sdpibagalkotkotenadu

sdpibagalkotkotenadu Official page of Social Democratic Party of India Bagalkot Assembly Constituency. Voice for Justice • Democracy • Equality • Youth Empowerment.

Public Issues | Social Service | Community Welfare | Ground Reports.

📍 Bagalkot, Karnataka 587101.

By election Davangere   karnataka   Davangere   Bagalkot Jai sdpi jai Bheem.
23/03/2026

By election Davangere
karnataka
Davangere
Bagalkot
Jai sdpi jai Bheem.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ ಅವರು ದಿನಾಂಕ 23.03.2026 ರಂದು ದಾ...
22/03/2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ ಅವರು ದಿನಾಂಕ 23.03.2026 ರಂದು ದಾವಣಗೆರೆ ವಿಧಾನಸಭಾ ಉಪಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಸಾಮಾಜಿಕ ನ್ಯಾಯ, ಸಂವಿಧಾನಿಕ ಹಕ್ಕುಗಳು, ಶೋಷಿತರ ಧ್ವನಿ ಮತ್ತು ಅನ್ಯಾಯದ ವಿರುದ್ಧದ ರಾಜಕೀಯ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಉಪಚುನಾವಣೆ ಕಣಕ್ಕಿಳಿಯಲಾಗುತ್ತಿದೆ. ದಾವಣಗೆರೆ ನೆಲದಲ್ಲಿ ಅನ್ಯಾಯದ ರಾಜಕೀಯಕ್ಕೆ ತಕ್ಕ ಉತ್ತರ ನೀಡುವ ಐತಿಹಾಸಿಕ ಹೋರಾಟದ ಪ್ರಾರಂಭ ಇದೇ ಆಗಲಿದೆ.
ಆದ್ದರಿಂದ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಯುವಕರು, ಅಭಿಮಾನಿಗಳು ಹಾಗೂ ನ್ಯಾಯ ಮತ್ತು ಹಕ್ಕಿಗಾಗಿ ಹೋರಾಡುವ ಎಲ್ಲಾ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ಭರ್ಜರಿಯಾಗಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ದಿನಾಂಕ: 23.03.2026
ಸಮಯ 10.30 ಗಂಟೆಗೆ
ಸ್ಥಳ: ಅಖ್ತರ್ ರಝಾ ಸರ್ಕಲ್ ದಿಂದ ಕಾರ್ಪೊರೇಷನ್ ಕಚೇರಿವರೆಗೆ ದಾವಣಗೆರೆ.
ಕಾರ್ಯಕ್ರಮ: ನಾಮಪತ್ರ ಸಲ್ಲಿಕೆ
“ಅನ್ಯಾಯದ ವಿರುದ್ಧ ಹೋರಾಟ – ನಮ್ಮ ರಾಜಕೀಯ,
ಸಂವಿಧಾನ ಉಳಿವು – ನಮ್ಮ ಸಂಕಲ್ಪ.”

ದಾವಣಗೆರೆಯ ಉಪಚುನಾವಣೆಯಲ್ಲಿ Social Democratic Party of India ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆಯವರು ಅಭ್ಯರ್ಥಿಯಾಗಿ...
21/03/2026

