Aazad Yuva Brigade

Aazad Yuva Brigade Young minds attention for society. �

"ಕಾರ್ಗಿಲ್ ವಿಜಯ್ ದಿವಸ್". ಪ್ರತಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತೀಯರಿ...
26/07/2023

"ಕಾರ್ಗಿಲ್ ವಿಜಯ್ ದಿವಸ್". ಪ್ರತಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತೀಯರಿಗೆ ಇದು ಎಂದು ಮರೆಯದ ದಿವಾಗಿದೆ. ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಹೌದು. ಕಾರ್ಗಿಲ್‌ ಯುದ್ಧ ಭಾರತೀಯ ಪ್ರತಿಯೋಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ.
1999ನೇ ಇಸವಿಯ ಜುಲೈ 26ರಂದು ಭಾರತೀಯ ಸೈನಿಕರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್‌-ಡ್ರಾಸ್‌ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ 24 ವರ್ಷ ತುಂಬುತ್ತದೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್‌ ಆಚರಿಸಲಾಗುತ್ತದೆ.
1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್‌ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು.
ಅಂದಹಾಗೆ ಕಾಶ್ಮೀರದಲ್ಲಿರುವ ಕಾರ್ಗಿಲ್‌ ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್‌ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿದೆ. ಲೇಹ್ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್ ಮೂಲಕ ಹಾದು ಹೋಗುತ್ತದೆ. ಈ ಪ್ರದೇಶದಲ್ಲಿ ಇರುವ ಏಕೈಕ ಹೆದ್ದಾರಿ ಇದಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್‌ಗೂ ಸಂಪರ್ಕ ಕಲ್ಪಿಸುತ್ತದೆ ಈ ಹೆದ್ದಾರಿ.

ಯುದ್ಧ ಆರಂಭವಾಗಿದ್ದು ಏಕೆ?
ಈ ಯುದ್ಧ ನಡೆಯಲು ಮುಖ್ಯ ಕಾರಣ ಪಾಕಿಸ್ತಾನದ ಮೋಸದಾಟ. ಕಾರ್ಗಿಲ್‌ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಇದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಮೈನಸ್‌ ಡಿಗ್ರಿ ಸೆಲ್ಸಿಯಸ್‌ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್‌ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ.
ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿತ್ತು.
1999 ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್‌ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಚರಣೆ

ಆರಂಭದಲ್ಲಿ ಪಾಕಿಸ್ತಾನೀಯರು ಭಾರತದ ಒಳಗೆ ಸುಮಾರು ದೂರ ನುಸುಳಿದ್ದರು.ಆದರು ಅದು ಭಾರತೀಯ ಸೇನೆಯ ಅರಿವಿಗೆ ಬಂದಿರಲಿಲ್ಲ. ಆದರೆ ಪಾಕಿಸ್ತಾನಿಯರನ್ನು ಕಂಡ ಕಾಶ್ಮೀರದ ಕೆಲವು ಕುರಿಗಾಹಿ ಜನರು, ಭಾರತೀಯ ಸೇನೆಗೆ ವಿಷಯ ಮುಟ್ಟಿಸಿದ್ದರು. ತಕ್ಷಣವೇ ಕಾರ್ಯ ಪ್ರರುತ್ತಾರದ ಸೇನಾಧಿಕಾರಿಗಳು, ಐದು ಯೋಧರನ್ನು ಗಸ್ತು ತಿರುಗಲೆಂದು ಕಳುಹಿಸಿಕೊಟ್ಟರು.
ಆದರೆ ಆಕ್ರಮಣ ಮನಸ್ಥತಿಯಲ್ಲಿದ್ದ ಪಾಕ್‌ನ ಸೇನೆ, ಭಾರತದ ಆ ಐದು ಯೋದರನ್ನು ಚಿತ್ರಹಿಂಸೆ ನೀಡಿ ಕೊಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ, ತಕ್ಷಣವೇ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ನಿರ್ಧರಿಸಿತು. ಇದಕ್ಕಾಗಿ ಸೇನೆಯನ್ನು ಸಿದ್ಧಗೊಳಿಸಿತು. ಭಾರತ ಸರ್ಕಾರ ಇಪ್ಪತ್ತು ಸಾವಿರ ಭಾರತೀಯ ಸೈನಿಕರನ್ನ ಸಜ್ಜುಗೊಳಿಸಿ ಮೇ 3 ರಿಂದ ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಚರಣೆ ಆರಂಭ ಮಾಡಿತು.

