಣತಂತ್ರದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಅಡಿಪಾಯಗಳ ಮೇಲೆ ಅದರ ವ್ಯಾಪಕ ಪರಿಣಾಮಗಳ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯೂರೋ ತನ್ನ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.

ಈ ಸಂಕೀರ್ಣದಲ್ಲಿ ಪ್ರಾರ್ಥನೆ ಮಾಡುವ ಹಕ್ಕನ್ನು ಮುಸ್ಲಿಮರಿಗೆ ನೀಡುವ ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್‌ಐ)ಯ ಆದೇಶವನ್ನು ತಳ್ಳಿಹಾಕುವ ಮೂಲಕ, ಈ ತೀರ್ಪು ಬಾಬರಿ ಮಸೀದಿ-ರಾಮಜನ್ಮಭೂಮಿ ಒಡೆತನದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಮಾಡಿದ ಅದೇ ವಾದಗಳನ್ನು ಪ್ರತಿಧ್ವನಿಸುತ್ತದೆ ಮತ್ತು ಇದು ಅಂತಹ ವಿವಾದಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಪೊಲಿಟ್‌ಬ್ಯುರೊ ಆತಂಕ ವ್ಯಕ್ತಪಡಿಸಿದೆ.

ಐತಿಹಾಸಿಕ ಮತ್ತು ಧಾರ್ಮಿಕ ವಿವಾದಗಳನ್ನು ಮತ್ತೆ ತೆರೆಯುವ ಮತ್ತು ಕೋಮು ವಿಭಜನೆಗಳನ್ನು ಆಳವಾಗಿಸುವ ಅಪಾಯದ ರೀತಿಯಲ್ಲಿ ತೀರ್ಮಾನಿಸುತ್ತಿರುವ ಪ್ರವೃತ್ತಿಯು ಬೆಳೆಯುತ್ತಿದ್ದು, ಈ ತೀರ್ಪನ್ನು ಅದರಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ.

ಧಾರ್ಮಿಕ ಸ್ಥಳಗಳ ಮೇಲೆ ಅಂತ್ಯವಿಲ್ಲದ ಕೋಮು ಸ್ಪರ್ಧೆಗಳನ್ನು ತಡೆಗಟ್ಟಲು ಸಂಸತ್ತು ಜಾರಿಗೊಳಿಸಿದ ಪೂಜಾ ಸ್ಥಳಗಳ ಕಾಯಿದೆ, 1991 ನ್ನು ಪರಿಗಣಿಸಲು ಇಷ್ಟವಿಲ್ಲವೆಂಬಂತೆ ಈ ತೀರ್ಪು ಕಾಣುತ್ತಿದೆ. ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ತೀರ್ಪು ಈ ಕಾಯಿದೆಯ ನಿಬಂಧನೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ.

ಈ ತೀರ್ಪು ಬಿಜೆಪಿ-ಆರ್‌ಎಸ್‌ಎಸ್‌ ಕೂಟದಂತಹ, ನಿರಂತರವಾಗಿ ಜನರನ್ನು ಕಾಡುತ್ತಿರುವ ಆತಂಕಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಲೇ ವಿಭಜಕ ಧಾರ್ಮಿಕ ಪ್ರಶ್ನೆಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸುವ ಕೋಮುವಾದಿ ಶಕ್ತಿಗಳಿಗೆ ಸಹಾಯ ಮಾಡುತ್ತದೆಯಷ್ಟೇ.

ಮೇಲ್ಮನವಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್ ಈ ತೀರ್ಪನ್ನು ರದ್ದುಗೊಳಿಸುತ್ತದೆ ಎಂದು ಪಕ್ಷವು ಆಶಿಸುವುದಾಗಿ ಪೊಲಿಟ್‌ಬ್ಯುರೊ ಹೇಳಿದೆ.

ಎಲ್ಲಾ ರೂಪಗಳಲ್ಲೂ ಕೋಮುವಾದವು ರಾಷ್ಟ್ರೀಯ ಏಕತೆ ಮತ್ತು ಪ್ರಜಾಪ್ರಭುತ್ವವಾದಿ ಬದುಕಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆಯಾದ್ದರಿಂದ, ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತ ತತ್ವಗಳನ್ನು ಎತ್ತಿಹಿಡಿಯಬೇಕು ಎಂದು ನ್ಯಾಯಾಂಗವನ್ನು ಸಿಪಿಐ(ಎಂ) ನ ಪೊಲಿಟ್ ಬ್ಯೂರೋ ಆಗ್ರಹಿಸಿದೆ.

ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಪ್ರಯತ್ನಗಳನ್ನು ಪ್ರತಿರೋಧಿಸಲು ಮತ್ತು ಜೀವನೋಪಾಯ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಎಲ್ಲಾ ನಾಗರಿಕರ ಹಕ್ಕುಗಳ ಸುತ್ತ ಹೋರಾಟಗಳನ್ನು ಬಲಪಡಿಸಲು ಸಿಪಿಐ(ಎಂ) ಎಲ್ಲಾ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಕರೆ ನೀಡುವುದಾಗಿ ಪೊಲಿಟ್‌ಬ್ಯುರೊ ಹೇಳಿದೆ.

17/05/2026

ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್-ಡೀಸೆಲ್ ದರ ಏರಿಕೆ; ಮೋದಿ ಸರ್ಕಾರದ ವಿರುದ್ಧ CPI(M) ಆಕ್ರೋಶ ಪ್ರತಿಭಟನೆ!

ಚುನಾವಣೆ ಬೆನ್ನಲ್ಲೆ ಪೆಟ್ರೋಲ್-ಡೀಸೆಲ್ ದರ ಏರಿಕೆ: ಬಿಜೆಪಿ/ಮೋದಿ ಸರ್ಕಾರದ ಜನದ್ರೋಹಕ್ಕೆ ಸಿಪಿಐ(ಎಂ)  ತೀವ್ರ ಖಂಡನೆ:ಆನೇಕಲ್ ಬಸ್ ನಿಲ್ದಾಣ ಬಳ...
16/05/2026

ಚುನಾವಣೆ ಬೆನ್ನಲ್ಲೆ ಪೆಟ್ರೋಲ್-ಡೀಸೆಲ್ ದರ ಏರಿಕೆ: ಬಿಜೆಪಿ/ಮೋದಿ ಸರ್ಕಾರದ ಜನದ್ರೋಹಕ್ಕೆ ಸಿಪಿಐ(ಎಂ) ತೀವ್ರ ಖಂಡನೆ:
ಆನೇಕಲ್ ಬಸ್ ನಿಲ್ದಾಣ ಬಳಿ ಪ್ರತಿಭಟನೆ:

"ಪಂಚ ರಾಜ್ಯಗಳ ಚುನಾವಣೆಯಲ್ಲಿ ಸಾಕಷ್ಟು ದಾಸ್ತಾನಿದೆ, ಜನ ಗಾಬರಿಗೊಳ್ಳಬೇಡಿ ಎಂದು ಯಾವ ಎಗ್ಗು ಸಿಗ್ಗಿಲ್ಲದೆ ಹೇಳುತ್ತಿದ್ದ ಮೋದಿ ಸರ್ಕಾರ, ಫಲಿತಾಂಶ ಬಂದೊಡನೆಯೇ ಪೆಟ್ರೋಲ್-ಡೀಸೆಲ್ ದರ ಏರಿಸಿ ಜನರ ಬೆನ್ನು ಮುರಿಯುವ ಕೆಲಸ ಮಾಡಿದೆ.

ಇದಕ್ಕಿಂತ ದೊಡ್ಡ ಜನವಿರೋಧಿ ನಡೆ ಬೇರೆ ಇಲ್ಲ ಎಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

"ಅಮೆರಿಕಾ-ಇಸ್ರೇಲ್ ಸಾಮ್ರಾಜ್ಯಶಾಹಿಗಳ ದುರಾಕ್ರಮಣದಿಂದ ಹಲವೆಡೆ ಬಿಕ್ಕಟ್ಟು ಸೃಷ್ಟಿಯಾಗಿದೆ.
ವಿವೇಕಯುತ ನಡೆಯೆಂದರೆ ಈ ಯುದ್ಧೋನ್ಮಾದಗಳ ವಿರುದ್ಧ ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಯುದ್ಧ ನಿಲ್ಲಿಸಲು ಪ್ರಯತ್ನಿಸುವುದಾಗಿತ್ತು. ಆದರೆ ಮೋದಿಯವರು ಅಮೆರಿಕಾದ ಹಿಂಬಾಲಕ ನಾಯಕನಾಗಿ, ಇಸ್ರೇಲನ್ನು `ತಂದೆ ರಾಷ್ಟ್ರ' ಎಂಬ ಅಸಂಬದ್ಧ ಜಪ ಮಾಡಿ, ನೇತನ್ಯಾಹುವನ್ನು ತಬ್ಬಿಕೊಂಡು ಹಾಸ್ಯಾಸ್ಪದರಾಗಿದ್ದಾರೆ.

