22/11/2024
ಮೋದಿಯ ಪರಮಾಪ್ತ ಮಿತ್ರನ ಮೇಲೆ ಅಮೆರಿಕಾದ ನ್ಯೂಯಾರ್ಕ್‌ನ ಕೋರ್ಟ್ ಲಂಚ ಮತ್ತು ಲಾಭಿಯ ಆರೋಪದ ಮೇಲೆ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ಇದೇ ಅದಾನಿಯ ಮೇಲೆ ಶ್ರೀಲಂಕಾ, ಬಾಂಗ್ಲಾದೇಶ, ಕೀನ್ಯಾ, ಅಸ್ಟ್ರೇಲಿಯಾಗಳಲ್ಲಿಯೂ ತನಿಖೆ ನಡೆಯುತ್ತಿದೆ.
ಇವತ್ತು ಅದಾನಿಯ ಕಂಪೆನಿಯಲ್ಲಿ ಹೂಡಿಕೆ ಮಾಡಿರುವ ಸರ್ಕಾರಿ ಮಾಲಿಕತ್ವದ LIC ಒಂದೇ ದಿನದಲ್ಲಿ ಎಂಟೂವರೆ ಸಾವಿರ ಕೋಟಿಗಳಷ್ಟು ನಷ್ಟ ಅನುಭವಿಸಿದೆ.
ವಿಪಕ್ಷಗಳ ನಾಯಕರ ಮೇಲೆ, ಸುಳ್ಳು ಕೇಸುಗಳನ್ನು ಹಾಕಿ, ಸರ್ಕಾರಿ ಸಂಸ್ಥೆಗಳ ದುರುಪಯೋಗ ಮಾಡಿಕೊಂಡು ಜೈಲಿಗೆ ತಳ್ಳಿದ್ದ ಮೋದಿ ಈಗ ಯಾಕೆ ಸುಮ್ಮನಿದ್ದಾರೆ? ಅದಾನಿಯ ಮೇಲೆ ತನಿಖೆ ನಡೆಸಲು ಭಯವೇ? ಅಥವಾ ಅದಾನಿಯನ್ನು ಬಂಧಿಸಿದರೆ ತನ್ನ ಮುಖವಾಡ ಕಳಚಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಬಹುದೆಂಬ ಹೆದರಿಕೆಯೇ?
Narendra Modi