30/06/2026
ವಿಶೇಷ ಸಮಗ್ರ ಪರಿಷ್ಕರಣೆ–2026 (SIR 2026)
ನಿಮ್ಮ ಮತದಾರರ ಪಟ್ಟಿಯ ವಿವರಗಳನ್ನು ಈಗಲೇ ಪರಿಶೀಲಿಸಿ!
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 30.06.2026 ರಿಂದ 29.07.2026ರವರೆಗೆ ವಿಶೇಷ ಸಮಗ್ರ ಪರಿಷ್ಕರಣೆ–2026 ನಡೆಯುತ್ತಿದೆ.
✅ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿ.
✅ ಹೆಸರು, ವಿಳಾಸ, ವಯಸ್ಸು ಅಥವಾ ಇತರೆ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ತಕ್ಷಣ ಅರ್ಜಿ ಸಲ್ಲಿಸಿ.
✅ ಹೊಸದಾಗಿ ಅರ್ಹರಾದ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
✅ ನಿಮ್ಮ ಪ್ರದೇಶದ BLO ಅವರನ್ನು ಸಂಪರ್ಕಿಸಿ ಅಥವಾ ECINET App ಮೂಲಕ ಅರ್ಜಿ ಸಲ್ಲಿಸಿ.
ಪ್ರಜಾಪ್ರಭುತ್ವವನ್ನು ಬಲಪಡಿಸಲು ನಿಮ್ಮ ಮತದಾರರ ಮಾಹಿತಿಯನ್ನು ಸರಿಪಡಿಸುವುದು ನಿಮ್ಮ ಜವಾಬ್ದಾರಿ.
“ಯಾವುದೇ ಅರ್ಹ ಮತದಾರರು ಮತದಾನ ಹಕ್ಕಿನಿಂದ ವಂಚಿತರಾಗಬಾರದು.”