15/03/2026
ಪ್ರತಿ ವರ್ಷ ಎರಡು ಬಾರಿ ರಕ್ತ ದಾನ ಮಾಡುತ್ತಾ ಇಂದು ಧರ್ಮವೀರ ಛತ್ರಪತಿ ಶ್ರೀ ಸಂಭಾಜಿ ಮಹಾರಾಜರ ಬಲಿದಾನ ಮಾಸದ ನಿಮಿತ್ಯ ಹಮ್ಮಿಕೊಳ್ಳಲಾದ ರಕ್ತ ದಾನ ಶಿಬಿರದಲ್ಲಿ ನನ್ನ 40 ನೇ ರಕ್ತ ದಾನ ಮಾಡಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ರಕ್ತ ದಾನ ಶ್ರೇಷ್ಠ ದಾನ ಎಂದು ಎಲ್ಲರಿಗೂ ಗೊತ್ತಿರೋ ವಿಷಯ. ಆದರೆ ಅದರಿಂದ ರಕ್ತ ದಾನ ಮಾಡಿದವರಿಗೂ ಸಾಕಷ್ಟು ಆರೋಗ್ಯ ದೃಷ್ಟಿ ಇಂದ ಲಾಭಗಳಿವೆ. ಇದನು ಗಮನದಲ್ಲಿ ಇಟ್ಟುಕೊಂಡು 18 ವಯಸ್ಸು ಮೇಲ್ಪಟ್ಟವರು ಪ್ರತಿ ವರ್ಷ 2 ಬಾರಿ ರಕ್ತ ದಾನ ಮಾಡಿದರೆ ಎಲ್ಲರಿಗೂ ಅನುಕೂಲ ವಾಗುತ್ತದೆ. ಎಲ್ಲರೂ ಸೇರಿ ಒಂದು ಆರೋಗ್ಯಕರ ಜಗತ್ತನ್ನು ಕಟ್ಟಲು ಕೈ ಜೋಡಿಸೋಣ 🙏 ರಕ್ತ ದಾನ ಶಿಬಿರದ ಆಯೋಜಕರಿಗೆ ಹೃದಯಪೂರ್ವಕ ಧನ್ಯವಾದಗಳು