ದಾವಣಗೆರೆಯ ಉಪಚುನಾವಣೆಯಲ್ಲಿ Social Democratic Party of India ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆಯವರು ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಕೇವಲ ಒಂದು ಚುನಾವಣೆಯ ವಿಷಯವಲ್ಲ, ಇದು ಅನ್ಯಾಯದ ವಿರುದ್ಧದ ಹೋರಾಟ, ಶೋಷಿತರ ಧ್ವನಿಯ ಹೋರಾಟ, ಸಂವಿಧಾನ ಉಳಿಸುವ ಹೋರಾಟವಾಗಿದೆ.
ಅಪ್ಟರ ಕೊಡ್ಲಿಪೇಟೆಯವರಂತಹ ಹೋರಾಟಗಾರ ನಾಯಕನನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ನಮ್ಮ ಪಕ್ಷದ ಹೋರಾಟದ ದಿಕ್ಕನ್ನು ಇನ್ನಷ್ಟು ಬಲಪಡಿಸಿದೆ. ಈ ನಿರ್ಧಾರಕ್ಕಾಗಿ ಪಕ್ಷದ ರಾಜ್ಯ ನಾಯಕತ್ವಕ್ಕೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ದಾವಣಗೆರೆ ಉಪಚುನಾವಣೆಯಲ್ಲಿ ಈ ಬಾರಿ ನಡೆಯುವುದು ಸಾಮಾನ್ಯ ಚುನಾವಣೆ ಅಲ್ಲ –
ಇದು ಅನ್ಯಾಯ ವಿರುದ್ಧ ನ್ಯಾಯದ ಹೋರಾಟ,
ದಬ್ಬಾಳಿಕೆ ವಿರುದ್ಧ ಜನಶಕ್ತಿಯ ಹೋರಾಟ,
ಹಿಂದುಳಿದವರ ಧ್ವನಿ ವಿಧಾನಸಭೆಗೆ ಕಳುಹಿಸುವ ಹೋರಾಟ.
ಅಪ್ಸರ್ ಕೊಡ್ಲಿಪೇಟೆಯವರ ವಿಜಯಕ್ಕಾಗಿ ನಾವು ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ, ಸಂಘಟಿತವಾಗಿ, ಮನೆ ಮನೆಗೆ ತೆರಳಿ, ಪಕ್ಷದ ಧ್ವಜ ಹಾರಿಸಿ, ಈ ಚುನಾವಣೆಯನ್ನು ಹೋರಾಟದ ರೂಪದಲ್ಲಿ ಎದುರಿಸಿ ಐತಿಹಾಸಿಕ ಜಯ ಸಾಧಿಸುವ ಸಂಕಲ್ಪ ಮಾಡುತ್ತೇವೆ.
“ನ್ಯಾಯಕ್ಕಾಗಿ ಹೋರಾಟ – ಜನರಿಗಾಗಿ ರಾಜಕೀಯ – ಇದೇ ನಮ್ಮ ದಾರಿ”

ಈದ್ ಉಲ್ ಫಿತ್ರ್ ಶುಭಾಶಯ ಸಂದೇಶಎಸ್‌ ಡಿ ಪಿ ಐ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ನಾಯಕರು, ಪದಾಧಿಕಾರಿಗಳು, ಬ್ರಾಂಚ್ ಅಧ್ಯಕ್ಷರು, ಕಾರ್ಯದ...
21/03/2026

ಈದ್ ಉಲ್ ಫಿತ್ರ್ ಶುಭಾಶಯ ಸಂದೇಶ
ಎಸ್‌ ಡಿ ಪಿ ಐ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ನಾಯಕರು, ಪದಾಧಿಕಾರಿಗಳು, ಬ್ರಾಂಚ್ ಅಧ್ಯಕ್ಷರು, ಕಾರ್ಯದರ್ಶಿಗಳು, ಎಲ್ಲಾ ಬ್ರಾಂಚ್ ಪ್ರಾದಾಧಿಕಾರಿಗಳು, ಹೋರಾಟಗಾರ ಕಾರ್ಯಕರ್ತರು ಹಾಗೂ ಪಕ್ಷದ ಎಲ್ಲಾ ಹಿತೈಷಿಗಳಿಗೆ ಈದ್ ಉಲ್ ಫಿತ್ರ್ ಹಬ್ಬದ ಹಾರ್ದಿಕ ಶುಭಾಶಯಗಳು.
ಅನ್ಯಾಯ, ಅಸಮಾನತೆ ಮತ್ತು ದಮನದ ವಿರುದ್ಧ ಹೋರಾಡುವ ನಮ್ಮ ಹೋರಾಟಕ್ಕೆ ರಂಜಾನ್ ತಿಂಗಳು ನಮಗೆ ತ್ಯಾಗ, ಸಹನೆ, ಶಿಸ್ತು ಮತ್ತು ನ್ಯಾಯದ ಮಾರ್ಗವನ್ನು ಕಲಿಸಿದೆ. ಈ ಪವಿತ್ರ ಈದ್ ಹಬ್ಬವು ನಮ್ಮಲ್ಲಿ ಇನ್ನಷ್ಟು ಐಕ್ಯತೆ, ಸಂಘಟನೆ ಶಕ್ತಿ ಮತ್ತು ಹೋರಾಟದ ಮನೋಭಾವವನ್ನು ಹೆಚ್ಚಿಸಲಿ. ಸಮಾಜದ ಹಕ್ಕುಗಳಿಗಾಗಿ, ನ್ಯಾಯಕ್ಕಾಗಿ ಮತ್ತು ಮಾನವೀಯ ಮೌಲ್ಯಗಳಿಗಾಗಿ ನಾವು ಇನ್ನಷ್ಟು ಸಂಘಟಿತರಾಗಿ ಕೆಲಸ ಮಾಡುವ ಸಂಕಲ್ಪವನ್ನು ಈ ಪವಿತ್ರ ದಿನದಂದು ಮಾಡೋಣ.
ಅಲ್ಲಾಹ್ ತಾ'ಆಲಾ ನಮ್ಮೆಲ್ಲರ ಉಪವಾಸ, ನಮಾಜ್, ಜಕಾತ್, ಸತ್ಕಾರ್ಯಗಳನ್ನು ಸ್ವೀಕರಿಸಿ ನಮ್ಮ ಸಮಾಜಕ್ಕೆ ಶಾಂತಿ, ಗೌರವ ಮತ್ತು ನ್ಯಾಯಯುತ ಬದುಕು ನೀಡಲಿ ಎಂದು ಪ್ರಾರ್ಥಿಸುತ್ತೇನೆ

