07/03/2026
ಮಾನ್ಯರೆ
SC-ST ಸಮುದಾಯಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಮೀಸಲಾತಿಯನ್ನು ನೀಡದೆ , ದಿಕ್ಕು ತಪ್ಪಿಸಿ ದಲಿತ ಸಮುದಾಯಗಳಿಗೆ ದ್ರೋಹವೆಸಗುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ರೂಪು ರೇಷೆಗಳನ್ನು ರೂಪಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ .
ದಿನಾಂಕ 08/03/2026 , ಭಾನುವಾರ , ಬೆಳಿಗ್ಗೆ 10:00 ಕ್ಕೆ ಚಿತ್ರದುರ್ಗದ ವಾಲ್ಮೀಕಿ ಸಮುದಾಯ ಭವನದಲ್ಲಿ SC , ST ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದೆ, ಈ ಸಭೆಯಲ್ಲಿ SC ST ಸಮುದಾಯದ ಹಾಲಿ ಮಾಜಿ ಸಂಸದರು, ಶಾಸಕರುಗಳು, ಹಿರಿಯ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ
ಆದ್ದರಿಂದ ಈ ಸಭೆಗೆ SC , ST ಮೋರ್ಚಾದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಹಿರಿಯ ಕಾರ್ಯಕರ್ತರು ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಭೆಯನ್ನು ಯಶಸ್ವೀಗೊಳಿಸಬೇಕೆಂದು ಮನವಿ.
ಶ್ರೀ ಬಂಗಾರು ಹನುಮಂತ ಶ್ರೀಸಿಮೆಂಟ್ ಮಂಜು
ರಾಜ್ಯದ್ಯಕ್ಷರು ST ಮೋರ್ಚಾ ರಾಜ್ಯದ್ಯಕ್ಷರು ಎಸ್ ಸಿ ಮೋರ್ಚಾ
ಭಾರತೀಯ ಜನತಾ ಪಾರ್ಟಿ
ಕರ್ನಾಟಕ