25/06/2026
"ಡಿಜಿ-ಐಜಿಪಿ ಪ್ರಶಂಸನಾ ಪದಕ ಪಡೆದ ಸೊರಬದ ಪುತ್ರ ಐಪಿಎಸ್ ಕೆ. ಪರಶುರಾಮ್ ಅವರಿಗೆ ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) ಕರ್ನಾಟಕ ವತಿಯಿಂದ ಶುಭ ಹಾರೈಕೆ.
ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರಾಗಿ ಕೆ.ಪರಶುರಾಮ್ ಅವರು ಬೆಂಗಳೂರು ಮಹಾನಗರದ ಸಂಚಾರ ವಿಭಾಗದಲ್ಲಿ ಅತ್ಯಂತ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ, ಶಿವಮೊಗ್ಗ ಜಿಲ್ಲೆ. ಸೊರಬ ತಾಲ್ಲೂಕಿನ ಹೆಮ್ಮೆಯ ಪುತ್ರ ಶ್ರೀ ಕೆ. ಪರಶುರಾಮ್ (IPS) ಅವರು ಈ 2025-26ನೇ ಸಾಲಿನ "ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ' (DG & IGP Commendation Disc) ಗೌರವಕ್ಕೆ ಪಾತ್ರರಾಗಿರುವುದು ಇಡೀ ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಬೆಂಗಳೂರಿನಂತಹ ಅತಿದೊಡ್ಡ ಮಹಾನಗರದಲ್ಲಿ ಹಗಲಿರುಳು ಸಂಚಾರ ವ್ಯವಸ್ಥೆಯನ್ನು ಸುಗಮವಾಗಿಡುವುದು ಮತ್ತು ರಸ್ತೆ ಸುರಕ್ಷತೆಯನ್ನು ಕಾಪಾಡುವುದು ಸಣ್ಣ ಮಾತಲ್ಲ. ಸಾರ್ವಜನಿಕ ಸೇವೆಗೆ ತಾವು ನೀಡಿದ ಅಚಲ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆಗೆ ಸಂದ ಅತ್ಯುನ್ನತ ಗೌರವ ಇದಾಗಿದೆ.
ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಿ, ಇಡೀ ನಮ್ಮ ಸಮಾಜ ಅಷ್ಟೇ ಅಲ್ಲದೆ ಇಡಿ ರಾಜ್ಯಕ್ಕೆ ಕೀರ್ತಿ ತಂದಿರುವ ತಮಗೆ ಸಮಸ್ತ ಸಂಘಟನೆಯ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು...💐🎉
ನಿಮ್ಮ ಮುಂದಿನ ವೃತ್ತಿ ಜೀವನದಲ್ಲಿ ಇಂತಹ ಇನ್ನೂ ಅನೇಕ ಯಶಸ್ಸು ಹಾಗೂ ಉನ್ನತ ಗೌರವಗಳು ನಿಮ್ಮ ಮುಡಿಗೇರಲಿ ಎಂದು ಈ ಮೂಲಕ ಸಮಸ್ತ ಸಂಘಟನೆ ವತಿಯಿಂದ ಹಾರೈಸುತ್ತವೆ. ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ.
TEAM SNGV KARNATAKA