Bengaluru Development Minister- Updates

Bengaluru Development Minister- Updates Bengaluru Development Minister Updates

ವಿವಿಧ ಕಾಮಗಾರಿಗಳಿಗೆ ಚಾಲನೆ‌ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರಬೆಂಗಳೂರು; ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಯಾರೇ ಅಡ್ಡಪಡಿಸಿದ...
06/03/2019

ವಿವಿಧ ಕಾಮಗಾರಿಗಳಿಗೆ ಚಾಲನೆ‌ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು;
ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಯಾರೇ ಅಡ್ಡಪಡಿಸಿದರು, ಯೋಜನೆ ಅರ್ಧಕ್ಕೆ ನಿಲ್ಲಿಸದೇ ಸರಕಾರದೊಂದಿಗೆ ಚರ್ಚಿಸಿ ಮುನ್ನಡೆಯಿರಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೇಗೂರು ವಾರ್ಡ್ ವ್ಯಾಪ್ತಿಯ ಉತ್ತರಹಳ್ಳಿ, ವಸಂತಪುರ, ಯಲಚೇನಹಳ್ಳಿ, ತಿಪ್ಪಸಂದ್ರ, ಗೊಟ್ಟಿಗೆರೆಯಲ್ಲಿ ಕುಡೊಯುವ ನೀರು ಹಾಗೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಉತ್ತರಹಳ್ಳಿ ಭಾಗದಲ್ಲಿ 24 ದಶಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲಗಾರ ನಿರ್ಮಾಣವಾಗಿ ಎರಡು ವರತಷ ಪೂರೈಸಿದ್ದರೂ ಉದ್ಘಾಟನೆ ಮಾತ್ರ ನೆರವೇರಿಲ್ಲ. ಕುಡಿಯಿವ ನೀರಿನ ಯೋಜನೆ ಟರ್ಥಕ್ಕೆ ಸ್ಥಗಿತಗೊಂಡರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಅಷ್ಟೆ ಅಲ್ಲದೆ ಈ ಯೋಜನೆ ಅನುಷ್ಠಾನಕ್ಕೆ ಸಾಲ ಪಡಯಲಾಗಿದೆ. ಎರಡು ವರ್ಷದಿಂದ ಅನುಷ್ಠಾನ ಆಗದೇ ಇರುವುದರಿಂದ ಆ ಸಾಲದ ಬಡ್ಡಿ ಕೂಡ ಹೆಚ್ಚಾಗುತ್ತದೆ. ಈ ಎಲ್ಲದರ ಹೊರೆ ಸರಕಾರದ ಮೇಲೆಯೇ ಬೀಳುತ್ತದೆ. ಹೀಗಾಗಿ ಇಂಥ ಯೋಜನೆ ತಡೆಯೊಡ್ಡುವವರನ್ನು‌ ನಿರ್ಲಕ್ಷಿಸಿ ಎಂದರು.

ಉತ್ತರಹಳ್ಳಿ ಭಾಗದ 17 ಹಳ್ಳಿಗಳಿಗೆ ನೀರು ಪೂರೈಕೆ ಆಗಲಿದೆ. ಇದಕ್ಕಾಗಿ 15 ಸಾವಿರ ಕೆನೆಕ್ಷನ್ ನೀಡಲಾಗಿದೆ ಎಂದು ಹೇಳಿದರು.

ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿನ‌ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕಾವೇರಿ ೫ನೇ ಹಂತಕ್ಕೆ ತಲುಪುದ್ದೇನೆ.ಇದು ಕೊನೆಯ ಹಂತ. ಹೀಗಾಗಿ ಎತ್ತಿನ ಹೊಳೆ, ಹೇಮಾವತಿ ಹಾಗೂ ಇತರೆ ಮಾರ್ಗಗಳಿಂದ‌ ನೀರು ತರುವ ಯೋಜನೆ ಹಾಕಿಕೊಳ್ಳಲಾಗಿದೆ. ಜನರು ಸಹ ಸರಕಾರದೊಂದಿಗೆ ಸಹಕಾರ ನೀಡಬೇಕು. ನೀರು ಪೋಲಾಗುವುದನ್ನು ನಿಲ್ಲಸಬೇಕು. ಮೊದಲು ಶೇ.೪೯ ರಷ್ಟು ನೀರು ಪೋಲಾಗುತ್ತಿತ್ತು. ಈ ಪ್ರಮಾಣ ಶೇ. ೩೭ ಕ್ಕೆ ಇಳಿದಿದೆ. ಈ ಪ್ರಮಾಣ ಇನ್ನಷ್ಟು ಕಡಿಮೆಯಾಗಬೇಕು. ಕೆಲವರು ಕುಡಿಯುವ ನೀರನ್ನೇ ಇತರೆ ಕೆಲಗಳಿಗೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ.‌ ಇದರಿಂದಲೇ ನೀರಿನ‌ ಪೋಲು ಹೆಚ್ಚಾಗಿದೆ. ಹೀಗಾಗಿ ಇತರೆ ಬಳಕೆಗೆ ಶುದ್ದೀಕರಿಸಿದ ನೀರನ್ನು ಮತ್ತೊಂದು ಪೈಪ್ ಮೂಲಕ ಸರಬರಾಜು ಮಾಡಲು ತೀರ್ಮಾನಿಸಿರುವುದಾಗಿ ಹೇಳಿದರು.

ಗೌರವಾನ್ವಿತ ರಾಜ್ಯಪಾಲ ಶ್ರೀ ವಜೂಭಾಯಿ ವಾಲಾ ರವರು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು ವಿಧಾನ ಸೌಧದಲ್ಲಿ ಆಯೋಜಿಸಿದ್ದ ಗ್ಲೋಬಲ್ ಚೇಂಬರ್ಸ್ ಮೀಟ್...
26/02/2019

ಗೌರವಾನ್ವಿತ ರಾಜ್ಯಪಾಲ ಶ್ರೀ ವಜೂಭಾಯಿ ವಾಲಾ ರವರು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು ವಿಧಾನ ಸೌಧದಲ್ಲಿ ಆಯೋಜಿಸಿದ್ದ ಗ್ಲೋಬಲ್ ಚೇಂಬರ್ಸ್ ಮೀಟ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿರವರು, ಮಾನ್ಯ ಉಪಮುಖ್ಯಮಂತ್ರಿ ಶ್ರೀ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಕೇಂದ್ರ ಸಚಿವ ಸದಾನಂದಗೌಡ ಮತ್ತಿತರ ಸಚಿವರು ಮತ್ತು ಸಂಸದರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳು ಮಾಹಿತಿ ತಂತ್ರಜ್ಞಾನ ಹಾಗೂ ಕೈಗಾರಿಕಾ ಉದ್ಯಮಕ್ಕೆ ಕರ್ನಾಟಕ ಸೂಕ್ತ ಸೌಲಭ್ಯ, ಉತ್ತಮ ವಾತಾವರಣ ನಿರ್ಮಿಸಿಕೊಟ್ಟಿರುವುದರಿಂದ ಸಾವಿರಾರು ಹೂಡಿಕೆದಾರರು ರಾಜ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು. "ತಾಂತ್ರಿಕ ಮಾನವ ಸಂಪನ್ಮೂಲ ಉತ್ಪಾದಿಸುವಲ್ಲಿ ನಮ್ಮ ರಾಜ್ಯ 4ನೇ ಸ್ಥಾನವನ್ನು ಪಡೆದುಕೊಂಡಿದೆ" ಎಂದು ತಿಳಿಸಿದರು.

DR. G Parameshwara

Hon'ble Deputy Chief Minister DR. G Parameshwara participated in the   Chamber of Commerce and Industry Conference inaug...
26/02/2019

Hon'ble Deputy Chief Minister DR. G Parameshwara participated in the Chamber of Commerce and Industry Conference inaugurated by His Excellency Governor Sri Vajubhai V Rudawala in presence of Hon'ble Chief Minister Sri H D Kumaraswamy.

The DCM, in his address, stressed the facilities that are available for investors in the state especially necessary infrastructural facilities and congenial atmosphere, the key factors to attract investors globally.

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾನ್ಯ ಉಪಮುಖ್ಯಮಂತ್ರಿ, ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್...
25/02/2019

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾನ್ಯ ಉಪಮುಖ್ಯಮಂತ್ರಿ, ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ರವರು ಇಂದು ಮಹಾಲಕ್ಷ್ಮಿ ಲೇಔಟ್‍ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಮಾಡಿದರು.

