ಕರ್ನಾಟಕ ಸ್ವಾಭಿಮಾನಿ ಮುಸ್ಲೀಮರ ವೇದಿಕೆ

  • Home
  • India
  • Bangalore
  • ಕರ್ನಾಟಕ ಸ್ವಾಭಿಮಾನಿ ಮುಸ್ಲೀಮರ ವೇದಿಕೆ

ಕರ್ನಾಟಕ ಸ್ವಾಭಿಮಾನಿ ಮುಸ್ಲೀಮರ ವೇದಿಕೆ Karnataka Swabhimani Muslimara Vedike, is a self-help group of individuals who r dedicated to serve.

https://youtu.be/J9cmMGl9YWE?si=EcSc5zl8Kdw0_JowJDSJanata Dal SecularSDPI KarnatakaSDPI DavangereGulbarga@
06/06/2026

https://youtu.be/J9cmMGl9YWE?si=EcSc5zl8Kdw0_Jow
JDS
Janata Dal Secular
SDPI Karnataka
SDPI DavangereGulbarga@

Enjoy the videos and music you love, upload original content, and share it all with friends, family, and the world on YouTube.

05/06/2026

ಮತ ಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಂ ಸಮುದಾಯದ ನಿರಂತರ ಬಲಿ. ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ಕಡೆಗಣನೆ!
✍️ ಎಂ.ಕೆ.ಮೇತ್ರಿ, ವಕೀಲರು.

ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯವು ಭಾರೀ ಪ್ರಮಾಣದಲ್ಲಿ ಬೆಂಬಲ ನೀಡಿದ್ದರೂ, ಹೊಸ ಸಚಿವ ಸಂಪುಟದಲ್ಲಿ ಅವರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯದಿರುವುದು ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಕೇವಲ ಒಬ್ಬ ಬ್ಯಾರಿ ಮುಸ್ಲಿಂ ನಾಯಕರಿಗೆ ಮಾತ್ರ ಸಚಿವ ಸ್ಥಾನ ನೀಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇತ್ತೀಚಿನ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷದ ಗೆಲುವಿಗೆ ಪ್ರಮುಖ ಶಕ್ತಿಯಾಗಿ ಕೆಲಸ ಮಾಡಿತ್ತು. ಜಾತ್ಯತೀತ ಮೌಲ್ಯಗಳು ಮತ್ತು ತಮ್ಮ ಹಿತಾಸಕ್ತಿಗಳ ರಕ್ಷಣೆಯ ನಿರೀಕ್ಷೆಯಿಂದ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಆದರೆ ಅಧಿಕಾರ ಹಂಚಿಕೆಯ ಹಂತದಲ್ಲಿ ಆ ಬೆಂಬಲಕ್ಕೆ ತಕ್ಕ ಗೌರವ ಸಿಕ್ಕಿಲ್ಲ ಎಂಬ ಭಾವನೆ ಸಮುದಾಯದಲ್ಲಿ ಮೂಡಿದೆ.

ರಾಜ್ಯದ ವಿವಿಧ ಸಮುದಾಯಗಳಿಗೆ ಸಚಿವ ಸಂಪುಟದಲ್ಲಿ ಗಮನಾರ್ಹ ಪ್ರಾತಿನಿಧ್ಯ ನೀಡಿರುವ ಸಂದರ್ಭದಲ್ಲಿ, ರಾಜ್ಯದ ಜನಸಂಖ್ಯೆಯಲ್ಲಿ ಗಮನಾರ್ಹ ಪಾಲು ಹೊಂದಿರುವ ಮತ್ತು ಕಾಂಗ್ರೇಸಿನ ಬೆನ್ನೆಲುಬಾಗಿರುವ ಮುಸ್ಲಿಂ ಸಮುದಾಯವನ್ನು ಕೇವಲ ಒಂದು ಸಚಿವ ಸ್ಥಾನಕ್ಕೆ ಸೀಮಿತಗೊಳಿಸಿರುವುದು ಅಸಮಾನತೆಯಂತೆ ಕಾಣುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ದೊರೆತಿದ್ದು, ಕುರುಬ ಸಮುದಾಯಕ್ಕೆ ಎರಡು ಪ್ರಮುಖ ಸ್ಥಾನ ಸಿಕ್ಕಿವೆ. ಲಿಂಗಾಯತ ಸಮುದಾಯಕ್ಕೂ..! ಮೂರು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಕಾಂಗ್ರೇಸಿನ ಮತ ಬ್ಯಾಂಕೇ ಅಲ್ಲದ ಲಿಂಗಾಯತ ಸಮುದಾಯಕ್ಕೆ ಮೂರು ಸಚಿವ ಸ್ಥಾನಗಳನ್ನು ನೀಡಿದ್ದು ವಿಚಿತ್ರವೇ ಸರಿ.

