Chukki Nanjundaswamy Followers

Chukki Nanjundaswamy Followers ಸಂಯುಕ್ತ ಕಿಸಾನ್ ಮೋರ್ಚಾ

ರೈತ ಹುತಾತ್ಮ ದಿನಾಚರಣೆಯ ನಮನಗಳು 🙏       ರೈತ ನಮ್ಮ ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವ ಅನ್ನದಾತ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವ...
21/07/2026

ರೈತ ಹುತಾತ್ಮ ದಿನಾಚರಣೆಯ ನಮನಗಳು 🙏

ರೈತ ನಮ್ಮ ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವ ಅನ್ನದಾತ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ ಗತಿಸಿದರು ರೈತರ ಸಮಸ್ಯೆಗಳು ತಪ್ಪಿಲ್ಲ. ಇಂದು ರೈತ ಸಮುದಾಯ ಹಲವಾರು ಸ್ಥಳೀಯ ಸಮಸ್ಯೆಗಳ ಜೊತೆಗೆ ಜಾಗತಿಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ರೈತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಆಳುವ ಸರ್ಕಾರಗಳ ವಿರುದ್ಧ ಚಳುವಳಿ ರೂಪಿಸಿ ರೈತ ವಿರೋಧಿ ಸರ್ಕಾರದ ನೀತಿಗಳನ್ನು ಬದಲಾಯಿಸಿ ರೈತ ಹಿತ ಕಾಪಾಡಿದ ಅಸಂಖ್ಯಾತ ರೈತ ಮುಖಂಡರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇವರ ತ್ಯಾಗ ಬಲಿದಾನಗಳನ್ನು ಸ್ಮರಣಿಸಿ ಪ್ರಸ್ತುತ ಮತ್ತು ಮುಂದಿನ ದಿನಗಳಲ್ಲಿ ರೈತ ಎದುರಿಸುವ ಬಿಕ್ಕಟ್ಟಿನ ಬಗ್ಗೆ ಜಾಗೃತಿ ವಹಿಸಬೇಕಾಗಿದೆ.

ಜುಲೈ 21 ರ ರೈತ ಹುತಾತ್ಮ ದಿನಾಚರಣೆಯ ಹಿನ್ನೆಲೆ

ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಬಾಳು ಹಸನಾಗಬೇಕೆಂದು ನೀರಾವರಿ ಸೌಲಭ್ಯ ಒದಗಿಸಲು ಮಲಪ್ರಭಾ ನದಿಗೆ ಸವದತ್ತಿ ಬಳಿಯ ನವಿಲು ತೀರ್ಥದಲ್ಲಿ ಆಣೆಕಟ್ಟು ನಿರ್ಮಾಣವಾಯಿತು. ಆದರೆ ಇದಕ್ಕೆ ಪ್ರತಿಯಾಗಿ ಸರ್ಕಾರವು ರೈತರ ಮೇಲೆ ಅಭಿವೃದ್ಧಿ ಕರ ಹೇರಿತು.

