11/08/2026
ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ
ಬೈಲಹೊಂಗಲ ಮತಕ್ಷೇತ್ರದ ಕಾರಿಮನಿ ಗ್ರಾಮದಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆ ಹಾಗೂ ಕೆಎಲ್‌ಇ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ತೆನಿಕೊಳ್ಳ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ (NSS) ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಲಾಯಿತು.
ಯುವಜನರಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಗ್ರಾಮಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ನೀಲಕಂಠ ಸ್ವಾಮೀಜಿಗಳು ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ.ಡಿ. ಬಿರಾದಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಮಂಜುಳಾ ಪಾಟೀಲ, ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ಹಿರಿಯ ವಿಜ್ಞಾನಿ ಡಾ. ಮಂಜುನಾಥ್ ಚವರಡಿ, ವ್ಯವಸ್ಥಾಪಕರಾದ ಶಂಕರಗೌಡ ಪಾಟೀಲ ಸೇರಿದಂತೆ ವೀರಭದ್ರಪ್ಪ ದೇಸಾಯಿ, ಅಶೋಕ ಶೆಟ್ಟರ, ಶಿವನಗೌಡ ಪಾಟೀಲ, ವಿರೂಪಾಕ್ಷ ಪೂಜೇರಿ, ಶಿವಾನಂದ ಪೂಜೇರಿ, ವಿರೂಪಾಕ್ಷ ಗುಡದೂರ ಹಾಗೂ ಶ್ರೀಕಾಂತ ಪೂಜೇರಿ ಉಪಸ್ಥಿತರಿದ್ದರು.
ಕೆಎಲ್‌ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಕಾರಿಮನಿ ಗ್ರಾಮದ ಸಮಸ್ತ ಗುರು-ಹಿರಿಯರು, ತಾಯಂದಿರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
#ರಾಷ್ಟ್ರೀಯಸೇವಾಯೋಜನೆ #ವಾರ್ಷಿಕವಿಶೇಷಶಿಬಿರ #ಕಾರಿಮನಿ #ಯುವಶಕ್ತಿ #ಸಾಮಾಜಿಕಸೇವೆ