ಇದಲ್ಲದೆ, ಹಿರಿಯ ನಾಯಕ ಹಾಗೂ ಸಚಿವರಾದ B.Z. ಜಮೀರ್ ಅಹ್ಮದ್ ಖಾನ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ವ್ಯಾಪಕ ಚರ್ಚೆಗಳು ನಡೆದಿದ್ದವು. ಆಡಳಿತಾತ್ಮಕ ಅನುಭವ, ಸಂಘಟನಾ ಸಾಮರ್ಥ್ಯ ಮತ್ತು ಪಕ್ಷದ ಮೇಲಿನ ನಿಷ್ಠೆಯನ್ನು ಪರಿಗಣಿಸಿದರೆ ಅವರು ಆ ಹುದ್ದೆಗೆ ಅರ್ಹರಾಗಿದ್ದರು ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದರು. ಆದರೆ ಡಿಸಿಎಂ ಹುದ್ದೆ ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಅವರ ಹೆಸರನ್ನು ಸುತ್ತುವರಿದಂತೆ ಒಂದು ವಿವಾದಿತ ಆಡಿಯೋ ಹರಿದಾಡಿತ್ತು.

ಆ ಆಡಿಯೋ ಕುರಿತು ಸಂಬಂಧಪಟ್ಟವರು ಅದು ನಕಲಿ, ಫ್ಯಾಬ್ರಿಕೇಟೆಡ್ ಆಡಿಯೋ ಆಗಿದ್ದು, AI ಬಳಸಿ ತಯಾರಿಸಲಾಗಿದೆ ಎಂದು ಸ್ಪಷ್ಟಪಡಿಸಿ ತಳ್ಳಿಹಾಕಿದ್ದರು. ಆದಾಗ್ಯೂ, ಆ ಆಡಿಯೋವನ್ನು ಸೃಷ್ಟಿಸಿ ಹರಿಬಿಟ್ಟವರ ವಿರುದ್ಧ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಮತ್ತೊಂದೆಡೆ, ಒಂದು ವೇಳೆ ಆ ಆಡಿಯೋ ನಿಜವೇ ಆಗಿದ್ದರೆ, ಅದು ಹೇಗೆ ಸೋರಿಕೆಯಾಯಿತು ಎಂಬುದರ ಕುರಿತು ದೂರವಾಣಿ ಕದ್ದಾಲಿಕೆ ಅಥವಾ ಇತರೆ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತಹ ಕ್ರಮಗಳೂ ಕಂಡುಬಂದಿಲ್ಲ. ಈ ವಿಚಾರವೂ ಡಿಸಿಎಂ ಹುದ್ದೆ ಸಂಬಂಧಿಸಿದ ಚರ್ಚೆಗಳ ಸಂದರ್ಭದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅನುಭವ, ಸಾಮರ್ಥ್ಯ ಮತ್ತು ಜನಬೆಂಬಲ ಹೊಂದಿರುವ ಮುಸ್ಲಿಂ ನಾಯಕರನ್ನು ಕಡೆಗಣಿಸಿರುವುದು ಸಮುದಾಯದ ಅಸಮಾಧಾನವನ್ನು ಮತ್ತಷ್ಟು ತೀವ್ರಗೊಳಿಸಿದೆ. ಚುನಾವಣಾ ಸಂದರ್ಭದಲ್ಲಿ ಮುಸ್ಲಿಂ ಮತಗಳ ಮಹತ್ವವನ್ನು ಒಪ್ಪಿಕೊಳ್ಳುವ ಕಾಂಗ್ರೆಸ್, ಅಧಿಕಾರ ಹಂಚಿಕೆಯಲ್ಲಿ ಅದೇ ಸಮುದಾಯಕ್ಕೆ ನ್ಯಾಯ ಒದಗಿಸಲು ವಿಫಲವಾಗಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧ್ಯವು ಭಿಕ್ಷೆಯಲ್ಲ, ಅದು ಹಕ್ಕು. ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ನಂತರ ಸಮುದಾಯದ ಆಶೋತ್ತರಗಳನ್ನು ಕಡೆಗಣಿಸುವುದು ರಾಜಕೀಯ ನೈತಿಕತೆಗೆ ವಿರುದ್ಧವಾಗಿದೆ. ಈ ಅಸಮಾಧಾನವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸದಿದ್ದರೆ, ಅದರ ಪರಿಣಾಮ ಮುಂದಿನ ಚುನಾವಣೆಗಳಲ್ಲಿ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಕಾಂಗ್ರೆಸ್ ಪಕ್ಷವು ಈ ತಾರತಮ್ಯವನ್ನು ತಕ್ಷಣವೇ ಸರಿಪಡಿಸಿ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ, ದಾವಣಗೆರೆ ದಕ್ಷಿಣದ ಉಪಚುನಾವಣೆಯಲ್ಲಿ ಕಾಂಗ್ರೇಸ್ಗೆ ಮುಸ್ಲಿಮ್ ಸಮುದಾಯ ಕೊಟ್ಟ ತಲೆನೋವು ಮುಂಬರುವ ದಿನಗಳಲ್ಲಿ ಎಲ್ಲ ಕ್ಷೇತ್ರಗಳಿಗೂ ಹಬ್ಬಿ ತಕ್ಕ ಬೆಲೆ ತೆರಬೇಕಾಗಿ ಬರುವುದರಲ್ಲಿ ಸಂಶಯವಿಲ್ಲ.