ನಂತರ ಮಾತನಾಡಿದ ಉಪಮುಖ್ಯಮಂತ್ರಿಗಳು ಬೆಂಗಳೂರು ನಗರವನ್ನು ನಾಲ್ಕು ತಿಂಗಳಲ್ಲಿ ವೈಫೈ ನಗರವನ್ನಾಗಿ ಮಾಡಲಾಗುವುದು. ಈ ಮೂಲಕ ವಿಶ್ವದಲ್ಲೇ ಮೊದಲ ವೈಫೈ ನಗರವಾಗಲಿದೆ ಎಂದರು. ಈಗಾಗಲೇ ನಗರದೆಲ್ಲೆಡೆ ವೈಫೈ ಹಾಕುವ ಕೆಲಸ ಮಾಡಲಾಗುತ್ತಿದ್ದು, ಈ ಸಂಬಂಧ ಬಿಬಿಎಂಪಿ ಆಯುಕ್ತರು ಹಲವು ಸಭೆ ನಡೆಸಿದ್ದಾರೆ. ಎಂದು ತಿಳಿಸಿದರು.

ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂಪಾಯಿಗಳ ಹಣವನ್ನು ನಗರದ ಅಭಿವೃದ್ಧಿಗಾಗಿ ಖರ್ಚು ಮಾಡಲಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಲೇಔಟ್‍ನ ಶಾಸಕ ಶ್ರೀ ಗೋಪಾಲಯ್ಯ, ಮೇಯರ್ ಶ್ರೀಮತಿ ಗಂಗಾಬಿಕೆ ಮಲ್ಲಿಕಾರ್ಜುನ್ ಮತ್ತಿತರರು ಹಾಜರಿದ್ದರು.

DR. G Parameshwara

Bengaluru will soon become the world's first city to provide Wi-Fi facility throughout the city, Hon'ble Deputy Chief Mi...
25/02/2019

Bengaluru will soon become the world's first city to provide Wi-Fi facility throughout the city, Hon'ble Deputy Chief Minister DR. G Parameshwara announced.

He was speaking at a foundation stone laying function of various developmental activities in Mahalakshmi Layout Constituency. Earlier both Chief Minister Sri H D Kumaraswamy and Dr Parameshwara laid foundation for various works.

The DCM said the authorities have already started laying the facility to provide Wi-Fi facility which would become a reality in four months, he added saying that the BBMP Commissioner has already held several rounds of discussions in this regard.

He said besides developing the city, efforts would also be made to ensure that the city earned the sobriquet of "Garden City." The government would spend over Rs 50,000 crores for Bengaluru Development in next five years.

ಕರ್ನಾಟಕ ಸರ್ಕಾರ ಸದ್ಯದಲ್ಲೇ ಶ್ರೀಗಂಧ ಮಂಡಳಿ ರಚನೆ ಮಾಡಲಿದೆ ಎಂದು ಮಾನ್ಯ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇ...
25/02/2019

ಕರ್ನಾಟಕ ಸರ್ಕಾರ ಸದ್ಯದಲ್ಲೇ ಶ್ರೀಗಂಧ ಮಂಡಳಿ ರಚನೆ ಮಾಡಲಿದೆ ಎಂದು ಮಾನ್ಯ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ರವರು ತಿಳಿಸಿದರು. ಇಂದು ಟಾಟಾ ಆಡಿಟೋರಿಯಂನಲ್ಲಿ ಆಯೋಜಿಸಿದ್ದ “ಶ್ರೀಗಂಧದ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಪ್ರಾಮುಖ್ಯತೆ.” ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಉಪಮುಖ್ಯಮಂತ್ರಿಗಳು ಪ್ರಸ್ತುತ 35 ಸಾವಿರ ಎಕರೆ ಜಾಗದಲ್ಲಿ ಶ್ರೀಗಂಧ ಬೆಳೆಯಲಾಗುತ್ತಿದೆ. ಶ್ರೀಗಂಧ ಬೆಳೆಗಾರರಿಗೆ ಪ್ರತಿ ಗಿಡಕ್ಕೆ 100 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಆರ್ಥಿಕ ದೃಷ್ಟಿಯಿಂದ ಪ್ರತಿಯೊಬ್ಬ ರೈತರು ಶ್ರೀಗಂಧ ಮರ ಬೆಳೆಸಬೇಕಿದೆ ಎಂದು ತಿಳಿಸಿದರು.

