Mahila Morcha BJP Karnataka

Mahila Morcha BJP Karnataka BJP Karnataka State Mahila Morcha official. BJMM - women wing of the Bharatiya Janata Party

05/08/2026

ಬೆಂಗಳೂರಿನ‌ ಶ್ರೀನಗರದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದಲ್ಲಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಿ.ಮಂಜುಳಾ ರವರು ಭಾಗವಹಿಸಿದರು.

04/08/2026

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ!

ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಆಗಮಿಸಿದ್ದು, ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿದರು.🚩

ನಮ್ಮ ನೀರು, ನಮ್ಮ ಹಕ್ಕು! ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜುಲೈ 31 ರಂದು ಮಂಡ್ಯದ ಕೆಆರ್‌ಎಸ್‌ ಡ್ಯಾಮ...
31/07/2026

ನಮ್ಮ ನೀರು, ನಮ್ಮ ಹಕ್ಕು!

ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜುಲೈ 31 ರಂದು ಮಂಡ್ಯದ ಕೆಆರ್‌ಎಸ್‌ ಡ್ಯಾಮ್‌ ಬಳಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಕಾಂಗ್ರೆಸ್‌ ಮೈತ್ರಿಕೂಟದ ಪಾಲುದಾರ, ತಮಿಳುನಾಡು ಮುಖ್ಯಮಂತ್ರಿಯನ್ನು ಒಲೈಸಲು ಮುಖ್ಯಮಂತ್ರಿ ಡಿಕೆಶಿ ಅವರು ಸಿಡಬ್ಲ್ಯೂಆರ್‌ಸಿ ಆದೇಶವನ್ನು ಪ್ರಶ್ನಿಸುತ್ತಿಲ್ಲ. ಕಾವೇರಿ ಕೊಳ್ಳದ ರೈತರ ಪರವಾಗಿ ಬಿಜೆಪಿ ಧ್ವನಿ ಎತ್ತಲಿದೆ.

ಬನ್ನಿ, ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಿ, ರೈತರೊಂದಿಗೆ ಜೊತೆಯಾಗಿ.

#ರೈತವಿರೋಧಿಕಾಂಗ್ರೆಸ್‌

ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ 27-ಜುಲೈ-26 ರಂದು ರಾಜ್ಯ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ...
29/07/2026

ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ 27-ಜುಲೈ-26 ರಂದು ರಾಜ್ಯ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ವಿಧಾನ ಪರಿಷದ್ ನ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರೀತಮ್ ಗೌಡರು, ಶ್ರೀ ಪಿ. ರಾಜೀವ್ ರವರು,
ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕು ಸಿ ಮಂಜುಳಾ ರವರು,
ರಾಜ್ಯ ಉಪಾಧ್ಯಕ್ಷರುಗಳು, ರಾಜ್ಯ ಕಾರ್ಯದರ್ಶಿಗಳು, ವಿವಿಧ ಪ್ರಕೋಷ್ಠಗಳ ರಾಜ್ಯ ಸಂಚಾಲಕರು ಹಾಗು ಪ್ರಮುಖರು ಉಪಸ್ಥಿತರಿದ್ದರು.

29/07/2026

ಎಥನಾಲ್ ಬ್ಲೆಂಡಿಂಗ್ ಕೇವಲ ಇಂಧನದ ವಿಷಯವಲ್ಲ, ಭಾರತದ ಶಕ್ತಿ ಮತ್ತು ಇಂಧನ ಭದ್ರತೆಯ ದಾರಿ!

ಕಳೆದ ದಶಕದಲ್ಲಿ 238 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಕಡಿತಗೊಳಿಸಿ, ₹1 ಲಕ್ಷ ಕೋಟಿಗೂ ಹೆಚ್ಚು ವಿದೇಶಿ ವಿನಿಮಯ ಉಳಿಸಲಾಗಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ 2025ರಲ್ಲೇ 20% ಎಥನಾಲ್ ಬ್ಲೆಂಡಿಂಗ್ (E20) ಗುರಿ ಸಾಧಿಸಿರುವುದು ಸ್ವಾವಲಂಬಿ ಭಾರತದ ಬಲವಾದ ಅಡಿಪಾಯ!