ಇಂತಿ, ನಿಮ್ಮ ಆತ್ಮೀಯ,
✍️ ಎಂ.ಕೆ.ಮೇತ್ರಿ, ವಕೀಲರು.

"ಚುನಾವಣೆ ಬಂದಾಗ ಹಸು ‘ಭಾವನೆ’, ಚುನಾವಣೆ ಮುಗಿದಾಗ ಹಸು ‘ಫೈಲ್’ ಆಗುತ್ತದೆ. ನಿಜವಾಗಿಯೂ ಹಸುವಿನ ಬಗ್ಗೆ ಕಾಳಜಿ ಇದ್ದಿದ್ದರೆ, ರಸ್ತೆಗಳಲ್ಲಿನ ಅ...
30/05/2026

"ಚುನಾವಣೆ ಬಂದಾಗ ಹಸು ‘ಭಾವನೆ’, ಚುನಾವಣೆ ಮುಗಿದಾಗ ಹಸು ‘ಫೈಲ್’ ಆಗುತ್ತದೆ. ನಿಜವಾಗಿಯೂ ಹಸುವಿನ ಬಗ್ಗೆ ಕಾಳಜಿ ಇದ್ದಿದ್ದರೆ, ರಸ್ತೆಗಳಲ್ಲಿನ ಅಲೆದಾಡುವ ಗೋವುಗಳು, ರೈತರ ಬೆಳೆ ನಾಶ ಮತ್ತು ಗೋಶಾಲೆಗಳ ದುಸ್ಥಿತಿ ಇಷ್ಟರಲ್ಲೇ ಕೊನೆಗೊಳ್ಳುತ್ತಿತ್ತು. ಹಸುವನ್ನು ಮತಗಳಿಗಾಗಿ ಬಳಸುವುದು ಸುಲಭ, ಆದರೆ ಅದರ ಹೊಣೆ ಹೊರುವುದು ಕಷ್ಟ."

"ಹಸು ರಾಷ್ಟ್ರೀಯ ಪ್ರಾಣಿ ಆಗಬೇಕೇ ಬೇಡವೇ ಅನ್ನೋದಕ್ಕಿಂತ, ಹಸು ಚುನಾವಣಾ ಆಯುಧವಾಗಿಬಿಟ್ಟಿದೆಯೇ ಅನ್ನೋ ಪ್ರಶ್ನೆಗೆ ಮೊದಲು ಉತ್ತರ ಕೊಡಿ. ವೇದಿಕೆಯಲ್ಲಿ ‘ಗೌಮಾತೆ’, ರಸ್ತೆಯಲ್ಲಿ ‘ಅನಾಥ ಗೋವು’ — ಇದೇ ಇಂದಿನ ವಾಸ್ತವ."
ಕರ್ನಾಟಕ ಸ್ವಾಭಿಮಾನಿ ಮುಸ್ಲೀಮರ ವೇದಿಕೆ
SDPI KarnatakaKarnataka Pradesh Youth CongressDK ShivakumarNarendra ModiJanata Dal SecularAIMIM KarnatakaAam Aadmi Party KarnatakaKarnataka State Haj CommitteeAll India Muslim Personal Law Board

