BSP Anekal taluk assembly

BSP Anekal taluk assembly “Bahujan Samaj Party - Anekal Taluk Assembly Unit. We are fighting for social justice and people’s ri

18/03/2026

“ಒಗ್ಗಟ್ಟೇ ಬಹುಜನರ ನಿಜವಾದ ಶಕ್ತಿ”ಈ ದೇಶದ ಇತಿಹಾಸ ನೋಡಿದರೆ,ಒಂದು ಸತ್ಯ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ —ಬಹುಜನರು ಯಾವಾಗ ಒಗ್ಗಟ್ಟಾಗಿದ್ರೋ...
17/03/2026

“ಒಗ್ಗಟ್ಟೇ ಬಹುಜನರ ನಿಜವಾದ ಶಕ್ತಿ”
ಈ ದೇಶದ ಇತಿಹಾಸ ನೋಡಿದರೆ,
ಒಂದು ಸತ್ಯ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ —
ಬಹುಜನರು ಯಾವಾಗ ಒಗ್ಗಟ್ಟಾಗಿದ್ರೋ, ಆಗಲೇ ಇತಿಹಾಸ ಬದಲಾಗಿದೆ.
Kanshi Ram ಅವರು ಹೇಳಿದ
“Jiski Jitni Sankhya Bhari, Uske Itni Hissedari”
ಎಂಬ ಘೋಷವಾಕ್ಯ ಕೇವಲ ಮಾತಲ್ಲ…
ಅದು ನಮ್ಮ ಹಕ್ಕಿನ ದಾರಿ ತೋರಿಸುವ ದೀಪ.
ವಿಭಜನೆಯಿಂದ ನಷ್ಟ — ಏಕತೆಯಿಂದ ಶಕ್ತಿ
ನಮ್ಮ ನಡುವೆ ಜಾತಿ, ಉಪಜಾತಿ, ಭಿನ್ನಾಭಿಪ್ರಾಯಗಳಿವೆ — ಇದು ನಿಜ.
ಆದರೆ ಅದನ್ನೇ ಹಿಡಿದು ನಾವು ಪರಸ್ಪರ ಎದುರಾಗಿ ನಿಂತರೆ, ಅದು ನಮ್ಮ ಶತ್ರುಗಳಿಗೆ ಲಾಭ, ನಮಗೆ ನಷ್ಟ.
👉 ನಾವು ಒಡೆದೊದ್ರೇ — ನಮ್ಮ ಶಕ್ತಿ ಕುಗ್ಗುತ್ತದೆ
👉 ನಾವು ಒಗ್ಗಟ್ಟಾದ್ರೆ — ನಮ್ಮ ಧ್ವನಿ ಬಲವಾಗುತ್ತದೆ.
ನ್ಯಾಯ ಬೇಕು — ಆದರೆ ಒಗ್ಗಟ್ಟಿನೊಂದಿಗೆ
ಒಳ ಮೀಸಲಾತಿ ಆಗಲಿ, ಹಕ್ಕುಗಳ ವಿಚಾರವಾಗಲಿ —ಎಲ್ಲರಿಗೂ ನ್ಯಾಯ ಸಿಗಬೇಕು ಅನ್ನೋದು ನಮ್ಮ ಆಶಯ. ಆದರೆ ಪ್ರಶ್ನೆ ಒಂದೇ:
👉 “ನ್ಯಾಯದ ಹೆಸರಿನಲ್ಲಿ ನಾವು ಒಡೆಯಬೇಕಾ…
ಅಥವಾ ಒಗ್ಗಟ್ಟಿನಿಂದಲೇ ನ್ಯಾಯ ಸಾಧಿಸಬೇಕಾ?”
ನಿಜವಾದ ದಾರಿ ಏನು ಅಂದರೆ —
ಒಬ್ಬರ ಹಕ್ಕು ಇನ್ನೊಬ್ಬರಿಗೆ ವಿರೋಧವಾಗಬಾರದು.
-:ನಮ್ಮ ಮೂಲ ತತ್ವ:-
Kanshi Ram ಅವರ ದೂರದೃಷ್ಟಿ ಸ್ಪಷ್ಟ:
✓ ಬಹುಜನರು ಒಗ್ಗಟ್ಟಾಗಬೇಕು.
✓ ಸಂಖ್ಯಾಬಲವನ್ನು ಶಕ್ತಿಯಾಗಿ ಮಾರ್ಪಡಿಸಬೇಕು.
✓ ರಾಜ್ಯಾಧಿಕಾರ ಪಡೆಯುವುದರ ಮುಖಾಂತರ, ಆರ್ಥಿಕ, ಸಾಮಾಜಿಕ ಹಕ್ಕುಗಳನ್ನು ಪಡೆಯಬೇಕು.
ಆದರೆ ಈ ಎಲ್ಲಾ ಸಾಧ್ಯವಾಗೋದು ಒಂದೇ ಸಂದರ್ಭದಲ್ಲಿ —ನಾವು ಒಂದಾಗಿ ನಿಂತಾಗ ಮಾತ್ರ!
ಇಂದಿನ ಹೊಣೆಗಾರಿಕೆ ಇವತ್ತು ನಾವು ತೆಗೆದುಕೊಳ್ಳೋ ನಿರ್ಧಾರ ನಾಳೆಯ ಬಹುಜನರ ಭವಿಷ್ಯ ನಿರ್ಧರಿಸುತ್ತದೆ.
ನಾವು ಒಡೆಯುವ ದಾರಿಯನ್ನು ಆಯ್ಕೆ ಮಾಡ್ತೀವಾ? ಅಥವಾ ಒಗ್ಗಟ್ಟಿನ ದಾರಿಯನ್ನು ಹಿಡಿದು ಮುಂದುವರೆಯ್ತೀವಾ? ಬಹುಜನ ಸಮಾಜದ ಶಕ್ತಿ ಕೇವಲ ಸಂಖ್ಯೆಯಲ್ಲಿ ಇಲ್ಲ — ಅದು ನಮ್ಮ ಒಗ್ಗಟ್ಟಿನಲ್ಲಿ ಇದೆ. “ಒಗ್ಗಟ್ಟಾಗಿದ್ರೆ ನಮ್ಮನ್ನು ಯಾರೂ ತಡೆಯಲಾರರು…
ಒಡೆದೋದ್ರೇ ನಮ್ಮನ್ನು ಯಾರೂ ಉಳಿಸಲಾರರು!”
ಬನ್ನಿ… ಮನುವಾದಿಗಳ ಕುತಂತ್ರಕ್ಕೆ ಬಲಿಯಾಗದೆ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದು ಗುರಿಗಾಗಿ ಒಂದಾಗಿ ನಿಲ್ಲೋಣ — ಸಮಾನತೆ, ನ್ಯಾಯ ಮತ್ತು ಗೌರವಕ್ಕಾಗಿ!
BSP Anekal taluk assembly