ಆಪರೇಷನ್ ಸಫೇದ್‌ ಸಾಗರ್

ಅತ್ತ ಪಾಕಿಸ್ತಾನವು ಕೂಡಾ ಭಾರತದ ಮೇಲೆ ದಾಳಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅದರಂತೆ ಪಾಕ್‌ ಸುಮಾರು 5,000 ಕ್ಕೂ ಹೆಚ್ಚು ಸೈನಿಕರನ್ನ ಕಳುಹಿಸಿಕೊಟ್ಟಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಶಸ್ತ್ರಸಜ್ಜಿತವಾಗಿ ಮುನ್ನುಗ್ಗಿತ್ತು. ಎತ್ತರದ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಶೆಲ್‌ ದಾಲಿಯ ಮೂಲಕ ಭಾರತೀಯ ಸೇನೆ ಪಾಕಿಸ್ತಾನಿಯ ಬಂಕರ್‌ಗಳತ್ತ ದೃಷ್ಟಿ ಇರಿಸಿತ್ತು. ಭಾರತಕ್ಕೆ ಬೋಫೋರ್ಸ್‌ ಫಿರಂಗಿ, ವಾಯುಪಡೆಯ ಮಿಗ್-27, ಮಿಗ್-29 ಯುದ್ಧ ವಿಮಾನಗಳು ಸಾಕಷ್ಟು ಬಲ ತುಂಬಿದ್ದವು.

'ಆಪರೇಷನ್ ಸಫೇದ್‌ ಸಾಗರ್' ಅನ್ನು ಪ್ರಾರಂಭಿಸಿದ ಭಾರತೀಯ ಸೇನೆ, ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಮಾಡಲು ಇಂಡಿಯನ್ ಮಿಗ್ -21, ಮಿಗ್ -27 ಮತ್ತು ಮಿರಾಜ್ 2000 ನಂತಹ ಯುದ್ಧ ವಿಮಾನಗಳನ್ನು ಬಳಸಿತು. ಪಾಕ್‌ ಶತ್ರುಗಳನ್ನು ನಿರ್ಮೂಲನೆ ಮಾಡಲು ಐಎಎಫ್‌ ಯೋಧರು ಈ ವಿಮಾನಗಳಿಂದ ರಾಕೆಟ್ ಮತ್ತು ಕ್ಷಿಪಣಿಗಳನ್ನು ಹಾರಿಸಿದರು.
ಆಪರೇಷನ್ ತಲ್ವಾರ್
ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ 'ಆಪರೇಷನ್ ತಲ್ವಾರ್' ಅನ್ನು ಪ್ರಾರಂಭಿಸಿತು. ಇದರಿಂದಾಗಿ ಪಾಕಿಸ್ತಾನೀಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. ಪಾಕಿಸ್ತಾನಿಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಜುಲೈ 24 ರಂದು ಪಾಕಿಗಳನ್ನು ಹಿಮ್ಮೆಟ್ಟಿಸಿ ಭಾರತ ಯುದ್ಧ ಗೆದ್ದಿತು. ಇದಾದ ಬಳಿಕ ಪ್ರತೀ ವರ್ಷ ಜುಲೈ 26 ರಂದು ಕಾರ್ಗಿಲ್‌ ವಿಜಯ ದಿವಸ್‌ ಅನ್ನು ಆಚರಣೆ ಮಾಡಲಾಗುತ್ತದೆ.

ಆಜಾದ್ ಯುವ ಬ್ರಿಗೇಡ್ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು 💐ನಾಡಿನ ಹೆಮ್ಮೆಯ ನಾಡಪ್ರಭು ಕೆಂಪೇಗೌಡರು.ನಾಡಪ್ರಭು ಕೆಂಪೇಗೌಡರು ವಿಜ...
27/06/2023

ಆಜಾದ್ ಯುವ ಬ್ರಿಗೇಡ್ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು 💐
ನಾಡಿನ ಹೆಮ್ಮೆಯ ನಾಡಪ್ರಭು ಕೆಂಪೇಗೌಡರು.

ನಾಡಪ್ರಭು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು.

ಕೆಂಪೇಗೌಡರು ಹಂಪಿಯ ವೈಭವದ ಪ್ರೇರಣೆಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.

ಕೆಂಪೇಗೌಡ ಅವರ ಆಡಳಿತಾವಧಿಯಲ್ಲಿ ನಾಡಿನ ಎಲ್ಲಾ ರಸ್ತೆಗಳ ಎರಡೂ ಬದಿಗಳಲ್ಲಿ ಸಾಲುಮರಗಳನ್ನು ನೆಡೆಸಿದ್ದರು. ಜೊತೆಗೆ ಕೆರೆ, ಬಾವಿಗಳನ್ನು ತೋಡಿಸಿ ನಗರಕ್ಕೆ ಹಾಗೂ ಕೃಷಿಗೆ ನೀರಿನ ಬವಣೆಯನ್ನು ತೀರಿಸಿದ್ದರು. ಸ್ವತಃ ತಾವೇ ರಸ್ತೆಗಳಲ್ಲಿ ಸಂಚರಿಸುತ್ತಾ ಕಳ್ಳಕಾಕರ ಭಯವಿರದಂತೆ ಪ್ರಜೆಗಳಿಗೆ ರಕ್ಷಣೆಯನ್ನು ನೀಡಿದ್ದವರು.