ಭಾವೈಕ್ಯತೆಯ ಹೊಸ ಭಾಷ್ಯ! 🤝✨ದಲಿತ ಹಾಗೂ ಮೈನಾರಿಟಿಸ್ ಸೇನೆಯ (DMS) ತಾಳಿಕೋಟಿ ನಗರ ಘಟಕದ ಪರವಾಗಿ ವಕೀಲರಾದ ಎಂ.ಕೆ. ಮೇತ್ರಿ ವಕೀಲರು ಹಾಗೂ ತಾಳಿ...
29/05/2026

ಭಾವೈಕ್ಯತೆಯ ಹೊಸ ಭಾಷ್ಯ! 🤝✨

ದಲಿತ ಹಾಗೂ ಮೈನಾರಿಟಿಸ್ ಸೇನೆಯ (DMS) ತಾಳಿಕೋಟಿ ನಗರ ಘಟಕದ ಪರವಾಗಿ ವಕೀಲರಾದ ಎಂ.ಕೆ. ಮೇತ್ರಿ ವಕೀಲರು ಹಾಗೂ ತಾಳಿಕೋಟಿಯ ಹೆಮ್ಮೆಯ ನಾಯಕರಾದ ಶ್ರೀ ಜೈ ಭೀಮ್ ಮುತ್ತಗಿ ಅವರು ಸೇರಿ, ನಿನ್ನೆ (ದಿ.೨೮.೦೫.೨೦೨೬) ಬಕ್ರೀದ್ ಹಬ್ಬದ ಪ್ರಯುಕ್ತ ದಲಿತ ಮತ್ತು ಮುಸ್ಲಿಂ ಸಮುದಾಯದ ಬಡ ಕುಟುಂಬಗಳಿಗೆ ಮಟನ್ ವಿತರಿಸಿದರು.
ಈ ಮೂಲಕ ಸಮಾಜಕ್ಕೆ ಮಾನವೀಯತೆ, ಐಕ್ಯತೆ ಹಾಗೂ ಸಾಮಾಜಿಕ ನ್ಯಾಯದ ಹೊಸದೊಂದು ಸಂದೇಶವನ್ನು ರವಾನಿಸಿದ್ದಾರೆ. ಇಂತಹ ಭ್ರಾತೃತ್ವದ ಆಚರಣೆಗಳು ಸಕಲ ಭಾರತೀಯರಿಗೂ ಮಾದರಿಯಾಗಲಿ.
ಜೈ ಭೀಮ್ ✊ ಜೈ ಟಿಪ್ಪೂ 🌟 ಜೈ ಡಿಎಂಎಸ್ 💙

ಕರ್ನಾಟಕದ ರಾಜಕೀಯ ಸ್ಥಿರತೆಗೆ ಮುಸ್ಲಿಂ ಸಮುದಾಯದ ಕೊಡುಗೆ : ಈಗ ನ್ಯಾಯಸಮ್ಮತ ಪ್ರಾತಿನಿಧ್ಯದ ಸಮಯ!  #ಮುಸ್ಲಿಂ_ಸಿಎಂ ಕರ್ನಾಟಕದ ಸಮಗ್ರ ಅಭಿವೃದ್...
29/05/2026

ಕರ್ನಾಟಕದ ರಾಜಕೀಯ ಸ್ಥಿರತೆಗೆ ಮುಸ್ಲಿಂ ಸಮುದಾಯದ ಕೊಡುಗೆ : ಈಗ ನ್ಯಾಯಸಮ್ಮತ ಪ್ರಾತಿನಿಧ್ಯದ ಸಮಯ! #ಮುಸ್ಲಿಂ_ಸಿಎಂ