ಇಂದು ದೇಶದ ರಾಜಕೀಯ, ಸಮಾಜ ಮತ್ತು ಪ್ರಜಾಪ್ರಭುತ್ವದ ಪರಿಸ್ಥಿತಿಯನ್ನು ನೋಡಿದಾಗ ಒಂದು ಪ್ರಶ್ನೆ ಉದ್ಭವಿಸುತ್ತದೆ – ನಾವು ಯಾವ ದಿಕ್ಕಿನಲ್ಲಿ ಸಾಗ...
13/03/2026

ಇಂದು ದೇಶದ ರಾಜಕೀಯ, ಸಮಾಜ ಮತ್ತು ಪ್ರಜಾಪ್ರಭುತ್ವದ ಪರಿಸ್ಥಿತಿಯನ್ನು ನೋಡಿದಾಗ ಒಂದು ಪ್ರಶ್ನೆ ಉದ್ಭವಿಸುತ್ತದೆ – ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ?
ಪ್ರಜಾಪ್ರಭುತ್ವವು ಕೇವಲ ಚುನಾವಣೆಗಳಲ್ಲಿ ಮತ ಹಾಕುವುದರಿಂದ ಮಾತ್ರ ಉಳಿಯುವುದಿಲ್ಲ. ಅದು ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಹೋರಾಟದಿಂದ ಉಳಿಯುತ್ತದೆ.
ನಾವು ಜನರನ್ನು ನಮ್ಮ ಹಿಂದೆ ಬರಬೇಕೆಂದು ಕೇಳುವುದಿಲ್ಲ.
ಆದರೆ ನಾವು ಹೋರಾಡುತ್ತಿರುವ ಉದ್ದೇಶವೇನು ಎಂಬುದನ್ನು ಅರಿತವರು ಖಂಡಿತವಾಗಿ ನಮ್ಮ ಜೊತೆ ನಡೆಯುತ್ತಾರೆ.
ನಮ್ಮ ಹೋರಾಟ ವೈಯಕ್ತಿಕ ಅಧಿಕಾರಕ್ಕಾಗಿ ಅಲ್ಲ.
ನಮ್ಮ ಹೋರಾಟ ಸಮಾಜದ ನಿರ್ಮಾಣಕ್ಕಾಗಿ.
ನಮ್ಮ ಹೋರಾಟ ಸಂವಿಧಾನದ ರಕ್ಷಣೆಗೆ.
ಭಾರತದ ಸಂವಿಧಾನವು ನಮ್ಮೆಲ್ಲರಿಗೂ ಸಮಾನ ಹಕ್ಕುಗಳನ್ನು ಕೊಟ್ಟಿದೆ. ಆದರೆ ಆ ಹಕ್ಕುಗಳು ಕಾಗದದಲ್ಲೇ ಉಳಿಯದೆ, ಜನರ ಜೀವನದಲ್ಲಿ ಅನುಭವವಾಗಬೇಕು ಎಂದರೆ ಸಾಮಾಜಿಕ ಜಾಗೃತಿ ಮತ್ತು ರಾಜಕೀಯ ಹೋರಾಟ ಅಗತ್ಯ.
ಇದೇ ಕಾರಣಕ್ಕೆ ನಾವು ಬಹುಜನ ಸಮಾಜ ನಿರ್ಮಾಣದ ಗುರಿ ಹೊಂದಿದ್ದೇನೆ.
ಈ ದೇಶದ ಬಹುಜನ ಸಮಾಜದ ಮಹಾನ್ ಚಿಂತಕರು
ಗೌತಮ ಬುದ್ಧ, ಬಸವಣ್ಣ, ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್