ಈದ್ ಮುಬಾರಕ್
ಅಧ್ಯಕ್ಷರು
ಎಸ್‌ಡಿಪಿಐ
ಬಾಗಲಕೋಟೆ ವಿಧಾನಸಭಾ ಕ್ಷೇತ್ರ.

ದಾವಣಗೆರೆ ಉಪಚುನಾವಣೆಯ ರಾಜಕೀಯ ಸಮೀಕರಣಗಳನ್ನು ಮನಗಂಡು, ಜನರ ಧ್ವನಿಯನ್ನು ಬಲವಾಗಿ ಪ್ರತಿನಿಧಿಸುವ ಉದ್ದೇಶದಿಂದ ಎಸ್‌ಡಿಪಿಐ ಪಕ್ಷವು ತನ್ನ ಅಭ್ಯ...
20/03/2026

ದಾವಣಗೆರೆ ಉಪಚುನಾವಣೆಯ ರಾಜಕೀಯ ಸಮೀಕರಣಗಳನ್ನು ಮನಗಂಡು, ಜನರ ಧ್ವನಿಯನ್ನು ಬಲವಾಗಿ ಪ್ರತಿನಿಧಿಸುವ ಉದ್ದೇಶದಿಂದ ಎಸ್‌ಡಿಪಿಐ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ದಿಟ್ಟ ಹಾಗೂ ತಾತ್ವಿಕ ನಿರ್ಧಾರವನ್ನು ಕೈಗೊಂಡಿದೆ.
ಈ ನಿರ್ಧಾರವು ಕೇವಲ ಚುನಾವಣಾ ಸ್ಪರ್ಧೆಗೆ ಸೀಮಿತವಲ್ಲ, ಬದಲಾಗಿ ಅನ್ಯಾಯ, ಅಸಮಾನತೆ ಮತ್ತು ದಬ್ಬಾಳಿಕೆಯ ವಿರುದ್ಧ ಪ್ರಬಲ ಹೋರಾಟದ ಘೋಷಣೆಯಾಗಿದೆ. ದಾವಣಗೆರೆಯ ಜನತೆಗೆ ಪರ್ಯಾಯ ರಾಜಕೀಯದ ಅಗತ್ಯವಿರುವ ಈ ಸಂದರ್ಭದಲ್ಲಿ, ಎಸ್‌ಡಿಪಿಐ ತನ್ನ ಬಲಿಷ್ಠ ಹಾಜರಾತಿಯನ್ನು ತೋರಿಸಲು ಸಜ್ಜಾಗಿದೆ.
ಸಂಸ್ಥಾಪಿತ ಪಕ್ಷಗಳ ವೈಫಲ್ಯಗಳನ್ನು ಎದುರಿಸಿ, ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಾಪಾಡುವ ದೃಢಸಂಕಲ್ಪದೊಂದಿಗೆ, ಈ ಉಪಚುನಾವಣೆಯಲ್ಲಿ ಎಸ್‌ಡಿಪಿಐ ಪ್ರಬಲವಾಗಿ ಮೈದಾನಕ್ಕಿಳಿಯಲಿದೆ.
karnataka
Davangere
bagalkot