ಕರ್ನಾಟಕದ ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಶಾಂತಿ ಮತ್ತು ಸೌಹಾರ್ದತೆಯ ಇತಿಹಾಸದಲ್ಲಿ ಮುಸ್ಲಿಂ ಸಮುದಾಯವು ಸದಾ ಮುಂಚೂಣಿಯಲ್ಲಿ ನಿಂತು ತನ್ನ ನಿಷ್ಠಾವಂತ ಕೊಡುಗೆಯನ್ನು ನೀಡುತ್ತಾ ಬಂದಿದೆ. ರಾಜ್ಯದ ರಾಜಕೀಯ ಪ್ರಕ್ರಿಯೆಯಲ್ಲಿ ಸಮುದಾಯದ ಹಕ್ಕುಗಳು, ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ನ್ಯಾಯಸಮ್ಮತ ಪ್ರತಿನಿಧಿತ್ವಕ್ಕೆ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಮಹತ್ವ ನೀಡಬೇಕಾದ ನಿರ್ಣಾಯಕ ಸಂದರ್ಭ ಈಗ ಒದಗಿಬಂದಿದೆ.
ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆ ಮಾತ್ರವಲ್ಲದೆ, ದಶಕಗಳಿಂದ ನಡೆದ ಪ್ರತಿಯೊಂದು ಚುನಾವಣೆಯಲ್ಲೂ ಮುಸ್ಲಿಂ ಸಮುದಾಯವು ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ದೃಢವಾಗಿ ನಿಂತು, ಕಾಂಗ್ರೆಸ್ ಪಕ್ಷದ ಭವ್ಯ ಗೆಲುವಿಗೆ ಬೆನ್ನೆಲುಬಾಗಿ ಕೆಲಸ ಮಾಡಿದೆ. ಸಮುದಾಯದ ಈ ರಾಜಕೀಯ ಪ್ರಬುದ್ಧತೆ ಮತ್ತು ಬದ್ಧತೆಯೇ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರಲು ಪ್ರಮುಖ ಕಾರಣವಾಗಿದೆ.
ನಮ್ಮ ನಾಯಕತ್ವ ಮತ್ತು ಸಾಮುದಾಯಿಕ ಬಲ
ರಾಜ್ಯದ ರಾಜಕೀಯದಲ್ಲಿ ಮತ್ತು ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ನಮ್ಮ ಧಾರ್ಮಿಕ ಮುಖಂಡರು, ರಾಜಕೀಯ ಧುರೀಣರು ಮತ್ತು ಸಾಮಾಜಿಕ ಹೋರಾಟಗಾರರು ಅಪಾರ ಕೊಡುಗೆ ನೀಡಿದ್ದಾರೆ:
ರಾಜಕೀಯ ಧುರೀಣರು: ದಿವಂಗತ ಸಿ. ಕೆ. ಜಾಫರ್ ಷರೀಫ್, ಅಜೀಜ್ ಸೇಠ್ ಅವರಂತಹ ಹಿರಿಯ ಮುತ್ಸದ್ದಿಗಳಿಂದ ಹಿಡಿದು ಇಂದಿನ ಪ್ರಭಾವಿ ನಾಯಕರಾದ ಬಿ. ಝಡ್. ಜಮೀರ್ ಅಹ್ಮದ್ ಖಾನ್, ಯು. ಟಿ. ಖಾದರ್ (ಮಾನ್ಯ ಸಭಾಧ್ಯಕ್ಷರು), ತನ್ವೀರ್ ಸೇಠ್, ಎನ್. ಎ. ಹ್ಯಾರಿಸ್, ನಸೀರ್ ಅಹ್ಮದ್, ಕೆ. ಅಬ್ದುಲ್ ಜಬ್ಬಾರ್, ರೆಹಮಾನ್ ಖಾನ್ ಹಾಗೂ ಮನ್ಸೂರ್ ಅಲಿ ಖಾನ್‌ ಅವರವರೆಗೆ ಅನೇಕ ನಾಯಕರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ವಿಜಯದ ಪಥಕ್ಕೆ ಮುನ್ನಡೆಸಿದ್ದಾರೆ.
ಧಾರ್ಮಿಕ ಮತ್ತು ಸಾಮಾಜಿಕ ಮಾರ್ಗದರ್ಶಕರು: ಹಜರತ್ ಮೌಲಾನಾ ಸಗೀರ್ ಅಹ್ಮದ್ ರಶಾದಿ, ಅಲ್ಹಾಜ್ ತನ್ವೀರ್ ಹಷಿಮಿ ಹಾಗೂ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಅವರಂತಹ ಧಾರ್ಮಿಕ ಗುರುಗಳು ಸಮಾಜಕ್ಕೆ ಸೌಹಾರ್ದತೆಯ ಮಾರ್ಗದರ್ಶನ ನೀಡುವುದರೊಂದಿಗೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಸಮುದಾಯವನ್ನು ಪ್ರೇರೇಪಿಸಿದ್ದಾರೆ.