ಮಾನವ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ವೈಜ್ಞಾನಿಕ ಚಿಂತನೆಗೆ ದಾರಿ ತೋರಿಸಿದರು.
ಬುದ್ಧ ಹೇಳಿದರು – ಮಾನವೀಯತೆ ಮತ್ತು ಸಮಾನತೆ ಮುಖ್ಯ.
ಬಸವಣ್ಣ ಹೇಳಿದರು – ಕೆಲಸವೇ ಗೌರವ, ಮಾನವನೇ ದೇವರು.
ಅಂಬೇಡ್ಕರ್ ಹೇಳಿದರು – ಅಧಿಕಾರ ಹೀನತೆಯೇ ಅಸ್ಪೃಶ್ಯತೆಗೆ ಕಾರಣ- ಅಸಮಾನತೆ, ಅಸ್ಪೃಶ್ಯತೆ ಹೋಗಬೇಕಾದರೆ ರಾಜ್ಯ ಅಧಿಕಾರ ನಿಮ್ಮ ಕೈಗೆ ಬರಬೇಕು ಎಂದು..
ಈ ಮಹಾನ್ ತತ್ವಗಳನ್ನು ಆಧಾರವಾಗಿಟ್ಟುಕೊಂಡು ಬಹುಜನ ಸಮಾಜ ಪಾರ್ಟಿಯ ಮಹಾನ್ ನಾಯಕ ಮಾನ್ಯವರ ಕಾನ್ಶೀರಾಂ ಸಾಹೇಬರು ಒಂದು ದೊಡ್ಡ ಚಳುವಳಿ ನಿರ್ಮಿಸಿದರು. ಅವರ ಕನಸು ಏನು ಎಂದರೆ – ರಾಜಕೀಯ ಅಧಿಕಾರ ಬಹುಜನರ ಕೈಗೆ ಬರಬೇಕು.
ಆ ಚಳುವಳಿಯ ದಾರಿ ಹಿಡಿದು
ನಾವು ಇಂದು ಮತ್ತೆ ಸಮಾಜದ ಪುನರ್ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ.
ನಮ್ಮನ್ನು ಹಿಂಬಾಲಿಸುವವರು ವ್ಯಕ್ತಿಯನ್ನು ಹಿಂಬಾಲಿಸುವುದಿಲ್ಲ.
ಒಂದು ತತ್ವವನ್ನು ಹಿಂಬಾಲಿಸುತ್ತಾರೆ.
ಒಂದು ಚಳುವಳಿಯನ್ನು ಹಿಂಬಾಲಿಸುತ್ತಾರೆ.
ಒಂದು ನ್ಯಾಯಯುತ ಸಮಾಜದ ಕನಸನ್ನು ಹಿಂಬಾಲಿಸುತ್ತಾರೆ.
ನಾನು ಹೇಳುವುದು ಒಂದೇ ಮಾತು —
ಸಂವಿಧಾನವನ್ನು ಉಳಿಸಲು,
ಬಹುಜನರ ಗೌರವವನ್ನು ಕಾಪಾಡಲು,
ಸಮಾನತೆಯ ಸಮಾಜ ನಿರ್ಮಿಸಲು
ಯಾರು ಸಿದ್ಧರಿದ್ದಾರೆ…
ಅವರು ನಮ್ಮ
ಜೊತೆ ಬರಬಹುದು.
ಇದು ನಮ್ಮ ವೈಯಕ್ತಿಕ ಪಯಣವಲ್ಲ.
ಇದು ಬಹುಜನ ಸಮಾಜದ ಇತಿಹಾಸ ಬದಲಿಸುವ ಪಯಣ.
ಜೈ ಭೀಮ್
ಜೈ ಬಸವ..
ಜೈ ಬಹುಜನ

