KSS ಕರ್ನಾಟಕ ಸಂರಕ್ಷಣಾ ಸೇನೆ

KSS ಕರ್ನಾಟಕ ಸಂರಕ್ಷಣಾ ಸೇನೆ ಕನ್ನಡ ಪರ ಹೋರಾಟ ಮತ್ತು ಸಮಾಜ ಸೇವೆ

12/08/2026

ನಾಳೆ ನಡೆಯಲಿರುವ ಕರ್ನಾಟಕ ಬಂದ್ ಅನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮ ಕಾವೇರಿ ನೀರಿನ ಹಕ್ಕಿಗಾಗಿ ಹಾಗೂ ನಾಡಿನ ಹಿತದೃಷ್ಟಿಯಿಂದ ಈ ಹೋರಾಟ ಅನಿವಾರ್ಯವಾಗಿದೆ.
​ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಬಂದ್ ನಡೆಯಲಿದ್ದು, ಪ್ರತಿಯೊಬ್ಬ ಕನ್ನಡಿಗರೂ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಕೋರುತ್ತೇನೆ. ಕಾವೇರಿ ನಮ್ಮ ಜೀವನಾಡಿ, ಅದನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ನಾವೆಲ್ಲರೂ ಒಂದಾಗೋಣ

11/08/2026

10/08/2026

ಕನ್ನಡ ನಾಡು-ನುಡಿ, ಜಲ-ನೆಲದ ಹಕ್ಕುಗಳಿಗಾಗಿ ಅಖಂಡ ಕರ್ನಾಟಕ ಬಂದ್ ಪ್ರತೀ ಕನ್ನಡಿಗನ ಧ್ವನಿ ಒಂದೇ

​ಇಂದು ಅತ್ತಿಬೆಲೆ ಗಡಿಯಲ್ಲಿ ತಮಿಳುನಾಡು ವಾಹನಗಳನ್ನು ತಡೆಯುವ ಮೂಲಕ ಆಗಸ್ಟ್ 13ರ ಅಖಂಡ ಕರ್ನಾಟಕ ಬಂದ್ ಬೆಂಬಲಿಸಿ ಬೃಹತ್ ಚಳುವಳಿ ನಡೆಸಲಾಯಿತು.
​ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ಅವರು:
"ಯಾವುದೇ ಕಾರಣಕ್ಕೂ ಆಗಸ್ಟ್ 13ರ ಅಖಂಡ ಕರ್ನಾಟಕ ಬಂದ್ ಹಿಂಪಡೆಯುವ ಪ್ರಶ್ನೆಯೇ ಇಲ್ಲ.ಬಂದ್ ನಡೆದೇ ತೀರುತ್ತದೆ ಎಂದು ಸಿಂಹ ಘರ್ಜನೆ ಮಾಡಿದ್ದಾರೆ.
​ನಾಡಿನ ರಕ್ಷಣೆಗಾಗಿ, ಕನ್ನಡಿಗರ ಸ್ವಾಭಿಮಾನಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಪ್ರತಿಯೊಬ್ಬ ಕನ್ನಡಿಗರು, ಶ್ರಮಿಕರು, ವ್ಯಾಪಾರಿಗಳು ಮತ್ತು ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಬೇಕಾಗಿ ವಿನಂತಿ.
​ KannadaNadu SaveKarnataka KannadaActivism

31/07/2026
29/07/2026

ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಒಕ್ಕೂಟದ ನಾಯಕರಾದ ಶ್ರೀ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಹಾಗೂ ಮುಖಂಡರಾದ ಸಾ ರಾ ಗೋವಿಂದು ಅವರೊಂದಿಗೆ ಕಾವೇರಿ ಜಲಮಂಡಳಿಯ ನಿರ್ಣಯವನ್ನು ಖಂಡಿಸಿ ತಮಿಳುನಾಡು ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಾಯಿತು. ರಾಜ್ಯ ಸರ್ಕಾರವು ನಮ್ಮ ರಾಜ್ಯದ ರೈತರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು. ಹೋರಾಟದ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.

28/07/2026

ಸಿಡಬ್ಲ್ಯೂಆರ್‌ಸಿ ತೀರ್ಪನ್ನು ಕರ್ನಾಟಕ ಸಂರಕ್ಷಣಾ ಸೇನೆ ವತಿಯಿಂದ ನಾವು ತೀವ್ರವಾಗಿ ಖಂಡಿಸುತ್ತೇವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯೂಸೆಸ್ ನೀರನ್ನು ಹರಿಸುವುದನ್ನು ಪ್ರತಿಯೊಬ್ಬ ಕನ್ನಡಿಗನು ಹಾಗೂ ಎಲ್ಲಾ ಕನ್ನಡ ಪರ ಹೋರಾಟಗಾರರು ತೀವ್ರವಾಗಿ ವಿರೋಧಿಸುತ್ತೇವೆ ಮತ್ತು ಖಂಡಿಸುತ್ತೇವೆ. ನಮ್ಮ ನಾಡಿನ ಜನತೆಯ ಕುಡಿಯುವ ನೀರಿಗೇ ತತ್ವಾರವಿರುವಾಗ ನೆರೆರಾಜ್ಯಕ್ಕೆ ನೀರು ಬಿಡುವುದು ಯಾವ ನ್ಯಾಯ? ನಮ್ಮ ರೈತರ ಹಿತಾಸಲಿಯನ್ನು ಬಲಿಗೊಟ್ಟು ತಮಿಳುನಾಡಿಗೆ ನೀರು ಹರಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ನಮ್ಮ ಹಕ್ಕಿನ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಲು ಬಿಡುವುದಿಲ್ಲ ಎಂದು ಈ ಮೂಲಕ ಸರ್ಕಾರಕ್ಕೆ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗೆ ಕಡಕ್ ಎಚ್ಚರಿಕೆ ನೀಡುತ್ತಿದ್ದೇವೆ.

​ಕರ್ನಾಟಕ ಸಂರಕ್ಷಣಾ ಸೇನೆ
ರಾಜ್ಯದ್ಯಕ್ಷರು
ಮುಬಾರಕ್ ಪಾಷಾ

Address

#331st Floor Jamiya Nagar Opp Narendra Tent Near Railway Gate Nagawara Main Road
Bangalore
560045

Opening Hours

Monday 10am - 7pm
Tuesday 10am - 7pm
Wednesday 10am - 7pm
Thursday 10am - 7pm
Friday 10am - 7pm
Saturday 10am - 7pm

Alerts

Be the first to know and let us send you an email when KSS ಕರ್ನಾಟಕ ಸಂರಕ್ಷಣಾ ಸೇನೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category