ಅಮಿರೆ ಶರಿಯತ್ ಕರ್ನಾಟಕ, ಜಮೀಯತುಲ್ ಉಲಮಾ-ಎ-ಹಿಂದ್, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಮುಸ್ಲಿಂ ಕೌನ್ಸಿಲ್ ಹಾಗೂ ಸೂಫಿ ಸಂತರ ದರ್ಗಾಗಳ ಸಮಿತಿಗಳು ಸೇರಿದಂತೆ ಹತ್ತಾರು ಪ್ರಭಾವಿ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗಟ್ಟಿನಿಂದ ಧರ್ಮನಿರಪೇಕ್ಷ ಶಕ್ತಿಗಳ ಕೈಬಲಪಡಿಸಲು ಶ್ರಮಿಸಿವೆ.

*ಕಾಂಗ್ರೆಸ್ ಪಕ್ಷದ ನೈತಿಕ ಮತ್ತು ರಾಜಕೀಯ ಹೊಣೆಗಾರಿಕೆ*
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 14 ಕ್ಕಿಂತಲೂ ಅಧಿಕ ಪಾಲು ಹೊಂದಿರುವ ಮುಸ್ಲಿಂ ಸಮುದಾಯವು, ಕಾಂಗ್ರೆಸ್ ಪಕ್ಷದ ಗೆಲುವಿಗೆ ಶೇಕಡಾ 90 ಕ್ಕೂ ಹೆಚ್ಚು ಮತಗಳನ್ನು ಒಟ್ಟಾಗಿ ಚಲಾಯಿಸುವ ಮೂಲಕ ತನ್ನ ರಾಜಕೀಯ ನಿಷ್ಠೆಯನ್ನು ಸಾಬೀತುಪಡಿಸಿದೆ. ಬಿಕ್ಕಟ್ಟಿನ ಸಮಯದಲ್ಲಿ ಪಕ್ಷವನ್ನು ರಕ್ಷಿಸಿದ ಸಮುದಾಯಕ್ಕೆ ಅರ್ಹ ಗೌರವ ನೀಡುವುದು ಕೇವಲ ರಾಜಕೀಯ ಔದಾರ್ಯವಲ್ಲ; ಬದಲಿಗೆ ಅದು ಕಾಂಗ್ರೆಸ್ ಪಕ್ಷದ ನೈತಿಕ, ಸಾಮಾಜಿಕ ಮತ್ತು ಪ್ರಜಾಪ್ರಭುತ್ವದ ಕಾನೂನಾತ್ಮಕ ಹೊಣೆಗಾರಿಕೆಯಾಗಿದೆ.

"ಮತ ಚಲಾವಣೆಯಲ್ಲಿ ಮುಂಚೂಣಿಯಲ್ಲಿರುವ ಸಮುದಾಯ, ಅಧಿಕಾರ ಮತ್ತು ನಾಯಕತ್ವದ ಹಂಚಿಕೆಯಲ್ಲೂ ಸಮಾನ ಪಾಲು ಪಡೆಯುವುದು ಸಾಮಾಜಿಕ ನ್ಯಾಯದ ಮೂಲ ತತ್ವವಾಗಿದೆ."
*ನಮ್ಮ ಆಗ್ರಹ*
ಬದಲಾಗುತ್ತಿರುವ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಪ್ರಸ್ತುತ ವಿಧಾನಸಭೆಯ ಬಾಕಿ ಉಳಿದಿರುವ ಅವಧಿಗೆ ಮುಸ್ಲಿಂ ಸಮುದಾಯದ ಸಮರ್ಥ ನಾಯಕರೊಬ್ಬರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಹೈಕಮಾಂಡ್ ಮುಕ್ತ ಅವಕಾಶ ನೀಡಬೇಕು. ಇದು ಕೇವಲ ಒಂದು ಸಮುದಾಯದ ಬೇಡಿಕೆಯಲ್ಲ; ಬದಲಾಗಿ ಕರ್ನಾಟಕದ ಬಹುಸಾಂಸ್ಕೃತಿಕ ಸ್ವರೂಪಕ್ಕೆ, ಸರ್ವ ಜನಾಂಗದ ಶಾಂತಿಯ ತೋಟದ ಆಶಯಕ್ಕೆ ತಕ್ಕಂತೆ ತೆಗೆದುಕೊಳ್ಳಬೇಕಾದ ಸಮತೋಲಿತ ಮತ್ತು ನ್ಯಾಯಯುತ ನಿರ್ಧಾರವಾಗಿದೆ.
"ಈ ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಮುಸ್ಲಿಮರಿಗೆ ನೀಡಲೇಬೇಕು" ಎಂಬುದು ಕರ್ನಾಟಕದ ಸಮಸ್ತ ಮುಸ್ಲಿಂ ಬಾಂಧವರ ಮತ್ತು ಸ್ವಾಭಿಮಾನಿ ವೇದಿಕೆಯ ದೃಢ ಹಾಗೂ ನ್ಯಾಯಸಮ್ಮತ ಆಗ್ರಹವಾಗಿದೆ.

