BJP Hebbala

BJP Hebbala Official Page for BJP Hebbala Mandala,
Bengaluru North District

ಅಂಗನವಾಡಿ ಕೇಂದ್ರಗಳಲ್ಲಿ ‘ಅಂಗಳ ಉತ್ಸವ’ ಕಾರ್ಯಕ್ರಮ ಯಶಸ್ವಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ‘ಸೇವಾ ಸಂಕಲ...
29/09/2026

ಅಂಗನವಾಡಿ ಕೇಂದ್ರಗಳಲ್ಲಿ ‘ಅಂಗಳ ಉತ್ಸವ’ ಕಾರ್ಯಕ್ರಮ ಯಶಸ್ವಿ
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ‘ಸೇವಾ ಸಂಕಲ್ಪ’ ಅಭಿಯಾನದಡಿಯಲ್ಲಿ ಹೆಬ್ಬಾಳ ಮಂಡಲದ ವತಿಯಿಂದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಆಯೋಜಿಸಲಾಗಿದ್ದ ‘ಅಂಗಳ ಉತ್ಸವ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮಕ್ಕಳ ವಿಕಸನ ಮತ್ತು ಪೋಷಣೆ, ಆರೋಗ್ಯ ಹಾಗೂ ಪೌಷ್ಟಿಕಾಂಶ ಜಾಗೃತಿ, ಪೋಷಕರ ಪಾಲ್ಗೊಳ್ಳುವಿಕೆ: ತಾಯಂದಿರು ಹಾಗೂ ಸ್ಥಳೀಯ ಮುಖಂಡರು ಸಕ್ರಿಯವಾಗಿ ಭಾಗವಹಿಸಿ, ಮೋದಿಜಿಯವರ ‘ಸೇವಾ ಸಂಕಲ್ಪ’ ಕಲ್ಪನೆಗೆ ಬೆಂಬಲ ಸೂಚಿಸಿದರು.

ಹೆಬ್ಬಾಳ ಮಂಡಲದಲ್ಲಿ ಇಂದು ನಮ್ಮ ಪಕ್ಷ ಮತ್ತು ಸಿದ್ಧಾಂತಕ್ಕೆ ಸದೃಢ ಅಡಿಪಾಯ ಹಾಕಿಕೊಟ್ಟ ದಾರ್ಶನಿಕರು, ಜನಸಂಘದ ಸಹ-ಸಂಸ್ಥಾಪಕರು, ‘ಏಕಾತ್ಮ ಮಾನವ...
25/09/2026

ಹೆಬ್ಬಾಳ ಮಂಡಲದಲ್ಲಿ ಇಂದು ನಮ್ಮ ಪಕ್ಷ ಮತ್ತು ಸಿದ್ಧಾಂತಕ್ಕೆ ಸದೃಢ ಅಡಿಪಾಯ ಹಾಕಿಕೊಟ್ಟ ದಾರ್ಶನಿಕರು, ಜನಸಂಘದ ಸಹ-ಸಂಸ್ಥಾಪಕರು, ‘ಏಕಾತ್ಮ ಮಾನವತಾವಾದ’ ಹಾಗೂ ‘ಅಂತ್ಯೋದಯ’ ತತ್ತ್ವಗಳ ಮೂಲಕ ಸಮಾಜದ ಕೊನೆಯ ವ್ಯಕ್ತಿಗೂ ಅಭಿವೃದ್ಧಿಯ ಬೆಳಕು ತಲುಪಬೇಕೆಂದು ಪ್ರತಿಪಾದಿಸಿದ ಮಹಾನ್ ಚಿಂತಕರಾದ ಪಂಡಿತ್ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಆ ಹಿರಿಯ ಚೇತನಕ್ಕೆ ಆದರಪೂರ್ವಕ ಪ್ರಣಾಮಗಳು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಬಲೀಕರಣವೇ ರಾಷ್ಟ್ರದ ನೈಜ ವಿಕಾಸ ಎಂದು ಪ್ರತಿಪಾದಿಸಿದ ಅವರ ವಿಚಾರಧಾರೆಗಳು, ಅವರ ದೇಶಸೇವೆ ಮತ್ತು ಅವರ ತ್ಯಾಗಮಯ ಜೀವನ ರಾಷ್ಟ್ರೀಯತೆಯ ಚಿಂತನ ಮಾರ್ಗದಲ್ಲಿ ಶಾಶ್ವತ ಸ್ಪೂರ್ತಿಯಾಗಿದೆ. ಉಪಸ್ಥಿತಿ ಮಂಡಲ ಅಧ್ಯಕ್ಷರು, ಮಂಡಲ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ವಾರ್ಡ್‌ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು.