28/07/2026

ಜಗತ್ತು ಸಂಪತ್ತು ಮತ್ತು ಅಧಿಕಾರದ ಹಿಂದೆ ಓಡುತ್ತಿರುವಾಗ, ನಿಸ್ವಾರ್ಥವಾಗಿ ದೇಶಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಧಾರೆ ಎರೆಯುತ್ತಿರುವ ನಾಯಕ. ಇವರು ಆಳಲು ಬಂದವರಲ್ಲ, ಈ ಮಣ್ಣಿನ ಸೇವಕನಾಗಿ ನಿಂತವರು! ಕೋಟಿ ಕೋಟಿ ಜನರ ಪ್ರೀತಿ ಮತ್ತು ಗೌರವ ಸದಾ ನಿಮ್ಮೊಂದಿಗೇ ಇರಲಿದೆ ಮೋದಿ ಜೀ! 🇮🇳

26/07/2026

24/07/2026

ಎಸ್‌ಐಆರ್‌ ಮಹಾಸಂಪರ್ಕ ಅಭಿಯಾನದ ಅಂಗವಾಗಿ ಸರಳ್‌ ಆ‍್ಯಪ್‌ನಲ್ಲಿ ಸುಲಲಿತವಾಗಿ ಮಾಹಿತಿಯನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲರೂ ವಿವರವನ್ನು ದಾಖಲಿಸಿ, ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

18/07/2026

ಮಾನ್ಯ ಪ್ರಧಾನಮಂತ್ರಿ ಶ್ರೀ ಅವರ ‘ಅಮೃತ ಭಾರತ ಸ್ಟೇಷನ್ ಸ್ಕೀಮ್’ (ABSS) ಅಡಿಯಲ್ಲಿ ದೇಶದ 75 ರೈಲು ನಿಲ್ದಾಣಗಳು ಹೈಟೆಕ್ ಕ್ರಾಂತಿಗೆ ಸಜ್ಜಾಗಿವೆ.
ಇದರಲ್ಲಿ ನಮ್ಮ ಹೆಮ್ಮೆಯ ಕರ್ನಾಟಕದ 4 ಐತಿಹಾಸಿಕ ನಿಲ್ದಾಣಗಳು ನವೋಲ್ಲಾಸದ ರೂಪ ಪಡೆದುಕೊಂಡಿವೆ.
📍 ಬಂಟ್ವಾಳ
📍 ಕೊಪ್ಪಳ
📍 ಅಳ್ನಾವರ
📍 ಬಾದಾಮಿ
ಹೈಟೆಕ್ ಲಿಫ್ಟ್ & ಎಸ್ಕಲೇಟರ್‌ಗಳು, ಅಗಲದ ವಿಶಾಲ ಮೇಲ್ಸೇತುವೆಗಳು, ಹಿರಿಯ ನಾಗರಿಕರು & ವಿಶೇಷಚೇತನರಿಗೆ ಸುಲಭ ಸಂಚಾರ.
ಜುಲೈ 17ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ವರ್ಚುವಲ್ ಆಗಿ ಲೋಕಾರ್ಪಣೆಗೊಳ್ಳಲಿದೆ.

ಮಾಜಿ ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ದಶಕಗಳ ಕಾಲ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದ ಶ್ರೀ ರಾಮಚಂದ್ರ...
14/07/2026

ಮಾಜಿ ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ದಶಕಗಳ ಕಾಲ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದ ಶ್ರೀ ರಾಮಚಂದ್ರ ಗೌಡ ರವರು ವಿಧಿವಶರಾದ ಸುದ್ದಿ ಬಹಳ ನೋವು ಉಂಟು ಮಾಡಿದೆ.
ಅವರ ಕುಟುಂಬ ವರ್ಗದವರಿಗೆ ಹಾಗು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ಪರಮಾತ್ಮನು ದಯಪಾಲಿಸಲಿ ಎಂಬುದು ನಮ್ಮ ಪ್ರಾರ್ಥನೆ.
ಶ್ರದ್ಧಾಂಜಲಿ 🙏.

ಕು ಸಿ ಮಂಜುಳಾ
ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರು

Address

Malleshwaram
Bangalore
560003

Telephone

+919071233213

Website

Alerts

Be the first to know and let us send you an email when Mahila Morcha BJP Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Mahila Morcha BJP Karnataka:

Shortcuts

Share