ಸುಭದ್ರ ರಾಜಧಾನಿಯ ನಿರ್ಮಾಣದ ಜೊತೆ ಜೊತೆಗೆ ನಾಡಿನ ಆಯಕಟ್ಟಿನ ಸ್ಥಳಗಳಲ್ಲಿ ಕೋಟೆಗಳನ್ನು ಕಟ್ಟಿಸಿ, ಸೈನಿಕರ ಕುಟುಂಬದವರಿಗೆಂದೇ ಕೋಟೆಗಳ ಸಮೀಪದಲ್ಲಿಯೇ ವಸತಿ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದರು.

ಕೆಂಪೇಗೌಡರ ದೈವ ಭಕ್ತಿಯ ಪ್ರತೀಕವಾಗಿ ನಗರದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸುವುದರ ಜೊತೆಗೆ ಪುರಾತನ ದೇವಾಲಯಗಳನ್ನು ಕೂಡ ಪುನರುತ್ಥಾನ ಗೊಳಿಸಿದ್ದರು.

ವಿಜಯನಗರದ ಪರವಾಗಿ ತಾಳಿಕೋಟೆಯ ಯುದ್ದದಲ್ಲಿ ಭಾಗವಹಿಸಿ ಪರಾಕ್ರಮ ಮೆರೆದವರು.

ಅಂತಹ ನಮ್ಮ ದೇಶದ ಹೆಮ್ಮೆಯ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ನಾಡಿನ ಎಲ್ಲಾ ಪ್ರಜೆಗಳಿಗೆ ಆಜಾದ್ ಯುವ ಬ್ರಿಗೇಡ್ ರಿ ವತಿಯಿಂದ ಶುಭಾಶಯಗಳನ್ನು ಕೋರುತ್ತಿದ್ದೇವೆ.

ವಂದನೆಗಳೊಂದಿಗೆ.

ಆಜಾದ್ ಯುವ ಬ್ರಿಗೇಡ್(ರಿ)ವತಿಯಿಂದ ಆನೇಕಲ್ ಟೌನಿನ ಶ್ರೀಮತಿ ರೇಣುಕಾ ರವರು ನೇಪಾಳದಲ್ಲಿ ನಡೆದ ವಿಶೇಷಚೇತನ  ವಿಭಾಗದ ರಾಷ್ಟೀಯ ಥ್ರೋ ಬಾಲ್  ಸ್ಪರ...
27/02/2023

ಆಜಾದ್ ಯುವ ಬ್ರಿಗೇಡ್(ರಿ)ವತಿಯಿಂದ ಆನೇಕಲ್ ಟೌನಿನ ಶ್ರೀಮತಿ ರೇಣುಕಾ ರವರು ನೇಪಾಳದಲ್ಲಿ ನಡೆದ ವಿಶೇಷಚೇತನ ವಿಭಾಗದ ರಾಷ್ಟೀಯ ಥ್ರೋ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ಕ್ರೀಡಾಪಟುವಿಗೆ ಸನ್ಮಾನ ಮಾಡಿ ಶುಭಾಶಯಗಳನ್ನು ಕೋರಲಾಯಿತು.
ಇಂಡಿಯನ್ ಥ್ರೋಬಾಲ್ ಪ್ಯಾರಾ ಟೀಂ ನ ಉಪನಾಯಕರು ಆದ ಇವರು ಆನೇಕಲ್ ನಗರಕ್ಕೆ ಕೀರ್ತಿ ಹೆಚ್ಚಿಸಿದ್ದಾರೆ.

ಚಂದ್ರಶೇಖರ್ ಆಜಾದ್ ಬಲಿದಾನದ ಪುಣ್ಯ ಸ್ಮರಣೆಯ ದಿನದಂದು ಆಜಾದ್ ಸ್ವಯಂಸೇವಾ   ಫೌಂಡೇಶನ್ ಇನ್ನು ಮುಂದೆ  *ಆಜಾದ್ ಯುವ ಬ್ರಿಗೇಡ್(ರಿ)* ಆಗಿ ಸಾಮಾ...
27/02/2023

ಚಂದ್ರಶೇಖರ್ ಆಜಾದ್ ಬಲಿದಾನದ ಪುಣ್ಯ ಸ್ಮರಣೆಯ ದಿನದಂದು ಆಜಾದ್ ಸ್ವಯಂಸೇವಾ ಫೌಂಡೇಶನ್ ಇನ್ನು ಮುಂದೆ *ಆಜಾದ್ ಯುವ ಬ್ರಿಗೇಡ್(ರಿ)* ಆಗಿ ಸಾಮಾಜಿಕ ಸೇವೆ ಮುಂದುವರಿಸುತ್ತದೆ.

