CWFI Bengaluru North page

CWFI Bengaluru North page Contact information, map and directions, contact form, opening hours, services, ratings, photos, videos and announcements from CWFI Bengaluru North page, Political organisation, No. 1201 4th Cross 3Rd Main Kalyana Nagar, Bangalore.

23/03/2026

*ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ)(ಸಿಐಟಿಯು)*
*Karnataka State Building & Other Construction Worker's Federation(CITU)*
ಕರ್ನಾಟಕ ರಾಜ್ಯ ಸಮಿತಿ
----------------------------------------
23-03-2026. (*ಪತ್ರಿಕಾ ಹೇಳಿಕೆ*)
*ರಾಜ್ಯ ಸರ್ಕಾರದ ಬಜೆಟ್ 2026-27*
*ಶ್ರಮಿಕ ಶಾಲೆ, ಕೌಶಲ್ಯ ತರಬೇತಿಗೆ ಕಲ್ಯಾಣ ನಿಧಿ ಬಳಕೆಗೆ ವಿರೋಧಿಸಿ*
*ಹೊಸ ಲೇಬರ್ ಕೋಡ್ ಗಳ ಪರಿಣಾಮಗಳ ವಿರುದ್ಧ*
*ಸ್ಪೀಕರ್, ಸಚಿವರು, ಶಾಸಕರಿಗೆ ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರ ಮನವಿ ಸಲ್ಲಿಕೆ*

ಮಾರ್ಚ್ 6 ರಂದು ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಲ್ಲಿ ಕಟ್ಟಡ ಕಾರ್ಮಿಕರ‌ ಕಲ್ಯಾಣಕ್ಕಾಗಿ ಮೀಸಲಾದ ನಿಧಿಯಿಂದ ಶ್ರಮಿಕ ವಸತಿ ಶಾಲೆ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಹಾಗೂ‌ ಹೊಸ ಲೇಬರ್‌ ಕೋಡ್ ಗಳಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕಿನ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಆಗ್ರಹಿಸಿ ರಾಜ್ಯಾದ್ಯಂತ ವಿಧಾನ ಸಭಾ‌ ಸ್ಪೀಕರ್, ಸಚಿವರು ಹಾಗೂ ಶಾಸಕರುಗಳಿಗೆ ಕಟ್ಟಡ ನಿರ್ಮಾಣ ಕಾರ್ಮಿಕರು ಮನವಿಗಳನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಸಿಐಟಿಯು ನೇತೃತ್ವದಲ್ಲಿ ದ.ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದ ಶಾಸಕರು ಹಾಗು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಮಂಕಾಳು ಎಸ್.ವೈದ್ಯ, ಟಿ.ನರಸೀಪುರ ಕ್ಷೇತ್ರದ ಶಾಸಕರು ಸಚಿವರಾದ ಎಚ್.ಮಹಾದೇವಪ್ಪ, ಸೇಡಂ ಶಾಸಕರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ್, ಆಳಂದ ಶಾಸಕರು ಹಾಗೂ ನೀತಿ ಆಯೋಗದ ಉಪಾಧ್ಯಕ್ಷ .ಬಿ.ಆರ್.ಪಾಟೀಲ್ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ,ಚಾಮರಾಜ ಕ್ಷೇತ್ರದ ಕೆ.ಹರೀಶ ಗೌಡ, ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀ ವತ್ಸ್, ಕೊಪ್ಪಳ ‌ಕ್ಷೇತ್ರದ ಶಾಸಕ ರಾಘವೇಂದ್ರ ಇಟ್ನಾಳ್,ದೇವದುರ್ಗ ಶಾಸಕಿ ಶ್ರೀಮತಿ ‌ಕರೇಮ್ಮ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಹೊಸಪೇಟೆ ಶಾಸಕ ಎ.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕರಾದ ಡಾ; ಶ್ರೀನಿವಾಸ, ರಾಮದುರ್ಗ ಕ್ಷೇತ್ರದ ಶಾಸಕರಾದ ಅಶೋಕ ಪಟ್ಟಣ ಶೆಟ್ಟಿ,ಕುಂದಾಪುರ ಶಾಸಕರಾದ ಕಿರಣ ಕುಮಾರ್ ಕೊಡ್ಗಿ, ಬೈಂದೂರು ಶಾಸಕರಾ ಗುರುರಾಜ ಗಂಟಿ, ಟಿ.ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜ್,ಬೀದರ್ ದಕ್ಷಿಣದ ಡಾ; ಶೈಲೇಂದ್ರ ಚಲ್ದಲೆ, ವಿಧಾನ ಪರಿಷತ್ ಸದಸ್ಯ ರಾದ ಡಾ ಭೀಮರಾವ್ ಪಾಟೀಲ್,ಹುಕ್ಕೇರಿ ಶಾಸಕ ಗಣೇಶ ಹುಕ್ಕೇರಿ,ಅಪ್ಜಲ್ ಪುರ ಶಾಸಕ ಎಂವೈ ಪಾಟೀಲ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮಲ್ಲಿಮಟ್,,ಹುಮ್ನಾಬಾದ್ ಶಾಸಕ ಡಾ ಸಿದ್ಧಲಿಂಗ ಪಾಟೀಲ್ ಇದಲ್ಲದೆ ಹಗರಿಬೊಮ್ಮನಹಳ್ಳಿ,ಕಾಗವಾಡ, ಕ್ಷೇತ್ರದ ಶಾಸಕರು ಸೇರಿ ಇದುವರೆಗೂ ಮುವತ್ತಕ್ಕಿಂತ ಅಧಿಕ ಶಾಸಕರಿಗೆ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆ, ನಿಯೋಗ‌ ಮೂಲಕ ಬಜೆಟ್ ನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರುವ ನಿಧಿ ದುರ್ಬಳಕೆ ಹಾಗೂ ಹೊಸ ಲೇಬರ್ ಕೋಡ್ ಗಳಿಂದ ಆಗುತ್ತಿರುವ ಪರಿಣಾಮಗಳನ್ನು ತಡೆಗಟ್ಟಲು ಶಾಸಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕೆಂದು ಎರಡು ಮನವಿಗಳನ್ನು ಪ್ರತಿ ಶಾಸಕರಿಗೆ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗಿದೆ.
ಫೆಡರೇಶನ್ ಪರವಾಗಿ ಮನವಿಗಳನ್ನು ಸ್ವೀಕರಿಸಿದ ಸ್ಪೀಕರ್ ,ಸಚಿವರು,ಶಾಸಕರು ಪರಿಷತ್ ಸದಸ್ಯರು ಇಂದಿನಿಂದ ಪುನಃ ಆರಂಭಗೊಳ್ಳುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸುತ್ತವೆ ಆ ಮೂಲಕ ತಮ್ಮ ತಮ್ಮ ಮತ ಕ್ಷೇತ್ರದ ಮತದಾರರು ಆಗಿರುವ ಕಾರ್ಮಿಕರು ನೀಡಿರುವ ಈ ಮನವಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ.
ರಾಜ್ಯದ ನಿರ್ಮಾಣ ವಲಯದ ಕಾರ್ಮಿಕರು ಮಂಡಿಸಿರುವ ಬೇಡಿಕೆಗಳು ಕುರಿತು ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಏಪ್ರಿಲ್20 ರಿಂದ ನಮ್ಮ ಸಂಘಟನೆ ಸ್ವತಂತ್ರವಾಗಿ ಇಲ್ಲವೇ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ ನಲ್ಲಿ ಸಾವಿರಾರು ಕಾರ್ಮಿಕರ ಅನಿರ್ಧಿಷ್ಟ ಧರಣಿ ಆರಂಭಿಸಲು ಯೋಜನೆ ರೂಪಿಸಿದೆ ಎಂದು ಈ‌ಮೂಲಕ‌ ಎಚ್ಚರಿಕೆ ನೀಡಿದೆ
ಮಾರ್ಚ್ 21-22 ರಂದು ಶಾಸಕರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಸಮಿತಿಗಳಿಗೂ ಅದರ ನಾಯಕರುಗಳಿಗೂ ಹಾಗೂ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಎಲ್ಲ ಜನಪ್ರತಿನಿಧಿಗಳಿಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಸಿಐಟಿಯು ಕೃತಜ್ಞತೆಗಳನ್ನು ಸಲ್ಲಿಸಿದೆ.