Social Democratic Party of India (SDPI) ರಾಷ್ಟ್ರೀಯ ಅಧ್ಯಕ್ಷರಾದ M. K. Faizy ಅವರು 365 ಕ್ಕಿಂತ ಅಧಿಕ ದಿನಗಳ ಕಾಲ ಜೈಲಿನಲ್ಲಿ ಕಳೆದ ನ...
13/03/2026

Social Democratic Party of India (SDPI) ರಾಷ್ಟ್ರೀಯ ಅಧ್ಯಕ್ಷರಾದ M. K. Faizy ಅವರು 365 ಕ್ಕಿಂತ ಅಧಿಕ ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ ಬಿಡುಗಡೆಯಾಗಿರುವುದು ಪ್ರಜಾಪ್ರಭುತ್ವ ಮತ್ತು ನ್ಯಾಯದ ಮೇಲೆ ನಂಬಿಕೆ ಇಟ್ಟಿರುವ ಜನತೆಗೆ ಒಂದು ಮಹತ್ವದ ಕ್ಷಣವಾಗಿದೆ.
ಈ ಹಿನ್ನೆಲೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಕಾರ್ಯಕರ್ತರು ಮತ್ತು ಮುಖಂಡರು ಸಂತೋಷ ವ್ಯಕ್ತಪಡಿಸಿ, ಸಿಹಿ ಹಂಚುವ ಮೂಲಕ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ದೇಶದಲ್ಲಿ ನ್ಯಾಯ, ಸಮಾನತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಉಳಿಸಲು ಹೋರಾಟ ನಡೆಸುತ್ತಿರುವ ನಾಯಕನ ಬಿಡುಗಡೆಗೆ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಎಂ.ಕೆ. ಫೈಝಿ ಅವರ ನಾಯಕತ್ವವು ದೇಶದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಶೋಷಿತ ವರ್ಗಗಳ ಹಕ್ಕುಗಳ ರಕ್ಷಣೆಗೆ ಸದಾ ಶಕ್ತಿಯಾಗಿ ನಿಂತಿದೆ ಎಂದು ಹೇಳಿದರು. ಅವರ ಬಿಡುಗಡೆ ದೇಶದಲ್ಲಿ ಪ್ರಜಾಪ್ರಭುತ್ವದ ಧ್ವನಿಯನ್ನು ಮತ್ತಷ್ಟು ಬಲಪಡಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪಕ್ಷದ ಹಲವಾರು ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ, ಪಕ್ಷದ ಸಂಘಟನೆ ಇನ್ನಷ್ಟು ಬಲಪಡಿಸಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

13/03/2026

ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಾಗಲಕೋಟ್ ವಿಧಾನಸಭಾ ಕ್ಷೇತ್ರ ವತಿಯಿಂದ ದಿನಾಂಕ 12 .03. 2026 ರಂದು ಇಫ್ತಾರ ಕೊಟವನ್ನು ಹಮ್ಮಿಕೊಳ್ಳಲಾಗಿತ್ತು ಈ ಒಂದು ಸಂದರ್ಭದಲ್ಲಿ ಅಸೆಂಬ್ಲಿಯ ಎಲ್ಲಾ ನಾಯಕರು ಮತ್ತು ಪಕ್ಷದ ಹಿತೈಷಿಗಳು ಉಪಸ್ಥಿತ ಇದ್ದ ಸಂದರ್ಭ...

Address

Bagalkot
587101

Website

Alerts

Be the first to know and let us send you an email when sdpibagalkotkotenadu posts news and promotions. Your email address will not be used for any other purpose, and you can unsubscribe at any time.

Share