03/09/2026
ಲೋಕಸಭೆ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಖಂಡದಲ್ಲಿ ಸುಳ್ಳು ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ. ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕ್'ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ನಮ್ಮ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ನಾಯಕರುಗಳು ಹಾಗೂ ಸಹಸ್ರಾರು ಕಾರ್ಯಕರ್ತ ಬಂಧುಗಳೊಂದಿಗೆ ಪಾಲ್ಗೊಂಡಿದ್ದ ಸಂದರ್ಭ.
ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸಿದ್ದರಾಮಯ್ಯರವರು, ಎಐಸಿಸಿ ಕಾರ್ಯದರ್ಶಿ ಶ್ರೀ ಗೋಪಿನಾಥ್ ಪಳನಿಯಪ್ಪನ್ ಅವರು ಸೇರಿದಂತೆ ಸಚಿವರುಗಳು, ಶಾಸಕರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತ ಬಂಧುಗಳು ಭಾಗಿಯಾಗಿದ್ದರು.
ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಸದಾ ಧ್ವನಿ ಎತ್ತಲಿದೆ.
Participated in a massive protest at Freedom Park led by Hon'ble Chief Minister Shri D. K. Shivakumar and KPCC President Shri B. K. Hariprasad, along with prominent leaders of our Padmanabhanagar assembly constituency and thousands of activist brothers, condemning the false FIR filed against the Leader of Opposition in the Lok Sabha, Hon'ble Shri Rahul Gandhi.
On this occasion, the immediate past Chief Minister and Congress Working Committee member Shri Siddaramaiah, AICC Secretary Shri Gopinath Palaniappan, along with ministers, MLAs, party leaders, Karyakarta brothers, were present.
The Congress Party will always raise its voice for the protection of democratic values, the aspirations of the Constitution and freedom of expression.