ಈ ದಿನದಂದು ರಾಚಮಾನ ಹಳ್ಳಿಯ ಸ್ನೇಹ ಭಾರತಿ ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮತ್ತು ವಿಶೇಷ ಚೇತನರ ಸಂಸ್ಥೆಯಲ್ಲಿ ಮಕ್ಕಳಿಗ ಪಾದರಕ್ಷೆಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಆಜಾದ್ ಯುವ ಬ್ರಿಗೇಡ್(ರಿ) ನ ಪದಾಧಿಕಾರಿಗಳಿಗೆ ಧನ್ಯವಾದಗಳು.

ಆಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ ಮುತ್ಯಾಲಮಡುವು ಅರಣ್ಯ ಪ್ರದೇಶಲ್ಲಿ ಪರಾಕ್ರಮ ದಿನದ ಪ್ರಯುಕ್ತ ವೀರ ಸೇನಾನಿ ಸುಭಾಷ ಚಂದ್ರ ಬೋಸ್ ರನ್ನು ...
23/01/2023

ಆಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ ಮುತ್ಯಾಲಮಡುವು ಅರಣ್ಯ ಪ್ರದೇಶಲ್ಲಿ ಪರಾಕ್ರಮ ದಿನದ ಪ್ರಯುಕ್ತ ವೀರ ಸೇನಾನಿ ಸುಭಾಷ ಚಂದ್ರ ಬೋಸ್ ರನ್ನು ನೆನದು ಪುಷ್ಪ ಅರ್ಚನೆ ಮಾಡಲಾಯಿತು.

https://youtu.be/qWX8Yzjz9HI
23/01/2023

https://youtu.be/qWX8Yzjz9HI

ಆಜಾದ್ ಸ್ವಾಮಿ ಸೇವಾ ಫೌಂಡೇಶನ್ ವತಿಯಿಂದ ನಾಲ್ಕನೇ ವರ್ಷದ ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಸಂತರಾದ ಶ್ರೀ ಶ್ರೀ ಶಿವಕುಮಾರ ಸ್ವಾಮ.....

ಆಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ ನಾಲ್ಕನೇ ವರ್ಷದ ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಸಂತರಾದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್...
21/01/2023

ಆಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ ನಾಲ್ಕನೇ ವರ್ಷದ ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಸಂತರಾದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಮತ್ತು ಪುಷ್ಪಾರ್ಚನೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಆಜಾದ್ ಸ್ವಯಂಸೇವಾ ಫೌಂಡೇಶನ್ ಪದಾಧಿಕಾರಿಗಳು ಆನೇಕಲ್ ರವಿ, ಆನೇಕಲ್ ನರೇಶ್, ಮಹೇಶ್, ಜಯಂತ್, ಗಿರೀಶ್ GRB, ಶಂಕರ್, ವೈಭವ್,ಭರತ್ ಹಾಜರಿದ್ದರು.

ಆಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ  'ಮನೆ ಮನೆಗೆ ಕನ್ನಡ'ಎನ್ನುವ ಪರಿಕಲ್ಪನೆಯಲ್ಲಿ ಕನ್ನಡದ ಕಂಪನ್ನು ಪಸರಿಸಲು ಆನೇಕಲ್ ನ  ವಿಶೇಷ ವ್ಯಕ್ತಿ...
21/12/2022

ಆಜಾದ್ ಸ್ವಯಂ ಸೇವಾ ಫೌಂಡೇಶನ್ ವತಿಯಿಂದ 'ಮನೆ ಮನೆಗೆ ಕನ್ನಡ'ಎನ್ನುವ ಪರಿಕಲ್ಪನೆಯಲ್ಲಿ ಕನ್ನಡದ ಕಂಪನ್ನು ಪಸರಿಸಲು ಆನೇಕಲ್ ನ ವಿಶೇಷ ವ್ಯಕ್ತಿಗಳಿಗೆ ಕನ್ನಡ ಪುಸ್ತಕ ನೀಡುವ ಮುಖಾಂತರ ಕನ್ನಡ ಪ್ರೇಮ ತೋರಲಾಯಿತು.

Address

Anekal
562106

Telephone

+919945823215

Website

Alerts

Be the first to know and let us send you an email when Aazad Yuva Brigade posts news and promotions. Your email address will not be used for any other purpose, and you can unsubscribe at any time.

Share

Category