DR. G Parameshwara

Karnataka Government is contemplating to set up Sandalwood Board, Hon'ble Deputy Chief Minister DR. G Parameshwara  said...
25/02/2019

Karnataka Government is contemplating to set up Sandalwood Board, Hon'ble Deputy Chief Minister DR. G Parameshwara said.

He was speaking after inaugurating a national seminar on "Present Status and Future Importance" of Sandalwood at JN Tata Auditorium here. The Board would be set up soon after the Forest Department submitted a report in this regard, he added.

He said currently Sandalwood is grown in 35,000 hectares of land. To encourage sandalwood cultivation, the government is giving Rs 100 per tree in the form of subsidy to growers, he revealed.

15 ಕೋಟಿ ರು. ವೆಚ್ಚದಲ್ಲಿ ಕೊರಟಗೆರೆ ಟೌನ್‌ನ ರಸ್ತೆಗಳ ವೈಟ್‌ಟಾಪಿಂಗ್ ಕಾಮಗಾರಿಗೆ ಇಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜ...
23/02/2019

15 ಕೋಟಿ ರು. ವೆಚ್ಚದಲ್ಲಿ ಕೊರಟಗೆರೆ ಟೌನ್‌ನ ರಸ್ತೆಗಳ ವೈಟ್‌ಟಾಪಿಂಗ್ ಕಾಮಗಾರಿಗೆ ಇಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.‌ಪರಮೇಶ್ವರ ಅವರು ಗುದ್ದಲಿ ಪೂಜೆ ನೆರವೇರಿಸಿದರು.

DR. G Parameshwara

Hon'ble Deputy Chief Minister DR. G Parameshwara laid foundation for white topping of town roads in Koratagere in Tumaku...
23/02/2019

Hon'ble Deputy Chief Minister DR. G Parameshwara laid foundation for white topping of town roads in Koratagere in Tumakuru District at a cost of Rs 15 crores.

ಮಾನ್ಯ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ರವರು ಮುಂದಿನ ವಾರ ಬೆಳ್ಳಂದೂರಿಗೆ ಭೇಟಿ ನೀಡಿ ಅಲ್ಲಿನ ಮೂಲಭೂ...
21/02/2019

ಮಾನ್ಯ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ರವರು ಮುಂದಿನ ವಾರ ಬೆಳ್ಳಂದೂರಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಖುದ್ದಾಗಿ ಪರಿಶೀಲಿಸಲಿದ್ದಾರೆ.

ಈ ವಿಷಯವನ್ನು ಸ್ವತಹ ಉಪಮುಖ್ಯಮಂತ್ರಿಗಳು ಬೆಳ್ಳಂದೂರು ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಭೇಟಿ ಮಾಡಿದಾಗ ತಿಳಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಗಳು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಈ ಭಾಗದಲ್ಲೇ ಹೆಚ್ಚು ಇರುವುದರಿಂದ ಸುಮಾರು 70 ಸಾವಿರ ಐಟಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಭಾಗದಲ್ಲಿ ರಸ್ತೆಗಳೂ ಹಾಳಾಗಿರುವುದನ್ನು ತಿಳಿಸಿದ್ದಾರೆ. ಹಾಗೂ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್.ಪುರದವರೆಗೆ ಇರುವ ಮೆಟ್ರೋ ಮಾರ್ಗವನ್ನು ಇಬ್ಲೂರು, ಕಾರ್ಮೆಲಾರಂ ಮಾರ್ಗವಾಗಿ ತೆಗೆದುಕೊಂಡು ಹೋಗಲು ಸಹ ಮನವಿ ಮಾಡಿದ್ದಾರೆ.