ಕೆ.ಮಹಾಂತೇಶ್
ಪ್ರಧಾನ ಕಾರ್ಯದರ್ಶಿ

  ಜನಪರತೆಯ ಮುಖವಾಡ ಧರಿಸಿ-ಬಂಡವಾಳಗಾರರಿಗೆ ಮಣೆ ಹಾಕುವ ಬಜೆಟ್-1.34 ಲಕ್ಷ ಕೋಟಿ ಸಾಲದ ಹೊರೆ-ಹೊರಿಸಿದ ಬಜೆಟ್ - ಸಿಪಿಐ(ಎಂ) ಟೀಕೆಪ್ರಗತಿಶೀಲ ರಾ...
06/03/2026



ಜನಪರತೆಯ ಮುಖವಾಡ ಧರಿಸಿ-ಬಂಡವಾಳಗಾರರಿಗೆ ಮಣೆ ಹಾಕುವ ಬಜೆಟ್-1.34 ಲಕ್ಷ ಕೋಟಿ ಸಾಲದ ಹೊರೆ-ಹೊರಿಸಿದ ಬಜೆಟ್ - ಸಿಪಿಐ(ಎಂ) ಟೀಕೆ

ಪ್ರಗತಿಶೀಲ ರಾಜ್ಯದ ಸರ್ವರ ಏಳಿಗೆಯನ್ನು ಬಯಸುವ ಬಜೆಟ್ ಎಂದು ಮಂಡನೆಯಾದ ರಾಜ್ಯದ ಬಜೆಟ್, ಬಹುತೇಕ ಖಾಸಗೀ, ಕಾರ್ಪೊರೇಟ್ ಬಂಡವಾಳಿಗರಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಡುವ ಬಜೆಟ್ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ)-ಸಿಪಿಐ(ಎಂ) ರಾಜ್ಯ ಸಮಿತಿಯು ಹೇಳಿದೆ. 4.48 ಲಕ್ಷ ಕೋಟಿಯ ಬಜೆಟ್ ಮಂಡನೆಯಾಗಿದ್ದು 1.34 ಲಕ್ಷ ಕೋಟಿ ಸಾಲದ ಹೊರೆ ಮತ್ತೆ ಹೊರಿಸುವ ಬಜೆಟ್ ಇದಾಗಿದೆ. 2024-25 ರಲ್ಲಿ 5 ಲಕ್ಷ ಕೋಟಿ ರೂ.ಗಳ ಮಟ್ಟದಲ್ಲಿದ್ದ ಸಾಲದ ಹೊರೆ ಈಗ ಅಂದಾಜು ಸುಮಾರು 8 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ. ಸರಕಾರದ ವೆಚ್ಚವನ್ನು ಸರಿತೂಗಿಸಲು ಸಾಲವೇ ಪ್ರಮುಖ ಆಧಾರವಾಗಿದೆ ಎಂಬುದನ್ನು ಇದು ಸೂಚಿಸುತ್ತಿದೆ.

ರಾಜ್ಯದ ಅಭಿವೃದ್ಧಿಗೆ ಮೂಲ ಕೊಡುಗೆ ನೀಡುವ ಕೈಗಾರಿಕಾ ಬೆಳವಣಿಗೆಗಳ ಕುರಿತು ಹೊಸ ದೃಷ್ಟಿಕೋನವೇ ಈ ಬಜೆಟ್ ನಲ್ಲಿ ಇಲ್ಲವಾಗಿದೆ. ಗೌರವಾನ್ವಿತ ಆದಾಯ ಬರುವ ಹೊಸ ಉದ್ಯೋಗ ಸೃಷ್ಟಿಯ ಸೂಚನೆಗಳಿಲ್ಲ. ಜನರ ಆದಾಯ ಹೆಚ್ಚಿಸದೇ ಆರ್ಥಿಕತೆ ಉತ್ತಮಗೊಳ್ಳಲು ಸಾಧ್ಯವಿಲ್ಲ. ಕೇಂದ್ರದ ಬಿ.ಜೆ.ಪಿ. ಸರಕಾರ ಜಾರಿಗೆ ತಂದಿರುವ ಕರಾಳ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸುವ ಯಾವ ಸೂಚನೆಯನ್ನೂ ರಾಜ್ಯ ಸರಕಾರ ಕೊಟ್ಟಿಲ್ಲ.

ಕೈಗಾರಿಕಾ ಅಭಿವೃದ್ಧಿಗೆಂದು ಕರಾಳ ಕೆ.ಐ.ಡಿ.ಬಿ ಕಾಯ್ದೆಯ ಮೂಲಕ ಮನಬಂದಂತೆ ರಾಜ್ಯದಲ್ಲಿ ನಡೆದಿರುವ, ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳು, ಅದರಿಂದ ವಂಚನೆಗೊಳಗಾದ ಪ್ರಕರಣಗಳಿಗೆ ಪರಿಹಾರದ ಪ್ರಸ್ತಾಪವಿಲ್ಲ, ಬಗರ್ ಹುಕುಂ ಸಾಗುವಳಿ, ಅರಣ್ಯ ಭೂಮಿ ಒಳಗೊಂಡು ಹಲವಾರು ಸಾಗುವಳಿದಾರರ ಜಮೀನು ಸಕ್ರಮಗೊಳಿಸುವ ಪ್ರಸ್ತಾಪವೂ ಇಲ್ಲ.

ಮನ್ ರೇಗಾ ಉಳಿಸುವ ಪ್ರಯತ್ನ ಬಜೆಟ್ ನಲ್ಲಿ ಕಾಣುತ್ತಿಲ್ಲ:

ಈಗ ಆ 2025-26 ರ ಸಾಲಿನಲ್ಲಿ ಮನ್ ರೇಗಾದ ಅಡಿಯಲ್ಲಿ ಕೇಂದ್ರದ ಪಾಲು 90% ರಾಜ್ಯದ ಪಾಲು 10% ಇದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 26,735 ಕೋಟಿ ಹಂಚಿಕೆಯಾಗಿತ್ತು. ಕಾಯ್ದೆಯನ್ನೇ ರದ್ದು ಮಾಡಿ ರಾಜ್ಯದ ಪಾಲು 40%, ಕೇಂದ್ರದ ಪಾಲು 60% ಎಂದು ಮಾಡಿರುವ ಹೊತ್ತಿನಲ್ಲಿ ಕಳೆದ ಅವಧಿಗಿಂತ ಕಡಿಮೆ ಎಂದರೆ 26,559 ಕೋಟಿ ಮೀಸಲಿಟ್ಟು 176 ಕೋಟಿಯಷ್ಟು ಕಡಿತ ಮಾಡಲಾಗಿದೆ. ಸರ್ವೋದಯದ ಕನಸು ಇಲ್ಲೇ ಹುಡಿಯಾಗಿದೆ. ಕೃಷಿ ಬಿಕ್ಕಟ್ಟಿನಿಂದ ರೈತರು ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ರಾಜ್ಯದ ಬಜೆಟ್ ಮೂಲಕ ಅವರಿಗೆ ಬದುಕಿನ ಭರವಸೆ ನೀಡಲು ಸರಕಾರ ವಿಫಲವಾಗಿದೆ.

ಕೃಷಿ ಉತ್ಪಾದಕತೆ ಮತ್ತು ಕೃಷಿ ಭೂಮಿ ರಕ್ಷಣೆಗೆ ಯಾವುದೇ ಬೆಂಬಲ ನೀಡದೇ ರಿಯಲ್ ಎಸ್ಟೇಟ್ ಹಾಗೂ ಕಾರ್ಪೊರೇಟ್ ಭೂ ಕಬಳಿಕೆಗೆ ಉತ್ತೇಜಿಸುವಂತೆ ವ್ಯವಸ್ಥೆಯನ್ನು ರೂಪಿಸುವ ಕ್ರಮಗಳು ಬಜೆಟ್‌ನಲ್ಲಿವೆ.