ಇದು ಜಾಗತಿಕವಾಗಿ ದಕ್ಷಿಣದ ದೇಶಗಳ ನಾಯಕತ್ವಕ್ಕೆ ಕಳಂಕ" ತಂದಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.

"ಇತರ ಅನೇಕ ದೇಶಗಳು ತಮ್ಮ ನಾಗರಿಕರ ಹಿತರಕ್ಷಣೆಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿವೆ. ಆದರೆ ಭಾರತದಲ್ಲಿ ಅಂತಹ ಕ್ರಮ ಕೈಗೊಳ್ಳದೆ, ದುಡಿಯುವ ಜನರ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಹೊರೆ ಹೆಚ್ಚಿಸುವುದೇ ಕೇಂದ್ರದ ಬಿ.ಜೆ.ಪಿ ನೇತೃತ್ವದ ಮೋದಿ ಸರ್ಕಾರದ ಉದ್ದೇಶವಾಗಿದೆ.

ಜನಹಿತಕ್ಕಿಂತ ಬಿಜೆಪಿ ಗೆ ಮತ್ತೆ ಮತ್ತೆ ಚುನಾವಣೆ ಗೆಲ್ಲುವುದೇ ಮುಖ್ಯ ಎಂಬುದು ಮತ್ತೊಮ್ಮೆ ರುಜುವಾತಾಗಿದೆ" ಎಂದು ಸಿಪಿಐ(ಎಂ) ಆರೋಪಿಸಿದೆ.

"ಜನರಿಗೆ ಮಿತವ್ಯಯದ ಪಾಠ ಮಾಡಿದ ಮೋದಿ, ಮರುದಿನವೇ ರೋಡ್ ಶೋ ಮತ್ತು ಏರೋ ಶೋಗಳಲ್ಲಿ ಪಾಲ್ಗೊಂಡು ದೇಶದ ಜನರನ್ನು ಅವಹೇಳನ ಮಾಡುತ್ತಿದ್ದಾರೆ.

ದರ ಏರಿಕೆ ಮಾಡುವ ಬದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳನ್ನು ಕಡಿತಗೊಳಿಸಬೇಕಾಗಿತ್ತು ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಈ ಹೊರೆಯನ್ನು ಜನರ ಮೇಲೆ ಹೊರಿಸಬಾರದು" ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಜಿಲ್ಲಾಧ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

16/05/2026

ಚುನಾವಣೆ ಬೆನ್ನಲ್ಲೆ ಪೆಟ್ರೋಲ್-ಡೀಸೆಲ್ ದರ ಏರಿಕೆ: ಬಿಜೆಪಿ/ಮೋದಿ ಸರ್ಕಾರದ ಜನದ್ರೋಹಕ್ಕೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರ ಖಂಡನೆ:

"ಪಂಚ ರಾಜ್ಯಗಳ ಚುನಾವಣೆಯಲ್ಲಿ ಸಾಕಷ್ಟು ದಾಸ್ತಾನಿದೆ, ಜನ ಗಾಬರಿಗೊಳ್ಳಬೇಡಿ ಎಂದು ಯಾವ ಎಗ್ಗು ಸಿಗ್ಗಿಲ್ಲದೆ ಹೇಳುತ್ತಿದ್ದ ಮೋದಿ ಸರ್ಕಾರ, ಫಲಿತಾಂಶ ಬಂದೊಡನೆಯೇ ಪೆಟ್ರೋಲ್-ಡೀಸೆಲ್ ದರ ಏರಿಸಿ ಜನರ ಬೆನ್ನು ಮುರಿಯುವ ಕೆಲಸ ಮಾಡಿದೆ.