ಕಾಲುವೆಗಳಿಗೆ ನೀರು ಹರಿಯದಿದ್ದರೂ ಕರ ತುಂಬಬೇಕಿತ್ತು ಇದನ್ನು ಭರಿಸದೇ ಇದ್ದಾಗ ರೈತರ ಪಹಣಿ ಪತ್ರಿಕೆ ಮೇಲೆ ಸರ್ಕಾರಿ ಎಂದೂ ನಮೂದಿಸಿತು. ಇದರಿಂದ ಸರ್ಕಾರಿ ಸಾಲ, ವಿವಿಧ ಸೌಲಭ್ಯಗಳಿಂದ ರೈತರು ವಂಚಿತರಾಗಬೇಕಾಬೇಕಾಗಿತು. ಇದನ್ನು ವಿರೋಧಿಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ 21 ಸದಸ್ಯರ ನೇತೃತ್ವದಲ್ಲಿ ನಿರಂತರ ಹೋರಾಟ ಆರಂಭವಾಯಿತು. ರೈತರ ಹೋರಾಟಕ್ಕೆ ಸರ್ಕಾರ ಮಣಿಯಲಿಲ್ಲ. ಆ ಸಮಯದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೇಣುಕಾ ವಿಶ್ವನಾಥನ್ ಮನವಿಕಾರ ರೈತರನ್ನು ಭೇಟಿಯಾಗುವ ಸೌಜನ್ಯವನ್ನೂ ತೋರಲಿಲ್ಲ. ವಿಶೇಷ ಜಿಲ್ಲಾಧಿಕಾರಿ ಗೋವಿಂದರಾಜ ರೈತರನ್ನು ಬೈದು ಕಳುಹಿಸಿದರು. ಇದೆಲ್ಲದರ ಪರಿಣಾಮವಾಗಿ ಜುಲೈ 21 ರಂದು ನವಲಗುಂದ, ನರಗುಂದ, ಸವದತ್ತಿ ಹಾಗು ರಾಮದುರ್ಗ ತಾಲೂಕುಗಳಲ್ಲಿ ಬಂದ್ ಆಚರಿಸಲಾಯಿತು. ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ, ನರಗುಂದ ತಹಶೀಲದಾರರು ಪ್ರತಿಭಟಿಸುತ್ತಿದ್ದ ರೈತರನ್ನು ತುಳಿದುಕೊಂಡೇ ಕಚೇರಿಯ ಒಳಗೆ ನಡೆದರು. ಅದೆ ವೇಳೆಗೆ ಪಿ.ಎಸ್.ಐ. ರೈತರ ಮೇಲೆ ಗುಂಡು ಹಾರಿಸಿದರು. ರೊಚ್ಚಿಗೆದ್ದ ಜನ ಕಚೇರಿಯನ್ನು ಧ್ವಂಸ ಮಾಡಿ ಪೋಲೀಸರ ಮೇಲೆ ಪ್ರತಿ ದಾಳಿ ಮಾಡಿದರು. ಈ ಗಲಭೆಯಲ್ಲಿ ಮೂವರು ಪೊಲೀಸರು ಬಲಿಯಾದರೆ, ಪೋಲೀಸ ಗುಂಡೇಟಿಗೆ ಈರಪ್ಪ ಕಡ್ಲಿಕೊಪ್ಪ ಎನ್ನುವ ರೈತ ಬಲಿಯಾದ. ಇದೇ ವೇಳೆ ನವಲಗುಂದದಲ್ಲಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರ ಮೇಲೆ ಗೋಳೀಬಾರ್ ನಡೆಯಿತು. ರೈತ ಬಸಪ್ಪ ಲಕ್ಕುಂಡಿ ಆಹುತಿಯಾದರು. ಸಿಟ್ಟಿಗೆದ್ದ ಜನ ನೀರಾವರಿ ಕಚೇರಿಗೆ ಬೆಂಕಿ ಹಚ್ಚಿ ಕಂಡ ಕಂಡ ಅಧಿಕಾರಿಗಳನ್ನು ಬೆನ್ನಟ್ಟಿ ಥಳಿಸಿದರು.

ಮರುದಿನ ಪ್ರಾರಂಭವಾದದ್ದು ಸರಕಾರದ ಪ್ರತೀಕಾರ ಕಾಂಡ. ನವಲಗುಂದ, ನರಗುಂದದಲ್ಲಿ ಹತ್ತಿದ ಬೆಂಕಿ ಇಡೀ ಕರ್ನಾಟಕವನ್ನೇ ವ್ಯಾಪಿಸಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆ ಹಾಗು ಪ್ರತಿಯಾಗಿ ನಡೆದ ಗೋಳೀಬಾರುಗಳಲ್ಲಿ 139 ರೈತರು ಬಲಿಯಾದರು. ರಾಜ್ಯಾದ್ಯಂತ ರೈತ ಸಂಘಟನೆ ರೂಪುಗೊಂಡಿತು. ಇದರ ಫಲವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಪಕ್ಷ ಪರಾಭವಗೊಂಡು, ರಾಮಕೃಷ್ಣ ಹೆಗಡೆ ಸರಕಾರ ಅಸ್ತಿತ್ವಕ್ಕೆ ಬಂದಿತು.

ಜೂನ್ 21 ನ್ನು ರೈತ ಹುತಾತ್ಮ ದಿನವಾಗಿ ಆಚರಿಸಲಾಗುತ್ತಿದೆ.

20/07/2026

ಇಂದು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಿದ ವಿಧ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ತೋರಿದ ಸರ್ವಾಧಿಕಾರ ನೋಡಿ ಶಿಕ್ಷಕಿಯ ಕಣ್ಣೀರು..

ಪ್ರಜಾಪ್ರಭುತ್ವದ ಈ ದಾರಿಯಲ್ಲಿ, ವಿದ್ಯಾರ್ಥಿಗಳು ತನ್ನ ಬೆನ್ನಿನ ಮೇಲಿರುವ ಚೀಲದಲ್ಲಿ ಪುಸ್ತಕಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ...
20/07/2026

