29/01/2024
*ಪಿ ಎಂ ವಿಶ್ವಕರ್ಮ ಯೋಜನೆ*
ಕೇಂದ್ರ ಸರ್ಕಾರವು ಪಿ.ಎಂ ವಿಶ್ವಕರ್ಮ ಎಂಬ ಹೊಸ ಯೋಜನೆಯನ್ನು *(PM Vishwakarma Yojana)* ಜಾರಿಗೊಳಿಸಿದ್ದು, ವಿವಿಧ 18 ವೃತ್ತಿಗಳಲ್ಲಿ ತೊಡಗಿರುವ ಸ್ವಯಂ ಉದ್ಯೋಗಿ ಕುಶಲಕರ್ಮಿಗಳು ವಿವಿಧ ಸವಲತ್ತು ಪಡೆಯಲು ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬೇಕು
ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಪಿ.ಎಂ. ವಿಶ್ವಕರ್ಮ ಪ್ರಮಾಣ ಪತ್ರ., ಐ.ಡಿ ಕಾರ್ಡ್, ಕೌಶಲ್ಯಾಭಿವೃದ್ಧಿ, ಉಪಕರಣಗಳಿಗೆ ಪ್ರೋತ್ಸಾಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ಹಾಗೂ ಮಾರುಕಟ್ಟೆ ಬೆಂಬಲ ಸೌಲಭ್ಯಗಳಂತಹ ಸವಲತ್ತುಗಳನ್ನು ನೀಡಲಾಗುತ್ತದೆ.
*ಈ ಯೋಜನೆಯ ವ್ಯಾಪ್ತಿಗೆ ಒಳಪಡುವ 18 ಬಗೆಯ ಕುಶಲಕರ್ಮಿಗಳು*
l ಬಡಿಗ ಅಥವಾ ಮರಗೆಲಸದವರು
l ದೋಣಿ ತಯಾರಕರು
l ಸಾಂಪ್ರದಾಯಿಕ ಶಸ್ತ್ರಗಳನ್ನು ತಯಾರಿಸುವವರು
l ಕುಂಬಾರರು
l ಸುತ್ತಿಗೆ ಹಾಗೂ ಇತರ ವಸ್ತುಗಳ ತಯಾರಕರು
l ಬೀಗ ಹಾಗೂ ಕೀಲಿ ತಯಾರಕರು
l ಅಕ್ಕಸಾಲಿಗರು
l ಕಮ್ಮಾರರು
l ಶಿಲ್ಪಿಗಳು ಮತ್ತು ಕಲ್ಲು ಒಡೆಯುವವರು
l ಸಾಂಪ್ರದಾಯಿಕವಾಗಿ ಪಾದರಕ್ಷೆ ತಯಾರಿಸುವವರು
l ಕಲ್ಲು ಕುಟಿಗರು ಅಥವಾ ರಾಜಮೇಸ್ತ್ರಿಗಳು
l ಸಾಂಪ್ರದಾಯಿಕವಾಗಿ ಬುಟ್ಟಿ, ಚಾಪೆ, ಪೊರಕೆ, ತೆಂಗಿನನಾರಿನ ಹಗ್ಗ ತಯಾರಕರು
l ಸಾಂಪ್ರದಾಯಿಕವಾಗಿ ಗೊಂಬೆ ಮತ್ತು ಆಟಿಕೆ ತಯಾರಕರು
l ಕ್ಷೌರಿಕರು
l ಹೂಮಾಲೆ ತಯಾರಕರು
l ಅಗಸರು ಅಥವಾ ಬಟ್ಟೆ ತೊಳೆಯುವವರು
l ದರ್ಜಿಗಳು
*ನೊಂದಣಿಗೆ ಅರ್ಹತೆಗಳೇನು*
18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿದ್ದು, 18 ವರ್ಷ ಮೇಲ್ಪಟ್ಟವರಾಗಿರಬೇಕು. ಒಂದು ಕುಟುಂಬದಲ್ಲಿ (ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು) ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರು. ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು, ಕಳೆದ 5 ವರ್ಷಗಳಲ್ಲಿ ಪಿಎಂ ಇಜಿಪಿ/ಮುದ್ರಾ ಮತ್ತು ಪಿಎಂ-ಸ್ವನಿಧಿ ಸಾಲಗಳನ್ನು ಪಡೆದಿರಬಾರದು. ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
*PM Vishwakarma Yojana : ಯೋಜನೆಯಿಂದ ಸಿಗುವ ಪ್ರಯೋಜನಗಳು*
ಯೋಜನೆಯಡಿ ನೋಂದಣಿಯಾದ ಕುಶಲಕರ್ಮಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಸ್ಟೆಫಂಡ್ ಮತ್ತು ಇತರೆ ಭತ್ಯೆ ನೀಡಲಾಗುತ್ತದೆ. ತರಬೇತಿ ನಂತರ ಪ್ರಮಾಣ ಪತ್ರದೊಂದಿಗೆ 15,000 ರೂ. ಬೆಲೆಬಾಳುವ ಉಪಕರಣ ನೀಡಲಾಗುತ್ತದೆ.
ಇದಲ್ಲದೆ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಶೇ. 5 ಬಡ್ಡಿ ದರದಲ್ಲಿ 1 ಲಕ್ಷ ರೂ. ಸಾಲ ನೀಡಲಾಗುವುದು. ತದನಂತರ 15 ದಿನಗಳ ವರೆಗೆ ಉನ್ನತ ಮಟ್ಟದ ತರಬೇತಿ ನೀಡಿ ಮೊದಲು ಪಡೆದ 1 ಲಕ್ಷ ರೂ. ಸಾಲ ಮರುಪಾವತಿಯಾದ ನಂತರ ಶೇ. 5ರ ಬಡ್ಡಿ ದರದಲ್ಲಿಯೇ 2 ಲಕ್ಷ ರೂ. ಸಾಲ ನೀಡುವುದರ ಜೊತೆಗೆ ಕುಶಲಕರ್ಮಿಗಳಿಂದ ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಸಹ ಕಲ್ಪಿಸಲಾಗುತ್ತದೆ.
*ಪಿ ಎಮ್ ವಿಶ್ವಕರ್ಮ ಯೋಜನೆಯಡಿ ನೋಂದಾಯಿಸಿಕೊಳ್ಳಲು ಇಚ್ಚಿಸುವವರು ಖುದ್ದು ಭೇಟಿ ನೀಡಿ*
*ಬೆಂಗಳೂರು ಎಂಟರ್ ಪ್ರೈಸಸ್*
*ಡಿಜಿಟಲ್ ಸೇವಾ ಕೇಂದ್ರ*
ಎ ಎನ್ ಆರ್ ಕಾಂಪ್ಲೆಕ್ಸ್
ಕೆ ಇ ಬಿ ಪಕ್ಕ, ಬ್ಯಾಂಕ್ ಆಫ಼್ ಬರೋಡಾ ಎದುರು, ಚಂದಾಪುರ,
ಆನೇಕಲ್ ತಾಲೂಕು,
One Stop Hub for All Citizen Services like
Ayushman Bharath Health Card, PAN , Ration Card Services, Labour Card, Vehicle Insurance,
Life insurance, Aadhaar Print, Caste and Income Certificate, Sandhya Suraksha Oldage Pension, Widoow Pension etc..