ಆರೋಗ್ಯ ವಲಯದಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಮತ್ತು ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪಗಳು ಸ್ವಾಗತಾರ್ಹ. ಆದರೆ ಅವುಗಳ ಸಮರ್ಪಕ ಜಾರಿಯಲ್ಲಿ ಕೊರತೆಗಳಿವೆ ಎಂಬುದು ಈ ಹಿಂದಿನ ಅವಧಿಗಳ ನಮ್ಮ ಅನುಭವ. ಇವುಗಳನ್ನು ಖಾಸಗೀ ಸಹಭಾಗಿತ್ವದ ಹೆಸರಿನಲ್ಲಿ ಖಾಸಗೀ ಬಂಡವಾಳಿಗರಿಗೆ ತೆರೆದಿಡುವ ಸೂಚನೆಗಳು ಅತ್ಯಂತ ಅಪಾಯಕಾರಿಯಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕೆಲವು ವಿಸ್ತರಣಾ ಯೋಜನೆಗಳ ಪ್ರಸ್ತಾಪವಿದೆ. ಆದರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಸುತ್ತಮುತ್ತಲಿನ ಸರಕಾರೀ ಶಾಲೆಗಳನ್ನು ಮುಚ್ಚುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಅವು ಗ್ರಾಮೀಣ ಭಾಗದ ಮಕ್ಕಳ ಕಲಿಕೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡಲಿದೆ. ಖಾಸಗೀ ಶಾಲೆಗಳನ್ನು ತೆರೆಯಲು ಅನುಮತಿಯನ್ನು ಆನೈನ್ ಮೂಲಕ ಸರಳೀಕರಿಸುವ ಪ್ರಸ್ತಾಪ ಸರಕಾರೀ ಶಾಲೆಗಳ ಕೊರಳಿಗೆ ಬಿಗಿಯುವ ಉರುಳೇ ಆಗಿದೆ. ರೋಹಿತ್ ವೇಮುಲ ಕಾಯ್ದೆಯ ಜಾರಿ ಎನ್ನುವುದು ಕೂಡಾ ಆಗ ಕನಸಿನ ಗಂಟೇ ಆದೀತು.

ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆಯೊಂದು ಸ್ವಾಗತಾರ್ಹ. ಆದರೆ ಅದು ವೇತನ ಸಹಿತ ರಜೆ ಎಂಬುದನ್ನು ಖಾತ್ರಿಪಡಿಸಿ, ಅವರ ರಜೆಯ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಗೆ ಅಗತ್ಯವಾದ ಕ್ರಮದ ಪ್ರಸ್ತಾಪವಿಲ್ಲ.

ಗ್ಯಾರಂಟಿ ಯೋಜನೆಗಳು: ಬಜೆಟ್ ನಲ್ಲಿಯೇ ಉಲ್ಲೇಖಿಸಿದಂತೆ ಕಳೆದ ಅವಧಿಗೆ ಗ್ಯಾರಂಟಿ ಯೋಜನೆಗಳಿಗೆ

ಸರಕಾರ ಮಾಡಿದ ವೆಚ್ಚ 1,21,598 ಕೋಟಿಗಳು, ಈ ವರ್ಷದ ಬಜೆಟ್ ನಲ್ಲಿ ಘೋಷಿಸಿರುವುದು 49,608 ಕೋಟಿ. ಯುವ ನಿಧಿಯ ಪ್ರಸ್ತಾಪವೇ ಇಲ್ಲ. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು ಕಳೆದ ವಾರ ಧಾರವಾಡದಲ್ಲಿ ನಡೆದ ಯುವಜನರ ಹೋರಾಟವೇ ಸಾಕ್ಷಿಯಾಗಿದೆ. ಆದರೆ ಅದರತ್ತ ಗಮನವೇ ಕೊಡದ ಸರಕಾರ ಇತರ ಗ್ಯಾರಂಟಿಗಳಿಗೆ ಘೋಷಿಸಿರುವ ಮೊತ್ತವೂ ತೀರಾ ಕಡಿಮೆಯಾಗಿದ್ದು ಗ್ಯಾರಂಟಿಗಳ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ. ಅದಲ್ಲದೆ ದಲಿತರು ಹಾಗೂ ಆದಿವಾಸಿಗಳ ಅಭಿವೃದ್ದಿಗೆಂದೇ ಮೀಸಲಿರುವ ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ.ಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಅದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲದಿರುವುದು ಕೂಡಾ ಅನುಮಾನಕ್ಕೆ ಎಡೆ ಮಾಡಿದೆ.

ಈ ಮೊದಲು ಮಂಡಿಸುತ್ತಿದ್ದ ಜೆಂಡರ್ ಬಜೆಟ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು ಈ ಬಾರಿಯೂ ಮುಂದುವರೆದಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ವಿಕೃತ ಸ್ವರೂಪದ ದೌರ್ಜನ್ಯಗಳು, ಅವುಗಳನ್ನು ನಿಯಂತ್ರಿಸಿ ನಿಜವಾದ ಮಹಿಳಾ ಸಬಲೀಕರಣಕ್ಕೆ ಕೊಡಬೇಕಾದ ಒತ್ತು ಮಾಯವಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಗೌರವ ಧನ ಹೆಚ್ಚಿಸುವ ಭರವಸೆ ಇದುವರೆಗೂ ಈಡೇರಿಸದೇ ಸಮವಸ್ತ್ರಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರು ಸಾವಿರಾರು ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಅವರ ಕುರಿತು ಪ್ರಸ್ತಾಪವಿಲ್ಲ. ಮಕ್ಕಳ ಸಹಾಯವಾಣಿ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ವೇತನವೂ ಇಲ್ಲ. ಇವೆಲ್ಲದರ ಬಗ್ಗೆ ಬಜೆಟ್ ಮೌನ ವಹಿಸಿದೆ.

ಪ್ರವಾಸೋದ್ಯಮದ ಹೆಸರಿನಲ್ಲಿ ಕರಾವಳಿ ಕಡಲ ತೀರಗಳನ್ನು ಖಾಸಗೀ ಬಂಡವಾಳಿಗರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ತೆರೆದಿಡುವ ಪ್ರಸ್ತಾಪವನ್ನು ಬಜೆಟ್ ನಲ್ಲಿಯೇ ಮಾಡಿರುವುದು ಸರಕಾರ ಎಂದಿದ್ದರೂ ತನ್ನ ನವ ಉದಾರವಾದೀ ನೀತಿಗಳ ಪರವಾಗಿಯೇ ನಿಲ್ಲುತ್ತದೆ ಎಂಬುದನ್ನು ದೃಢಪಡಿಸುತ್ತದೆ.

ವೃದ್ದರು. ಗಂಡ ಸತ್ತವರು, ಅಂಗವಿಕಲರು, ದೇವದಾಸಿಯರಾಗಿದ್ದವರು ಇವರೆಲ್ಲರ ಬದುಕಿಗೆ ಆಸರೆ ಒದಗಿಸುವ ಯಾವ ಪ್ರಸ್ತಾಪಗಳನ್ನೂ ಮಾಡದ ಒಂದು ತೀರಾ ನೀರಸ ಬಜೆಟ್ ಇದು ಎಂದು ಸಿ.ಪಿ.ಐ(ಎಂ) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ಪಡುತ್ತದೆ.

(ಡಾ.ಕೆ.ಪ್ರಕಾಶ್) ಕಾರ್ಯದರ್ಶಿ

 #ಕಾರ್ಮಿಕ_ಸಂಹಿತೆಗಳನ್ನು_ರದ್ದುಪಡಿಸಬೇಕು. #ಒಕ್ಕೂಟ_ವ್ಯವಸ್ಥೆಯ_ವಿರುದ್ಧವಾದ_ಸಮವರ್ತಿ_ಪಟ್ಟಿ_ಕಾರ್ಮಿಕರ_ಕುರಿತು_ಅಧಿಕಾರವನ್ನು_ಕೇಂದ್ರ_ಸರ್ಕ...
04/03/2026

#ಕಾರ್ಮಿಕ_ಸಂಹಿತೆಗಳನ್ನು_ರದ್ದುಪಡಿಸಬೇಕು.

#ಒಕ್ಕೂಟ_ವ್ಯವಸ್ಥೆಯ_ವಿರುದ್ಧವಾದ_ಸಮವರ್ತಿ_ಪಟ್ಟಿ_ಕಾರ್ಮಿಕರ_ಕುರಿತು_ಅಧಿಕಾರವನ್ನು_ಕೇಂದ್ರ_ಸರ್ಕಾರಕ್ಕೆ_ಸಿಮೀತಗೊಳಿಸುವ_ಪ್ರಯತ್ನವನ್ನು_ರಾಜ್ಯ_ಸರ್ಕಾರ_ವಿರೋಧಿಸಬೇಕು.