ಪ್ರಜಾಪ್ರಭುತ್ವದ ಈ ದಾರಿಯಲ್ಲಿ, ವಿದ್ಯಾರ್ಥಿಗಳು ತನ್ನ ಬೆನ್ನಿನ ಮೇಲಿರುವ ಚೀಲದಲ್ಲಿ ಪುಸ್ತಕಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ದೇಶದ ಯುವಕರ ಮೇಲೆ ನೀವು ಸುರಿಸುತ್ತಿರುವ ಈ ಲಾಠಿ ಏಟುಗಳು ಕೇವಲ ಅವರ ಮೇಲಷ್ಟೇ ಬೀಳುತ್ತಿಲ್ಲ, ಭಾರತದ ಭವಿಷ್ಯದ ಮೇಲೆಯೇ ಬೀಳುತ್ತಿವೆ.
​ಈಗ ತಿಳಿಯಿತು ಸಾಹೇಬರೇ, ಈ ಪ್ರಜಾಪ್ರಭುತ್ವವು ನಿಮ್ಮನ್ನು ದೇಶದ ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡೇ ಇಲ್ಲ! ದೇಶದ ರೈತರು, ಆದಿವಾಸಿಗಳು, ದಲಿತರು, ಶೋಷಿತರು, ಹಿಂದುಳಿದವರು ಮತ್ತು ನಿರುದ್ಯೋಗಿ ಯುವಕರೆಲ್ಲರೂ ಇಂದು ರಸ್ತೆಯಲ್ಲಿದ್ದಾರೆ, ಹಾಗಿರುವಾಗ ನಿಮಗೆ ಮತ ನೀಡಿದವರಾದರೂ ಯಾರು?
​"ನೀವು ಕೇವಲ ಯಂತ್ರಗಳ ಸರ್ಕಾರ ಅಷ್ಟೇ."

18/07/2026

ಜುಲೈ 21, 2026 ರೈತ ಹುತಾತ್ಮ ದಿನದಂದು ರಾಜ್ಯದ್ಯಂತ ಬಲವಂತದ ಭೂಸ್ವಾಧೀನ ವಿರೋಧಿ ದಿನಕ್ಕೆ ಕರೆ

- ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ,
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

18/07/2026

Neet ಪರೀಕ್ಷೆ ಅಕ್ರಮಗಳನ್ನು ಪ್ರಶ್ನಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ‌ ಕಳೆದ 20‌ ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿಜ್ಞಾನಿ ಹಾಗೂ ಪರಿಸರ ಹೋರಾಟಗಾರ‌ ಸೋನಮ್ ವಾಂಗ್ಚುಕ್ ಅವರನ್ನು ಮೋದಿ ಸರ್ಕಾರ ಬಲವಂತವಾಗಿ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿರುವ ಘಟನೆ ಇದು ಬೆಳಗ್ಗೆ ನಡೆದಿದೆ.

15/07/2026

ಬಲವಂತದ ಭೂಸ್ವಾದಿನ ವಿರೋಧಿಸಿ ಬಿಡದಿ ರೈತರಿಂದ ವಿನೂತನ ಪ್ರತಿಭಟನೆ...

11/07/2026

ಬಿಡದಿಯ ಬೈರಮಂಗಲದಲ್ಲಿ ಬಲವಂತದ ಭೂ ಸ್ವಾದೀನ ವಿರೋಧಿಸಿ ಧರಣಿ ವೇಧಿಕೆಯಲ್ಲಿ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ರವರ ಮಾತುಗಳು



11/07/2026

ಬಿಡದಿಯಲ್ಲಿ ಬಲವಂತದ ಭೂ ಸ್ವಾದಿನ ವಿರೋಧಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇವತ್ತು ಹಮ್ಮಿಕೊಂಡಿದ್ದ ಬಿಡದಿ ಚಲೋ ಹೋರಾಟಕ್ಕೆ ಕರೆಕೊಟ್ಟ ಕಾರಣ ಇವತ್ತು ಬಿಡದಿಯಲ್ಲಿ ಶ್ರೀ ಮತಿ ಚುಕ್ಕಿ ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಸೇರಿದ ಸಾವಿರಾರು ರೈತ ಸಂಘಟಕರು

ನಮ್ಮ ಭೂಮಿ ನಮ್ಮ ಹಕ್ಕು

Chukki Nanjundaswamy
Rakesh Tikait
Ch Yudhvir Singh
fans
Chukki Nanjundaswamy Followers Prof M D Nanjundaswamy

30/03/2026

ವಿಶ್ವ ವಿಖ್ಯಾತ ರೈತ ನೇತಾರ ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿಯವರ ಅಪರೂಪದ ರೇಖಾಚಿತ್ರ

20/02/2026

Address

Bangalore
560002

Telephone

+918971013536

Website

Alerts

Be the first to know and let us send you an email when Chukki Nanjundaswamy Followers posts news and promotions. Your email address will not be used for any other purpose, and you can unsubscribe at any time.

Contact The Organization

Send a message to Chukki Nanjundaswamy Followers:

Shortcuts

Share

Category