19/04/2020
Stay Home, Stay Safe!
In a war against Corona, our biggest ammunition is your consistent support of staying indoors and protecting you and your family. Understanding the concerns of being at home, and having time run slow for you, Bangalore City Police – South Division brings a great opportunity to make this quarantine-period productive.
Jayanagar PS presents ‘When Lockdown Met Art’ – send us your artsy works by posting on our social media page and let’s indulge in the hidden creativity you possess!
We can’t wait to see your works…
Post it on our Facebook and Instagram Pages:
https://www.facebook.com/Jayanagara-PS-BCP-106635667682144/
https://www.instagram.com/jayanagarabcp/
"ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ"
ಕೊರೋನ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ನಮ್ಮ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಬೇಕೆಂದರೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ನೀವೆಲ್ಲರೂ ಮಾಡಬೇಕಾಗಿರುವ ಸಹಾಯ ಇಷ್ಟೇ...ಮನೆಯೊಳಗೇ ಇರಿ, ಮನೆಯೊಳಗೇ ಇರಿ, ಮನೆಯೊಳಗೇ ಇರಿ!..ನೀವಿಷ್ಟು ಸಹಾಯ ಮಾಡಿದರೆ ಸಾಕು. ನಾವು ಖಂಡಿತವಾಗಿಯೂ ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲುತ್ತೇವೆ.
ಮನೆಯೊಳಗೇ ಇರುವುದಕ್ಕೆ ನಿಮಗೆ ಬೇಸರವಾಗಬಹುದು. ಅದು ನಮಗೂ ಗೊತ್ತು. ನಿಮ್ಮ ಈ ಬೇಸರ, ಏಕತಾನತೆಯನ್ನು ನಿವಾರಿಸಲು ನಾವೊಂದು ಕ್ರಿಯಾಶೀಲ ಯೋಜನೆಯೊಂದನ್ನು ನಿಮಗಾಗಿಯೇ ರೂಪಿಸಿದ್ದೇವೆ. ಚಿತ್ರಕಲಾ ಸ್ಪರ್ಧೆ, ಪ್ರಬಂಧ ರಚನೆಯ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ. ನೀವು ಮನೆಯೊಳಗೇ ಇದ್ದು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು...ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಬೇಸರದ ಸಮಯವನ್ನು ಕ್ರಿಯಾಶಿಲಗೊಳಿಸಬಹುದು.
ಲಾಕ್ ಡೌನ್ ಸಮಯ ಕಲಾಸಮಯವಾಗಲಿ! ಬಿಸಿಪಿ- ದಕ್ಷಿಣ ವಿಭಾಗ, ಗಿರಿನಗರ ಪಿಎಸ್ ರವರಿಂದ ಒಂದು ವಿನೂತನ ಪ್ರಯತ್ನ! ಸಾರ್ವಜನಿಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಚಿತ್ರಕಲಾ ಸ್ಪರ್ಧೆ ( 14 ವರ್ಷದ ಒಳಗಿರುವವರಿಗೆ)
ವಿಷಯ- ಪ್ರಕೃತಿ
ಪ್ರಬಂಧ ಬರೆಯುವ ಸ್ಪರ್ಧೆ ( 15 ವರ್ಷ ಮೇಲ್ಪಟ್ಟವರಿಗೆ)
ವಿಷಯ- ಕೃತಜ್ಞತೆ
ನಿಮ್ಮ ಪ್ರವೇಶಗಳನ್ನು ಈ ಕೆಳಗೆ ನೀಡಲಾಗಿರುವ ನಮ್ಮ ಸೋಶಿಯಲ್ ಮಿಡಿಯಾ ಪುಟಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ನೀವು ಈ ಸ್ಪರ್ಧಗಳಲ್ಲಿ ಭಾಗವಹಿಸಬಹುದು.
ಒಬ್ಬರು ಎಷ್ಟು ಪ್ರವೇಶಗಳನ್ನು ಬೇಕಾದರೂ ಕಳಿಸಬಹುದು. ಪ್ರವೇಶಗಳನ್ನು ಕಳಿಸಲು ಅಂತಿಮ ದಿನಾಂಕ 25, ಏಪ್ರಿಲ್2020