ಇದಕ್ಕಿಂತ ದೊಡ್ಡ ಜನವಿರೋಧಿ ನಡೆ ಬೇರೆ ಇಲ್ಲ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

"ಅಮೆರಿಕಾ-ಇಸ್ರೇಲ್ ಸಾಮ್ರಾಜ್ಯಶಾಹಿಗಳ ದುರಾಕ್ರಮಣದಿಂದ ಹಲವೆಡೆ ಬಿಕ್ಕಟ್ಟು ಸೃಷ್ಟಿಯಾಗಿದೆ.
ವಿವೇಕಯುತ ನಡೆಯೆಂದರೆ ಈ ಯುದ್ಧೋನ್ಮಾದಗಳ ವಿರುದ್ಧ ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಯುದ್ಧ ನಿಲ್ಲಿಸಲು ಪ್ರಯತ್ನಿಸುವುದಾಗಿತ್ತು. ಆದರೆ ಮೋದಿಯವರು ಅಮೆರಿಕಾದ ಹಿಂಬಾಲಕ ನಾಯಕನಾಗಿ, ಇಸ್ರೇಲನ್ನು `ತಂದೆ ರಾಷ್ಟ್ರ' ಎಂಬ ಅಸಂಬದ್ಧ ಜಪ ಮಾಡಿ, ನೇತನ್ಯಾಹುವನ್ನು ತಬ್ಬಿಕೊಂಡು ಹಾಸ್ಯಾಸ್ಪದರಾಗಿದ್ದಾರೆ.

ಇದು ಜಾಗತಿಕವಾಗಿ ದಕ್ಷಿಣದ ದೇಶಗಳ ನಾಯಕತ್ವಕ್ಕೆ ಕಳಂಕ" ತಂದಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.

"ಇತರ ಅನೇಕ ದೇಶಗಳು ತಮ್ಮ ನಾಗರಿಕರ ಹಿತರಕ್ಷಣೆಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿವೆ. ಆದರೆ ಭಾರತದಲ್ಲಿ ಅಂತಹ ಕ್ರಮ ಕೈಗೊಳ್ಳದೆ, ದುಡಿಯುವ ಜನರ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಹೊರೆ ಹೆಚ್ಚಿಸುವುದೇ ಕೇಂದ್ರದ ಬಿ.ಜೆ.ಪಿ ನೇತೃತ್ವದ ಮೋದಿ ಸರ್ಕಾರದ ಉದ್ದೇಶವಾಗಿದೆ.

ಜನಹಿತಕ್ಕಿಂತ ಬಿಜೆಪಿ ಗೆ ಮತ್ತೆ ಮತ್ತೆ ಚುನಾವಣೆ ಗೆಲ್ಲುವುದೇ ಮುಖ್ಯ ಎಂಬುದು ಮತ್ತೊಮ್ಮೆ ರುಜುವಾತಾಗಿದೆ" ಎಂದು ಸಿಪಿಐ(ಎಂ) ಆರೋಪಿಸಿದೆ.

"ಜನರಿಗೆ ಮಿತವ್ಯಯದ ಪಾಠ ಮಾಡಿದ ಮೋದಿ, ಮರುದಿನವೇ ರೋಡ್ ಶೋ ಮತ್ತು ಏರೋ ಶೋಗಳಲ್ಲಿ ಪಾಲ್ಗೊಂಡು ದೇಶದ ಜನರನ್ನು ಅವಹೇಳನ ಮಾಡುತ್ತಿದ್ದಾರೆ.

ದರ ಏರಿಕೆ ಮಾಡುವ ಬದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳನ್ನು ಕಡಿತಗೊಳಿಸಬೇಕಾಗಿತ್ತು ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಈ ಹೊರೆಯನ್ನು ಜನರ ಮೇಲೆ ಹೊರಿಸಬಾರದು" ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

ವಂದನೆಗಳೊಂದಿಗೆ,

ಡಾ.ಕೆ.ಪ್ರಕಾಶ್
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಸಮಿತಿ...

Address

Anekal
562106

Alerts

Be the first to know and let us send you an email when CPIM BENGALURU SOUTH posts news and promotions. Your email address will not be used for any other purpose, and you can unsubscribe at any time.

Contact The Organization

Send a message to CPIM BENGALURU SOUTH:

Share