10/03/2026

09/03/2026

🐘🐘🐘 ಆನೇಕಲ್ ಕ್ಷೇತ್ರದ ಜನರ ಪ್ರಶ್ನೆಗಳಿಗೆ ಉತ್ತರ ಕೊಡುವ ಸರ್ಕಾರ ಬೇಕು…
ಸಾಮಾನ್ಯ ಜನರ ನೋವನ್ನು ಕೇಳುವ ರಾಜಕೀಯ ಬೇಕು…
ವರ್ಷಗಳ ಕಾಲ ಆಡಳಿತ ಮಾಡಿದ ಪಕ್ಷಗಳು
ಬಡವರ, ದಲಿತರ, ಶೋಷಿತರ ಸಮಸ್ಯೆಗಳನ್ನು ಪರಿಹರಿಸಿಲ್ಲ.
ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ…
ಬಹುಜನ ಸಮಾಜ ಪಾರ್ಟಿ
ಸಾಮಾಜಿಕ ನ್ಯಾಯದ ಧ್ವಜ ಹಿಡಿದು
ಆನೇಕಲ್ ಕ್ಷೇತ್ರದಲ್ಲಿ ಹೊಸ ರಾಜಕೀಯ ಆರಂಭಿಸಿದೆ.
ಇದು ಕೇವಲ ಪಕ್ಷದ ಬೆಳವಣಿಗೆ ಅಲ್ಲ,
ಇದು ಬಹುಜನರ ಆತ್ಮಗೌರವದ ಹೋರಾಟ.
✊ ಆನೇಕಲ್ ಕ್ಷೇತ್ರದ ಜನರೆ
ಬದಲಾವಣೆಯ ಕಾಲ ಬಂದಿದೆ…ಯೋಚಿಸಿ 💐💐🙏🙏




09/03/2026



Address

Anekal Rural
Anekal
562106

Alerts

Be the first to know and let us send you an email when BSP Anekal taluk assembly posts news and promotions. Your email address will not be used for any other purpose, and you can unsubscribe at any time.

Share