ಹೆಬ್ಬಾಳ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ ಸಂಸ್ಕೃತಿ ವರ್ಗ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈಗಾಗಲೇ ತಿಳಿಸಿರುವಂತೆ, ಈ ಕಾರ್ಯಕ್ರ...
24/09/2026

ಹೆಬ್ಬಾಳ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ ಸಂಸ್ಕೃತಿ ವರ್ಗ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈಗಾಗಲೇ ತಿಳಿಸಿರುವಂತೆ, ಈ ಕಾರ್ಯಕ್ರಮವು ಪ್ರತಿ ಬುಧವಾರ ಮಂಡಲ ಕಚೇರಿಯಲ್ಲಿ ನಡೆಯಲಿದೆ. ಇಂದಿನ ಕಾರ್ಯಕ್ರಮದಲ್ಲಿ ಶ್ಲೋಕಗಳು ಮತ್ತು ನಮ್ಮ ಸನಾತನ ಧರ್ಮದ ಕುರಿತು ವಿಶೇಷ ಮಾಹಿತಿಯನ್ನು ತಿಳಿಸಿಕೊಡಲಾಯಿತು. ಇದರ ಸದ್ಬಳಕೆಯನ್ನು/ಸದುಪಯೋಗವನ್ನು ಪ್ರತಿ ಮಹಿಳೆಯರೂ ಪಡೆದುಕೊಳ್ಳಬೇಕಾಗಿ ಕೋರುತ್ತೇವೆ. ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಮಂಡಲದ ಪರವಾಗಿ ತಮಗೆ ಹೃತ್ಪೂರ್ವಕ ಧನ್ಯವಾದಗಳು!

ಶ್ರೀ ಸ್ವಾಮಿ ವಿವೇಕಾನಂದ ಟ್ರಸ್ಟ್(ರಿ) ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಣೇಶ ಉತ್ಸವದಲ್ಲಿ ಮಂಡಲವತಿಯಿಂದ ಮಂಡಲ ಅಧ್ಯಕ್ಷರಾದ ಶ್ರೀ ಜಿ ವಿ ರವಿಕ...
23/09/2026

ಶ್ರೀ ಸ್ವಾಮಿ ವಿವೇಕಾನಂದ ಟ್ರಸ್ಟ್(ರಿ) ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಣೇಶ ಉತ್ಸವದಲ್ಲಿ ಮಂಡಲವತಿಯಿಂದ ಮಂಡಲ ಅಧ್ಯಕ್ಷರಾದ ಶ್ರೀ ಜಿ ವಿ ರವಿಕುಮಾರ್‌ ರವರು, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ‍ಶ್ರೀ ಬಿ ನಾರಾಯಣ್‌ ರವರು, ಮಂಡಲ ಉಪಾಧ್ಯಕ್ಷರಾದ ಪ್ರಸಾದ್‌ ರವರು, ಮಂಡಲ ಯುವ ಮೋರ್ಚಾ ಪ್ರಧಾನಕಾರ್ಯದರ್ಶಿ ಶ್ರೀ ಅರ್ಚನ್‌ ಕೋದಂಡರಾಮ್‌ ಹಾಗೂ ಇತರೆ ಕಾರ್ಯಕರ್ತರು ಭಾಗವಹಿಸಿದರು

ಹೆಬ್ಬಾಳ ಕ್ಷೇತ್ರದ ನಾಗಶೆಟ್ಟಿಹಳ್ಳಿಯಲ್ಲಿ ಶ್ರೀ ವೀರ ಗಜಪಡೆ  ಯುವಕರ ಸಂಘ ಪ್ತತಿಷ್ಟಾಪಿಸಿದ್ದ ಗಣೇಶೋತ್ಸವದಲ್ಲಿ ಭಾಗವಹಿಸಿ ಭಗವಂತನ ಆಶೀರ್ವಾದ ...
19/09/2026

