17/06/2024
*ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಡೋಣೂರಿನ ವಿದ್ಯಾರ್ಥಿನಿ ಮಧು ಎಂ. ನಾಗಮೋತಿ ಬಡ ಕುಟುಂಬದಲ್ಲಿ ಹುಟ್ಟಿ ಸತತ ಪರಿಶ್ರಮದಿಂದ ಅಧ್ಯಯನ ಮಾಡಿ ಬೆಂಗಳೂರಿನ ಎಂ. ವಿ. ಜೆ. ಮೆಡಿಕಲ್ ಕಾಲೇಜ್ ಅಲ್ಲಿ ಎಂಬಿಬಿಎಸ್ ಪ್ರವೇಶ ಪಡೆದಿದ್ದಾಳೆ. ಇವಳು ಸದ್ಯ 2ನೇ ವರುಷ ಓದುತ್ತಿದ್ದಾಳೆ*.
*ಅವಳಿಗೆ ಪೂಜ್ಯರು ರೂ. 25,000/- (ಇಪ್ಪತ್ತೈದು ಸಾವಿರ ರೂ.) ವಿದ್ಯಾರ್ಥಿ ವೇತನ ನೀಡಿ ಆಶೀರ್ವದಿಸಿದರು*.
*ಅವಳು ಎಂಬಿಬಿಎಸ್ ಮುಗಿಸುವ ವರೆಗೂ ಪ್ರತಿವರ್ಷ ಶ್ರೀಮಠದಿಂದ ರೂ. 25,000/-ಗಳ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ*.
ಸಿ ಬಸವರಾಜು.
ಶ್ರೀಮಠದ ಕಾರ್ಯದರ್ಶಿಗಳು