#ರಾಜ್ಯ_ಸರ್ಕಾರ_ತನ್ನ_ಅಧಿಕಾರವನ್ನು_ಚಲಾಯಿಸಿ_ಮೂಲ_ಸಂಹಿತೆಗಳಿಗೆ_ತಿದ್ದುಪಡಿಗಳನ್ನು_ತಂದು_ನಂತರ_ನಿಯಮಾವಳಿ_ರೂಪಿಸಬೇಕು.

#ಕರಡು_ನಿಯಮಾವಳಿಗಳನ್ನು_ಕನ್ನಡದಲ್ಲಿ_ಪ್ರಕಟಿಸಿ_ನಂತರ_ಆಕ್ಷೇಪಣೆ_ಸಲ್ಲಿಸಲು_ಸಮಯಾವಕಾಶ_ನೀಡಬೇಕು.

#ರಾಜ್ಯ_ಸರ್ಕಾರ_ಕೂಡಲೇ_ಕನಿಷ್ಠ_ವೇತನ_ಅಧಿಸೂಚನೆ_ಹೊರಡಿಸಬೇಕು.

#ಸಿಐಟಿಯು_ಮತ್ತು_ಸಂಯೋಜಿತ_ಸಂಘಟನೆಗಳಿಂದ_ಕಾರ್ಮಿಕ_ಸಂಘಟನೆಗಳಿಗೆ_ಕರಡು_ನಿಯಮಗಳಿಗೆ_ಆಕ್ಷೇಪಣೆಗಳ‌_ಸಲ್ಲಿಕೆ.

#ರಾಜ್ಯಾದ್ಯಂತ_ಕಾರ್ಮಿಕ_ಕಚೇರಿ_ಎದುರು_ಮತ_ಪ್ರದರ್ಶನ
ಿಂದ_05_ಮಾರ್ಚ್_2026

 #ಕಾರ್ಮಿಕ_ಸಂಹಿತೆಗಳನ್ನು_ರದ್ದುಪಡಿಸಬೇಕು #ಒಕ್ಕೂಟ_ವ್ಯವಸ್ಥೆಯ_ವಿರುದ್ಧವಾದ_ಸಮವರ್ತಿ_ಪಟ್ಟಿ_ಕಾರ್ಮಿಕರ_ಕುರಿತು_ಅಧಿಕಾರವನ್ನು_ಕೇಂದ್ರ_ಸರ್ಕಾ...
01/03/2026

#ಕಾರ್ಮಿಕ_ಸಂಹಿತೆಗಳನ್ನು_ರದ್ದುಪಡಿಸಬೇಕು
#ಒಕ್ಕೂಟ_ವ್ಯವಸ್ಥೆಯ_ವಿರುದ್ಧವಾದ_ಸಮವರ್ತಿ_ಪಟ್ಟಿ_ಕಾರ್ಮಿಕರ_ಕುರಿತು_ಅಧಿಕಾರವನ್ನು_ಕೇಂದ್ರ_ಸರ್ಕಾರಕ್ಕೆ_ಸಿಮೀತಗೊಳಿಸುವ_ಪ್ರಯತ್ನವನ್ನು_ರಾಜ್ಯ_ಸರ್ಕಾರ_ವಿರೋಧಿಸಬೇಕು.

#ರಾಜ್ಯ_ಸರ್ಕಾರ_ತನ್ನ_ಅಧಿಕಾರವನ್ನು_ಚಲಾಯಿಸಿ_ಮೂಲ_ಸಂಹಿತೆಗಳಿಗೆ_ತಿದ್ದುಪಡಿಗಳನ್ನು_ತಂದು_ನಂತರ_ನಿಯಮಾವಳಿ_ರೂಪಿಸಬೇಕು.

#ಕರಡು_ನಿಯಮಾವಳಿಗಳನ್ನು_ಕನ್ನಡದಲ್ಲಿ_ಪ್ರಕಟಿಸಿ_ನಂತರ_ಆಕ್ಷೇಪಣೆ_ಸಲ್ಲಿಸಲು_ಸಮಯಾವಕಾಶ_ನೀಡಬೇಕು.

#ರಾಜ್ಯ_ಸರ್ಕಾರ_ಕೂಡಲೇ_ಕನಿಷ್ಠ_ವೇತನ_ಅಧಿಸೂಚನೆ_ಹೊರಡಿಸಬೇಕು.

#ಸಿಐಟಿಯು_ಮತ್ತು_ಸಂಯೋಜಿತ_ಸಂಘಟನೆಗಳಿಂದ_ಕಾರ್ಮಿಕ_ಸಂಘಟನೆಗಳಿಗೆ_ಕರಡು_ನಿಯಮಗಳಿಗೆ_ಆಕ್ಷೇಪಣೆಗಳ‌_ಸಲ್ಲಿಕೆ.

#ರಾಜ್ಯಾದ್ಯಂತ_ಕಾರ್ಮಿಕ_ಕಚೇರಿ_ಎದುರು_ಮತ_ಪ್ರದರ್ಶನ
ಿಂದ_05_ಮಾರ್ಚ್_2026

ದೇಶದ ಸಂವಿಧಾನ ಖಾತರಿ ಪಡಿಸುವ ಒಕ್ಕೂಟ್ಟ ಪದ್ಧತಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ನುಂಗುವ ಸರ್ವಾಧಿಕಾರಿ ಕೇಂದ್ರ ಸರ್ಕಾರದ ನಡೆಯ ...
01/03/2026

ದೇಶದ ಸಂವಿಧಾನ ಖಾತರಿ ಪಡಿಸುವ ಒಕ್ಕೂಟ್ಟ ಪದ್ಧತಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ನುಂಗುವ ಸರ್ವಾಧಿಕಾರಿ ಕೇಂದ್ರ ಸರ್ಕಾರದ ನಡೆಯ ವಿರುದ್ಧ ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು.

ಕಾರ್ಮಿಕರ ಕುರಿತ ವಿಚಾರಗಳು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಘೋರ ನಿಯಮಗಳನ್ನು ಬದಲಿಸಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿಯು ಕಾರ್ಮಿಕರಿಗೆ ಮಾರಕವಾದ ಅಂಶಗಳನ್ನು ತಿದ್ದುಪಡಿಗಳ ಮೂಲಕ ಬದಲಿಸಬೇಕು. ಅದರ ನಂತರ ಸಂಹಿತೆಗಳ ಜಾರಿಗೆ ಅಗತ್ಯವಾದ ನಿಯಮಾವಳಿಗಳನ್ನು ರೂಪಿಸಬೇಕು.

ಕೇಂದ್ರ ಸರ್ಕಾರ ಹಿಂದಿ ಹಾಗು ಆಂಗ್ಲ ಭಾಷೆಯಲ್ಲಿ ಸಂಹಿತೆ ಹಾಗು ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಹಿಂದಿ ಭಾಷಿಕರಲ್ಲದ ದೇಶದ ಕಾರ್ಮಿಕರಿಗೆ ಈ ಕಾನೂನು ಹಾಗು ನಿಯಮಾವಳಿಗಳನ್ನು ಅವರವರ ಮಾತೃಭಾಷೆಯಲ್ಲಿ ತಿಳಿದುಕೊಳ್ಳುವ ಹಕ್ಕಿದೆ. ಅದನ್ನು ನಿರಾಕರಿಸಬಾರದು.

ಆದ್ದರಿಂದ ರಾಜ್ಯ ಸರ್ಕಾರ ರಾಜ್ಯದ ಆಡಳಿತ ಭಾಷೆಯಾದ ಕನ್ನಡ ಭಾಷೆಯಲ್ಲಿ ಪ್ರಕಟಿಸ ಬೇಕು. ಕಾನೂನು ಹಾಗು ನಿಯಮಾವಳಿಗಳನ್ನು ಕಾರ್ಮಿಕರಿಗೆ ಓದಲು ಹಾಗು ಅರ್ಥಮಾಡಿಕೊಳ್ಳಲು ಮುಕ್ತ ಅವಕಾಶವನ್ನು ಖಾತರಿ ಪಡಿಸಬೇಕು. ಕನ್ನಡ ಅಭಿಮಾನ ತುಟಿಯಮೇಲಿನ ಪದಗಳಲ್ಲ ಕಾರ್ಯಾಚರಣೆಯ ಬದ್ಧತೆ ಎಂಬುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮರೆಯಬಾರದು.

ಕನ್ನಡದಲ್ಲಿ ಸಂಹಿತೆಗಳು ಹಾಗು ನಿಯಮಾವಳಿಗಳನ್ನು ಪ್ರಕಟಿಸಿದ ನಂತರ ಕನಿಷ್ಟ ಎರಡು ತಿಂಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡ ಬೇಕು ಎಂಬುದು ಸಿಐಟಿಯು ರಾಜ್ಯ ಸಮಿತಿಯ ಒತ್ತಾಯವಾಗಿದೆ.

ಈ ಬೇಡಿಕೆಗಳಿಗೆ ಪ್ರಗತಿಪರ ಹಾಗು ಪ್ರಸತಾತ್ಮಕ ಮನಸ್ಸುಗಳು ಬೆಂಬಲ ನೀಡಬೇಕು ಎಂಬುದು ಸಿಐಟಿಯು ರಾಜ್ಯ ಸಮಿತಿಯ ವಿನಂತಿ.

ಮಾರ್ಚ್ 3 ರಿಂದ 5, 2026 ರಾಜ್ಯಾದ್ಯಂತ "ರಾಜ್ಯದ ಗೌರವ ಹಾಗು ಆಭಿಮಾನ" ಉಳಿಸಲು ನಮ್ಮ ಸಂಘಟನೆ ನಡೆಸುವ ಕಾರ್ಯಾಚರಣೆಗೆ ಬೆಂಬಲ ನೀಡಲು ವಿನಂತಿಸುತ್ತೇವೆ.

-ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ

ಕಾರ್ಮಿಕ- ಕಾರ್ಮಿಕಾಧಿಕಾರಿ ಮಧ್ಯ ಒಂದು ಚರ್ಚೆ ಗಮನಿಸಿ #ಇಂತಹ_ಲೇಬರ್_ಕೋಡ್ಸ್_ಬೇಕಾ?????  #ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ
02/02/2026

ಕಾರ್ಮಿಕ- ಕಾರ್ಮಿಕಾಧಿಕಾರಿ ಮಧ್ಯ ಒಂದು ಚರ್ಚೆ ಗಮನಿಸಿ
#ಇಂತಹ_ಲೇಬರ್_ಕೋಡ್ಸ್_ಬೇಕಾ?????

#ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ

 #ಬನ್ನಿ_ಬೆಂಬಲಿಸಿ_ಭಾಗವಹಿಸಿಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ವಂಚನೆಯ ವಿರುದ್ಧ  #ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ ಶಾಸಕರು...
02/02/2026

#ಬನ್ನಿ_ಬೆಂಬಲಿಸಿ_ಭಾಗವಹಿಸಿ
ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ವಂಚನೆಯ ವಿರುದ್ಧ

#ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ

ಶಾಸಕರು / ಸಂಸದರು ತಮ್ಮ ವೇತನ, ಭತ್ಯೆಯನ್ನು ಲಕ್ಷ ಗಟ್ಟಲೆ ಏರಿಸಿಕೊಂಡವರು ಸೇರಿ ಕಾರ್ಮಿಕರಿಗೆ "ನೆಲ ಮಟ್ಟದ ವೇತನ" ಅಂತ ಕರೆದು ದಿನಕ್ಕೆ 178 ರೂಪಾಯಿ ನಿಗದಿ ಮಾಡಿದ್ದಾರೆ!

 #ಬನ್ನಿ_ಬೆಂಬಲಿಸಿ_ಭಾಗವಹಿಸಿಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ವಂಚನೆಯ ವಿರುದ್ಧ  #ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ
31/01/2026

#ಬನ್ನಿ_ಬೆಂಬಲಿಸಿ_ಭಾಗವಹಿಸಿ
ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ವಂಚನೆಯ ವಿರುದ್ಧ

#ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ

 #ವಿರೋಧ ಯಾಕೆ?ಇದು ಕಾರ್ಮಿಕ ಸಂಹಿತೆ ಮಾಲೀಕರ ಪರ ಕಾರ್ಮಿಕ ವಿರೋಧಿ  #18 ಸಾವಿರ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವವರು ಕಾರ್ಮಿಕರೇ ಅಲ್ಲ ಎನ್ನ...
31/01/2026

#ವಿರೋಧ ಯಾಕೆ?
ಇದು ಕಾರ್ಮಿಕ ಸಂಹಿತೆ ಮಾಲೀಕರ ಪರ ಕಾರ್ಮಿಕ ವಿರೋಧಿ
#18 ಸಾವಿರ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವವರು ಕಾರ್ಮಿಕರೇ ಅಲ್ಲ ಎನ್ನುತ್ತಿದೆ ಲೇಬರ್ ಕೋಡ್

#ಕರಾಳ ಲೇಬರ್ ಕೋಡ್ ವಿರುದ್ಧ
General_Strike
#ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ

  General_Strike #ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ ಕಷ್ಟಪಟ್ಟು ದುಡಿಯಬೇಕು ದುಡಿಮೆಗೆ ಕೂಲಿ ಕೇಳಬಾರದುಕಾರ್ಮಿಕರು ಇರಬೇಕು ಸಂಘ...
30/01/2026

General_Strike
#ಫೆಬ್ರುವರಿ12_ದೇಶವ್ಯಾಪಿ_ಸಾರ್ವತ್ರಿಕ_ಮುಷ್ಕರ

ಕಷ್ಟಪಟ್ಟು ದುಡಿಯಬೇಕು ದುಡಿಮೆಗೆ ಕೂಲಿ ಕೇಳಬಾರದು
ಕಾರ್ಮಿಕರು ಇರಬೇಕು ಸಂಘ ಮಾಡುವಂತಿಲ್ಲ
ಹೆಚ್ಚುವರಿ ಕೆಲಸ ಮಾಡಬೇಕು ಓಟಿ ಕೇಳುವಂತಿಲ್ಲ.
#ಇದೇ_ನೋಡಿ_ಲೇಬರ್_ಕೋಡ್

25/01/2026

*ಕಾರ್ಮಿಕ ಸಂಹಿತೆಗಳ ಜಾರಿಗೆ ಕರಡು ನಿಯಮಗಳ ಪ್ರಕಟಣೆ;*
*ಕಾರ್ಮಿಕರಿಗೆ ದ್ರೋಹ ಬಗೆದ ರಾಜ್ಯ ಕಾಂಗ್ರೇಸ್ ಸರ್ಕಾರ - ಸಿಐಟಿಯು ಟೀಕೆ*

ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧದ ನಡುವೆಯೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ಡಿಸೆಂಬರ್ 3೦, 2025ರಂದು ಕರಡು ನಿಯಮಗಳನ್ನು ಪ್ರಕಟಿಸಿದೆ. ಇದರ ಬೆನ್ನಲ್ಲೆ ರಾಜ್ಯ ಕಾಂಗ್ರೇಸ್ ಸರ್ಕಾರ ಸಹ ಸಂಹಿತೆಗಳ ಜಾರಿಗೆ ಜನವರಿ 24 ರಂದು ‘ಕೈಗಾರಿಕಾ ಸಂಬಂಧಗಳ (ಕರ್ನಾಟಕ) ಕರಡು ನಿಯಮಗಳು-2026’ ಪ್ರಕಟಿಸುವ ಮೂಲಕ ರಾಜ್ಯದ ಕಾರ್ಮಿಕರಿಗೆ ದ್ರೋಹ ಬಗೆದಿದೆಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಟೀಕಿಸಿದೆ. ಕಾರ್ಮಿಕ ವಿರೋಧಿಯಾಗಿ ಪ್ರಕಟಿಸಿರುವ ಕರಡು ನಿಯಮಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಸಿಐಟಿಯು ಆಗ್ರಹಿಸಿದೆ.

ಕೈಗಾರಿಕಾ ಸಂಬಂಧಗಳ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಪಡೆಯದ ರಾಜ್ಯ ಕಾಂಗ್ರೇಸ್ ಸರ್ಕಾರ ಸಂಹಿತೆಯಲ್ಲಿ ಸೇರಿಸದೆ ಬಿಟ್ಟಿರುವ ಕೆಲವು ಕಠಿಣ ಷರತ್ತುಗಳನ್ನು ಕರಡು ನಿಯಮಗಳಲ್ಲಿ ಸೇರಿಸುವ ಮೂಲಕ ರಾಜ್ಯದಲ್ಲಿನ ಕಾರ್ಮಿಕರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದೆ.

