04/07/2024
ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ನಲ್ಲಿ ಖಾಲಿ ಇರುವ 2 ಯೋಜನಾ ನಿರ್ದೇಶಕರ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ 35 ವರ್ಷಗಳ ವಯೋಮಿತಿಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳು ಗುತ್ತಿಗೆ ಆಧಾರದ ಮೇಲೆ ಹಾಗೂ ಗರಿಷ್ಠ ಅವಧಿ 12 ತಿಂಗಳಿಗೆ ಇರುತ್ತದೆ.
ಹುದ್ದೆಗಳ ವಿವರಗಳಿಗಾಗಿ https://itbtst.karnataka.gov.in ಗೆ ಭೇಟಿ ನೀಡಿ. ಅರ್ಹ ಅಭ್ಯರ್ಥಿಗಳು ತಮ್ಮ ಅಪ್‌ಡೇಟ್ ಆಗಿರುವ ಬಯೋ-ಡಾಟಾ ಹಾಗೂ ಇತ್ತೀಚಿನ ಒಂದು ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ, ಅಂಕಪಟ್ಟಿ, ಅನುಭವದ ಪ್ರಮಾಣಪತ್ರ ಹಾಗೂ ಪದವಿ ಪ್ರಮಾಣಪತ್ರಗಳನ್ನು [email protected] ಇಲ್ಲಿಗೆ 18/07/2024 ರಂದು ಸಂಜೆ 5.00 ಗಂಟೆಗೆ ಮುಂಚಿತವಾಗಿ ತಲುಪುವಂತೆ ಇ-ಮೇಲ್ ಮೂಲಕ ಸಲ್ಲಿಸತಕ್ಕದ್ದು. ಆಯ್ದ ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನ ಏರ್ಪಡಿಸಲಾಗುವುದು. ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.