ಉಪಮುಖ್ಯಮಂತ್ರಿಗಳು ತಮ್ಮ ಭೇಟಿಯ ಸಂದರ್ಭದಲ್ಲಿ ಪಾದಚಾರಿ ಮಾರ್ಗ, ಒಳಚರಂಡಿ, ರಸ್ತೆ ಅಗಲೀಕರಣ, ಎಲಿವೇಟೆಡ್ ಕಾರಿಡಾರ್ ವಿಸ್ತರಣೆ ಮಾಡುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಗಮನಿಸಲಿದ್ದಾರೆ. ಈಗಾಗಲೇ ಬೆಳಂದೂರು ಕೆರೆ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ. ಈ ಕೆರೆಗೆ ಕೈಗಾರಿಕೆಗಳಿಂದ ಬರುವ ಕೊಳಚೆ ನೀರನ್ನು ನಿಲ್ಲಿಸಿ, ಒಳಚರಂಡಿ ಮಾರ್ಗಕ್ಕೆ ತಿರುಗಿಸಲು ಸೂಚನೆ ನೀಡಲಾಗಿದೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ರವರು ಹಾಜರಿದ್ದರು.

DR. G Parameshwara

Hon'ble Deputy Chief Minister DR. G Parameshwara will visit Bellanduru area during next week to study basic infrastructu...
21/02/2019

Hon'ble Deputy Chief Minister DR. G Parameshwara will visit Bellanduru area during next week to study basic infrastructural problems being faced by public.

The DCM Assured Resident Welfare Association Representatives from Bellanduru when they called on him to discuss various civic problems they faced daily.

Later, interacting with the media representatives, Dr Parameshwara said over 70000 employees were working in various Information Technology companies located in that part of the area. Consequently, the roads were not in good condition leading to traffic bottlenecks. The delegation members also urged to provide Metro Rail link from Silk Board to K R Puram connecting Ibluru, and Karmelaram, He would also discuss pedestrian crossing, Drainage facilities, widening of roads and elevated corridors during his visit.

He said work on development of Bellanduru Tank at a cost of Rs 50 crores is nearing completion. Authorities have been instructed to ensure that the tank was free from flow of sewage and waste water from surrounding industries.

ಮಾನ್ಯ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ರವರು ಇಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇಂದು ಆಯೋಜ...
20/02/2019

ಮಾನ್ಯ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ರವರು ಇಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇಂದು ಆಯೋಜಿಸಿದ್ದ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಮೇಳ, 6ನೇ ವಾರ್ಷಿಕ ಪಟ್ಟಾಭಿಷೇಕ ಮತ್ತು ವಿಜ್ಞಾತಂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಂತರ ಮಾತನಾಡಿದ ಉಪಮುಖ್ಯಮಂತ್ರಿಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಎಲ್ಲಾ ಜಿಲ್ಲೆಯಲ್ಲೂ ವಿಜ್ಞಾನ ಕೇಂದ್ರ ತೆರೆಯಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತ ದೊಡ್ಡಮಟ್ಟದ ಸ್ಥಾನಕ್ಕೇರಿದ್ದು, ಆರನೇ ಅಣುಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಮಾನವ ಸಂಪನ್ಮೂಲ ಒದಗಿಸುವ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದ್ದೇವೆ. ಎಂದು ತಿಳಿಸಿದರು.

ಸೆಂಟರ್ ಫಾರ್ ಹ್ಯೂಮನ್ ಜೆನಿಟಿಕ್ಸ್ ನಿರ್ದೇಶಕರಾದ ಡಾ.ಎಚ್.ಶರತ್ ಚಂದ್ರ ಅವರಿಗೆ ಈ ಸಾಲಿನ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಚಿವ ಶ್ರೀ ಸಿ.ಎನ್. ಪುಟ್ಟರಾಜು, ಶ್ರೀ ನಿರ್ಮಲಾನಂದ ಸ್ವಾಮೀಜಿ, ಹಾಗೂ ಯೋಗಗುರು ಬಾಬಾ ರಾಮ್‍ದೇವ್ ಮತ್ತಿತರರು ಉಪಸ್ಥಿತರಿದ್ದರು.

DR. G Parameshwara

Address

BMRDA, Ali Askar Road
Bangalore
560052

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Telephone

8147858281

Website

Alerts

Be the first to know and let us send you an email when Bengaluru Development Minister- Updates posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bengaluru Development Minister- Updates:

Share