ಹೆಬ್ಬಾಳ ಕ್ಷೇತ್ರದ ನಾಗಶೆಟ್ಟಿಹಳ್ಳಿಯಲ್ಲಿ ಶ್ರೀ ವೀರ ಗಜಪಡೆ ಯುವಕರ ಸಂಘ ಪ್ತತಿಷ್ಟಾಪಿಸಿದ್ದ ಗಣೇಶೋತ್ಸವದಲ್ಲಿ ಭಾಗವಹಿಸಿ ಭಗವಂತನ ಆಶೀರ್ವಾದ ಪಡೆಯಲಾಯಿತು. ಈ ಸಂಧರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ವಿಶೇಷ ಆಹ್ವಾನಿತರಾದ ಶ್ರೀ ಅಜಯ್‌ ಸುಭಾಷ್‌ ರವರು, ಮಂಡಲ ಕಲೆ ಮತ್ತು ಸಾಂಸ್ಕೃತಿ ಪ್ರಕೋಷ್ಠ ಸಂಚಾಲಕರಾದ ಕು|| ಪೂಜಾ ರಮೇಶ್ ರವರು, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರ್ಚನ್‌ ಕೋದಂಡರಾಮ್‌ ರವರು, ಭೂಪಸಂದ್ರ ವಾರ್ಡ್‌ ಅಧ್ಯಕ್ಷರಾದ ಶ್ರೀ ಜಯರಾಮ್‌ (ಬಾಬು) ರವರು, ಗೆದ್ದಲಹಳ್ಳಿ ವಾರ್ಡ್‌ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಮಾನಸ ರವರು, ವಾರ್ಡ್ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ನಿಶ್ಚಲ್‌ ರವರು,‌ ವಾರ್ಡ್‌ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಉಮೇಶ್‌ ರವರು, ಶ್ರೀ ಚಂದ್ರಶೇಖರ್‌ ರವರು ಉಪಸ್ಥಿತರಿದ್ದರು.
#ಗಣೇಶೋತ್ಸವ

18/09/2026



“ಆಶೀರ್ವಾದದ ದೀಪ” –ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ‘ಆಶೀರ್ವಾದ ದೀಪ’ ಅಭಿಯಾನದ ಭಾಗವಾಗಿ, ಇಂದು ಹೆಬ...
18/09/2026

“ಆಶೀರ್ವಾದದ ದೀಪ” –
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ‘ಆಶೀರ್ವಾದ ದೀಪ’ ಅಭಿಯಾನದ ಭಾಗವಾಗಿ, ಇಂದು ಹೆಬ್ಬಾಳ ಮಂಡಲದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಜಿ ವಿ ರವಿಕುಮಾರ್‌ ಜಿಲ್ಲಾ ವಿಶೇಷ ಆಹ್ವಾನಿತರಾದ ಶ್ರೀ ಅಜಯ್‌ ಸುಭಾಷ್‌ ರವರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂಪಂಗಿರಾಮ್‌ ರವರು, ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಟಿ ಬಿ ಸುರೇಂದ್ರ ರವರು, ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ರವರು, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರ್ಚನ್‌ ಕೋದಂಡರಾಮ್‌ ರವರು, ಮಂಡಲ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕರಾದ ಕು|| ಪೂಜಾ ರಮೇಶ್‌ ರವರು, ಸಹ ಸಂಚಾಲಕರಾದ ಶ್ರೀ ಭರತ್‌ ರವರು, ಭೂಪಸಂದ್ರ ವಾರ್ಡ್‌ ಅಧ್ಯಕ್ಷರಾದ ಶ್ರೀ ಜಯರಾಮ್‌ (ಬಾಬು) ರವರು, ಹಿರಿಯ ಮುಖಂಡರಾದ ಡೈರಿ ರಾಜಣ್ಣ ರವರು ಹಾಗೂ ಎಲ್ಲಾ ಪದಾಧಿಕಾರಿಗಳು ದೀಪ ಬೆಳಗಿಸಿ, ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶ ಸೇವೆಯನ್ನು ಇನ್ನಷ್ಟು ಸಮರ್ಥವಾಗಿ ಮುಂದುವರಿಸುವ ಶಕ್ತಿಗಾಗಿ ಪ್ರಾರ್ಥಿಸಲಾಯಿತು.
ನಾಡಿನ ಸಮಸ್ತ ಜನರ ಆಶೀರ್ವಾದ ಹಾಗೂ ಶುಭ ಹಾರೈಕೆಗಳು ಸದಾ ಪ್ರಧಾನಮಂತ್ರಿ ಅವರೊಂದಿಗಿರಲಿ.
,

Address

NO 1
Bangalore
560024

Alerts

Be the first to know and let us send you an email when BJP Hebbala posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Hebbala:

Shortcuts

Share