⁠✍️- ಶ್ರೀ. ಎಂ.ಕೆ.ಮೇತ್ರಿ, ವಕೀಲರು ಹಾಗೂ ಅಧಿಕೃತ ವಕ್ತಾರರು,
*ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆ*
(ಅಭಿವೃದ್ಧಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ)


#ಮುಸ್ಲಿಂಐಕ್ಯತೆ






ಕರ್ನಾಟಕ ಸ್ವಾಭಿಮಾನಿ ಮುಸ್ಲೀಮರ ವೇದಿಕೆ
SDPI Karnataka
AIMIM Karnataka
Karnataka Pradesh Youth Congress
DK Shivakumar
Narendra Modi

23/05/2026


ಕರ್ನಾಟಕ ಸ್ವಾಭಿಮಾನಿ ಮುಸ್ಲೀಮರ ವೇದಿಕೆKarnataka Pradesh Youth CongressSDPI KarnatakaAIMIM KarnatakaJanata Dal SecularKarnataka State Haj CommitteeOggy and the cockroachesNarendra ModiTOP NewsCJP - Combined Jewish Philanthropies

ಬೆಂ.ಸಮಾವೇಶ, ಮುಸ್ಲಿಮ್ ಸಮುದಾಯ ಸರಕಾರದೊಂದಿಗೆ ಭಿನ್ನ ರೀತಿಯಲ್ಲಿ ವ್ಯವಹರಿಸಬೇಕಿದೆ: ಮು.ವಾಯ್ಸ್ ಆನ್ಲೈನ್ ಸಂವಾದದಲ್ಲಿ ಮುಝಾಫರ್ ಅಹಮದ್. htt...
23/05/2026

ಬೆಂ.ಸಮಾವೇಶ, ಮುಸ್ಲಿಮ್ ಸಮುದಾಯ ಸರಕಾರದೊಂದಿಗೆ ಭಿನ್ನ ರೀತಿಯಲ್ಲಿ ವ್ಯವಹರಿಸಬೇಕಿದೆ: ಮು.ವಾಯ್ಸ್ ಆನ್ಲೈನ್ ಸಂವಾದದಲ್ಲಿ ಮುಝಾಫರ್ ಅಹಮದ್. https://vokkutanews.com/post/4719
ಕರ್ನಾಟಕ ಸ್ವಾಭಿಮಾನಿ ಮುಸ್ಲೀಮರ ವೇದಿಕೆ
AIMIM Karnataka
Karnataka Pradesh Youth Congress
SDPI Karnataka
DK Shivakumar
Aam Aadmi Party Karnataka
Janata Dal Secular
Karnataka State Haj Committee

ವೆಬ್: ಸಾಮಾಜಿಕ ಜಾಲ ತಾಣ ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ ನಲ್ಲಿ ನಡೆದ ಇತ್ತೀಚೆಗೆ ಮೇ 16 ರಂದು ಬೆಂಗಳೂರಿನ ಟೌನ್ ಹಾಲ್ ನಲ...

Address

Bangalore
560002

Website

Alerts

Be the first to know and let us send you an email when ಕರ್ನಾಟಕ ಸ್ವಾಭಿಮಾನಿ ಮುಸ್ಲೀಮರ ವೇದಿಕೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category