ಕಾರ್ಮಿಕ ಸಂಘದ ನೊಂದಣಿ ಶುಲ್ಕ ರೂ.10 ರಿಂದ ರೂ.1000 ಕ್ಕೆ ಹೆಚ್ಚಿಸಿದೆ, ಸಂಘದ ನೊಂದಣಿಗೆ ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ವಿವರಣೆ ಕೇಳಿ ನೀಡುವ ಪ್ರತಿ ನೋಟೀಸ್ ಗೆ ರೂ.100 ಶುಲ್ಕ ನಿಗದಿಪಡಿಸಿದೆ. ಮಾನ್ಯತೆ ಪಡೆದಿರುವ ಕಾರ್ಮಿಕ ಸಂಘ ಅಥವಾ ಜಂಟಿ ಚೌಕಾಶಿ ಸಮಿತಿಗಳು ಇದ್ದರೂ ವರ್ಕ್ಸ್ ಕಮಿಟಿ, ಗ್ರೀವೆನ್ಸ್ ಸಮಿತಿಗಳು ಮಾಡಲು ಮಾಲೀಕರಿಗೆ ಅವಕಾಶ ನೀಡಿದೆ. ಕಾರ್ಮಿಕ ಸಂಘಗಳು ಸದಸ್ಯರಿಂದ ವಾರ್ಷಿಕ ವಂತಿಗೆ ಸಂಗ್ರಹ ಮೇಲೆ ನಿರ್ಬಂಧ ಹಾಗೂ ವಾರ್ಷಿಕ ರೂ.50 ಸಾವಿರಕ್ಕಿಂತಲೂ ಹೆಚ್ಚು ವಹಿವಾಟು ಹೊಂದುವ ಕಾರ್ಮಿಕ ಸಂಘಟನೆಗಳ ಆಡಿಟಿಂಗ್‌ ಮತ್ತು ಮಾರ್ಚ್ 31ರ ಒಳಗೆ ಆನ್ಯುಯಲ್‌ ರಿಟರ್ನ್ಸ್ ಸಲ್ಲಿಕೆ ಕಡ್ಡಾಯ ಸೇರಿದಂತೆ ಸಂಘದ ನಿಧಿ ಬಳಕೆ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಈ ಮೂಲಕ ಕಾರ್ಮಿಕರು ತಮ್ಮಇಚ್ಚೇಯ ಸಂಘ ಕಟ್ಟಿಕೊಳ್ಳುವ, ಸಂಘದ ನಿರ್ವಹಣೆಗೆ, ಹೋರಾಟಗಳಿಗೆ ನಿಧಿ ಬಳಸುವ, ಸಂಘದ ಮಾನ್ಯತೆ ಹೊಂದುವ ಹಕ್ಕುಗಳನ್ನು ನಿರಾಕರಿಸಿದೆ.

ಕಾರ್ಮಿಕ ಸಂಘಗಳು ಮುಷ್ಕರ ಮಾಡಲು ಬಹುಸಂಖ್ಯೆಯ ಕಾರ್ಮಿಕರ ಒಪ್ಪಿಗೆ, ಮುಷ್ಕರದ ನೋಟಿಸ್‌ಗೆ ಪ್ರಧಾನ ಕಾರ್ಯದರ್ಶಿ ಜೊತೆಗೆ ಎಲ್ಲಾ ಪದಾಧಿಕಾರಿಗಳ ಮತ್ತು ಆಯ್ಕೆಗೊಂಡ 5 ಮಂದಿ ಇತರೆ ಕಾರ್ಮಿಕ ಪ್ರತಿನಿಧಿಗಳ ಸಹಿ ಕಡ್ಡಾಯಗೊಳಿಸಿದೆ. ಸಂಹಿತೆಯಲ್ಲಿ ವಿವಿಧ ಸ್ವರೂಪದ ಮುಷ್ಕರವನ್ನು ನಿಷೇಧಿಸುವ ಮತ್ತು ಅಕ್ರಮ ಮುಷ್ಕರಕ್ಕೆ ಕಾರ್ಮಿಕ ಸಂಘದ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಬೆಂಬಲಿಸುವವರಿಗೆ ವಿಧಿಸಿರುವ ದಂಡ ಮತ್ತು ಶಿಕ್ಷೆಯನ್ನು ಕರಡು ನಿಯಮಾವಳಿಗಳಲ್ಲಿಯೂ ಮತ್ತಷ್ಟು ಬಿಗಿಗೊಳಿಸಲಾಗಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಮತ್ತಷ್ಟು ಕಠಿಣಗೊಳಿಸಿ, ದಮನ ಮಾಡುವ ಈ ಕ್ರಮವು ಸಂವಿಧಾನ ವಿರೋಧಿ ಕ್ರಮವಾಗಿದೆ.

ಕೈಗಾರಿಕೆ/ಸಂಸ್ಥೆಗಳು ಲೇ ಆಫ್, ರಿಟ್ರೆಂಚ್‌ಮೆಂಟ್, ಕ್ಲೋಸರ್ ಮಾಡಲು ಸರ್ಕಾರದಅನುಮತಿ ಮಿತಿ 100 ರಿಂದ 300ಕ್ಕೆ ಹೆಚ್ಚಳ ಮಾಡಿ ನಿಯಮಾವಳಿಗಳನ್ನು ರೂಪಿಸಿ ರಾಜ್ಯದಲ್ಲಿರುವ ಶೇ.90 ರಷ್ಟು ಕಾರ್ಖಾನೆಗಳ ಕಾರ್ಮಿಕರನ್ನು ಅಭದ್ರತೆಗೆ ದೂಡಿದೆ. ಕಾರ್ಮಿಕ ಮತ್ತು ಮಾಲೀಕರ ನಡುವಿನ ಇತ್ಯರ್ಥವಾಗದ ಯಾವುದೇ ವಿವಾದಗಳನ್ನು ನ್ಯಾಯ ನಿರ್ಣಯಕ್ಕೆ ಒಪ್ಪಿಸುವ ಕಾರ್ಮಿಕ ಇಲಾಖೆಯ ಸಂಧಾನಾಧಿಕಾರಿಗಳ ಅಧಿಕಾರವನ್ನು ಮೊಟಕುಗೊಳಿಸಿ ಕಾರ್ಮಿಕರಿಗೆ ನ್ಯಾಯ ಮರೀಚಿಕೆಯಾಗುವಂತೆ ಮಾಡಿದೆ. ಕಾರ್ಮಿಕ ಕಾನೂನುಗಳ ಉಲ್ಲಂಘಗಳಿಂದ ಮಾಲೀಕರಿಗೆ ವಿಧಿಸಲಾಗುವ ದಂಡ ಮತ್ತು ಶಿಕ್ಷೆಗಳಿಂದ ಪಾರು ಮಾಡಲು ಹೊಸದಾಗಿ ಕಾಂಪೌಡಿಂಗ್ ಅಧಿಕಾರಿಗಳ ನೇಮಕಕ್ಕೆ ಅವಕಾಶ ಸೇರಿದಂತೆ ಕಾರ್ಮಿಕ ವಿರೋಧಿಯಾದ ನಿಯಮಾವಳಿ ರೂಪಿಸಿರುವುದನ್ನು ಸಿಐಟಿಯು ಖಂಡಿಸಿದೆ.

ಸಂವಿಧಾನದ ಅನುಚ್ಛೇದ 246ರ ಅನ್ವಯ ಕಾರ್ಮಿಕ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಕಾನೂನುಗಳನ್ನು ರಚಿಸುವ ಅಧಿಕಾರ ಹೊಂದಿದೆ. ಆದರೆ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕೇಂದ್ರದ ಬಿಜೆಪಿ ಸರ್ಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ, ಹೊಸದಾಗಿ ಪರ್ಯಾಯ ಕಾರ್ಮಿಕ ಕಾನೂನು ರೂಪಿಸುವ ಸಂವಿಧಾನಬದ್ಧ ಅಧಿಕಾರ ಬಳಸುವ ಹೊಣೆಗಾರಿಕೆ ಪ್ರದರ್ಶಿಸಿಲ್ಲ. ಬದಲಿಗೆ ರಾಜ್ಯದ ಸಿದ್ದರಾಮಯ್ಯ ಸರ್ಕಾರ 77ನೇ ಗಣರಾಜೋತ್ಸವ ಆಚರಣೆಯ ಹೊಸ್ತಿಲಲ್ಲಿ ಸಂಹಿತೆಗಳ ಜಾರಿಗೆ ಕರಡು ನಿಯಮಗಳನ್ನು ಪ್ರಕಟಿಸುವ ಮೂಲಕ ಕಾರ್ಮಿಕ ವಿರೋಧಿ ನೀತಿಗಳಲ್ಲಿ ಬಿಜೆಪಿಗೂ ತನಗೂ ಯಾವುದೇ ವ್ಯತ್ಯಾಸವಿಲ್ಲ, ತಾನು ಸಹ ಮೋದಿ ಸರ್ಕಾರದಂತೆ ಬಂಡವಾಳಗಾರರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12, 2026 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದರೂ ಲೆಕ್ಕಿಸದೇ ಸಂಹಿತೆಗಳ ಜಾರಿಗೆ ಮುಂದಾಗಿರುವ ರಾಜ್ಯದ ಬಂಡ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಸಿಐಟಿಯು ತೀವ್ರವಾಗಿ ಖಂಡಿಸಿದೆ. ಫೆಬ್ರವರಿ 12 ರಂದು ಕೇಂದ್ರ ಮತ್ತು ರಾಜ್ಯದ ಎರಡು ಸರ್ಕಾರಗಳ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯದಲ್ಲಿ ಲಕ್ಷಾಂತರ ದುಡಿಯುವ ಜನತೆ ಸ್ವಯಂ ಪ್ರೇರಣೆಯಿಂದ ಉತ್ಪಾದನೆ, ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಿ ಪ್ರತಿರೋಧ ನೀಡಲಿದ್ದಾರೆಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಎಚ್ಚರಿಕೆ ನೀಡಿದೆ.

ವಂದನೆಗಳೊಂದಿಗೆ

*ಮೀನಾಕ್ಷಿ ಸುಂದರಂ*
*ರಾಜ್ಯ ಅಧ್ಯಕ್ಷರು*

*ಎಸ್.ವರಲಕ್ಷ್ಮಿ*
*ಪ್ರಧಾನ ಕಾರ್ಯದರ್ಶಿ*

ಪತ್ರಿಕಾ ಪ್ರಕಟಣೆ10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯಿಂದ ಪೂರ್ವಭಾವಿ ಪ್ರತಿಕ್ರಿಯೆಯಾಗಿ ಇಂದು-21 ನವೆಂಬರ್ 2025 ರ ಜಂಟಿ ಹೇಳಿಕೆಯನ್ನು...
21/11/2025

ಪತ್ರಿಕಾ ಪ್ರಕಟಣೆ

10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯಿಂದ ಪೂರ್ವಭಾವಿ ಪ್ರತಿಕ್ರಿಯೆಯಾಗಿ ಇಂದು-21 ನವೆಂಬರ್ 2025 ರ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ

ಕಾರ್ಮಿಕ ಸಂಕೇತಗಳ ಅಧಿಸೂಚನೆ

ನವೆಂಬರ್ 26 ರಂದು ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಕಾರ್ಮಿಕ ಜನರ ಮೇಲೆ ವಂಚನೆ ವಂಚನೆ ಮತ್ತು ಪ್ರತಿಭಟನೆಗೆ ಕರೆ ನೀಡಿದೆ

ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಇಂದಿನಿಂದ ಕಾರ್ಮಿಕ ವಿರೋಧಿ, ಉದ್ಯೋಗದಾತರ ಪರ ಕಾರ್ಮಿಕ ಸಂಹಿತೆಗಳ ಸ್ಪಷ್ಟ ಏಕಪಕ್ಷೀಯ ಅನುಷ್ಠಾನದ ವಿರುದ್ಧ ಬಲವಾದ ಖಂಡನೆಯನ್ನು ವ್ಯಕ್ತಪಡಿಸುತ್ತದೆ. ನಿಸ್ಸಂದಿಗ್ಧವಾಗಿ ಹೇಳುವುದಾದರೆ ನಾವು ಇದನ್ನು ದೇಶದ ದುಡಿಯುವ ಜನರ ವಿರುದ್ಧ ಕೇಂದ್ರ ಸರ್ಕಾರ ಮಾಡಿದ ಮೋಸದ ವಂಚನೆ ಎಂದು ಕರೆಯುತ್ತೇವೆ.

21 ನವೆಂಬರ್ 2025 ರಂದು ಅಧಿಸೂಚನೆಗೊಂಡ ನಾಲ್ಕು "ಕಾರ್ಮಿಕ ಸಂಹಿತೆಗಳು" ಎಂಬ ಈ ಅನಿಯಂತ್ರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಅಧಿಸೂಚನೆಯು ಎಲ್ಲಾ ಪ್ರಜಾಸತ್ತಾತ್ಮಕ ನೀತಿಗಳನ್ನು ಧಿಕ್ಕರಿಸುತ್ತದೆ ಮತ್ತು ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ನಾಶಮಾಡಿದೆ.

ಹತ್ತು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆಯು ಅಸ್ತಿತ್ವದಲ್ಲಿರುವ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಜಾರಿಗೆ ತಂದ ದಿನದಿಂದ ಈ ಕಠಿಣ ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ವಿರೋಧಿಸುತ್ತಿದೆ. 2019 ರಲ್ಲಿ ವೇತನ ಸಂಹಿತೆ ಜಾರಿಗೆ ಬಂದ ನಂತರ, ತಕ್ಷಣದ ಪ್ರತಿಭಟನೆಗಳು ನಡೆದವು, ಜನವರಿ 2020 ರಲ್ಲಿ ಸಾರ್ವತ್ರಿಕ ಮುಷ್ಕರವಾಯಿತು. ಮತ್ತು ಇತರ ಮೂರು ಕಾರ್ಮಿಕ ಸಂಹಿತೆಗಳಾದ ಕೈಗಾರಿಕಾ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯನ್ನು 2020 ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದ ನಂತರ, ತಕ್ಷಣದ ಪ್ರತಿಭಟನೆಗಳು ನಡೆದವು ಮತ್ತು ನವೆಂಬರ್ 26 ರಂದು ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಸಂಯುಕ್ತ ಕಿಸಾನ್ ಮೋರ್ಚಾ (SKM) ನ ಐತಿಹಾಸಿಕ ದೆಹಲಿ ಚಲೋ ಜೊತೆಗೆ ಐತಿಹಾಸಿಕ ಸಾರ್ವತ್ರಿಕ ಮುಷ್ಕರವನ್ನು ಆಚರಿಸಿತು. ಜುಲೈ 9, 2025 ರಂದು ನಡೆದ ಇತ್ತೀಚಿನ ಸಾರ್ವತ್ರಿಕ ಮುಷ್ಕರಕ್ಕೆ ಕಾರಣವಾದ ಹಲವಾರು ಜಂಟಿ ಕ್ರಮಗಳನ್ನು ಗಮನಿಸಲಾಯಿತು, ಇದರಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.

ತೀವ್ರ ಪ್ರತಿರೋಧದ ಹೊರತಾಗಿಯೂ, ಬಿಹಾರ ಚುನಾವಣೆಗಳಲ್ಲಿ ವಿಜಯದಿಂದ ತಲೆಕೆಳಗಾದ ಕೇಂದ್ರ ಸರ್ಕಾರದ ಆಡಳಿತ ಆಡಳಿತವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಾಧ್ಯಮ ವರದಿಗಳು ಮತ್ತು ಟ್ವೀಟ್‌ಗಳ ಪ್ರಕಾರ ಇಂದಿನಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಅಧಿಕಾರವನ್ನು ಹೊಂದಿದೆ ಎಂದು ಭಾವಿಸಿದೆ. ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಭಾರತೀಯ ಕಾರ್ಮಿಕ ಸಮ್ಮೇಳನವನ್ನು (ILC) ತಕ್ಷಣವೇ ಕರೆಯುವಂತೆ ಒತ್ತಾಯಿಸಿತ್ತು ಮತ್ತು ನವೆಂಬರ್ 13 ರಂದು ಸಚಿವಾಲಯವು ಕರಡು ಶ್ರಮ ಶಕ್ತಿ ನೀತಿ 2025 ರ ಕುರಿತು ಕರೆದ ಸಭೆಯಲ್ಲಿಯೂ ಸಹ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿತ್ತು. ನವೆಂಬರ್ 20 ರಂದು ಹಣಕಾಸು ಸಚಿವಾಲಯವು ನಡೆಸಿದ ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿಯೂ ಸಹ, ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ ILC ಅನ್ನು ಕರೆಯುವಂತೆ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯ ಪರವಾಗಿ ಒತ್ತಾಯಿಸಲಾಯಿತು, ಆದರೆ ಇದು 2015 ರ ನಂತರ ನಡೆದಿಲ್ಲ. ಸರ್ಕಾರವು ಹಠಮಾರಿಯಾಗಿ ಪ್ರತಿಕ್ರಿಯಿಸಲಿಲ್ಲ.

ಬದಲಾಗಿ, ಕೇಂದ್ರ ಕಾರ್ಮಿಕ ಸಂಘಗಳ ಯಾವುದೇ ಮನವಿಗಳು, ಪ್ರತಿಭಟನೆಗಳು ಮತ್ತು ಮುಷ್ಕರಗಳಿಗೆ ಕಿವಿಗೊಡದೆ, ಈ ಕೇಂದ್ರ ಸರ್ಕಾರವು ಉದ್ಯೋಗದಾತರ ಪ್ರತಿನಿಧಿಗಳು ಮತ್ತು BMS ಮತ್ತು ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ ಮಾಡಿದ ಸರ್ಕಾರದ ಇತರ ಅಂಚಿನ ಬೆಂಬಲಿಗರ ಬೇಡಿಕೆಗಳನ್ನು ಪೂರೈಸಲು ಕಾರ್ಮಿಕ ಸಂಹಿತೆಗಳನ್ನು ಪರಿಣಾಮಕಾರಿಯಾಗಿ ಮಾಡಿದೆ. ಸರ್ಕಾರದ ಈ ಕ್ರಮವನ್ನು ಅತ್ಯಂತ ಪ್ರಜಾಪ್ರಭುತ್ವ ವಿರೋಧಿ, ಅತ್ಯಂತ ಪ್ರತಿಗಾಮಿ ಕಾರ್ಮಿಕ ವಿರೋಧಿ ಮತ್ತು ಉದ್ಯೋಗದಾತರ ಪರ ಎಂದು ಖಂಡಿಸಿರುವ CTU ಗಳ ಜಂಟಿ ವೇದಿಕೆ, ದುಡಿಯುವ ಜನರ ಮೇಲಿನ ಮಾರಕ ದಾಳಿಯನ್ನು ಇತಿಹಾಸದಲ್ಲಿಯೇ ಅತ್ಯಂತ ಉಗ್ರ ಮತ್ತು ಅತ್ಯಂತ ಒಗ್ಗಟ್ಟಿನ ಪ್ರತಿರೋಧದೊಂದಿಗೆ ಎದುರಿಸಲಾಗುವುದು ಎಂದು ಪ್ರಬಲ ಪದಗಳಲ್ಲಿ ಪುನರುಚ್ಚರಿಸಿದೆ. CTU ಗಳು ಈ ಸಂಹಿತೆಗಳನ್ನು ವಾಸ್ತವ ಗುಲಾಮಗಿರಿ ಮತ್ತು ಕಸಿದುಕೊಳ್ಳುವಿಕೆಯನ್ನು ಹೇರಲು ಪ್ರಯತ್ನಿಸುತ್ತಿರುವ ಕಾರ್ಮಿಕರ ಜೀವನ ಮತ್ತು ಜೀವನೋಪಾಯದ ಮೇಲೆ ನರಮೇಧದ ದಾಳಿಗಳು ಎಂದು ಒಂದೇ ಧ್ವನಿಯಲ್ಲಿ ಕರೆಯುತ್ತವೆ.
ಪುಟ-2
ಕಾರ್ಮಿಕರ ಪ್ರತಿಯೊಂದು ಹಕ್ಕು ಮತ್ತು ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ. ಈ ಸಂಹಿತೆಗಳು ಜಾರಿಗೆ ಬಂದರೆ, ಮುಂದಿನ ಪೀಳಿಗೆಯ ಭರವಸೆಗಳು, ನಂಬಿಕೆ ಮತ್ತು ಆಕಾಂಕ್ಷೆಗಳು ನಾಶವಾಗುತ್ತವೆ.

ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆಯು, 2025 ರ ನವೆಂಬರ್ 26 ರಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ನೇತೃತ್ವದ ರೈತರೊಂದಿಗೆ, ದೇಶದಾದ್ಯಂತ ಪ್ರತಿಯೊಂದು ಕೆಲಸದ ಸ್ಥಳದಲ್ಲೂ ಕಾರ್ಮಿಕ ಸಂಹಿತೆಗಳ ಅನುಷ್ಠಾನದ ವಿರುದ್ಧ ಹೋರಾಟದ ಪ್ರತಿರೋಧ ಮತ್ತು ಪ್ರತಿಭಟನೆಯ ಜಂಟಿ ಕ್ರಿಯೆಯಲ್ಲಿ ಆಕ್ರೋಶ ವ್ಯಕ್ತಪಡಿಸಲು ಕರೆ ನೀಡುತ್ತದೆ, ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಲು ಮತ್ತು ಶ್ರಮ ಶಕ್ತಿ ನೀತಿ 2025 ರ ಕರಡನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸುತ್ತದೆ. ಯುನೈಟೆಡ್ ಪ್ಲಾಟ್‌ಫಾರ್ಮ್ ತನ್ನ ಎಲ್ಲಾ ಸದಸ್ಯರಿಗೆ ಇಂದಿನಿಂದಲೇ ಕೆಲಸದ ಸ್ಥಳಗಳಲ್ಲಿ ಕಪ್ಪು ಬ್ಯಾಡ್ಜ್‌ಗಳನ್ನು ಧರಿಸಿ ಪ್ರತಿಭಟನೆಯನ್ನು ಪ್ರದರ್ಶಿಸಲು ಕರೆ ನೀಡುತ್ತದೆ. ಸೋಮವಾರದಿಂದ ಗೇಟ್ ಸಭೆಗಳು, ಬೀದಿ ಮೂಲೆಯ ಸಭೆಗಳು, ಬಸ್ತಿಗಳಲ್ಲಿ ಸಭೆಗಳು ಇತ್ಯಾದಿಗಳನ್ನು ಯುದ್ಧೋಪಾದಿಯಲ್ಲಿ ನಡೆಸಬೇಕು, ಕೇಂದ್ರ ಸರ್ಕಾರವು ಸಂಪತ್ತು ಉತ್ಪಾದಕರ ಇಡೀ ವಿಭಾಗವನ್ನು ಲಾಭಕೋರರಿಗೆ ಗುಲಾಮರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಬಹಿರಂಗಪಡಿಸಬೇಕು.

ಆಳವಾಗುತ್ತಿರುವ ನಿರುದ್ಯೋಗ ಬಿಕ್ಕಟ್ಟು, ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಈ ಸಂಹಿತೆಗಳ ಅಧಿಸೂಚನೆಯು ದುಡಿಯುವ ಜನಸಾಮಾನ್ಯರ ಮೇಲೆ ಯುದ್ಧ ಘೋಷಣೆಗಿಂತ ಕಡಿಮೆಯಿಲ್ಲ ಎಂಬ ಬಲವಾದ ಸಂದೇಶವನ್ನು CTUಗಳು ರವಾನಿಸುತ್ತವೆ. ಕೇಂದ್ರ ಸರ್ಕಾರವು ತನ್ನ ಬಂಡವಾಳಶಾಹಿ ಆಪ್ತರೊಂದಿಗೆ ಸೇರಿಕೊಂಡು ದೇಶವನ್ನು ಮಾಸ್ಟರ್ ಸೇವಕ ಸಂಬಂಧದ ಶೋಷಣಾ ಯುಗಕ್ಕೆ ಹಿಂತಿರುಗಿಸಲು ಪ್ರಯತ್ನಿಸುತ್ತಿದೆ.

ಭಾರತದ ದುಡಿಯುವ ಜನರು ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳುವವರೆಗೆ ಅಸಾಧಾರಣ ಹೋರಾಟವನ್ನು ನಡೆಸುತ್ತಾರೆ ಎಂದು ಕೇಂದ್ರ ಕಾರ್ಮಿಕ ಸಂಘಗಳ ವೇದಿಕೆ ಸರ್ಕಾರಕ್ಕೆ ಗಂಭೀರ ಎಚ್ಚರಿಕೆಯನ್ನು ಕಳುಹಿಸುತ್ತದೆ.

INTUC

AITUC

HMS

CITU

TUCC

AICCTU

LPF

UTUC

Address

No. 1201 4th Cross 3Rd Main Kalyana Nagar
Bangalore
560057

Website

Alerts

Be the first to know and let us send you an email when CWFI Bengaluru North page posts news and promotions. Your email address will not be used for any other purpose, and you can unsubscribe at any time.

Share